For Quick Alerts
ALLOW NOTIFICATIONS  
For Daily Alerts

ನವರಾತ್ರಿಗಾಗಿ ಮನೆಗಳಲ್ಲಿರಿಸುವ ಗೊಂಬೆ ಥೀಮ್ ಹೇಗಿರಬೇಕು?

By Jaya Subramanya
|

ನವರಾತ್ರಿ ಬಂತೆಂದರೆ ಎಲ್ಲಾ ವಸ್ತುಗಳಿಗೆ ಹೇಗೆ ಪ್ರಾಶಸ್ತ್ಯ ದೊರಕುತ್ತದೆಯೋ ಅಂತೆಯೇ ಬೊಂಬೆಗಳಿಗೂ ಬೇಡಿಕೆ ಬರುತ್ತದೆ. ದಸರಾ ಗೊಂಬೆ ಅಥವಾ ಬೊಂಬೆ ಪ್ರದರ್ಶನ ಕರ್ನಾಟಕ ಮೊದಲಾದ ಸ್ಥಳಗಳಲ್ಲಿ ಹೆಚ್ಚು ಸಾಂಪ್ರದಾಯಕ ಆಚರಣೆಯನ್ನಾಗಿ ಪರಿಗಣಿಸುತ್ತಾರೆ. ನವರಾತ್ರಿಯ ಒಂಭತ್ತು ದಿನಗಳ ಕಾಲ ತಮ್ಮ ಮನೆಗಳಲ್ಲಿ ಬೇರೆ ಬೇರೆ ರೀತಿಯ ಗೊಂಬೆಗಳನ್ನಿಟ್ಟು ಪ್ರದರ್ಶನವನ್ನು ನಡೆಸುತ್ತಾರೆ. ಇದಕ್ಕಾಗಿ ತಿಂಗಳುಗಳಿಂದಲೇ ಮನೆಯ ಗೃಹಿಣಿಯರು ಗೊಂಬೆ ಖರೀದಿಯನ್ನು ಮಾಡುತ್ತಾರೆ. ಮರದ ಮೆಟ್ಟಿಲುಗಳನ್ನು 5, 9, 11 ರ ಸಾಲಿನಲ್ಲಿ ನಿರ್ಮಿಸಿಕೊಂಡು ಈ ಗೊಂಬೆಗಳನ್ನಿರಿಸುವುದು ಕ್ರಮವಾಗಿದೆ.

ದಸರಾ ಗೊಂಬೆಗಳ ಶೃಂಗಾರ, ಹೇಗಿರಬೇಕು? ಏನೆಲ್ಲಾ ತಯಾರಿ ನಡೆಸಬೇಕು?

ಈ ರೀತಿ ಗೊಂಬೆಗಳನ್ನು ಮನೆಯಲ್ಲಿ ಇರಿಸುವುದು ಒಳ್ಳೆಯ ಅಂಶಗಳನ್ನು ಮನೆಯಲ್ಲಿ ಇರಿಸಿದಂತೆಯೇ ಎಂಬುದು ಜನರ ಅಭಿಪ್ರಾಯವಾಗಿದೆ. ಇದು ನಿಮ್ಮ ಹಿಂದಿನ ಗೌರವದ ಪ್ರತೀಕವಾಗಿದೆ. ಗೊಂಬೆಗಳನ್ನು ಇಟ್ಟ ಸಂದರ್ಭದಲ್ಲಿ ಈ ಗೊಂಬೆಗಳಿಗೆ ಪೂಜೆಯನ್ನು ನಡೆಸಲಾಗುತ್ತದೆ. ಬೆಳ್ಳಿ ಅಥವಾ ಹಿತ್ತಾಳೆ ತಂಬಿಗೆಗಳಲ್ಲಿ ನೀರು ತುಂಬಿಸಿ ಗೊಂಬೆಗಳ ಬಳಿ ಇಡಲಾಗುತ್ತದೆ. ಇನ್ನು ಕೆಲವೊಮ್ಮೆ ಮಾವಿನ ಎಲೆಗಳನ್ನು ತೆಂಗಿನಕಾಯಿಯೊಂದಿಗೆ ಇರಿಸುವ ಕ್ರಮ ಕೂಡ ಇದೆ. ಇಂದಿನ ಲೇಖನದಲ್ಲಿ ಕೆಲವೊಂದು ಆಸಕ್ತಿಕರ ಗೊಂಬೆ ಪ್ರದರ್ಶನ ಥೀಮ್‌ಗಳನ್ನು ನಾವು ನೀಡುತ್ತಿದ್ದು ನೀವು ಇದನ್ನು ಮನೆಗಳಲ್ಲಿ ಪ್ರಯತ್ನಿಸಬಹುದಾಗಿದೆ....

