ಕಡಿಮೆ ಖರ್ಚಿನಲ್ಲಿ ಪ್ರಯಾಸವಿಲ್ಲದೆ ಅಡುಗೆ ಮನೆಯನ್ನು ಸ್ವಚ್ಛಮಾಡುವುದು ಹೇಗೆ?

Posted By: jaya
Subscribe to Boldsky

ಮನೆಯಲ್ಲಿ ಹೆಚ್ಚು ಮನಸೆಳೆಯುವ ಸ್ಥಳ ಯಾವುದು ಎಂದು ಕೇಳಿದಲ್ಲಿ ಬರುವ ಉತ್ತರ ಅಡುಗೆ ಕೋಣೆಯಾಗಿದೆ. ಮನೆಯ ಸದಸ್ಯರಿಗೆಲ್ಲಾ ಶುಚಿಯಾದ ರುಚಿಯಾದ ಆಹಾರವನ್ನು ತಯಾರಿಸಲು ನೆರವಾಗುವ ಭೋಜನ ಗೃಹವು ತನ್ನದೇ ಆದ ಪೂಜನೀಯ ಅಂಶಗಳನ್ನು ಒಳಗೊಂಡಿದೆ. ಅಡುಗೆ ಕೋಣೆಯನ್ನು ನೀವು ನಿತ್ಯವೂ ಸ್ವಚ್ಛ ಮಾಡಿ ಇರಿಸುವುದರಿಂದ ನಿಮಗೂ ಒಂದು ತೃಪ್ತಿ ಇರುತ್ತದೆ ಅದೇ ರೀತಿ ಅಲ್ಲಿನ ಆಹಾರವನ್ನು ಸೇವಿಸುವವರಿಗೂ ಸಂತಸವಿರುತ್ತದೆ.

ನಿಮ್ಮೆಲ್ಲಾ ಅಡುಗೆ ಕೆಲಸವನ್ನು ಮುಗಿಸಿಕೊಂಡ ನಂತರ ಅಡುಗೆ ಕೋಣೆಯನ್ನು ಸ್ವಚ್ಛ ಮಾಡುವುದು ಸವಾಲಿನ ಕೆಲಸವಾಗಿದೆ. ಅದರಲ್ಲೂ ಇಂದಿನ ಅಡುಗೆ ಕೋಣೆಯ ವಿನ್ಯಾಸಗಳಲ್ಲಿ ನಾವು ಹಲವಾರು ಮಾರ್ಪಾಡುಗಳನ್ನು ಕಾಣುವುದರಿಂದ ನಿಮ್ಮ ಸ್ವಚ್ಛತೆಯ ಕೆಲಸ ಇನ್ನಷ್ಟು ಹಗುರವಾಗುತ್ತದೆ. ಇಂದಿನ ದಿನಗಳಲ್ಲಿ ಹೆಚ್ಚು ಮಾಡರ್ನ್ ಕಿಚನ್ ಅಂಶಗಳನ್ನು ನೀವು ನೋಡಬಹುದಾಗಿದೆ. ವಿಧ ವಿಧ ಮಾದರಿಯ ನವೀನ ಶೈಲಿಯಲ್ಲಿ ಇಂದು ಅಡುಗೆ ಮನೆ ಸೌಲಭ್ಯ ನಮಗೆ ದೊರೆಯುತ್ತಿದ್ದು ಇದು ನೋಡಲೂ ಸುಂದರವಾಗಿದ್ದು ನಮ್ಮ ಅನುಕೂಲಕ್ಕೆ ತಕ್ಕಂತೆ ಇರುತ್ತದೆ.

