For Quick Alerts
ALLOW NOTIFICATIONS  
For Daily Alerts

ದೀಪಾವಳಿಗೆ ನಿಮ್ಮ ಮನೆಯನ್ನು ಆಕರ್ಷಕವಾಗಿ ಸಿಂಗರಿಸಲು ಇಲ್ಲಿದೆ ಟಿಪ್ಸ್

|

ದೀಪಾವಳಿ ಎಂದ ಕೂಡಲೇ ದೀಪದ ಅಲಂಕಾರ, ರಂಗೋಲಿಯ ಚಿತ್ತಾರ, ಅಂಗಳದ ತುಂಬಾ ರಂಗುರಂಗಿನ ಬಣ್ಣಗಳು, ಅದರ ಮೇಲೆ ಬೆಳಕಿನ ಕಿರಣಗಳ ಸ್ಪರ್ಷ ಇವುಗಳೇ ಅಲ್ಲವೇ ಕಣ್ಣ ಮುಂದೆ ಬರೋದು. ಹೌದು ದೀಪಾವಳಿ ಅಂದರೆ ದೀಪಗಳ ಹಬ್ಬ, ಅಲಂಕಾರದ ಹಬ್ಬ, ಸಿಹಿ ತಿನಿಸುಗಳ ಹಬ್ಬ, ಸಂಭ್ರಮದ ಸಡಗರದ ಹಬ್ಬ. ಬೇರೆಬೇರೆ ಬಣ್ಣಗಳ ಬೆಳಕಿನ ಚಿತ್ತಾರವು ನಮ್ಮಲ್ಲಿನ ಸಂತೋಷವನ್ನು ಇಮ್ಮಡಿಗೊಳಿಸುತ್ತದೆ.

ಕೆಟ್ಟದರ ವಿರುದ್ಧ ಒಳ್ಳೆಯದರ ಜಯವನ್ನು ಸೂಚಿಸುವ ಹಬ್ಬವೇ ದೀಪಾವಳಿ. ಮಿಠಾಯಿಗಳನ್ನು ಹಂಚಿಕೊಳ್ಳುವ ಮೂಲಕ ದೀಪಾವಳಿಯ ಸಂಭ್ರಮವನ್ನು ಮತ್ತೊಬ್ಬರೊಡನೆ ಹಂಚಿಕೊಳ್ಳುತ್ತೇವೆ. ದೀಪವು ದೇವರ ಸಂಕೇತವಾಗಿದೆ ಮತ್ತು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವ ದ್ಯೋತಕವಾಗಿದೆ. ದೀಪಾವಳಿ ಅಂದರೆ ಒಬ್ಬರಿಗೊಬ್ಬರು ಒಳ್ಳೆಯದನ್ನು ಯಾವುದಾದರೂ ರೂಪದಲ್ಲಿ ಹಂಚಿಕೊಳ್ಳುವ ಸುದಿನ. ಲಕ್ಷ್ಮೀದೇವಿಯನ್ನು ಪೂಜಿಸುವ ಸುವರ್ಣ ದಿನ.

ಮನೆಯನ್ನು ದೀಪಗಳಿಂದ, ಹೂವುಗಳಿಂದ ಅಲಂಕರಿಸುತ್ತೇವೆ. ಸ್ನೇಹಿತರು, ಬಂಧುಬಳಗದವರು ಉಡುಗೊರೆಗಳನ್ನು ಹಂಚಿಕೊಳ್ಳುತ್ತೇವೆ, ಹೊಸ ಬಟ್ಟೆ ತೊಟ್ಟು ಖುಷಿ ಪಡುತ್ತೇವೆ. ಭವಿಷ್ಯವು ಇನ್ನಷ್ಟು ರಂಗುರಂಗಾಗಿರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇವೆ.

ದೀಪಾವಳಿಯ ಅಲಂಕಾರಕ್ಕಾಗಿ ಮಾರುಕಟ್ಟೆಯಲ್ಲೇನೋ ಸಾಕಷ್ಟು ಥರಾವರಿ ವಸ್ತುಗಳು ಸಿಗುತ್ತವೆ. ಅಲಂಕಾರಿಕ ದೀಪಗಳು ಮಾರುಕಟ್ಟೆಯಿಂದ ತರುವುದೇನೋ ಸರಿ. ಆದರೆ ಈ ಬಾರಿ ಪರಿಸರ ದೀಪಾವಳಿಯ ವಿಶೇಷ ಸ್ವಲ್ಪ ವಿಭಿನ್ನವಾಗಿ ಆಚರಿಸೋಣ. ಸ್ವತಃ ನೀವೇ ನಿಮ್ಮ ಕೈಯಾರೆ ಹೊಸ ಹೊಸ ರೀತಿಯ ದೀಪಗಳನ್ನು ತಯಾರಿ ಮಾಡುವುದು ಹೇಗೆ ಎಂಬ ಬಗ್ಗೆ ನಾವೊಂದಿಷ್ಟು ಸರಳವಾಗಿರುವ ಉಪಾಯಗಳನ್ನು ತಿಳಿಸುತ್ತೇವೆ. ಮನೆಯಲ್ಲೇ ಲಭ್ಯವಾಗುವ ಕೆಲವು ನಿರುಪಯುಕ್ತ ವಸ್ತುಗಳನ್ನು ಬಳಸಿ ಹೇಗೆ ನೀವು ದೀಪಾವಳಿ ಅಲಂಕಾರವನ್ನು ನಿಮ್ಮ ಮನೆಯಂಗಳಕ್ಕೆ. ಬಾಲ್ಕನಿಗೆ, ಹಾಗೂ ಮನೆಯ ಬೇರೆಬೇರೆ ಜಾಗಗಳಲ್ಲಿ ಮಾಡಬಹುದು ಎಂಬ ಬಗ್ಗೆ ಸಿಂಪಲ್ ಸಲಹೆಗಳನ್ನು ನಾವಿಲ್ಲಿ ನಿಮಗಾಗಿ ನೀಡುತ್ತಿದ್ದೇವೆ.

