For Quick Alerts
ALLOW NOTIFICATIONS  
For Daily Alerts

ವಿಶ್ವ ನ್ಯೂಮೋನಿಯಾ ದಿನ 2022: ನ್ಯೂಮೋನಿಯಾ ಹೇಗೆ ತಡೆಗಟ್ಟಬಹುದು? ಕಾಯಿಲೆ ಬಂದವರು ಬೇಗನೆ ಚೇತರಿಸಿಕೊಳ್ಳುವುದು ಹೇಗೆ

|

ನ್ಯೂಮೋನಿಯಾ ಶ್ವಾಸಕೋಶವನ್ನು ಬಾಧಿಸುವ ಸೋಂಕಾಗಿದೆ. ಶ್ವಾಸಕೋಶದೊಳಗೆ ನೀರು ಅಥವಾ ಕಫ ತುಂಬಿ ಕೆಮ್ಮು, ಚಳಿ-ಜ್ವರ, ಉಸಿರಾಟಕ್ಕೆ ತೊಂದರೆ ಈ ಎಲ್ಲಾ ಸಮಸ್ಯೆಗಳು ಉಂಟಾಗುವುದು.

ಇದರ ಬಗ್ಗೆ ಜಾಗ್ರತೆವಹಿಸಿದರೆ ನ್ಯೂಮೋನಿಯಾ ತಡೆಗಟ್ಟಬಹುದು. ನ್ಯೂಮೋನಿಯಾ ಕಾಯಿಲೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ನವೆಂಬರ್‌ 13ನನ್ನು ವಿಶ್ವ ನ್ಯೂಮೋನಿಯಾ ದಿನವನ್ನಾಗಿ ಆಚರಿಸಲಾಗುವುದು.

2022ರ ಥೀಮ್‌

'ನ್ಯೂಮೋನಿಯಾ ಎಲ್ಲರ ಮೇಲೂ ಪರಿಣಾಮ ಬೀರುತ್ತೆ' ಎಂಬುವುದಾಗಿದೆ. 42 ರಾಷ್ಟ್ರಗಳು ಒಟ್ಟಾಗಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ.

 ನ್ಯೋಮೋನಿಯಾದ ಲಕ್ಷಣಗಳೇನು?

ನ್ಯೋಮೋನಿಯಾದ ಲಕ್ಷಣಗಳೇನು?

ಕೆಲವರಿಗೆ ನ್ಯೋಮೋನಿಯಾ ಬಂದು ಹೋದರೆ ಇನ್ನು ಕೆಲವರಿಗೆ ಪ್ರಾಣಕ್ಕೆ ಸಂಕಷ್ಟ ತರಬಹುದು. ಆದ್ದರಿಂದ ನ್ಯೂಮೋನಿಯಾವನ್ನು ನಿರ್ಲಕ್ಷ್ಯ ಮಾಡಬಾರದು. ಮಕ್ಕಳಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ನ್ಯೂಮೋನಿಯಾ ಹೆಚ್ಚಾಗಿ ಬಾಧಿಸುತ್ತದೆ.

ನ್ಯೂಮೋನಿಯಾ ಲಕ್ಷಣಗಳು

* ಕೆಮ್ಮು

* ಕೆಮ್ಮುವಾಗ ಕಫ ಬರುವುದು

* ಉಸಿರಾಟದಲ್ಲಿ ತೊಂದರೆ

* ಎದೆನೋವು

ಬೆವರುವುದು, ತಲೆನೋವು, ತುಂಬಾ ಸುಸ್ತು ಕೆಲವರಲ್ಲಿ ವಾಂತಿ ಬೇಧಿ ಈ ಬಗೆಯ ಲಕ್ಷಣಗಳೂ ಕಂಡು ಬರುವುದು. ಈ ರೀತಿಯ ಲಕ್ಷಣಗಳು ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ಹೋಗಬೇಕು.

ಯಾರಿಗೆ ನ್ಯೋಮೋನಿಯಾ ಅಪಾಯ ಅಧಿಕ?

ಯಾರಿಗೆ ನ್ಯೋಮೋನಿಯಾ ಅಪಾಯ ಅಧಿಕ?

ಸಣ್ಣ ಪ್ರಾಯದವರಿಗೆ: 60 ವರ್ಷ ಮೇಲ್ಪಟ್ಟವರಿಗೆ, ಮಕ್ಕಳಿಗೆ ನ್ಯೂಮೋನಿಯಾ ಅಪಾಯ ಅಧಿಕ. ಏಕೆಂದರೆ ಇವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ.