ಇಂದು ಮಾಡರ್ನ್ ಕಿಚನ್‌ನಂತಹ ನವೀನ ಮಾದರಿಯ ಅಡುಗೆ ಕೋಣೆಯು ಬಜೆಟ್ ಬೆಲೆಯಲ್ಲಿ ದೊರೆಯುತ್ತಿದ್ದು ಇದರ ಸದ್ಬಳಕೆಯನ್ನು ನಮಗೆ ಮಾಡಿಕೊಳ್ಳಬಹುದಾಗಿದೆ. ನಿಮ್ಮ ಅಡುಗೆ ಕೋಣೆ ಹೇಗೇ ಇದ್ದರೂ ಅದನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಮುಖ್ಯವಾಗಿದೆ. ಅದಕ್ಕೆಂದೇ ಇಂದಿನ ಲೇಖನದಲ್ಲಿ ನಾವು ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದು ಈ ಟಿಪ್ಸ್‌ಗಳನ್ನು ದೈನಂದಿನ ಜೀವನದಲ್ಲಿ ಅಳವಡಿಕೆ ಮಾಡಿಕೊಂಡು ಸ್ವಚ್ಛತೆಯನ್ನು ಮಾಡಬಹುದು. ಇಂದಿನ ಲೇಖನದಲ್ಲಿ ನಿಮ್ಮ ಸುಂದರವಾದ ಅಡುಗೆ ಕೋಣೆಯನ್ನು ಸ್ವಚ್ಛ ಮಾಡಲು ಕೆಲವೊಂದು ಅಂಶಗಳನ್ನು ನಾವು ತಿಳಿಸಿಕೊಡುತ್ತಿದ್ದು ಈ ಅಂಶಗಳನ್ನು ಬಳಸಿಕೊಂಡು ಅಡುಗೆ ಕೋಣೆಯ ಸ್ವಚ್ಛತೆಯನ್ನು ಬೇಗನೇ ಸ್ವಚ್ಛವಾಗಿ ನಡೆಸಬಹುದಾಗಿದೆ....

ಚಹಾ ಬಳಕೆ

ಚಹಾ ಬಳಕೆ

ಚಹಾ ಸೇವನೆ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ನಿಮ್ಮ ದೇಹಕ್ಕೆ ಉಲ್ಲಾಸವನ್ನು ನೀಡುವ ಜೊತೆಗೆ ಚಹಾ ನಿಮ್ಮ ಅಡುಗೆ ಮನೆಯ ರೂಪು ರೇಷೆಯನ್ನು ಬದಲಾಯಿಸುವಲ್ಲಿ ಎತ್ತಿದ ಕೈ ಎಂದೆನಿಸಲಿದೆ. ಚಹಾವನ್ನು ಕುದಿಸಿದ ನಂತರ ಅದರಲ್ಲಿ ನಿಮ್ಮ ಅಡುಗೆ ಮನೆಯ ಸ್ಟವ್‌ನ ಸ್ವಚ್ಛತೆಯನ್ನು ಮಾಡಬಹುದಾಗಿದೆ. ಇದಕ್ಕಾಗಿ ಚಹಾ ಬತ್ತಿಗಳನ್ನು ಬಳಸಿ, ಚಹಾ ಬ್ಯಾಗ್‌ಗಳನ್ನು ಬಳಸದಿರಿ. ಇದರಿಂದ ಸ್ವಚ್ಛತೆ ಶೀಘ್ರದಲ್ಲಿಯೇ ಮುಗಿದು ಹೋಗುತ್ತದೆ. ನಿಮ್ಮ ಸಿಂಕ್‌ನ ಸ್ವಚ್ಛತೆಗೂ ಈ ವಿಧಾನವನ್ನು ಅನುಸರಿಸಬಹುದಾಗಿದೆ.

ಕಡಿಮೆ ಬಾಳಿಕೆ ಬರುವ ಆಹಾರ ಉತ್ಪನ್ನಗಳ ಸಂರಕ್ಷಣೆ

ಕಡಿಮೆ ಬಾಳಿಕೆ ಬರುವ ಆಹಾರ ಉತ್ಪನ್ನಗಳ ಸಂರಕ್ಷಣೆ

ನಮಗೆಲ್ಲಾ ತಿಳಿದಿರುವಂತೆ ಬೇಕಿಂಗ್ ಸೋಡಾ ಕಡಿಮೆ ಬಾಳಿಕೆಯನ್ನು ಹೊಂದಿದೆ. ನೀವು ಇದನ್ನು ಫ್ರಿಡ್ಜ್‌ನಲ್ಲಿರಿಸಿದರೂ ಕೂಡ 30 ದಿನಗಳಿಗಿಂತ ಹೆಚ್ಚು ಸಮಯ ಇದನ್ನು ಇಡಲಾಗುವುದಿಲ್ಲ. ಹೀಗೆ ಬೇಕಿಂಗ್ ಪೌಡರ್ ಅನ್ನು ಎಸೆಯುವ ಸಂದರ್ಭದಲ್ಲಿ ಅದನ್ನು ಕಸದ ಬುಟ್ಟಿಗೆ ಹಾಕದೆ ನಿಮ್ಮ ಕಸದ ಬುಟ್ಟಿಗೆ ನೀರು ಮಾಡಿಕೊಂಡು ಎಸೆಯಿರಿ. ನಿತ್ಯವೂ ಹೀಗೆ ಮಾಡುವುದರಿಂದ ನಿಮ್ಮ ಕಸದ ಬುಟ್ಟಿಯ ವಾಸನೆ ಹೋಗುತ್ತದೆ.