ಬಳಕೆಗೆಬಾರದ, ಉಳಿದ ವಸ್ತುಗಳಿಂದ ಅಲಂಕಾರಿಕ ವಸ್ತುಗಳನ್ನು ತಯಾರಿಸುವುದರೊಂದಿಗೆ ದೀಪಾವಳಿ ಖರ್ಚನ್ನು ಕೂಡ ನೀವು ಉಳಿತಾಯ ಮಾಡಬಹುದು. ಮನೆಯ ಅಲಂಕಾರಕ್ಕಾಗಿ ಅಂಗಡಿಯಿಂದ ಕೊಂಡು ತರುವ ವಸ್ತುಗಳಿಗಿಂತ ನೀವೇ ಮಾಡಿಕೊಂಡ ವಸ್ತುಗಳು ಮನಸ್ಸಿಗೂ ಹೆಚ್ಚು ತೃಪ್ತಿ ನೀಡುತ್ತವೆ. ಹಬ್ಬದ ಸಂಭ್ರಮಕ್ಕೆ ಉಳಿತಾಯದ ಜೊತೆಗೆ ಮನೆಯ ಅಲಂಕಾರವನ್ನು ಇಮ್ಮಡಿಗೊಳಿಸುವ ಈ ಹೊಸ ಹೊಸ ಐಡಿಯಾಗಳು ಖಂಡಿತ ನಿಮಗೂ ಕೂಡ ಇಷ್ಟವಾಗಲಿದೆ ಎಂಬ ನಂಬಿಕೆ ನಮ್ಮದು. ಹಾಗಾದ್ರೆ ಅಲಂಕಾರಿಕ ವಸ್ತುಗಳ ತಯಾರಿಯ ಬಗ್ಗೆ ತಿಳಿದುಕೊಳ್ಳಬೇಕಾ? ಮುಂದೆ ಓದಿ. ಮನೆಯಲ್ಲೇ ಟ್ರೈ ಮಾಡಿ ನೋಡಿ.

ಬಣ್ಣದ ಕಾಗದಗಳು, ಸ್ಟ್ರಿಂಗ್ ಲೈಟ್ಸ್ ಗಳು, ಹೂವುಗಳು, ಟೀ ಲೈಟ್ಸ್ ಗಳು, ಡಯಾಸ್ ಗಳು, ವೈನ್ ಬಾಟಲಿಗಳು, ಹಳೆ ಜಾರ್ ಗಳು, ಗ್ಲಾಸ್ ಗಳು, ಕಾಟನ್ ವಸ್ತುಗಳು ಇವೆಲ್ಲವೂ ಕೂಡ ನಾವು ದಿನನಿತ್ಯ ಬಳಸುವ ವಸ್ತುಗಳು. ಕೆಲವು ನಿರುಪಯುಕ್ತ ವಸ್ತುಗಳು ಕೂಡ ಕ್ರಾಫ್ಟ್ ನಲ್ಲಿ ಉಪಯುಕ್ತ ವಸ್ತುಗಳಾಗಿ ಬಿಡುತ್ತವೆ. ಅದಕ್ಕಾಗಿ ನೀವು ದುಬಾರಿ ಹಣ ವ್ಯಯಿಸುವ ಅಗತ್ಯವಿಲ್ಲ.ಇವುಗಳನ್ನು ಹೊರತು ಪಡಿಸಿ ನಿಮಗೆ ಕ್ರಾಫ್ಟ್ ಮಾಡುವುದಕ್ಕಾಗಿ ಅಂಟು,ಕತ್ತರಿ ಇತ್ಯಾದಿ ಸಾಮಾನ್ಯ ವಸ್ತುಗಳ ಅಗತ್ಯವೂ ಇರುತ್ತದೆ.

ಸ್ಟ್ರಿಂಗ್ ಲೈಟ್ಸ್ ಗಳನ್ನು ತಯಾರಿ ಮಾಡದೇ ಇದ್ದರೆ ದೀಪಾವಳಿ ಹಬ್ಬ ಅರ್ಥಪೂರ್ಣ ಅನ್ನಿಸುವುದೇ ಇಲ್ಲ. ಇವುಗಳು ಬಹಳ ಕಡಿಮೆ ಬೆಲೆಯದ್ದು ಮತ್ತು ಎಲ್ಇಡಿ ಲೈಟ್ ಗಳನ್ನು ಹ್ಯಾಂಡಲ್ ಮಾಡುವುದು ಬಹಳ ಸರಳವೂ ಹೌದು ಅಷ್ಟೇ ಅಲ್ಲ ಹಲವಾರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗುತ್ತದೆ ಜೊತೆಗೆ ಬಣ್ಣಗಳ ಬದಲಾವಣೆಯೂ ಕೂಡ ಸಾಧ್ಯವಾಗುತ್ತದೆ.

ಹಳೆ ಮಾದರಿಯ ಬೋರಿಂಗ್ ಲೈಟ್ ಗಳನ್ನು ಮನೆಯಲ್ಲಿ ಹಾಕುವ ಜಮಾನ ಮುಗಿದ್ಹೋಯ್ತು. ಇದೀಗ ಕಾಲ ಹೇಗೆಂದರೆ ಮನೆಯ ವಾತಾವರಣಕ್ಕೆ ಮತ್ತಷ್ಟು ರಂಗು ನೀಡುವ ಬೆಳಕಿನ ಕಿರಣಗಳ ಅಲಂಕಾರ ಹೆಚ್ಚು ಚಾಲ್ತಿಯಲ್ಲಿದೆ. ಹಾಗಾಗಿ ಪ್ರಕಾಶಮಾನವಾಗಿರುವ ಮತ್ತು ಎಲ್ಲರ ಮನಸ್ಸಿಗೂ ಹಿತವೆನ್ನಿಸುವ ಕೆಲವು ಬೆಳಕಿನ ಅಲಂಕಾರಿಕ ವಸ್ತುಗಳ ತಯಾರಿಗೆ ನಾವಿಲ್ಲಿ ಸಿಂಪಲ್ ಸಲಹೆಗಳನ್ನು ನೀಡುತ್ತಿದ್ದೇವೆ.

