For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಮನೆ ಅಲಂಕಾರ

By Hemanth P
|

ಚಳಿಗಾಲದಲ್ಲಿ ಬರುವ ಶುಷ್ಕ, ಶೀತ ಹವಾಮಾನ ನಿಮ್ಮನ್ನು ಸಾಂದ್ರತೆ ಮತ್ತು ಬೆಚ್ಚಗಿನ ಸ್ಥಳ ಹುಡುಕುವಂತೆ ಮಾಡುತ್ತದೆ. ಚಳಿಗಾಲದ ಶೀತ ವಾತಾವರಣ ತಡೆಯಲು ನೀವು ಮನೆಯಲ್ಲೇ ಬೆಚ್ಚಗಿನ ಪ್ರದೇಶ ನಿರ್ಮಿಸಬಹುದು. ಕೆಲವೊಂದು ಸರಳ ಬದಲಾವಣೆಗಳೊಂದಿಗೆ ನಿಮ್ಮ ಮನೆಯನ್ನು ಚಳಿಗಾಲದ ಮನೆಯನ್ನಾಗಿ ಮಾಡಬಹುದು. ಚಳಿಗಾಲ ಬರುವಾಗ ಮಾಡಬಹುದಾದ ಮನೆಯ ಅಲಂಕಾರವು ನಿಮ್ಮನ್ನು ಬೆಚ್ಚಗೆ ಮತ್ತು ಮನೆಯಲ್ಲಿ ಆಪ್ಯಾಯಮಾನವಾಗಿರುವಂತೆ ಮಾಡುತ್ತದೆ.

ಚಳಿಗಾಲದಲ್ಲಿ ಸೂರ್ಯನ ತೀವ್ರ ಬಿಸಿಲಿದ್ದರೂ ಚಳಿ ಮಾತ್ರ ಬಿಡುವುದಿಲ್ಲ. ಮನೆಯನ್ನು ಬೆಚ್ಚಗೆ ಮತ್ತು ಆಪ್ಯಾಯಮಾನವಾಗಿರಿಸಲು ಮೊದಲು ಒಳಾಂಗಣ ಬಣ್ಣವನ್ನು ಬದಲಾಯಿಸುವ ಮೂಲಕ ಆರಂಭಿಸಬೇಕು. ಮನೆಯ ಫರ್ನಿಚರ್ ಗಳ ಫೆಬ್ರಿಕ್ ಹೊದಿಕೆ ಬದಲಾಯಿಸಿ ಅದರ ಬದಲಿಗೆ ಉಣ್ಣೆ ಅಥವಾ ಚರ್ಮದ ಹೊದಿಕೆ ಹಾಕಬೇಕು. ಹೊರಗಿನಿಂದ ನೀವು ತುಂಬಾ ಚಳಿಯಿಂದ ಬಂದಾಗ ಇದು ನೆರವಾಗುತ್ತದೆ. ಬೇಸಿಗೆ ಕಾಲದಲ್ಲಿ ನೀವು ಹಾಕಿರುವಂತಹ ನೆಲದ ಮ್ಯಾಟ್ ಮತ್ತು ಕಾರ್ಪೆಟ್ ಗಳನ್ನು ತೆಗೆಯಲು ಇದು ಸಕಾಲ.

ಕಿಟಿಕಿಗಳ ವಿಷಯಕ್ಕೆ ಬಂದರೆ ಚಳಿಗಾಲದಲ್ಲಿ ಸ್ವಾಪ್ ಪರದೆಯನ್ನು ತೆಗೆದು ಸಂಪೂರ್ಣ ಪರದೆ ಹಾಕಿ. ನಿಮ್ಮ ಲಿವಿಂಗ್ ರೂಮ್ ನಲ್ಲಿ ತಲೆದಿಂಬುಗಳನ್ನು ಹೊಂದಿರುವ ಆಸನಗಳು ತುಂಬಿರಬಹುದು. ಚಳಿಗಾಲದಲ್ಲಿ ನೀವು ಸಾಮಾನ್ಯ ಕವರ್ ಗಳ ಬದಲಿಗೆ ಉಣ್ಣೆ ಮತ್ತು ಸ್ಕಾರ್ಪ್ ವಸ್ತುಗಳನ್ನು ಬಳಸುವುದರಿಂದ ಋತುಮಾನಕ್ಕೆ ಅನುಗುಣವಾಗಿ ನೀವು ಬೆಚ್ಚಗಿನ ಅನುಭವ ಪಡೆಯಬಹುದು. ಫರ್ನಿಚರ್ ಗಳನ್ನು ಗೋಡೆ ಮತ್ತು ಕಿಟಿಕಿ ಬದಿಯಿಂದ ಸರಿಸಿ ಮಧ್ಯದಲ್ಲಿ ಇಡಿ.

