For Quick Alerts
ALLOW NOTIFICATIONS  
For Daily Alerts

ಅಡುಗೆ ಸೋಡಾದಿಂದ ಅಡುಗೆ ಮನೆ ಸಿಂಕ್ ಶುಚಿಗೊಳಿಸುವುದು

By Super
|

ಅಡುಗೆ ಮನೆಯನ್ನು ಪ್ರೀತಿಸುವ ಪ್ರತಿಯೊಬ್ಬ ಮಹಿಳೆಯು ತಮ್ಮ ಅಡುಗೆ ಮನೆಯನ್ನು ಸ್ವಚ್ಛ ಹಾಗೂ ಹೊಳೆಯುವಂತೆ ಇಡುತ್ತಾಳೆ. ನಿಮ್ಮ ಅಡುಗೆ ಮನೆಯನ್ನು ಸ್ವಚ್ಛ ಮತ್ತು ನೈರ್ಮಲ್ಯವಾಗಿ ಇಡಬೇಕೆಂದರೆ ಆಗ ಅಡುಗೆ ಮನೆಯ ಸಿಂಕ್ ನ್ನು ಶುಚಿಯಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ಕಿಚನ್ ಸಿಂಕ್ ನ್ನು ಶುಚಿಗೊಳಿಸಲು ಅತ್ಯುತ್ತಮ ಕ್ಲೀನಿಂಗ್ ಏಜೆಂಟ್ ಬಳಸುವುದು ಅತ್ಯಗತ್ಯ. ಅಡುಗೆ ಮನೆಯ ಸಿಂಕ್ ನ್ನು ಶುಚಿಗೊಳಿಸಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ದ್ರಾವಣಗಳು ಲಭ್ಯವಿದೆ. ಆದರೆ ಮಾರುಕಟ್ಟೆಯಲ್ಲಿನ ಉತ್ಪನ್ನಗಳಿಗಿಂತ ತುಂಬಾ ಸುಲಭ ಹಾಗೂ ಪರಿಣಾಮಕಾರಿ ಕೆಲಸ ಮಾಡಬಲ್ಲ ಆಯ್ಕೆಯಿದೆ ಎಂದು ನಿಮಗೆ ತಿಳಿದಿದೆಯಾ?

ಅಡುಗೆ ಸೋಡಾವು ಮತ್ತೊಂದು ಪರಿಣಾಮಕಾರಿ ಆಯ್ಕೆ. ಇದು ನಿಮ್ಮ ಅಡುಗೆ ಮನೆಯ ಸಿಂಕ್ ನ್ನು ಶುಚಿ ಮತ್ತು ಹೊಳೆಯುವಂತೆ ಮಾಡಲಿದೆ. ವಾರದಲ್ಲಿ ಒಂದು ಸಲ ಅಡುಗೆ ಮನೆ ಸ್ವಚ್ಛಗೊಳಿಸಲು ಅಡುಗೆ ಸೋಡಾವನ್ನು ಬಳಸಿದರೆ ಆಗ ಹಠಮಾರಿ ಕಲೆ ಮತ್ತು ಕೊಳೆಯನ್ನು ತೆಗೆದುಹಾಕುತ್ತದೆ. ಸ್ಟೈನ್ ಲೆಸ್ ಸ್ಟೀಲ್ ಸಿಂಕ್ ನ್ನು ಶುಚಿಗೊಳಿಸಲು ಅಮೋನಿಯಾ, ಬ್ಲೀಚ್ ಅಥವಾ ಒರಟು ಕ್ಲೀನರ್ ಗಳನ್ನು ಬಳಸಲೇಬಾರದು. ಒರಟಾದ ಸ್ಪಂಜ್ ಗಳನ್ನು ಬಳಸುವುದರಿಂದ ಗೆರೆ ಬಿದ್ದು ಅದು ಅಡುಗೆ ಮನೆಯ ಸಿಂಕ್ ನ ಮೇಲೆ ಪರಿಣಾಮ ಬೀರಬಹುದು. ಅಡುಗೆ ಸೋಡಾ ಬಳಸಿಕೊಂಡು ಅಡುಗೆ ಮನೆ ಸಿಂಕ್ ನ್ನು ಶುಚಿಗೊಳಿಸುವಾಗ ಕೆಲವೊಂದು ಮಹತ್ವದ ಅಂಶಗಳನ್ನು ಗಮನಿಸಬೇಕಾಗುತ್ತದೆ.

Cleaning Kitchen Sink With Baking Soda

ಅಡುಗೆ ಸೋಡಾ ಬಳಸಿಕೊಂಡು ಅಡುಗೆಮನೆ ಸಿಂಕ್ ಶುಚಿಗೊಳಿಸಲು ಕೆಲವೊಂದು ಟಿಪ್ಸ್ ಗಳನ್ನು ನೀವು ಪರಿಗಣಿಸಬಹುದು. ಇದನ್ನು ಪ್ರಯತ್ನಿಸಿ ಮತ್ತು ಅಡುಗೆ ಮನೆ ಸಿಂಕ್ ನ್ನು ಶುಚಿಗೊಳಿಸುವ ನಿಮ್ಮ ಕೆಲಸವನ್ನು ಇದು ತುಂಬಾ ಸುಲಭ ಹಾಗೂ ಪರಿಣಾಮಕಾರಿಯಾಗಿಸಲಿದೆ.