1. ಹುಲಾ ಹೂಪ್ ಗೊಂಚಲುಗಳು

1. ಹುಲಾ ಹೂಪ್ ಗೊಂಚಲುಗಳು

ಚಿತ್ರ ಕೃಪೆ: ಹೇಟಿವ್.ಕಾಂ

ಹಬ್ಬದ ವಾತಾವರಣವನ್ನು ನಿಮ್ಮ ಲಿವಿಂಗ್ ರೂಮ್ ನಲ್ಲಿ ನಿರ್ಮಿಸುವುದಕ್ಕಾಗಿ ಹುಲಾ ಹೂಪ್ ಗೊಂಚಲುಗಳನ್ನು ನಿರ್ಮಿಸುವುದು ಸೂಕ್ತ. ಇಂಡೋರ್ ಮತ್ತು ಔಟ್ ಡೋರ್ ಎರಡೂ ಕಡೆಗಳಲ್ಲಿ ಈ ಲೈಟ್ ಗಳು ಅತ್ಯುತ್ತಮವಾಗಿ ಕಾಣಿಸುತ್ತವೆ. ಇದು ಪಾರ್ಟಿ ಡೆಕೋರೇಷನ್ ಗೂ ಕೂಡ ಬಹಳ ಚೆನ್ನಾಗಿರುತ್ತದೆ.

2. ದಾರದಂತಹ ಬೆಳಕಿನ ಗೂಡುಗಳು (ಥ್ರೆಡ್ ಲ್ಯಾಂಟರ್ನ್ ಗಳು)

2. ದಾರದಂತಹ ಬೆಳಕಿನ ಗೂಡುಗಳು (ಥ್ರೆಡ್ ಲ್ಯಾಂಟರ್ನ್ ಗಳು)

ದಾರಗಳಿಂದ ಸುಲಭವಾಗಿ ತಯಾರಿಸಬಹುದಾದ ಬೆಳಕಿನ ಗೂಡುಗಳು ನಿಜಕ್ಕೂ ಬೆಳಕಿನ ಕಿರಣಗಳ ಪ್ರತಿಫಲವನ್ನು ಮತ್ತಷ್ಟು ಸುಂದರವಾಗುವಂತೆ ಮಾಡುತ್ತದೆ. ಅದಕ್ಕಾಗಿ ನಿಮಗೆ ಸ್ವಲ್ಪ ಅಂಟು ಉದಾಹರಣೆಗೆ ಫಿಲಿಕಾಲ್, ಒಂದು ಬೌಲ್, ಬಲೂನ್, ಕಾಟನ್ ದಾರಗಳು ಮತ್ತು ನೀರಿನ ಅಗತ್ಯತೆ ಇರುತ್ತದೆ ಅಷ್ಟೇ.

ಮೊದಲಿಗೆ ಸ್ವಲ್ಪ ಅಂಟನ್ನು ನೀರಿನೊಂದಿಗೆ ಒಂದು ಬೌಲ್ ನಲ್ಲಿ ಮಿಕ್ಸ್ ಮಾಡಿ. ಅದರಲ್ಲಿ ಕಾಟನ್ ದಾರಗಳನ್ನು ಹಾಕಿ ಮತ್ತು ಕೆಲವು ನಿಮಿಷ ಬಿಡಿ. ನಂತರ ಬಲೂನ್ ತೆಗೆದುಕೊಂಡು ಗಾಳಿ ಊದಿ ಮತ್ತು ಅದರ ಸುತ್ತಲೂ ಅಲ್ಲಲ್ಲಿ ದಾರಗಳನ್ನು ಸುತ್ತಿ. ಕೆಲವು ಘಂಟೆಗಳವರೆಗೆ ಅಂಟು ಗಟ್ಟಿಯಾಗುವುದಕ್ಕೆ ಬಿಟ್ಟು ಬಿಡಿ. ಯಾವಾಗ ದಾರವು ಸಂಪೂರ್ಣ ಗಟ್ಟಿಯಾಗುತ್ತದೆಯೋ ಆಗ ಬಲೂನ್ ನ್ನು ಒಡೆದು ಬಿಡಿ ಮತ್ತು ಅದನ್ನು ಹೊರತೆಗೆಯಿರಿ. ಇದೀಗ ನಿಮ್ಮ ದಾರದ ಬೆಳಕಿನ ಗೂಡು ತಯಾರಾಗಿರುತ್ತದೆ. ಅದರೊಳಗೆ ಸ್ಟ್ರಿಂಗ್ ಲೈಟ್ ನ್ನು ಸೇರಿಸಿ ನಿಮಗೆ ಬೇಕು ಅನ್ನಿಸುವ ಜಾಗದಲ್ಲಿ ನೇತು ಹಾಕಿ.

3. ಗಾಜಿನ ಬಾಟಲಿಯಲ್ಲಿ ದೀಪದ ಅಲಂಕಾರ (ಮೇಸನ್ ಜಾರ್ ಲೈಟ್ ಗಳು)

3. ಗಾಜಿನ ಬಾಟಲಿಯಲ್ಲಿ ದೀಪದ ಅಲಂಕಾರ (ಮೇಸನ್ ಜಾರ್ ಲೈಟ್ ಗಳು)

ಸ್ಟ್ರಿಂಗ್ ಲೈಟ್ ಗಳನ್ನು ಸಾಮಾನ್ಯವಾಗಿ ಯಾವುದರ ಒಳಗೆ ಬೇಕಿದ್ದರೂ ಹಾಕಬಹುದು. ಕೆಲವು ಮೇಸನ್ ಜಾರ್ ಗಳನ್ನು ತೆಗೆದುಕೊಂಡು ಅದರೊಳಗೆ ಲೈಟ್ ಗಳನ್ನು ಹಾಕಿ. ಅಂದರೆ ಗಾಜಿನ ಬಾಟಲಿಗಳು. ಹೌದು ಅದರೊಳಗೆ ಲೈಟ್ ಗಳನ್ನು ಹಾಕಿ ನಿಮಗೆ ಇಷ್ಟವಾಗುವ ಜಾಗದಲ್ಲಿ ತೂಗುಹಾಕಿ. ಹುಲಾ ಹೂಪ್ ಗೊಂಚಲುಗಳಂತೆ ಇವುಗಳು ಕೂಡ ಔಟ್ ಡೋರ್ ಗೆ ಅತ್ಯುತ್ತಮವಾಗಿರುತ್ತದೆ.