1. ಬಣ್ಣ ಬಳಿಯುವುದು

1. ಬಣ್ಣ ಬಳಿಯುವುದು

ಚಳಿಗಾಲದಲ್ಲಿ ಹೊರಗಡೆ ಶೀತ ವಾತಾವರಣವಿದ್ದರೆ, ಮನೆಯಲ್ಲಿ ತುಂಬಾ ಬೆಚ್ಚಗಿರಲು ಬೆಚ್ಚಗಿನ ಮತ್ತು ಸಾಂದ್ರತೆಯ ಬಣ್ಣ ಬಳಿಯಬೇಕು. ಕಡು ಗುಲಾಬಿ, ಬೂದು ಮತ್ತು ಆಲಿವ್ ಮಿಶ್ರಣ, ಬಿಳಿ ಮಿಶ್ರಣದೊಂದಿಗೆ ಬೆಚ್ಚಗಿನ ಮತ್ತು ಸಮೃದ್ಧ ಚಾಕಲೇಟ್ ನಂತಹ ಬಣ್ಣಗಳನ್ನು ಆಯ್ಕೆ ಮಾಡಿ.

2. ಬೆಂಕಿಗೂಡು

2. ಬೆಂಕಿಗೂಡು

ವರ್ಷದ ಈ ಋತುವಿನಲ್ಲಿ ಲಿವಿಂಗ್ ರೂಮ್ ನ್ನು ಸ್ವಚ್ಚ ಮತ್ತು ತಯಾರುಗೊಳಿಸುವುದು ತುಂಬಾ ಮುಖ್ಯ. ಇದನ್ನು ನೀವು ಹೂಕುಂಡ ಮತ್ತು ಕಿತ್ತಳೆ, ಕೆಂಗಂದು ಮತ್ತು ಹಳದಿ ವರ್ಣಾಂಶಗಳ ಬಣ್ಣಬಣ್ಣದ ಚಿತ್ರಗಳಿಂದ ಗೋಡೆಗಳನ್ನು ಅಲಂಕರಿಸಿ.

3. ಫರ್ನಿಚರ್ ಗಳನ್ನು ಮರುಜೋಡಿಸಿ

3. ಫರ್ನಿಚರ್ ಗಳನ್ನು ಮರುಜೋಡಿಸಿ

ಚಳಿಗಾಲದ ಶೀತ ವಾತಾವರಣವನ್ನು ತಪ್ಪಿಸಲು ಮನೆಯಲ್ಲಿ ಕುಳಿತುಕೊಳ್ಳುವ ಮತ್ತು ಇತರ ಫರ್ನಿಚರ್ ಗಳನ್ನು ಮರುಜೋಡಿಸಬೇಕು. ಫರ್ನಿಚರ್ ಗಳನ್ನು ಗೋಡೆ ಮತ್ತು ಕಿಟಕಿಯಿಂದ ದೂರವಿಡಿ. ಇದನ್ನು ಮನೆಯ ಮಧ್ಯಭಾಗದಲ್ಲಿಡಿ ಅಥವಾ ಬೆಂಕಿಗೂಡಿನ ಹತ್ತಿರವಿಡಿ.

4. ಕಿಟಕಿಗಳ ಪರದೆ

4. ಕಿಟಕಿಗಳ ಪರದೆ

ಚಳಿಗಾಲದಲ್ಲಿ ಪರದೆಗಳ ವಿಷಯಕ್ಕೆ ಬಂದರೆ ಆಗ ತೆಳು ಪರದೆ ತೆಗೆದು ತುಂಬಾ ದಪ್ಪಗಿನ ಪರದೆಗಳನ್ನು ಹಾಕಬೇಕು. ಇದು ಕೋಣೆಯನ್ನು ಬೆಚ್ಚಗಿಡುತ್ತದೆ ಮತ್ತು ನಿಮಗೆ ನೈಜ ಬೆಚ್ಚಗಿನ ಭಾವನೆ ನೀಡುತ್ತದೆ.

5. ಹೊದಿಕೆಗಳು

5. ಹೊದಿಕೆಗಳು

ತಲೆದಿಂಬು ಮತ್ತು ಇತರ ಕುಶನ್ ಗಳ ಕವರ್ ಗಳನ್ನು ಬದಲಾಯಿಸಿ ಉಣ್ಣೆ ಅಥವಾ ಸ್ಕಾರ್ಪ್ ವಸ್ತುವಿನ ಹೊದಿಕೆಗಳನ್ನು ಹಾಕಿ. ಇದರಿಂದ ನೀವು ಚಳಿಗಾಲದಲ್ಲಿ ಇದರ ಮೇಲೆ ಕುಳಿತುಕೊಳ್ಳುವಾಗ ನಿಮಗೆ ಬೆಚ್ಚಗಿನ ಅನುಭವವಾಗುತ್ತದೆ.

