Just In
Don't Miss
- Movies
ನಟಿ ಶ್ರದ್ಧಾ ಮದುವೆಯ ಬಗ್ಗೆ ಸುಳಿವು ನೀಡಿದ ನಟ ವರುಣ್ ಧವನ್
- News
ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಹೆಚ್ಚಿದ ಅಪಘಾತಗಳ ಸಂಖ್ಯೆ
- Sports
'ಆಟಗಾರರು ಅವರಲ್ಲೇ ನಂಬಿಕೆಯಿಡುವಂತೆ ಮಾಡೋದಕ್ಕೆ ನನ್ನ ಆದ್ಯತೆ'
- Automobiles
ಮಾಲಿನ್ಯ ಉಂಟುಮಾಡುವ ವಾಹನಗಳಿಗೆ ಬ್ರೇಕ್ ಹಾಕಲು 'ಹಸಿರು ತೆರಿಗೆ' ಅಸ್ತ್ರ
- Finance
ಬಜೆಟ್ 2021: ಎಲೆಕ್ಟ್ರಾನಿಕ್ ಉಪಕರಣಗಳ ಮೇಲಿನ ಆಮದು ಸುಂಕ ಹೆಚ್ಚಳ?
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕ್ರಿಸ್ಮಸ್‌ಗೆ ಅಲಂಕಾರ: ಇಲ್ಲಿದೆ ಬಜೆಟ್ ಫ್ರೆಂಡ್ಲಿ ಐಡಿಯಾ
ಕ್ರಿಶ್ಚಿಯನ್ನರ ಅತಿ ದೊಡ್ಡ ಹಬ್ಬ ಕ್ರಿಸ್ಮಸ್ ಹಬ್ಬ. ವರ್ಷದ ಕೊನೆ ತಿಂಗಳು ಅಂದರೆ ಡಿಸೆಂಬರ್ 25 ನೇ ತಾರೀಕಿನಂದು ಪ್ರತಿ ವರ್ಷ ಕ್ರಿಸ್ಮಸ್ ಹಬ್ಬವನ್ನು ನೋಡಲಾಗುತ್ತದೆ. ಕ್ರಿಸ್ಮಸ್ ಹಬ್ಬದ ಒಂದು ವಾರದ ಬಳಿಕ ಹೊಸ ವರ್ಷ ಪ್ರಾರಂಭವಾಗುತ್ತದೆ. ಹಾಗಾಗಿ ಕ್ರಿಸ್ಮಸ್ ಹಬ್ಬಕ್ಕೆ ಹೊಸ ವರ್ಷದ ಸಂಭ್ರಮ ಎಲ್ಲರಲ್ಲೂ ಮನೆಮಾಡಿರುತ್ತದೆ. ಕೇವಲ ಕ್ರಿಶ್ಚಿಯನ್ನರಿಗೆ ಮಾತ್ರ ಈ ಹಬ್ಬ ಎಂದು ತಿಳಿದುಕೊಳ್ಳುವ ಹಾಗೆ ಇಲ್ಲ. ಯೇಸುವಿನ ಶಾಂತಿ ಮಂತ್ರವನ್ನು ಪ್ರತಿಯೊಂದು ಧರ್ಮದವರು ಕೂಡ ಇಷ್ಟ ಪಡುತ್ತಾರೆ. ಹಾಗಾಗಿ ಹಲವಾರು ಕಡೆ ಕ್ರಿಶ್ಚಿಯನ್ನರ ಜೊತೆ ಸೇರಿ ಬೇರೆ ಧರ್ಮದವರು ಕೂಡ ಹಬ್ಬ ಆಚರಿಸುವುದು ಅವರ ಆಚರಣೆಗಳಲ್ಲಿ ಪಾಲ್ಗೊಳ್ಳುವುದು ಇದ್ದೇ ಇರುತ್ತದೆ.
ಕ್ರಿಶ್ಚಿಯನ್ ಹಬ್ಬದ ವಿಶೇಷತೆಯ ಬಗ್ಗೆ ಎಷ್ಟೇ ಹಾಡಿ ಹೊಗಳಿದರೂ ಸಾಕಾಗುವುದಿಲ್ಲ. ವರ್ಷಕ್ಕೆ ಒಂದು ಬಾರಿ ಬರುವ ಅತ್ಯಂತ ದೊಡ್ಡ ಹಬ್ಬ ಇದಾಗಿರುವುದರಿಂದ ಸಾಕಷ್ಟು ಸಂಭ್ರಮ - ಸಡಗರ ಕ್ರಿಶ್ಚಿಯನ್ನರ ಮನೆಗಳಲ್ಲಿ ಮನೆಮಾಡಿರುತ್ತದೆ. ಈ ಹಬ್ಬದ ಆಚರಣೆಯ ಸಂದರ್ಭದಲ್ಲಿ ಕ್ರಿಸ್ಮಸ್ ಟ್ರೀ ಅಲಂಕಾರಕ್ಕೆ ಇಡುವುದು ವಾಡಿಕೆ. ಕ್ರಿಸ್ಮಸ್ ಟ್ರೀ ಅನ್ನು ಅಲಂಕಾರ ಮಾಡುವುದೇ ಒಂದು ದೊಡ್ಡ ಖುಷಿ. ಇದರ ಜೊತೆಗೆ ಮನೆಯ ವಾತಾವರಣವನ್ನು ಎಲ್ಲರ ಕಣ್ತುಂಬಿಕೊಳ್ಳುವಂತೆ ಮಾಡಲು ಇನ್ನು ಕೆಲವು ಅಲಂಕಾರಗಳನ್ನು ಮಾಡಬೇಕಾಗುತ್ತದೆ.
ಈ ಲೇಖನದಲ್ಲಿ ತುಂಬಾ ಕಡಿಮೆ ಖರ್ಚಿನಲ್ಲಿ ಕ್ರಿಸ್ಮಸ್ ಹಬ್ಬದ ಅಲಂಕಾರವನ್ನು ಹೆಚ್ಚಿಸಲು ಮಾಡಬಹುದಾದ ವಿಧಾನಗಳನ್ನು ತಿಳಿಸಿಕೊಳ್ಳಲಾಗಿದೆ.