ತೊಳೆಯಿರಿ
ಅಡುಗೆ ಸೋಡಾ ಬಳಸಿಕೊಂಡು ನೀವು ಅಡುಗೆ ಮನೆಯ ಸಿಂಕ್ ನ್ನು ಶುಚಿಗೊಳಿಸಲು ಬಯಸಿದ್ದರೆ ಆಗ ಅದಕ್ಕೆ ಮೊದಲು ಸಿಂಕ್ ನ್ನು ಸ್ವಚ್ಛಗೊಳಿಸಿ ಬಳಿಕ ಅಡುಗೆ ಸೋಡಾ ಹಾಕಿ. ಸಿಂಕ್ ನ ಪ್ರತಿಯೊಂದು ಮೂಲೆಗೆ ಬಿಸಿ ನೀರು ಹಾಕಿ ಶುಚಿಗೊಳಿಸಿ

ಉಜ್ಜಿ
ಸಿಂಕ್ ನಲ್ಲಿ ಇರುವ ಎಲ್ಲಾ ಪಾತ್ರೆಗಳು ಮತ್ತು ಅಳಿದುಳಿದ ಆಹಾರವನ್ನು ತೆಗೆಯಿರಿ. ನಲ್ಲಿಗಳು, ಡ್ರೈನ್ ಮತ್ತು ಹೊರಗಿನ ರಿಮ್ ನ್ನು ಸೋಪ್, ಬಟ್ಟೆ ಮತ್ತು ಬಿಸಿ ನೀರು ಬಳಸಿ ಶುಚಿಗೊಳಿಸಿ. ಅಡುಗೆ ಸೋಡಾ ಬಳಸುವ ಮೊದಲು ನಿಮ್ಮ ಸಿಂಕ್ ತುಂಬಾ ಶುಚಿಯಾಗಿರಬೇಕು.

ಬಿಸಿ ನೀರು ಬಳಸಿ
ಅಡುಗೆ ಸಿಂಕ್ ಶುಚಿಗೊಳಿಸಲು ಅಡುಗೆ ಸೋಡಾ ಬಳಸುವ ಮೊದಲು ನೀವು ಅದರೊಳಗೆ ಒಮ್ಮೆ ಬಿಸಿ ನೀರು ಹಾಕಿ. ಇದರಿಂದ ದುರ್ಗಂಧ ಹೋಗುತ್ತದೆ ಮತ್ತು ಡ್ರೈನ್ ನಲ್ಲಿ ಉಳಿದಿರುವ ಯಾವುದೇ ವಸ್ತುಗಳನ್ನು ಮೆದುವಾಗಿಸುತ್ತದೆ. ಶುಚಿಗೊಳಿಸಿದ ಬಳಿಕ ನಿಮ್ಮ ಸಿಂಕ್ ನ್ನು ಒಣಗಿಸಿ ಮತ್ತು ಅಡುಗೆ ಸೋಡಾ ಹಾಕಿ.

ಅಡುಗೆ ಸೋಡಾ ಬಳಸಿ
ಅಡುಗೆ ಸೋಡಾ ಬಳಸಿ ಮೊದಲು ಸಿಂಕ್ ನ ಮೇಲ್ಭಾಗವನ್ನು ಶುಚಿಗೊಳಿಸಿ. ಮೇಲ್ಭಾಗಕ್ಕೆ ಅಡುಗೆ ಸೋಡಾ ಸಿಂಪಡಿಸಿ ಮತ್ತು ಸಿಂಕ್ ನ್ನು ಶುಚಿಗೊಳಿಸಿ. ಅಡುಗೆ ಸೋಡಾದ ಪೇಸ್ಟ್ ಮಾಡಿ ಅದನ್ನು ಸಿಂಕ್ ಮೇಲೆ ಹಚ್ಚಿ ಶುಚಿಗೊಳಿಸಬಹುದು.

ಡ್ರೈನ್ ನೊಳಗೆ ಅಡುಗೆ ಸೋಡಾ ಹಾಕಿ
ಮೊದಲು ಡ್ರೈನ್ ನ ಒಳಗೆ ಅರ್ಧಕಪ್ ನಷ್ಟು ಅಡುಗೆ ಸೋಡಾ ಹಾಕಿ. ಇದರ ಬಳಿಕ ಒಂದು ಕಪ್ ನಷ್ಟು ಬಿಳಿ ವಿನೇಗರ್ ಹಾಕಿ. ಇದರ ಬಳಿಕ ಕುದಿಯುವ ನೀರು ಡ್ರೈನ್ ನೊಳಗೆ ಹಾಕಿ. ಆಗ ಎಲ್ಲವೂ ತೊಳೆದುಕೊಂಡು ಹೋಗುತ್ತದೆ.