6. ಪದರದ ಹಾಸಿಗೆ

6. ಪದರದ ಹಾಸಿಗೆ

ನಿಮ್ಮ ಹಾಸಿಗೆ ಮತ್ತೊಂದು ಪದರ ಸೇರಿಸಿ. ಸಾಮಾನ್ಯ ಮಗ್ಗುಲು ಹಾಸಿಕೆಯೊಂದಿಗೆ ಲಿನೆನ್ ಹಾಕಿ ಅದರ ದಪ್ಪ ಹೆಚ್ಚಿಸಿ. ಕಪಾಟಿನಲ್ಲಿರುವ ಗಾದಿ ಹೊರಗೆ ತೆಗೆಯಿರಿ ಮತ್ತು ಅದನ್ನು ಹಾಸಿಗೆ ಮೇಲೆ ಹಾಸುವುದರಿಂದ ಚಳಿಗಾಲದ ಶೀತವನ್ನು ತಡೆಯಲು ನಿಮ್ಮ ಹಾಸಿಗೆಯನ್ನು ಬೆಚ್ಚಗಿರಿಸಬಹುದು.

7. ಬೆಚ್ಚಗಿನ ಡಿನ್ನರ್ ಟೇಬಲ್

7. ಬೆಚ್ಚಗಿನ ಡಿನ್ನರ್ ಟೇಬಲ್

ನಿಮ್ಮ ಡಿನ್ನರ್ ಟೇಬಲ್ ಮೇಲೆ ಒಂದು ಬ್ಲ್ಯಾಂಕೆಟ್ ಮತ್ತು ಅದೇ ರೀತಿ ಕುರ್ಚಿ ಮೇಲೆ ಕೂಡ ಇದನ್ನು ಹಾಕಿ. ಹೆಚ್ಚು ದುಬಾರಿಯಲ್ಲದ ಕ್ಯಾಂಡಲ್ ಹೋಲ್ಡರ್ ಅಥವಾ ಕ್ಯಾಂಡಲ್ ಗಾಗಿ ಇರುವ ಗಾಜಿನ ಹೊದಿಕೆಯನ್ನು ಟೇಬಲ್ ಮೇಲೆ ಇಡುವುದರಿಂದ ಬೆಚ್ಚಗಿನ ವಾತಾವರಣ ನಿರ್ಮಾಣವಾಗುತ್ತದೆ.

8. ಬೆಚ್ಚಗಿನ ಕುಳಿತುಕೊಳ್ಳುವ ಪ್ರದೇಶ

8. ಬೆಚ್ಚಗಿನ ಕುಳಿತುಕೊಳ್ಳುವ ಪ್ರದೇಶ

ಲಿವಿಂಗ್ ರೂಮ್ ನಲ್ಲಿರುವ ಕುಳಿತುಕೊಳ್ಳುವ ಪ್ರದೇಶವನ್ನು ಬೆಚ್ಚಗಿಡಲು ಕೆಲವೊಂದು ಬದಲಾವಣೆ ಮತ್ತು ಬಣ್ಣದ ಥೀಮ್ ಅಳವಡಿಸಿ. ಗಾಢ ಮತ್ತು ಬೆಚ್ಚಗಿನ ಬಣ್ಣದ ಲೈಟ್ ಗಳನ್ನು ಓದಲು ಅಥವಾ ಅದರ ಮುಂದೆ ಕುಳಿತು ಟೀ ಕುಡಿಯಲು ಬಳಸಿ. ನಿಮ್ಮ ಕೋಣೆಯು ಕೆಂಪು, ಕೆಂಗಂದು, ಕಡುಗುಲಾಬಿ ಮತ್ತು ಕಿತ್ತಳೆ ಇತ್ಯಾದಿ ಬಣ್ಣಗಳನ್ನು ಬಳಿಯಿರಿ. ಇದರಿಂದ ನಿಮಗೆ ಬೆಚ್ಚಗಿನ ಭಾವನೆಯುಂಟಾಗುತ್ತದೆ.

English summary

Centerpiece ideas for winter décor

Winter brings with it dry cold weather that makes you want some cosy and warm place to crash in. You can make that cosy little warm place in your home to beat the winter blues.
Story first published: Saturday, December 7, 2013, 12:41 [IST]
X
Desktop Bottom Promotion