ಮಗುವಿನ ಥೀಮ್ಸ್

ಮಗುವಿನ ಥೀಮ್ಸ್

ಈ ಥೀಮ್‌ನಿಂದ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ ಎಂಬುದನ್ನು ಸೂಚಿಸಿದಂತೆ ಇರುತ್ತದೆ. ಮಗುವಿನ ರೂಪದ ಗೊಂಬೆಗಳು ಎಲ್ಲಾ ಕಡೆ ಲಭ್ಯವಿದೆ. ಮತ್ತು ಮಗುವಿನ ಕಾಲು ಚೀಲಗಳು, ಶೂಗಳನ್ನು ಬೇಕಾದರೂ ಇರಿಸಬಹುದಾಗಿದೆ. ತೊಟ್ಟಿಲನ್ನು ಇಟ್ಟು ಸಂಭ್ರಮಿಸಬಹುದಾಗಿದೆ.

 ಚೈನೀಸ್ ಗೊಂಬೆ ಥೀಮ್

ಚೈನೀಸ್ ಗೊಂಬೆ ಥೀಮ್

ಇಂದು ಆಧುನಿಕ ರೀತಿಯಲ್ಲಿ ಗೊಂಬೆಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಕ್ರಿಕೆಟ್ ಆಟಗಾರರು, ಫೇರಿಟೇಲ್, ಹ್ಯಾರಿ ಪೋಟರ್ ಗೊಂಬೆಗಳೂ ಅಂಗಡಿಯಲ್ಲಿ ಲಭ್ಯವಿವೆ. ಆದರೆ ಇದಕ್ಕಾಗಿ ಇನ್ನಿತರ ಏರ್ಪಾಡುಗಳನ್ನು ಮಾಡಬೇಕಾಗುತ್ತದೆ. ಆದರೆ ಚೈನೀಸ್ ಗೊಂಬೆ ಥೀಮ್ ತುಂಬಾ ಸರಳವಾಗಿದೆ. ಇದಕ್ಕೆ ಚೈನೀಸ್ ಗೊಂಬೆಗಳು ಮಾತ್ರ ಸಾಕು. ಬೇರೆ ಬೇರೆ ಮಾದರಿಯ ಚೈನೀಸ್ ಗೊಂಬೆಗಳನ್ನು ತಂದರೆ ಆಯಿತು.

ಸಾಂಪ್ರದಾಯಿಕ ಗೊಂಬೆ ಥೀಮ್

ಸಾಂಪ್ರದಾಯಿಕ ಗೊಂಬೆ ಥೀಮ್

ದಿನನಿತ್ಯದ ಜೀವನವನ್ನು ಸಾಂಪ್ರದಾಯಿಕ ಗೊಂಬೆ ಥೀಮ್‌ಗಳು ಹೊರಚೆಲ್ಲುತ್ತವೆ. ಶೆಲ್ಫ್‌ನಲ್ಲಿ ಗೊಂಬೆಗಳನ್ನು ಇರಿಸಿ ನಿತ್ಯದ ನಮ್ಮ ಕ್ರಮಗಳನ್ನು ತೋರಿಸಲಾಗಿದೆ. ಮೊದಲನೆಯದು ಮಾರುಕಟ್ಟೆಯ ದೃಶ್ಯವಾಗಿದೆ. ಎರಡನೆಯ ಶೆಲ್ಫ್‌ನಲ್ಲಿ ಮನೆಯ ವಾತಾವರಣವನ್ನು ಗಂಡ ಹೆಂಡತಿಯ ಮೂಲಕ ತೋರಿಸಲಾಗಿದೆ. ಮನೆಯ ಅಡಿಗೆ ಪರಿಕರಗಳನ್ನು ನಾವು ನೋಡಬಹುದು. ಮೂರನೆಯ ಶೆಲ್ಫ್‌ನಲ್ಲಿ ಮಹಿಳೆಯನ್ನು ಪ್ರಬಲ ಶಕ್ತಿ ಎಂಬುದಾಗಿ ತೋರಿಸಲಾಗಿದೆ.