ಮನೆಯಲ್ಲೇ ಮಾಡಿದ ಅಡುಗೆ ಸೋಡಾ ಕ್ಲೀನರ್

ಅರ್ಧ ಕಪ್ ಅಡುಗೆ ಸೋಡಾ ಮತ್ತು 1/4 ಕಪ್ ನಿಂಬೆ ರಸ ಹಾಕಿ ಮಿಶ್ರಣ ಮಾಡಿ. ಇದನ್ನು ಸಿಂಕ್ ನ ಮೇಲ್ಭಾಗಕ್ಕೆ ಬಳಸಿ. ಇದು ಅಡುಗೆ ಸೋಡಾ ಬಳಸಿ ಸಿಂಕ್ ನ್ನು ಶುಚಿಗೊಳಿಸುವ ವಿಧಾನ. ವಾರದಲ್ಲಿ ಒಂದು ಸಲ ಹೀಗೆ ಮಾಡಿ.

ಬಿಳಿ ವಿನೇಗರ್ ಜತೆಗೆ ಅಡುಗೆ ಸೋಡಾ

1/2 ಕಪ್ ಅಡುಗೆ ಸೋಡಾ ಮತ್ತು 1/4 ಕಪ್ ನಿಂಬೆರಸ ಮಿಶ್ರಣ ಮಾಡಿ ಅಡುಗೆ ಮನೆ ಸಿಂಕ್ ನ್ನು ಶುಚಿಗೊಳಿಸಿ. ಈ ದ್ರಾವಣ ಒಣಗಿದ ಬಳಿಕ 1/2 ಕಪ್ ಬಿಳಿ ವಿನೇಗರ್ ಹಾಕಿ.

ಲಿಕ್ವಿಡ್ ಸೋಪ್ ಜತೆಗೆ ಅಡುಗೆ ಸೋಡಾ
ಅಡುಗೆ ಮನೆಯ ಸಿಂಕ್ ನ್ನು ಶುಚಿಗೊಳಿಸಲು ಇದು ಮತ್ತೊಂದು ಒಳ್ಳೆಯ ಮಿಶ್ರಣ. ಒಂದು ಪಾತ್ರೆಯಲ್ಲಿ ಅಡುಗೆ ಸೋಡಾ ಮತ್ತು ಲಿಕ್ವಿಡ್ ಸೋಪ್ ನ್ನು ಮಿಶ್ರಣ ಮಾಡಿ. ಇದನ್ನು ನೀರಿನೊಂದಿಗೆ ಬೆರೆಸಿ ಮತ್ತು ವಿನೇಗರ್ ಹಾಕಿ. ಮಿಶ್ರಣವನ್ನು ಸರಿಯಾಗಿ ತಿರುಗಿಸಿ ಮತ್ತು ಬಾಟಲಿಗೆ ಹಾಕಿ ಇಡಿ. ಉಪಯೋಗಿಸುವ ಮೊದಲು ಸರಿಯಾಗಿ ಅಲುಗಾಡಿಸಿ.

ಅಂತಿಮವಾಗಿ ಜಾಲಾಡುವಿಕೆ
ಒಮ್ಮೆ ನಿಮ್ಮ ಶುಚಿಗೊಳಿಸುವ ಕೆಲಸ ಮುಗಿದ ಬಳಿಕ ಸಿಂಕ್ ನ್ನು ಜಾಲಾಡಿ. ಅಚ್ಚುಕಟ್ಟಾಗಿ ಶುಚಿಗೊಳಿಸಿ ಮತ್ತು ಹತ್ತಿ ಬಟ್ಟೆಯಿಂದ ಅದನ್ನು ಒರೆಸಿ. ಪ್ರತೀ ಸಲ ಸಿಂಕ್ ನ್ನು ಬಳಸಿದ ಬಳಿಕ ಶುಚಿಗೊಳಿಸಿ. ಪ್ರತೀ ದಿನ ಸಿಂಕ್ ನ್ನು ಶುಚಿಗೊಳಿಸುವುದರಿಂದ ನಿಮ್ಮ ಅಡುಗೆ ಮನೆಯ ಸಿಂಕ್ ನ್ನು ಸ್ವಚ್ಛ ಮತ್ತು ಹೊಳೆಯುವಂತೆ ಮಾಡಬಹುದು.

English summary

Cleaning Kitchen Sink With Baking Soda

Every women love to keep their kitchen clean ad attractive. Cleaning kitchen sink is an important part of keeping your kitchen clean and hygienic. Selecting the best cleaning agent is the most crucial factor that will aid in cleaning kitchen sink. You will get a number of solutions in the market that can be used for cleaning kitchen sink.
Story first published: Wednesday, December 18, 2013, 17:13 [IST]
X
Desktop Bottom Promotion