ಓವನ್ ಸ್ವಚ್ಛತೆ

ಓವನ್ ಸ್ವಚ್ಛತೆ

ನೀವು ಓವನ್ ಅನ್ನು ನಿತ್ಯವೂ ಬಳಸುವವರಾಗಿದ್ದರೆ ಅದರ ಸ್ವಚ್ಛತೆಯನ್ನು ಅಷ್ಟೇ ಕಾಳಜಿಯಿಂದ ಮಾಡಬೇಕಾಗುತ್ತದೆ. ನಿಮ್ಮ ಓವನ್ ಏನಾದರೂ ಕರಟಿದ ಪದಾರ್ಥಗಳನ್ನು ಹೊಂದಿ ಅದನ್ನು ತೆಗೆಯುವುದು ನಿಮಗೆ ಕಷ್ಟವಾಗುತ್ತಿದೆ ಎಂದಾದಲ್ಲಿ ಓವನ್ನೊಳಗೆ ಸ್ವಲ್ಪ ಉಪ್ಪು ಚೆಲ್ಲಿ ನಂತರ ಓವನ್ ಬಿಸಿ ಮಾಡಿ. ಓವನ್ ತಣ್ಣಗಾದ ನಂತರ ಈ ಕರಟಿದ ಅಂಶ ಹುಡಿಯ ರೂಪದಲ್ಲಿ ಹೊರಬರುತ್ತದೆ. ನಂತರ ಒದ್ದೆ ಬಟ್ಟೆಯನ್ನು ಬಳಸಿ ಈ ಸ್ಥಳವನ್ನು ಸ್ವಚ್ಛ ಮಾಡಿ.

ಸ್ಟೈನ್‌ಲೆಸ್ ಪಾತ್ರೆಯ ಸ್ವಚ್ಛತೆ

ಸ್ಟೈನ್‌ಲೆಸ್ ಪಾತ್ರೆಯ ಸ್ವಚ್ಛತೆ

ಇಂತಹ ಪಾತ್ರೆಗಾಗಿ ವೋಡ್ಕವನ್ನು ಬಳಸಿಕೊಂಡು ಸ್ವಚ್ಛತೆಯನ್ನು ಮಾಡಬಹುದಾಗಿದೆ. ವೋಡ್ಕಾದಲ್ಲಿ ಸ್ಪಾಂಜ್ ಅನ್ನು ಅದ್ದಿಕೊಂಡು ಪಾತ್ರೆಯನ್ನು ಸ್ವಚ್ಛ ಮಾಡಿ. ನಿಮ್ಮ ಪಾತ್ರೆ ಅಷ್ಟೊಂದು ಕೊಳೆಯಾಗಿಲ್ಲ ಎಂದಾದಲ್ಲಿ ವೋಡ್ಕಾವನ್ನು ಪೇಪರ್‌ನಲ್ಲಿ ಸಿಂಪಡಿಸಿಕೊಂಡು ಪಾತ್ರೆಯನ್ನು ಸ್ವಚ್ಛಗೊಳಿಸಬಹುದಾಗಿದೆ. ನಂತರ ಒಣಗಿದ ಬಟ್ಟೆಯನ್ನು ಬಳಸಿಕೊಂಡು ಪಾತ್ರೆಯನ್ನು ಸ್ವಚ್ಛ ಮಾಡಿ.

ಸಿಂಕ್ ಸ್ವಚ್ಛತೆ

ಸಿಂಕ್ ಸ್ವಚ್ಛತೆ

ನಿಮ್ಮ ಅಡುಗೆ ಮನೆಯ ಸಿಂಕ್ ಅನ್ನು ಸ್ವಚ್ಛ ಮಾಡುವುದು ಎಂದರೆ ತಲೆ ನೋವಿನ ಕೆಲಸವೇ ಸರಿ. ನಿಮ್ಮ ಅಡುಗೆ ಮನೆಯ ಸಿಂಕ್ ಅನ್ನು ಸೋಪು ನೀರಿನಿಂದ ತೊಳೆದ ನಂತರ ಆಲೀವ್ ಆಯಿಲ್ ಇಲ್ಲವೇ ಬೇಬಿ ಆಯಿಲ್ ಬಳಸಿಕೊಂಡು ಸಿಂಕ್‌ಗೆ ಹರಡಿ ನಂತರ ಸ್ವಲ್ಪ ಕಾಲ ಕಾಯಿರಿ. ಇದರಿಂದ ಸಿಂಕ್‌ನಲ್ಲಿದ್ದ ಆಹಾರದ ಕಣಗಳು ಕೂಡಲೇ ಹೊರಟು ಹೋಗಿ ದೀರ್ಘ ಕಾಲ ಸಿಂಕ್ ಸ್ವಚ್ಛತೆಯಿಂದ ಕಂಗೊಳಿಸುತ್ತದೆ.