4. ಪೇಪರ್ ಕಪ್ ನಿಂದ ಲೈಟ್ ಗಳು

4. ಪೇಪರ್ ಕಪ್ ನಿಂದ ಲೈಟ್ ಗಳು

ಚಿತ್ರ ಕೃಪೆ: ಡೀಲ್ಸ್ ಶಟರ್.ಕಾಂ

ಇದಕ್ಕಿಂತ ಸಿಂಪಲ್ ಆಗಿ ಬೆಳಕಿನ ಅಲಂಕಾರಕ್ಕೆ ಮತ್ತೊಂದು ಉಪಾಯ ಇರಲಿಕ್ಕಿಲ್ಲ. ಪೇಪರ್ ಕಪ್ ನ ತಳಭಾಗದಲ್ಲಿ ಸಣ್ಣದಾದ ಕ್ರಿಸ್ ಕ್ರಾಸ್ ರೀತಿ ಕಟ್ಟ ಮಾಡಿ ಮತ್ತು ಅದರೊಳಗೆ ಲೈಟ್ ನ್ನು ಸೇರಿಸಿ. ಇನ್ನು ಹಲವು ಪೇಪರ್ ಕಪ್ ಗಳನ್ನು ಒಂದಕ್ಕೊಂದು ಜೋಡಿಸಿ ಬೇರೆಬೇರೆ ಆಕಾರದಲ್ಲೂ ಕೂಡ ಲ್ಯಾಂಪ್ ಗಳನ್ನು ನಿರ್ಮಿಸಬಹುದು. ಪೇಪರ್ ಕಪ್ ನೊಳಗೆ ಲೈಟ್ ಆನ್ ಆದಾಗ ಆ ಬೆಳಕು ನೀಡುವ ನೋಟವೇ ವಿಭಿನ್ನವಾಗಿ ಸುಂದರವಾಗಿರುತ್ತದೆ.

5. ಬಾಟಲಿ ಲೈಟ್ ಗಳು

5. ಬಾಟಲಿ ಲೈಟ್ ಗಳು

ಹಳೆಯ ಖಾಲಿಯಾದ ಗಾಜಿನ ಬಾಟಲಿಗಳು ಮನೆಯಲ್ಲಿ ನಿರುಪಯುಕ್ತವಾಗಿ ಬಿದ್ದಿರಬಹುದು. ಅವುಗಳು ದೀಪಾವಳಿ ಅಲಂಕಾರಕ್ಕೆ ಸೂಕ್ತ ವಸ್ತುಗಳಾಗಿವೆ. ಹೌದು ಅವುಗಳನ್ನು ಸುಮ್ಮನೆ ಎಸೆಯಬೇಡಿ. ದೀಪಾವಳಿಯ ಒಳಾಂಗಣ ಅಲಂಕಾರಕ್ಕೆ ಇವುಗಳು ಅತ್ಯುತ್ತಮ ಆಯ್ಕೆಗಳಾಗಿವೆ. ನೀವು ಮಾಡಬೇಕಾಗಿರುವುದು ಇಷ್ಟೇ. ಲೈಟ್ ನ್ನು ಬಾಟಲಿಯಲ್ಲಿ ಹಾಕಿ ಕಾರ್ಕ್ ಸ್ಕ್ರೂ ಬಳಸಿ ಅದನ್ನು ಮುಚ್ಚಿ. ನಂತರ ನೀವು ಯಾವುದಾದರೂ ಟೇಬಲ್ ಅಥವಾ ರೂಮಿನ ಮಧ್ಯದಲ್ಲೋ ಅಥವಾ ನಿಮಗೆ ಸೂಕ್ತವೆನಿಸುವ ಮನೆಯ ಯಾವ ಜಾಗದಲ್ಲಿ ಬೇಕಿದ್ದರೂ ಇಡಬಹುದು.

6. ಮರಗಳಿಗೆ ಬೆಳಕಿನ ಅಲಂಕಾರ

6. ಮರಗಳಿಗೆ ಬೆಳಕಿನ ಅಲಂಕಾರ

ಅಂಗಳದ ಅಲಂಕಾರದಲ್ಲಿ ಬೆಳಕಿನ ಪಾತ್ರ ಬಹಳ ಪ್ರಮುಖವಾದದ್ದು. ಮನೆಯ ಎದುರು ಗಾರ್ಡನ್ ಇದ್ದಲ್ಲಿ ಅಲಂಕಾರಕ್ಕೆ ಗಿಡಗಳನ್ನು ಮತ್ತು ಮರಗಳನ್ನು ಬಳಸಿ ಬೆಳಕಿನ ರಂಗವಲ್ಲಿ ಬಿಡಿಸಬಹುದು. ಅಂದರೆ ಗಿಡಗಳಿಗೆ ಮತ್ತು ಮರಗಳಿಗೆ ಸ್ಟ್ರಿಂಗ್ ಲೈಟ್ ಗಳನ್ನು ಸುತ್ತುವುದರೊಂದಿಗೆ ಬೆಳಕಿನ ಅಲಂಕಾರ ಮಾಡಿದರೆ ಅತ್ಯದ್ಭುತವಾಗಿರುತ್ತದೆ. ಅದಕ್ಕಾಗಿ ನೀವು ಎಕ್ಸ್ ಟೆನ್ಶನ್ ಕ್ವಾರ್ಡ್(ವಿದ್ಯುತ್ಚಕ್ತಿ ಹರಿವಿವಾಗಿ ವಿಸ್ತರಣಾ ಬಳ್ಳಿಗಳು) ಗಳನ್ನು ಬಳಕೆ ಮಾಡಿಕೊಳ್ಳಬಹುದು.

