For Quick Alerts
ALLOW NOTIFICATIONS  
For Daily Alerts

ಪ್ರೀತಿ, ಪ್ರೇಮ, ಪ್ರಣಯಕ್ಕೆ ಮನೆಯು ಸಿದ್ಧವಾಗಿದೆಯೇ?

|

"ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ, ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ" ಎಂಬ ಹಾಡು ಕೇಳಿರುತ್ತೀರಿ. ಪ್ರೇಮಿಗಳ ದಿನಾಚರಣೆಗೆ ಇನ್ನೇನು ಬೆರಳಣಿಕೆ ದಿನಗಳು ಮಾತ್ರ ಬಾಕಿ ಉಳಿದಿವೆ. ಜೀವನದಲ್ಲಿ ಚಿಕ್ಕ ಚಿಕ್ಕ ವಿಷಯಗಳನ್ನು ಸಂಭ್ರಮಿಸಬೇಕು ಹಾಗಲೇ ಜೀವನಕ್ಕೆ ಒಂದು ಸಾರ್ಥಕತೆ ಸಿಗುವುದು. ಸರಿ ಈ ಪ್ರೇಮಿಗಳ ದಿನಾಚರಣೆಯನ್ನು ಮನೆಯಲ್ಲಿಯೇ ಆಚರಿಸಿಕೊಂಡು ಸಾರ್ಥಕಗೊಳಿಸಿಕೊಳ್ಳಲು ನಾವು ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದೇವೆ ಓದಿ ಆಚರಿಸಿ.

ಪ್ರೇಮಿಗಳ ದಿನಾಚರಣೆಯಂದು ಮನೆಯಲ್ಲಿ ಮಧುರಾನುಭವದ ಜೊತೆಗೆ ಆಚರಿಸಿ. ಮೋನೋಗ್ರಾಮ್ ಹೊಂದಿರುವ ಮಗ್‍ಗಳು ಮತ್ತು ವೈನ್ ಗ್ಲಾಸ್‍ಗಳು ಈ ಪ್ರೇಮಿಗಳ ದಿನಾಚರಣೆಗಾಗಿ ವಿಶೇಷವಾದ ಕಾಫಿ ಅಥವಾ ವೈನ್ ಗ್ಲಾಸ್‍ಗಳನ್ನು ಖರೀದಿಸಿ. ಅವುಗಳಲ್ಲಿ ನಿಮ್ಮ ಮತ್ತು ನಿಮ್ಮ ಸಂಗಾತಿಯ ಮೊನೊಗ್ರಾಂ ಇನಿಷಿಯಲ್ ಇರಲಿ. ಈ ರೀತಿಯ ಮೊನೊಗ್ರಾಂ ಉಡುಗೊರೆಗಳು ಮತ್ತು ಮನೆ ಬಳಕೆಯ ವಸ್ತುಗಳು ಪ್ರೇಮಿಗಳ ದಿನಾಚರಣೆಯನ್ನು ಮತ್ತಷ್ಟು ವರ್ಣರಂಜಿತಗೊಳಿಸುತ್ತವೆ. ಜೊತೆಗೆ ಇವು ನಿಮಗೆ ವೈಯುಕ್ತಿಕವಾಗಿ ಮತ್ತಷ್ಟು ಮೆರಗನ್ನು ನೀಡುತ್ತವೆ. ವಂಚಕಿ, ಮತ್ತೆ ಸಿಕ್ಕಾಗ ನಿನ್ನ ವಂಚನೆ ಬಗ್ಗೆ ಮಾತಾಡೋಣ!

ಒಂದು ಚಿತ್ರ, ಕವನ ಅಥವಾ ಪ್ರೇಮ ಪತ್ರವನ್ನು ಬರೆಯಿರಿ
ಪ್ರೇಮ ಪತ್ರಗಳು ಈಗ ತುಂಬಾ ಅಪರೂಪವಾಗುತ್ತಿವೆ, ಜೊತೆಗೆ ಇವುಗಳಿಗೆ ಕಾಸು ಸುರಿಯಬೇಕಾಗಿಲ್ಲ. ನಿಮ್ಮ ಸೃಜನ ಶೀಲತೆಯನ್ನು ಮತ್ತಷ್ಟು ತೋರಿಸುವ ತವಕವಿದ್ದಲ್ಲಿ ಒಂದು ಕವನ ಅಥವಾ ಚಿತ್ರವನ್ನು ಬರೆಯಿರಿ. ಒಂದು ಒಳ್ಳೆಯ ಚಿತ್ರವನ್ನು ತೆಗೆದುಕೊಂಡು ಅದರ ಕುರಿತಾಗಿ ಒಂದು ಕವನವನ್ನು ರಚಿಸಿ.