ಅಡುಗೆ ಮನೆಯನ್ನು ಸುವಾಸನೆ ಭರಿತವಾಗಿಸಲು

ಅಡುಗೆ ಮನೆಯನ್ನು ಸುವಾಸನೆ ಭರಿತವಾಗಿಸಲು

ಹೆಚ್ಚು ದರದ ರೂಮ್ ಫ್ರೆಶ್ಶನರ್‌ಗಳನ್ನು ಬಳಸಿಕೊಂಡು ನಿಮ್ಮ ಅಡುಗೆ ಮನೆಯನ್ನು ಸುವಾಸನೆಯುಕ್ತವಾಗಿ ಇರಿಸಲು ಸಾಧ್ಯವಿಲ್ಲ. ಲಿಂಬೆಯನ್ನು ಟೂತ್ ಪಿಕ್ ಬಳಸಿಕೊಂಡು ಸಣ್ಣ ತೂತು ಮಾಡಿ. ಇದನ್ನು ಓವನ್‌ನಲ್ಲಿ 300 ಡಿಗ್ರಿ ಫ್ಯಾರನ್ ಹೀಟ್‌ನಲ್ಲಿ ಬಿಸಿ ಮಾಡಿ. ನಂತರ ಓವನ್ ಬಾಗಿಲನ್ನು ತೆರೆದಿಡಿ ಇದರಿಂದ ಸುವಾಸನೆ ಸಂಪೂರ್ಣ ಅಡುಗೆ ಮನೆಯಲ್ಲಿ ಹರಡುತ್ತದೆ. ಲಿಂಬೆಯನ್ನು 20-25 ನಿಮಿಷ ನೀರಿನಲ್ಲಿ ಕುದಿಸಿಕೊಂಡು ಈ ಸುವಾಸನೆಯನ್ನು ಪಡೆದುಕೊಳ್ಳಬಹುದಾಗಿದೆ.

ಸೋಮಾರಿಯಾಗಿರಬೇಡಿ

ಸೋಮಾರಿಯಾಗಿರಬೇಡಿ

ಪ್ರತಿಯೊಬ್ಬರ ಜೀವನದಲ್ಲಿ ಈ ತತ್ವವನ್ನು ಅಳವಡಿಸಿಕೊಳ್ಳಬೇಕು. ನಿಮ್ಮ ಅಡುಗೆ ಮನೆಯನ್ನು ಸ್ವಚ್ಛ ಮಾಡುವ ವಿಷಯ ಬಂದಾಗ ಸೋಮಾರಿಯಾಗಿರಬೇಡಿ. ಯಾವಾಗಲೂ ಅಡುಗೆ ಮನೆಯ ನೆಲ ಮತ್ತು ಕಟ್ಟೆಯನ್ನು ಸ್ವಚ್ಛ ಮಾಡುತ್ತಿರಿ. ಪಾತ್ರೆ ತೊಳೆದ ನಂತರ ಒಣ ಬಟ್ಟೆಯಲ್ಲಿ ಅದನ್ನು ಒರೆಸುತ್ತಿರಿ. ಇದರಿಂದ ನಿಮ್ಮ ಅಡುಗೆ ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳುವುದರ ಜೊತೆಗೆ ಸ್ವಚ್ಛತೆಯ ಸಮಯವನ್ನು ಉಳಿಸಿಕೊಳ್ಳಬಹುದಾಗಿದೆ.

English summary

Quick Tips On Keeping The Kitchen Clean

Women spend most time in cooking and cleaning stuff in the kitchen. No matter how much you clean your kitchen, it might still appear dirty. The next time you prepare tea, make sure not to throw away the tea powder, as you can actually clean your stove with the tea powder. These quick tips can certainly save some time.
Story first published: Thursday, April 5, 2018, 23:34 [IST]