7. ಬಾಕ್ಸ್ ಲೈಟ್ ಗಳು

7. ಬಾಕ್ಸ್ ಲೈಟ್ ಗಳು

ಪೇಪರ್ ಕಪ್ ಗಳಿಂದ ಬೆಳಕಿನ ಗೂಡುಗಳನ್ನು ಮಾಡಿದಂತೆಯೇ ಪೇಪರ್ ಬಾಕ್ಸ್ ಗಳಿಂದಲೂ ಕೂಡ ಬಿಳಿ ಬೆಳಕಿನ್ನು ಬೇರೆಬೇರೆ ವರ್ಣದ ಬೆಳಕನ್ನಾಗಿ ಪರಿವರ್ತಿಸಬಹುದು. ಓರಿಗಮಿ-ವೇಯಲ್ಲಿ ಕಾಗದವನ್ನು ಮಡಚುವ ಮೂಲಕ ನಾವು ಕಾಗದದ ಪೆಟ್ಟಿಗೆಯ ಲೈಟ್ ಗಳನ್ನು ತಯಾರಿಸಬಹುದು. ಇವು ಖಂಡಿತ ಸುಲಭದಲ್ಲಿ ತಯಾರಿಸಬಹುದಾದ ಬೆಳಕಿನ ಗೂಡುಗಳು. ಸಣ್ಣಸಣ್ಣದಾಗಿ ಕಟ್ ಮಾಡಿ ಪ್ರತಿ ಲೈಟ್ ಗಳ ಮೇಲೂ ಕೂಡ ಪ್ರತ್ಯೇಕವಾಗಿ ಇರಿಸಿ ತಂತಿಗಳ ಮೇಲೆ ತೂಗುಹಾಕಬಹುದು. ಮನೆಯ ಒಳಾಂಗಣ ವಿನ್ಯಾಸಕ್ಕೆ ಈ ಪೇಪರ್ ತೂಗುದೀಪಗಳು ಬಹಳ ನೈಜ ಸೌಂದರ್ಯವನ್ನು ನೀಡುತ್ತದೆ. ಹಬ್ಬದ ಕಳೆಯನ್ನು ಹೆಚ್ಚಿಸುತ್ತದೆ. ರೂಮಿನ ವಿನ್ಯಾಸದಲ್ಲಿ ಇವುಗಳು ಹೆಚ್ಚು ಸೂಕ್ತವಾಗಿರುತ್ತದೆ. ಕಲರ್ ಪೇಪರ್ ಗಳು, ಕತ್ತರಿ, ಅಂಟು ಮತ್ತು ಕೆಲವು ದಾರಗಳ ಬಳಕೆಯಿಂದಾಗಿ ನೀವು ಸುಲಭದಲ್ಲಿ ಈ ಕಾಗದದ ಬಾಕ್ಸ್ ಲೈಟ್ ಗಳನ್ನು ತಯಾರಿ ಮಾಡಬಹುದು.

8. ಪೇಪರ್ ಹಣತೆಯ ಹ್ಯಾಂಗಿಂಗ್ ಗಳು

8. ಪೇಪರ್ ಹಣತೆಯ ಹ್ಯಾಂಗಿಂಗ್ ಗಳು

ನಿರ್ದಿಷ್ಟ ಗಾತ್ರದಲ್ಲಿ ಕಲರ್ ಪೇಪರ್ ನ್ನು ವೃತ್ತಾಕಾರದಲ್ಲಿ ಕತ್ತರಿಸಿ, ಎರಡು ಬಾರಿ ಅದನ್ನು ಮಡಚಿ. ಒಮ್ಮೆ ವ್ಯಾಸದ ಉದ್ದಕ್ಕೂ ಮಡಚಿದರೆ ಇನ್ನೊಮ್ಮೆ ಅದರ ಅರ್ಧವನ್ನು ಫೋಲ್ಡ್ ಮಾಡಿ. ನಂತರ ಅಂತಹ ಎರಡು ಮಡಚಿದ ಕಾಗದವನ್ನು ಅಂಟಿಸಿ ದೀಪವನ್ನು ತಯಾರಿಸಿ. ಇದರ ಮೇಲ್ಬಾಗಕ್ಕೆ ಉರಿಯುತ್ತಿರುವ ಜ್ವಾಲೆಯ ಆಕಾರದಲ್ಲೂ ಕೂಡ ಕಾಗದವನ್ನು ಕತ್ತರಿಸಿ ಸೇರಿಸಬಹುದು. ದಾರದಲ್ಲಿ ಈ ಕಾಗದದ ದೀಪಗಳನ್ನು ಒಂದಕ್ಕೊಂದು ಪೋಣಿಸಿ ನಿಮಗೆ ಇಷ್ಟವಾದ ಜಾಗದಲ್ಲಿ ನೇತುಹಾಕಿ. ಈ ರೀತಿಯ ಫೋಲ್ಡ್ ಮಾಡಲಾಗಿರುವ ಲ್ಯಾಂಪ್ ಗಳ ಅಲಂಕಾರದಲ್ಲಿ ಪೇಪರ್ ತುಂಡುಗಳನ್ನು ಚೌಕಾಕಾರದಲ್ಲಿ ತುಂಡುಗಳನ್ನು ಮಾಡಿಕೊಳ್ಳುವ ಮೂಲಕವೂ ಕೂಡ ಬಹಳ ವೇಗವಾಗಿ ನಿರ್ಮಿಸಬಹುದು. ಮಡಚಿದ ಕಾಗದದ ವಿರುದ್ಧ ತುದಿಗಳನ್ನು ಒಂದಕ್ಕೊಂದು ಅಂಟಿಸಿ. ಮೇಲಿನ ಪೇಪರ್ ಲ್ಯಾಂಪ್ ನಲ್ಲಿ ಮಾಡಿದ ರೀತಿಯಲ್ಲಿಯೇ ಜ್ವಾಲೆಯನ್ನೂ ಕೂಡ ಸೇರಿಸಬಹುದು.

9. ಕಾಗದದ ಕೋನ್ ಫ್ಲವರ್ ಗಳು

9. ಕಾಗದದ ಕೋನ್ ಫ್ಲವರ್ ಗಳು

ಚಿತ್ರ ಕೃಪೆ: ಡೀಲ್ಸ್ ಶಟರ.ಕಾಂ

ಟೇಬಲ್ ಗಳು, ಬಾಗಿಲುಗಳು, ಕಿಟಕಿಯ ಅಲಂಕಾರ ಮತ್ತು ನೆಲದ ಅಲಂಕಾರಕ್ಕೆ ಕಾಗದದ ಕೋನ್ ಫ್ಲವರ್ ಗಳು ಅಧ್ಭುತವಾಗಿರುತ್ತದೆ. ಇವುಗಳ ಬಹಳ ಸರಳವಾಗಿ ನಿರ್ಮಿಸಬಹುದಾದ ಕ್ರಾಫ್ಟ್ ಕೂಡ ಹೌದು. ಕಾಗದವನ್ನು ಶಂಕು ರೀತಿಯಲ್ಲಿ ಕತ್ತರಿಸಿ ಅಂಟಿಸುವ ಮೂಲಕ ನೀವು ಬೇರೆಬೇರೆ ರೀತಿಯ ಕಾಗದದ ಹೂವುಗಳನ್ನುತಯಾರಿಸಬಹುದು. ಸೂರ್ಯಕಾಂತಿ, ಗುಲಾಬಿ ಹೀಗೆ ಬೇರೆಬೇರೆ ಕಾಗದದ ಹೂವುಗಳು ಅಲಂಕಾರಕ್ಕೆ ಸಹಾಯ ಮಾಡುತ್ತದೆ.