Is your house romance ready?

ಲವ್ ಪಿಲ್ಲೋ
ನಿಮ್ಮ ತಲೆದಿಂಬಿನ ಮೇಲೆ "LOVE" ಎಂದು ಬರೆಯಿರಿ, ಇಲ್ಲವಾದರೆ ಮಾರುಕಟ್ಟೆಯಲ್ಲಿ ಹೃದಯದಾಕಾರದಲ್ಲಿ ಸಿಗುವ ಲವ್ ಪಿಲ್ಲೋಗಳನ್ನು ತೆಗೆದುಕೊಂಡು ಬನ್ನಿ. ಜೊತೆಗೆ ಪ್ರೇಮಿಗಳ ದಿನಾಚರಣೆಯಂದು ನಿಮ್ಮ ಬೆಡ್ ರೂಮನ್ನು ಕೆಂಪು ಲಿನೆನ್ ಬಟ್ಟೆಯಿಂದ ಅಲಂಕರಿಸಿ. ಇಡೀ ನಿಮ್ಮ ಬೆಡ್ ರೂಮ್ ಒಂದು ಸಂಭ್ರಮಕ್ಕೆ ಸಾಕ್ಷಿಯಾಗಲಿ.

ಕ್ಯಾಂಡಲ್‍ಗಳಿಂದ ಸ್ವರ್ಗಕ್ಕೆ ಕಿಚ್ಚು ಹಚ್ಚಿ
ಅನಾದಿಕಾಲದಿಂದಲು ಮಂದ ಬೆಳಕನ್ನು ಬೀರುವ ಕ್ಯಾಂಡಲ್‍ಗಳು ಪ್ರೀತಿಗೆ ಧ್ಯೋತಕವಾದ ಗುರುತುಗಳಾಗಿವೆ. ಇವು ನಿಮ್ಮ ಬೆಡ್ ರೂಮಿಗೆ ಬೆಚ್ಚಗಿನ ವಾತಾವರಣವನ್ನು ಕಲ್ಪಿಸುತ್ತವೆ. ಅದರಲ್ಲು ಕೆಂಪು ಬಣ್ಣದ ಕ್ಯಾಂಡಲ್‍ಗಳು ನಿಮ್ಮ ಮನೋಕಾಮನೆಗಳನ್ನು ಬಡಿದೆಚ್ಚರಿಸಿದರೆ, ಗುಲಾಬಿಯು ಪ್ರಣಯವನ್ನು ಉದ್ದೀಪಿಸುತ್ತವೆ ಮತ್ತು ಬಿಳಿ ಕ್ಯಾಂಡಲ್‍ಗಳು ಆರಾಮವನ್ನು ನೀಡುತ್ತವೆ. ಮತ್ತೇಕೆ ತಡ ನಿಮಗೆ ಯಾವುದು ಬೇಕೊ ಆ ಕ್ಯಾಂಡಲ್ ತಪ್ಪದೆ ತನ್ನಿ, ಆಮೇಲೆ ನೋಡಿ ಅದರ ಮಜಾ.

ಒಂದು ಮೆಮೊರಿ ಬೋರ್ಡ್ ತಯಾರಿಸಿ
ನಿಮ್ಮ ಸಂಗಾತಿಗಾಗಿ ಸಂದೇಶಗಳನ್ನು ಹೊತ್ತಿರುವ ಒಂದು ಬೋರ್ಡ್ ತಯಾರಿಸಿ. ಇವುಗಳಲ್ಲಿ ಪ್ರೇಮದ ಮಹತ್ವ ಸಾರುವ ಸೂಕ್ತಿಗಳನ್ನು ಸಹ ತುಂಬಿ. ಇದನ್ನು ನಿಮ್ಮ ಸಂಗಾತಿಗೆ ಉಡುಗೊರೆಯಾಗಿ ನೀಡಿ.