ಪರಿಸರ: ಹೆಚ್ಚು ದೂಳಿರುವ ಕಡೆ, ರಾಸಾಯನಿಕ ಕಾರ್ಖಾನೆಗಳು ಇರುವ ಕಡೆ ವಾಸಿಸುತ್ತಿರುವವರಿಗೆ ಶ್ವಾಸಕೋಶದ ಸಮಸ್ಯೆಯಾದ ನ್ಯೂಮೋನಿಯಾ ಕಾಣಿಸಿಕೊಳ್ಳುವುದು.

ಜೀವನಶೈಲಿ: ದಿನಾ ಧೂಮಪಾನ, ಮದ್ಯಪಾನ ಮಾಡುವವರಿಗೆ ಈ ಸಮಸ್ಯೆಯ ಅಪಾಯ ಅಧಿಕವಿರುತ್ತದೆ.

ರೋಗ ನಿರೋಧಕ ಶಕ್ತಿ ತುಂಬಾ ಕಡಿಮೆ ಇದ್ದರೆ: ಏಡ್ಸ್, ಕ್ಯಾನ್ಸರ್‌ ಮುಂತಾದ ಕಾಯಿಲೆ ಇರುವವರಿಗೆ ರೋಗ ನಿರೋಧಕ ಶಕ್ತಿ ತುಂಬಾನೇ ಕಡಿಮೆ ಇರುತ್ತದೆ.

ಐಸಿಯುವಿನಲ್ಲಿರುವವರಿಗೆ: ವೆಂಟಿಲೇಟರ್‌ನಲ್ಲಿರುವವರಿಗೆ ಕೆಮ್ಮುವುದು ಕಷ್ಟ, ಆದ್ದರಿಂದ ಇವರಿಗೆ ನ್ಯೂಮೋನಿಯಾ ತಗುಲುವ ಸಾಧ್ಯತೆ ಹೆಚ್ಚು.

ಇತ್ತೀಚೆಗೆ ಯಾವುದಾರೂ ಸರ್ಜರಿಯಾಗಿದ್ದರೆ ನ್ಯೂಮೋನಿಯಾ ತಗುಲುವ ಸಾಧ್ಯತೆ ಹೆಚ್ಚು.

ನ್ಯೂಮೋನಿಯಾ ತಡೆಗಟ್ಟುವುದು ಹೇಗೆ?

ನ್ಯೂಮೋನಿಯಾ ತಡೆಗಟ್ಟುವುದು ಹೇಗೆ?

ಪ್ರತೀವರ್ಷ ಫ್ಲೂ ವ್ಯಾಕ್ಸಿನ್‌ ಪಡೆಯಿರಿ

* ನ್ಯೋಮೋನಿಕಲ್ ಲಸಿಕೆ ಪಡೆಯಿರಿ

* ಕೈಗಳನ್ನು ಆಗಾಗ ತೊಳೆಯುವ ಅಭ್ಯಾಸ ಬೆಳೆಸಿಕೊಳ್ಳಿ.

* ಧೂಮಪಾನ, ಮದ್ಯಪಾನ ಮಾಡಬೇಡಿ

* ಆರೋಗ್ಯಕರ ಜೀವನಶೈಲಿ ಬೆಳೆಸಿಕೊಳ್ಳಿ. ಹಣ್ಣು, ತರಕಾರಿಯನ್ನು ಹೆಚ್ಚಾಗಿ ಸೇವಿಸಿ.

ನ್ಯೂಮೋನಿಯಾ ಬಂದ್ರೆ ಬೇಗನೆ ಚೇತರಿಸಿಕೊಳ್ಳಲು ಏನು ಮಾಡಬೇಕು?

ನ್ಯೂಮೋನಿಯಾ ಬಂದ್ರೆ ಬೇಗನೆ ಚೇತರಿಸಿಕೊಳ್ಳಲು ಏನು ಮಾಡಬೇಕು?

* ಚಿಕಿತ್ಸೆ ಪಡೆಯುವುದರ ಜೊತೆಗೆ ಚೆನ್ನಾಗಿ ರೆಸ್ಟ್ ಮಾಡಬೇಕು,

* ಸಾಕಷ್ಟು ನೀರು ಕುಡಿಯಿರಿ

* ಧೂಮಪಾನ ಬಿಡಿ, ಬೆರೆಯವರು ಸೇದಿದ ಸಿಗರೇಟ್‌ ಬಳಸಲೇಬೇಡಿ

* ಚೆನ್ನಾಗಿ ಹುಷಾರಾಗುವವರಿಗೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ

* ಹಬೆ ತೆಗೆದುಕೊಳ್ಳಿ.

English summary

World Pneumonia Day 2022 Date, Theme and How To Prevent Pneumonia in Kannada

World Pneumonia Day: Let's see Pneumonia Day 2022 Date, Pneumonia Theme 2022, Pneumonia symptoms and how we can prevent it , read on...
Story first published: Saturday, November 12, 2022, 15:51 [IST]
X
Desktop Bottom Promotion