10. ಕರಕುಶಲ ಲ್ಯಾಂಪ್ ಶೇಡ್ ಗಳು

10. ಕರಕುಶಲ ಲ್ಯಾಂಪ್ ಶೇಡ್ ಗಳು

ಪೇಪರ್ ಸಹಾಯದಿಂದ ನಿಮ್ಮ ನೀವು ನಿಮ್ಮ ಲ್ಯಾಂಪ್ ನ್ನು ಅಲಂಕರಿಸಬಹುದು. ಆಯತಾಕಾರದ ಪೇಪರ್ ನಲ್ಲಿ ಅಗತ್ಯವಾಗಿರುವ ಪ್ಯಾಟರ್ನ್ ನ್ನು ಚಿತ್ರಿಸಿ ಮತ್ತು ಕಂಪಾಸ್ ಬಳಸಿ ಸರಿಯಾದ ಆಕಾರಕ್ಕೆ ಡಿಸೈನ್ ಮಾಡಿಕೊಳ್ಳಿ. ನಂತರ ಪೇಪರ್ ನ ಸಿಲಿಂಡರ್ ಆಕಾರದ ರಚನೆಯಾಗಿ ಮಡಚಿ ಅದರ ತುದಿಗಳನ್ನು ಒಟ್ಟಿಗೆ ಸೇರಿಸಿ ಅಂಟಿಸಿ.ಇದನ್ನು ಲ್ಯಾಂಪ್ ಮೇಲೆ ಇರಿಸಿದರೆ ನಿಮಗೆ ಅಧ್ಬುತವಾದ ಪ್ಯಾಟರ್ನ್ ನಲ್ಲಿ ಬೆಳಕು ದೀಪದಿಂದ ಹೊರಹೊಮ್ಮುತ್ತದೆ. ನೋಡುವುದಕ್ಕೆ ಬಲು ಸುಂದರವಾಗಿರುತ್ತದೆ.

11. ತಟ್ಟೆಗಳಿಗಾಗಿ ಕ್ವಿಲ್ಲಿಂಗ್ ಕಾಗದದ ವಿನ್ಯಾಸಗಳು

11. ತಟ್ಟೆಗಳಿಗಾಗಿ ಕ್ವಿಲ್ಲಿಂಗ್ ಕಾಗದದ ವಿನ್ಯಾಸಗಳು

ಕಲರ್ ಫುಲ್ ಆಗಿರುವ ಕ್ವಿಲ್ಲಿಂಗ್ ಪೇಪರ್ ಗಳನ್ನು ಮತ್ತು ಸೂಚಿಯನ್ನು ಬಳಸಿ ವಿಶೇಷ ರೀತಿಯಲ್ಲಿ ತಟ್ಟೆಯನ್ನು ಅಲಂಕರಿಸಬಹುದು. ಹಾಳೆಯ ತಟ್ಟೆಗಳು ಇಲ್ಲವೇ ಪೇಪರ್ ತಟ್ಟೆಗಳಿಗೆ ಕಲರ್ ಫುಲ್ ಪೇಪರ್ ಗಳಿಂದ ಅಲಂಕರಿಸಿ ದೀಪಗಳನ್ನು ಇರಿಸಿದರೆ ಬಹಳ ಸುಂದರವಾಗಿರುತ್ತದೆ. ಕ್ವಿಲ್ಲಿಂಗ್ ಪೇಪರ್ ಗಳನ್ನು ವೃತ್ತಾಕಾರದಲ್ಲಿ ಇಲ್ಲವೇ ಅಂಡಾಕಾರದಲ್ಲಿ ಡಿಸೈನ್ ಮಾಡಿ ಮತ್ತು ಅದನ್ನು ವಿಶೇಷ ಪ್ಯಾಟರ್ನ್ ನಲ್ಲಿ ಸೆಟ್ ಮಾಡಿ ತಟ್ಟೆಯಲ್ಲಿ ಅಲಂಕರಿಸಬಹುದು. ಇವುಗಳನ್ನು ಕಿಟಕಿ ಮತ್ತು ಬಾಗಿಲಿನ ಹತ್ತಿರದ ಅಲಂಕಾರಕ್ಕೆ ಬಳಕೆ ಮಾಡಬಹುದು.

12. ಬಳೆಗಳ ಲ್ಯಾಂಪ್ ಶೇಡ್ ಗಳು

12. ಬಳೆಗಳ ಲ್ಯಾಂಪ್ ಶೇಡ್ ಗಳು

ಬಳೆಗಳು ಕೇವಲ ಆಭರಣಗಳಂತೆ ತೊಡುವುದಕ್ಕೆ ಮಾತ್ರವಲ್ಲ ಬದಲಾಗಿ ದೀಪಾವಳಿ ಅಲಂಕಾರದಲ್ಲೂ ನೀವು ಬಳಕೆ ಮಾಡಿಕೊಳ್ಳಬಹುದು. ಹೌದು ನಿಮ್ಮ ಯಾವುದಾದರೂ ಹಳೆಯ ಬಳೆಗಳಿದ್ದಲ್ಲಿ ಅವುಗಳನ್ನು ದೀಪಾವಳಿಯಲ್ಲಿ ಮನೆಯ ಅಲಂಕಾರಕ್ಕಾಗಿ ನೀವು ಬಳಸಿಕೊಳ್ಳಬಹುದು.

