Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಡುಗೆ ಮನೆ, ಹೂ ಗಿಡಗಳಿಂದ ಕಂಗೊಳಿಸುತ್ತಿರಲಿ...
ಮನೆ ಎಂಬುದು ಸುಂದರವಾಗುವುದು ನೀವು ಅಂದುಕೊಂಡಂತೆ ಅದನ್ನು ಅಲಂಕರಿಸಿದಾಗ ಮಾತ್ರ ಅಲ್ಲವೇ? ಎಷ್ಟೇ ದುಡ್ಡು ಖರ್ಚು ಮಾಡಿ ನೀವು ಕಟ್ಟಿಸಿರುವ ಮನೆ ನಿಮ್ಮ ಮನಸ್ಸಿಗೆ ಸಂತಸ ನೀಡಿಲ್ಲ ಎಂದಾದಲ್ಲಿ ಅದು ನೀರ ಮೇಲಿನ ಗುಳ್ಳೆಯಂತಾಗುತ್ತದೆ. ಅದಕ್ಕಾಗಿಯೇ ಮನೆ ಚಿಕ್ಕದಾಗಿದ್ದರೂ ಚೊಕ್ಕದಾಗಿ ಆಕರ್ಷವಾಗಿರಬೇಕು ಎಂದು ಹಿರಿಯರು ನುಡಿಯುವುದು. ಮನೆಯಲ್ಲಿ ಅಡುಗೆ ಕೋಣೆಗೆ ಹೆಚ್ಚು ಪ್ರಾಶಸ್ತ್ಯ.

ನಿಮ್ಮ ಹೊಟ್ಟೆ ತುಂಬಿಸುವ ಬಗೆಬಗೆಯ ಖಾದ್ಯಗಳು ತಯಾರಾಗುವ ಈ ಸ್ಥಳ ಹೆಚ್ಚು ಆರಾಮದಾಯಕ ಮತ್ತು ಅನುಕೂಲಕರವಾಗಿರಬೇಕು ಆಗ ಮಾತ್ರವೇ ನಿಮ್ಮ ಮುಖದಲ್ಲೂ ಮಂದಹಾಸ ಮೂಡುವುದು. ಒಂದು ಬಗೆಯ ಸಂತೃಪ್ತಿ ನೆಲೆ ನಿಲ್ಲುವುದು. ಅಡುಗೆ ಮನೆಯಲ್ಲಿ ಹೂಕುಂಡಗಳನ್ನಿಟ್ಟು ಅಲಂಕಾರಗೊಳಿಸುವುದು ಉತ್ತಮ ಉಪಾಯ ಅಲ್ಲವೇ? ಪಾತ್ರೆ ಪರಿಕರಗಳೊಂದಿಗೆ ಸುಂದರ ಸಸ್ಯಕಾಶಿ ನಿಮ್ಮ ಅಡುಗೆ ಮನೆಯಲ್ಲಿ ಇದೆ ಎಂದಾದಲ್ಲಿ ಅದೊಂದು ಸ್ವರ್ಗದಂತೆಯೇ. ಆಮ್ಲಜನಕದ ಉತ್ತಮ ರವಾನೆಯೂ ಅಲ್ಲಿ ಆಗುವುದರ ಜೊತೆಗೆ ಕಣ್ಣಿಗೆ ತಂಪು ಇದ್ದೇ ಇರುತ್ತದೆ. ಹಾಗಿದ್ದರೆ ಅಡುಗೆ ಮನೆಯನ್ನು ಸುಂದರವಾಗಿಸುವ ಹೂಗಿಡಗಳು ಹೇಗಿರಬೇಕು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ.
ಅಂತೆಯೇ ಈ ಗಿಡಗಳನ್ನು ಬಳಸಿಕೊಂಡು ಅಡುಗೆ ಮನೆಯನ್ನು ಸುಂದರವಾಗಿಸುವುದು ಹೇಗೆ ಎಂಬ ಹಂತಗಳನ್ನು ಇಂದಿಲ್ಲಿ ತಿಳಿಸುತ್ತಿದ್ದು ಇದರಿಂದ ಇನ್ನಷ್ಟು ಹೊಸ ಹೊಸ ಉಪಾಯಗಳು ನಿಮ್ಮ ಮನದಲ್ಲಿ ಮೂಡಬಹುದು. ಬನ್ನಿ ಅದು ಹೇಗೆ ಎಂಬುದನ್ನು ಅರಿತುಕೊಳ್ಳೋಣ. ಹೂಗಿಡಗಳನ್ನು ಸರಿಯಾದ ಸ್ಥಳದಲ್ಲಿ ಇರಿಸುವುದರಿಂದ ಕೂಡ ಆರ್ಥಿಕತೆ ಮತ್ತು ಆರೋಗ್ಯವನ್ನು ನಿಮಗೆ ಪಡೆದುಕೊಳ್ಳಬಹುದು.