ಶಿವ ಪಾರ್ವತಿ ಪೂಜಾ ಥೀಮ್

ಶಿವ ಪಾರ್ವತಿ ಪೂಜಾ ಥೀಮ್

ಇಲ್ಲಿ ಶಿವ ಮತ್ತು ಪಾರ್ವತಿಯನ್ನು ಪೂಜಿಸುವ ಗೊಂಬೆ ಥೀಮ್ ಅನ್ನು ಆಯ್ಕೆಮಾಡಲಾಗಿದೆ. ನವರಾತ್ರಿಗಳಲ್ಲಿ ಶಕ್ತಿ ಸ್ವರೂಪಿಯಾದ ಪಾರ್ವತಿ ಮಾತೆಯನ್ನು ಪೂಜಿಸಲಾಗುತ್ತದೆ. ಇಲ್ಲಿ ಕೃಷ್ಣನ ಗೊಂಬೆ, ಸರಸ್ವತಿ ಮೊದಲಾದ ದೈವಿಕ ಗೊಂಬೆಗಳನ್ನು ಕಾಣಬಹುದಾಗಿದೆ. ಹೀಗೆ ಮುಖ್ಯ ದೇವತೆಗಳನ್ನು ಇರಿಸಿಕೊಂಡು ಪೂಜಾ ಥೀಮ್ ಅನ್ನು ಸರಳವಾಗಿ ಸಿದ್ಧಪಡಿಸಿಕೊಳ್ಳಬಹುದಾಗಿದೆ.

ದುರ್ಗಾ ಮಾತೆಯ ಗೊಂಬೆ ಥೀಮ್

ದುರ್ಗಾ ಮಾತೆಯ ಗೊಂಬೆ ಥೀಮ್

ನವರಾತ್ರಿಯಂದು ದುರ್ಗಾಮಾತೆಗೆ ಪೂಜೆ ನಡೆಯುವುದರಿಂದ ಮಾತೆಯ ಗೊಂಬೆಯ ಪೂಜೆಯನ್ನು ಮನೆಗಳಲ್ಲಿ ಥೀಮ್ ಆಗಿ ಬಳಸಬಹುದಾಗಿದೆ. ಎರಡು ಸಿಂಹಗಳನ್ನು ದುರ್ಗೆಯ ಪ್ರತಿಮೆಯೊಂದಿಗೆ ಇರಿಸಬೇಕು. ಕಾರ್ತಿಕ ಮತ್ತು ಗಣೇಶನ ವಿಗ್ರಹಗಳನ್ನು ದುರ್ಗೆಯ ಪಕ್ಕದಲ್ಲಿ ಇರಿಸಬೇಕು ಅಂತೆಯೇ ಪುತ್ರಿಯರಾದ ಲಕ್ಷ್ಮೀ ಮತ್ತು ಸರಸ್ವತಿಯ ಬೊಂಬೆಗಳನ್ನು ಪಕ್ಕದಲ್ಲಿ ಇರಿಸಿ. ಹೀಗೆ ಒಂದೊಂದು ಶೆಲ್ಫ್‌ನಲ್ಲಿ ಈ ಗೊಂಬೆಗಳನ್ನು ಇರಿಸಬಹುದಾಗಿದೆ. ದುರ್ಗಾಮಾತೆಯ ಬೇರೆ ಬೇರೆ ಅವತಾರಗಳನ್ನು ಇತರ ಶೆಲ್ಫ್‌ನಲ್ಲಿ ಇರಿಸಬಹುದು.

English summary

Traditional Golu Theme For Dusshera

The most vital things that you should keep in your mind are the location of your kitchen as well as some other important factors as per vastu shastra. So, according to vastu shastra the following are the top 10 vastu tips for your kitchen that you must reckon prior to setting up your kitchen.
X
Desktop Bottom Promotion