ದೀಪಾವಳಿ ಲೈಟ್ ಗಳ ತಯಾರಿಕೆಗಾಗಿ ಒಂದರ ಮೇಲೆ ಒಂದು ಬಳೆಯನ್ನು ಅಂಟನ್ನು ಬಳಸಿ ವಿಶೇಷ ರೀತಿಯಲ್ಲಿ ಜೋಡಿಸಿ ನೀವು ಬೆಳಕಿನ ಸಣ್ಣ ಬುಟ್ಟಿಯನ್ನು ತಯಾರಿಸಬಹುದು. ಗಾಜಿನ ಬಳೆಗಳು ಲ್ಯಾಂಪ್ ಶೇಡ್ ಗಳ ತಯಾರಿಕೆಗೆ ಹೇಳಿ ಮಾಡಿಸಿದಂತಿರುತ್ತವೆ. ಗಾಜಿನ ಬಳೆಗಳು ಶಾಖ ವಿರೋಧಿ ಗುಣವನ್ನು ಹೊಂದಿರುವುದರಿಂದಾಗಿ ಹೆಚ್ಚು ಸುಂದರವಾಗಿ ಕಾಣುತ್ತದೆ. ಸುಲಭದಲ್ಲಿ ತಯಾರಿಸಬಹುದಾದ ಕ್ರಾಫ್ಟ್ ಇದಾಗಿದೆ ಮತ್ತು ಭವಿಷ್ಯದಲ್ಲಿ ಪುನಃ ಬಳಕೆ ಮಾಡುವುದಕ್ಕೂ ಕೂಡ ನೆರವಾಗುತ್ತದೆ.

13. ವೈನ್ ಗ್ಲಾಸ್ ಗಳ ಲ್ಯಾಂಪ್ ಗಳು

13. ವೈನ್ ಗ್ಲಾಸ್ ಗಳ ಲ್ಯಾಂಪ್ ಗಳು

ವೈನ್ ಗ್ಲಾಸ್ ಗಳನ್ನು ನೀವು ಟೇಬಲ್ ಗಳ ಅಲಂಕಾರಕ್ಕಾಗಿ ಬಳಸಿಕೊಳ್ಳಬಹುದು. ನಾಲ್ಕನೇ ಮೂರು ಭಾಗದಷ್ಟು ಬಾಟಲಿಗೆ ನೀರನ್ನು ತುಂಬಿಸಿ ಮತ್ತು ಅದರಲ್ಲಿ ಸುಂದರವಾಗಿರುವ ಹೂವುಗಳನ್ನು ಹಾಕಿ ತೇಲುವಂತೆ ಮಾಡಬಹುದು. ಟೀ ಲೈಟ್ ನ್ನು ಮೇಲ್ಬಾಗದಲ್ಲಿ ಇರಿಸಬಹುದು. ಇದರಿಂದಾಗಿ ನೀರಿನ ಮೇಲೆ ದೀಪವು ತೇಲುವಂತಿದ್ದು ಸಂದರವಾಗಿ ಕಾಣುತ್ತದೆ. ಅಷ್ಟೇ ಅಲ್ಲ ವೈನ್ ಗ್ಲಾಸ್ ಒಳಗೆ ಕ್ರಿಸ್ಟಲ್ ಗಳನ್ನು ಇಲ್ಲವೆ ಪೆಬಲ್ಸ್ ಗಳನ್ನು ಹಾಕಿ ಕೂಡ ಇನ್ನಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಬಹುದು. ಒಂದು ವೇಳೆ ನಿಮ್ಮ ಬಳಿ ಹೆಚ್ಚು ವೈನ್ ಗ್ಲಾಸ್ ಗಳಿದ್ದಲ್ಲಿ ಪ್ಯಾಟರ್ನ್ ಗಳನ್ನು ಸೃಷ್ಟಿಸಿ ಅವುಗಳನ್ನು ಸೇರಿಸಿ ಅಲಂಕರಿಸಬಹುದು. ಯಾವುದೇ ಪಾರ್ಟಿ, ಫಂಕ್ಷನ್ ಗಳಲ್ಲಿ ಸುಂದರವಾದ ಬೆಳಕಿನ ಅಲಂಕಾರಕ್ಕೆ ಇವು ಹೇಳಿ ಮಾಡಿಸಿದ ವಸ್ತುಗಳಾಗಿವೆ.

14. ಹೂವುಗಳ ರಂಗೋಲಿ

14. ಹೂವುಗಳ ರಂಗೋಲಿ

ದೀಪಾವಳಿ ಅಲಂಕಾರಕ್ಕೆ ಹೂವುಗಳು ಖಂಡಿತ ಬೇಕೇಬೇಕು. ಹೂವುಗಳ ರಂಗವಲ್ಲಿ ಇಲ್ಲದೇ ದೀಪಾವಳಿಯನ್ನು ಹೇಗೆ ತಾನೇ ಸಂಪೂರ್ಣಗೊಳಿಸುವುದಕ್ಕೆ ಸಾಧ್ಯವಲ್ಲವೇ? ಬಣ್ಣಬಣ್ಣದ ಹೂವುಗಳಿಂದ ಸುಂದರವಾದ ರಂಗವಲ್ಲಿ ಮೂಲಕ ನಿಮ್ಮ ಮನೆಯ ನೆಲವನ್ನು ಅಲಂಕರಿಸಿದರೇನೆ ದೀಪಾವಳಿಗೊಂದು ರಂಗು ಬರುವುದು ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ ಅಲ್ಲವೇ?

15. ಘಂಟೆಗಳು

15. ಘಂಟೆಗಳು

ಕ್ರಿಸ್ ಮಸ್ ನಲ್ಲಿ ಘಂಟೆಗಳನ್ನು ಬಳಸಿ ಅಲಂಕಾರ ಮಾಡುವುದು ಸರ್ವೇಸಾಮಾನ್ಯ. ಅದನ್ನು ದೀಪಾವಳಿ ಅಲಂಕಾರಕ್ಕೂ ಬಳಸಿದ್ರೆ ಖಂಡಿತ ಸುಂದರವಾಗಿರುತ್ತದೆ. ಚಿನ್ನ ವರ್ಣದ ಘಂಟೆಗಳನ್ನು ಅಲಂಕರಿಸಿದರೆ ಬೆಳಕಿನ ಕಿರಣಗಳ ಸ್ಪರ್ಷದಲ್ಲಿ ಅವುಗಳು ಮತ್ತಷ್ಟು ರಂಗುಗೊಳ್ಳುತ್ತದೆ. ಮನೆಯ ಅಲಂಕಾರಕ್ಕೆ ಸುಲಭದಲ್ಲಿ ತೂಗುಹಾಕಬಹುದಾದ ಅಲಂಕಾರಿಕ ವಸ್ತುವೆಂದರೆ ಈ ಗೋಲ್ಡನ್ ಘಂಟೆಗಳು. ಇವುಗಳ ಅಲಂಕಾರದಿಂದ ನಿಮ್ಮ ಡೆಕೊರೇಷನ್ ಬಗ್ಗೆ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸುವುದು ಖಂಡಿತ.