ಹಂತ:1
ನಿಮ್ಮ ಅಡುಗೆ ಕೋಣೆಯಲ್ಲಿ ನೀವು ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದ್ದೀರಿ ಎಂದಾದಲ್ಲಿ, ಸಣ್ಣ ಪಾಟ್ ಬಳಸಿ ಕಿಚನ್ ಟೇಬಲ್ಗಳನ್ನು ಅಲಂಕಾರಮಾಡಬಹುದು. ಬಾಸ್ಕೆಟ್ ಅಥವಾ ಟ್ರೇ ಮೇಲೆ ಸಸ್ಯವನ್ನು ನೆಡಬಹುದು. ಲಿಂಬೆ ಹುಲ್ಲು ಅಡುಗೆ ಕೋಣೆಯ ಸುತ್ತಮುತ್ತಲ ಚೆನ್ನಾಗಿ ಬೆಳೆಯುತ್ತದೆ, ಹಾಗೆಯೇ ಈ ಹುಲ್ಲು ಹೊರಗೆ ಬಿಡುವ ಸುವಾಸನೆ ಅಡುಗೆ ಮನೆಯ ವಾಸನೆಯನ್ನು ದೂರಗೊಳಿಸಿ ಪ್ರಶಾಂತಗೊಳಿಸುತ್ತದೆ.
ಹಂತ:2
ನಿಮ್ಮ ಅಡುಗೆ ಮನೆ ಕತ್ತಲೆಯಿಂದ ಕೂಡಿದೆ ಎಂದಾದಲ್ಲಿ ಇಲ್ಲಿ ಸಸ್ಯಗಳನ್ನು ಬೆಳೆಸುವುದು ಉತ್ತಮವಾಗಿರುತ್ತದೆ. ಇಲ್ಲಿ ಹೆಚ್ಚು ಸಸ್ಯಗಳನ್ನು ನೆಡುವುದೂ ಅಷ್ಟೊಂದು ಉತ್ತಮವಲ್ಲ ಏಕೆಂದರೆ ಇದರಿಂದ ಪರಿಸರ ಇನ್ನಷ್ಟು ಕತ್ತಲುಮಯವಾಗಬಹುದು.
ಹಂತ:3
ಕೌಂಟರ್ ಮೇಲ್ಭಾಗ ಅಥವಾ ಕಟ್ಟಿಂಗ್ ಟೇಬಲ್ ಮೇಲೆ ಪಾಟ್ಗಳನ್ನು ಇರಿಸಬೇಡಿ. ನಿಮ್ಮ ಅಡುಗೆಮನೆಯನ್ನು ಇನ್ನಷ್ಟು ಅಂದವಾಗಿಸಲು, ಅಡುಗೆ ಮನೆಯ ಹೊರಭಾಗ ಅಥವಾ ಕಿಟಕಿ ಪಕ್ಕದಲ್ಲಿ ಸಸ್ಯಗಳನ್ನು ಇರಿಸಿ. ಕಿಚನ್ ಸಿಂಕ್ ಬಳಿ ಕೂಡ ಸಸ್ಯಗಳ ಪಾಟ್ ಅನ್ನು ನೀವಿರಿಸಬಹುದು.
ಹಂತ:4
ನಿಮ್ಮ ಹೂಕುಂಡಲ್ಲಿ ಹೂಗಿಡಗಳು ಇದೆ ಎಂದಾದಲ್ಲಿ ಅದನ್ನು ಕಿಚನ್ ಸಿಂಕ್ ಬಳಿ ಇರಿಸಬೇಡಿ. ಹ್ಯುಮಿಡಿಟಿ ಮತ್ತು ರಾಸಾಯನಿಕ ಬೆರೆತ ನಿರು ಹೂಗಿಡಗಳನ್ನು ತಲುಪುವುದರಿಂದ ಹೂಗಿಡಗಳು ನಾಶವಾಗುವ ಸಾಧ್ಯತೆ ಇರುತ್ತದೆ.
ಹಂತ:5
ಹೊಳಪಿನಿಂದ ಕೂಡಿರುವ ಸಸ್ಯಗಳನ್ನು ನಿಮ್ಮ ಅಡುಗೆ ಮನೆಯಲ್ಲಿ ನೆಡಬಹುದಾಗಿದೆ. ಸಸ್ಯಗಳು ಹೊಳಪಿನಿಂದ ಕೂಡಿದ್ದಲ್ಲಿ, ಅವುಗಳಿಂದ ಗ್ರೀಸ್ ಅನ್ನು ತೆಗೆಯುವುದು ಸುಲಭವಾಗಿರುತ್ತದೆ. ಸರಿಯಾದ ವಾತಾವರಣದಲ್ಲಿ ಹೊಳಪುಳ್ಳ ಸಸ್ಯಗಳು ದೀರ್ಘ ಸಮಯದವರೆಗೆ ಬೆಳೆಯುತ್ತದೆ.
ಹಂತ:6



Click it and Unblock the Notifications