1 ಫೆಲ್ಟ್ ಪೇಪರ್ ಹಾರ : -
ಒಂದು ಫೆಲ್ಟ್ ಶೀಟ್ ತೆಗೆದುಕೊಂಡು ಅದನ್ನು ರೆಕ್ಟ್ಯಾಂಗಲ್ ಆಕಾರದಲ್ಲಿ ಸಣ್ಣ ಸಣ್ಣ ಚೂರುಗಳನ್ನಾಗಿ ಕತ್ತರಿಸಿ ಹೂವಿನ ಮಾಲೆ ಕಟ್ಟಿದಂತೆ ಗುಂಪಾಗಿ ಕಟ್ಟಿ. ಸುಮಾರು 30 ಪೀಸ್ ಗಳು ನೀವು ತಯಾರು ಮಾಡಬೇಕೆಂದಿರುವ ಸುಂದರವಾದ ಮಾಲೆಗೆ ಸಾಕಾಗುತ್ತವೆ. ಪೇಪರ್ ಮಾಲೆ ಕಟ್ಟಲು ಸಣ್ಣದಾದ ಪ್ಲಾಸ್ಟಿಕ್ ತಂತಿ ಬಳಕೆ ಮಾಡಬಹುದು. ನಿಮ್ಮ ಮನೆಯಲ್ಲಿರುವ ಕ್ರಿಸ್ಮಸ್ ಟ್ರೀ ಅಲಂಕಾರಕ್ಕೆ ಪೇಪರ್ ಮಾಲೆ ಹಾಕಬಹುದು ಅಥವಾ ಖಾಲಿ ಗೋಡೆ ಇರುವ ಜಾಗದಲ್ಲಿ ಇದನ್ನು ತೂಗು ಹಾಕಬಹುದು.

2 ಪಾಪ್ಸಿಕಲ್ ಸ್ನೋಫ್ಲೇಕ್ : -
ಪಾಪ್ಸಿಕಲ್ ಗಳನ್ನು ತೆಗೆದುಕೊಂಡು ಅವುಗಳಿಗೆ ಬಿಳಿ ಬಣ್ಣದ ಪೇಂಟ್ ಮಾಡಿ ಸ್ನೋಫ್ಲೇಕ್ ರೀತಿ ಆಕಾರಕ್ಕೆ ಬರುವ ಹಾಗೆ ಇರಿಸಿ ಅಲಂಕಾರಕ್ಕೆ ಬಳಸಬಹುದು. ನಿಮಗೆ ಯಾವ ಆಕಾರದಲ್ಲಿ ಪಾಪ್ಸಿಕಲ್ ಗಳ ಅಲಂಕಾರ ಇರಬೇಕು ಎಂದು ತಿಳಿಯದೇ ಹೋದರೆ ಅಂತರ್ಜಾಲದಲ್ಲಿ ಸಿಗುವ ಬೇರೆ ಬೇರೆ ಬಗೆಯ ಚಿತ್ರಗಳನ್ನು ನಿಮ್ಮ ಆಯ್ಕೆಯಾಗಿ ಇಟ್ಟುಕೊಳ್ಳಬಹುದು.