16. ಸಿಕ್ವಿನ್ ಮತ್ತು ಟಸೆಲ್ ಹ್ಯಾಂಗಿಂಗ್ಸ್ ಗಳು

16. ಸಿಕ್ವಿನ್ ಮತ್ತು ಟಸೆಲ್ ಹ್ಯಾಂಗಿಂಗ್ಸ್ ಗಳು

ಸಿಕ್ವಿನ್ ಮತ್ತು ಟಸೆಲ್ ಗಳು ಡೆಕೊರೇಷನ್ ನ ಭಾಗವಾಗಿದ್ದರೆ ದೀಪಾವಳಿಯ ಅಲಂಕಾರ ಇನ್ನಷ್ಟು ಸುಂದರವಾಗಿರುತ್ತದೆ. ಬೆಳಕಿನಲ್ಲಿ ಇವುಗಳು ಮಿನುಗುತ್ತವೆ. ಕಡಿಮೆ ಬೆಲೆಯಲ್ಲಿ ತಯಾರಿಸಬಹುದಾದ ಅಥವಾ ಖರೀದಿಸಬಹುದಾದ ಅಲಂಕಾರಿಕ ವಸ್ತುಗಳಲ್ಲಿ ಇವುಗಳು ಕೂಡ ಒಂದು. ಇವುಗಳು ಯಾವುದೇ ಸಮಯದಲ್ಲಿ ಬೇಕಿದ್ದರೂ ಮರುಬಳಕೆ ಮಾಡುವುದಕ್ಕೆ ಬರುವ ವಸ್ತುಗಳಾಗಿವೆ. ಸಿಕ್ವೆನ್ಸ್ ಮತ್ತು ಟಸೆಲ್ ಗಳನ್ನು ಬೇರೆಬೇರೆಯಾಗಿ ಇಲ್ಲವೇ ಒಟ್ಟಿಗೆ ಬೇಕಿದ್ದರೂ ದಾರಗಳನ್ನು ಬಳಸಿ ತೂಗುಹಾಕಬಹುದು. ಅದು ನಿಮ್ಮ ಇಚ್ಛೆಗೆ ಬಿಟ್ಟದ್ದು. ದೀಪಾವಳಿ ಲೈಟ್ ಗಳ ಪಕ್ಕದಲ್ಲಿ ಇವುಗಳನ್ನು ತೂಗುಹಾಕಿದರೆ ಫಳಫಳನೆ ಹೊಳೆದು ರಾತ್ರಿಯ ವೇಳೆಯಲ್ಲಿ ಬಹಳ ಸುಂದರವಾಗಿ ಕಾಣುತ್ತವೆ. ಬಾಗಿಲು, ಗೋಡೆಗಳಲ್ಲಿ ಖಾಲಿ ಬಿಟ್ಟ ಜಾಗವನ್ನು ಭರ್ತಿ ಮಾಡಿ ಅಲಂಕಾರಕ್ಕೆ ಮತ್ತಷ್ಟು ಮೆರುಗು ನೀಡಲು ಇವುಗಳು ಸಹಾಯಕ. ಅಷ್ಟೇ ಅಲ್ಲ ಅಲಂಕಾರವನ್ನು ಬೇಗನೆ ಮುಗಿಸುವುದಕ್ಕೂ ಕೂಡ ಇವು ನೆರವಾಗುತ್ತದೆ. ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

17. ಮಾದರಿ ಅನ್ನಿಸುವ ರಂಗೋಲಿಗಳು

17. ಮಾದರಿ ಅನ್ನಿಸುವ ರಂಗೋಲಿಗಳು

ಪೌಡರ್ ಗಳಿಂದ ಬಿಡಿಸಲಾಗುವ ರಂಗೋಲಿಗಳು ಕೂಡ ಬಹಳ ಕಲಾತ್ಮಕವಾಗಿರುತ್ತದೆ. ಮನೆಯ ಮುಂಬಾಗಿಲಿಗೆ ರಂಗೋಲಿ ಹಾಕದೇ ಇದ್ದರೆ ದೀಪಾವಳಿ ಸಂಪೂರ್ಣಗೊಳ್ಳುವುದಾದರೂ ಹೇಗೆ ಅಲ್ಲವೇ? ಇನ್ನು ದೀಪಗಳ ಸುತ್ತಲೂ ಕೂಡ ರಂಗೋಲಿ ಬಿಡಿಸಬಹುದು. ದೀಪಗಳ ಡಿಸೈನಿನ ರಂಗೋಲಿಯೂ ಕೂಡ ನೋಡುವುದಕ್ಕೆ ಸುಂದರವಾಗಿರುತ್ತದೆ. ದೀಪಗಳನ್ನು ಇಡುವ ಜಾಗಕ್ಕೆ ವಿಭಿನ್ನವಾದ ಕಲರ್ ಫುಲ್ ರಂಗೋಲಿಗಳು ಅಲಂಕಾರದ ಮೆರುಗನ್ನು ಇಮ್ಮಡಿಗೊಳಿಸುತ್ತದೆ. ರಂಗೋಲಿ ಬಿಡಿಸಿದರೆ ಖಂಡಿತ ದೀಪಾವಳಿ ಅಲಂಕಾರ ಸಂಪೂರ್ಣಗೊಳ್ಳುತ್ತದೆ ಎಂದರೆ ಅತಿಶಯೋಕ್ತಿ ಆಗಲಾರದು.

English summary

Deepavali Special Unique Decoration Ideas

Diwali brings pictures of beautifully illuminated courtyards to our minds. It is a festival of lights, colors, and sweets. The many shades of lamps signify the joyous emotions in us. We share the sweetness of life through the Mithais. The Diwali, as we all know, is associated with the victory of the good over the bad. Lights are symbolic of goodness and positive energy and if you think about it Diwali actually is about spreading positive vibes. We get each other gifts, we decorate homes with lights and flowers, and we wear new clothes all in the expectation of better times in the future.
X