ಪೇಪರ್ ಬೊಕೆ- ಬಾಡದ ಹೂ ಗುಚ್ಛ
ಈ ಹೂಗುಚ್ಛವು ನಿಮ್ಮ ಪ್ರೀತಿಯಂತೆ ಎಂದಿಗು ಸಾವೇ ಇಲ್ಲ. ಇದನ್ನು ಕೆಂಪು,ಗುಲಾಬಿ ಮುಂತಾದ ವರ್ಣಗಳ ಕಾಗದಗಳಿಂದ ನೀವೇ ತಯಾರಿಸಬಹುದು. ಜೊತೆಗೆ ಸ್ವಲ್ಪ ಶ್ರಮ ವಹಿಸಿದರೆ ಇದನ್ನು ಮತ್ತಷ್ಟು ಸುಂದರವಾಗಿ ಅಲಂಕರಿಸಬಹುದು. ಜೊತೆಗೆ ಹೃದಯದಾಕಾರದ ಚಾಕೊಲೇಟ್‍ಗಳನ್ನು ಇದರಲ್ಲಿ ತುಂಬಿ ನಿಮ್ಮ ಪ್ರೀತಿ ಎಷ್ಟು ಸವಿ ಮತ್ತು ಮಧುರ ಎಂಬುದನ್ನು ತೋರಿಸಿ. ಲವ್ ಇಲ್ಲದವರಾ ನೀವು? ಚಿಂತೆ ಬಿಡಿ...

ಒಲವಿನ ಪುಸ್ತಕದ ಉಡುಗೊರೆ ನೀಡಿ
ಈ ದಿನಕ್ಕೆ ಇನ್ನೆಂತಹ ಉಡುಗೊರೆ ನೀಡಲು ಸಾಧ್ಯ. ನಿಮ್ಮ ಸಂಗಾತಿಗೆ ಹಿಡಿಸುವ ವಿಷಯಗಳನ್ನು ಹೊಂದಿರುವ, ನೀವು ಹಿಂದೊಮ್ಮೆ ಕಳೆದ ಮಧುರ ನೆನಪುಗಳನ್ನು ತರುವ ಭಾವಚಿತ್ರಗಳನ್ನು ಅಲ್ಲಲ್ಲಿ ಹೊಂದಿರುವ, ಫಜಲ್, ಅಡುಗೆ ತಯಾರಿ ವಿಧಾನ ಹೀಗೆ ನಾನಾ ತರಹದ ಮಾಹಿತಿ ಇರುವ ಒಂದು ಪುಸ್ತಕವನ್ನು ಉಡುಗೊರೆಯಾಗಿ ನೀಡಿ. ಅದನ್ನು ನೋಡುತ್ತ ಒಟ್ಟಿಗೆ ಈ ದಿನವನ್ನು ಕಳೆಯಿರಿ. ಜೊತೆಯಾಗಿ, ಹಿತವಾಗಿ!

ಬೆಳಗಿನ ತಿಂಡಿಯನ್ನು ಬೆಡ್ ಮೇಲೆ ತಿನ್ನಿ
ಈ ದಿನ ಸ್ವಲ್ಪ ಲಘುವಾದ ತಿಂಡಿಯನ್ನು ತಯಾರಿಸಿ, ಮಾಮೂಲಿನಂತೆ ಡೈನಿಂಗ್ ಟೇಬಲ್ ಮೇಲಲ್ಲದೆ ಇಬ್ಬರೂ ಒಟ್ಟಿಗೆ ಬೆಡ್ ಮೇಲೆ ತಿಂಡಿ ತಿನ್ನಿ. ತಿಂಡಿಯು ರುಚಿಯಾಗಿರುತ್ತದೆ, ಸಂದರ್ಭವು ರಸವತ್ತಾಗಿರುತ್ತದೆ!

English summary

Is your house romance ready?

Valentine's Day isn't about cherishing the only the big moments. Celebrating the smaller things in life is what adds to your love for each other. So, on this special day, recreate some romantic moments by spending your day together at home.
Story first published: Monday, February 9, 2015, 18:13 [IST]
X
Desktop Bottom Promotion