3 ದಾರಗಳ ಉಂಡೆಯ ಮಾಲೆ/ ಥ್ರೆಡ್ ಸ್ಪೂಲ್ ರೆತ್: -
ಮಾಲೆಗಳು ಅಥವಾ ಹಾರಗಳು ಇಲ್ಲದೆ ಕ್ರಿಸ್ಮಸ್ ಹಬ್ಬ ಸಂಪೂರ್ಣವಾಗಲು ಸಾಧ್ಯವೇ ಇಲ್ಲ. ಹಾಗಾಗಿ ಕ್ರಿಸ್ಮಸ್ ಟ್ರೀ ಅಲಂಕಾರಕ್ಕಾಗಿ ಮಾಲೆಯನ್ನು ತಯಾರು ಮಾಡಲು ನೀವು ಬೇರೆ ಬೇರೆ ಬಣ್ಣದ ದಾರಗಳ ಉಂಡೆಗಳನ್ನು ತೆಗೆದುಕೊಂಡು ಮಾಲೆಗಳ ರೀತಿ ತಯಾರು ಮಾಡಿ ಬೆಂಬಲಕ್ಕಾಗಿ ಒಂದಕ್ಕೊಂದು ಅಂಟು ಹಾಕಿ ಸ್ವಲ್ಪ ಜಾಗವಿಲ್ಲದ ಹಾರವನ್ನು ಅಲಂಕಾರಕ್ಕಾಗಿ ಬಳಸಬಹುದು. ದಾರಗಳು ಬೇರೆ ಬೇರೆ ಬಣ್ಣದಿಂದ ಕೂಡಿರುವುದರಿಂದ ನೋಡುವವರ ಕಣ್ಣಿಗೆ ನಿಮ್ಮ ಹಾರ ಎದ್ದು ಕಾಣುತ್ತದೆ.

4 ಪೈನ್ ಟ್ರೀ : -
ಹಚ್ಚ ಹಸಿರಾದ ಕಾಗದವನ್ನು ತೆಗೆದುಕೊಂಡು ಥೇಟ್ ಪೈನ್ ಮರ ಇರುವಂತೆ ಕತ್ತರಿಸಿಕೊಳ್ಳಿ. ಗಾಜಿನ ಲೋಟಗಳು ಮೇಲ್ಭಾಗದಲ್ಲಿ ಈ ಕಾಗದಗಳನ್ನು ಅಂಟಿಸಿ ಹಿಂಭಾಗದಲ್ಲಿ ಅಂದರೆ ಗಾಜಿನ ಲೋಟದ ಒಳಗೆ ಕ್ಯಾಂಡಲ್ ಇಡುವುದರ ನಂತರದಲ್ಲಿ ಕಂಡು ಬರುವ ಅಂದವನ್ನು ಕಣ್ತುಂಬಿಕೊಳ್ಳಲು ನಿಮ್ಮ ಎರಡು ಕಣ್ಣುಗಳು ಸಾಲದು. ಕ್ರಿಸ್ಮಸ್ ಹಬ್ಬದ ಸೆಂಟರ್ ಆಫ್ ಅಟ್ರಾಕ್ಷನ್ ಎಂದೇ ಇದನ್ನು ಕರೆಯಬಹುದು.

5 ಕ್ರಿಸ್ಮಸ್ ಟ್ರೀ ಪಕ್ಕದಲ್ಲೊಂದು ಫ್ಲವರ್ ವಾಸ್ : -
ನಿಮ್ಮಲ್ಲಿ ಸ್ವಲ್ಪ ಕ್ರಿಯೇಟಿವಿಟಿ ಇದ್ದರೆ ಕ್ರಿಸ್ಮಸ್ ಮರದ ಅಲಂಕಾರವನ್ನು ಇನ್ನೊಂದು ಬಗೆಯಲ್ಲಿ ಹೆಚ್ಚು ಮಾಡಬಹುದು. ಸಣ್ಣ ಸಣ್ಣ ಮರದ ಚಮಚಗಳನ್ನು ತೆಗೆದುಕೊಂಡು ಅದಕ್ಕೆ ಕ್ರಿಸ್ಮಸ್ ಹಬ್ಬಕ್ಕೆ ಸಂಬಂಧ ಪಟ್ಟಂತೆ ಇರುವ ಸಂತಾ ಕ್ಲಾಸ್,ರೇಯ್ನ್ ಡೀರ್, ಸ್ನೋಮೆನ್ ಇನ್ನಿತರ ಚಿತ್ರಗಳನ್ನು ಪೇಂಟ್ ಮಾಡಿ ಕ್ರಿಸ್ಮಸ್ ಟ್ರೀ ಪಕ್ಕದಲ್ಲಿ ಒಂದು ಚಿಕ್ಕದಾದ ಬಿದರಿನ ಬುಟ್ಟಿಯನ್ನು ಇಟ್ಟು ಅದರಲ್ಲಿ ಇವುಗಳನ್ನು ಇಡುವುದರಿಂದ ಕ್ರಿಸ್ಮಸ್ ಟ್ರೀ ಗೆ ವಿಶೇಷವಾದ ಕಳೆ ಬರುತ್ತದೆ.