Just In
- 3 hrs ago
ವಾರ ಭವಿಷ್ಯ (ಫೆ.4-11): ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- 12 hrs ago
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- 13 hrs ago
ಫೆಬ್ರವರಿಯಲ್ಲಿದೆ ಶುಕ್ರ ಗ್ರಹ ಮಾಲವ್ಯ ಯೋಗ: ಈ 3 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗುವುದು
- 14 hrs ago
'ಸಿಂಗಾರ ಸಿರಿಯೇ' ಎಂದು 60ನೇ ವಯಸ್ಸಿನಲ್ಲಿ ವೆಡ್ಡಿಂಗ್ ಫೋಟೋಶೂಟ್: ರೊಮ್ಯಾಂಟಿಕ್ ವೀಡಿಯೋ ಸಕತ್ ವೈರಲ್
Don't Miss
- News
BSNL: ಗ್ರಾಮೀಣ ಪ್ರದೇಶಗಳಲ್ಲಿಯೂ ಸಿಗಲಿದೆ ಬಿಎಸ್ಎನ್ಎಲ್ ಹೈ ಸ್ಪೀಡ್ ಬ್ರಾಡ್ಬ್ಯಾಂಡ್ ಸೇವೆ
- Technology
ಇಂಥಾ ಸ್ಮಾರ್ಟ್ಫೋನ್ ಖರೀದಿಸಿದ್ರೆ, ಫೋನ್ ಹ್ಯಾಂಗ್ ಆಗುವ ಸಮಸ್ಯೆ ಇರಲ್ಲ!
- Sports
ಭಾರತ vs ಆಸ್ಟ್ರೇಲಿಯಾ ಟೆಸ್ಟ್: ಟೀಮ್ ಇಂಡಿಯಾ ಆಟಗಾರರಿಗೆ ನೆಟ್ಸ್ನಲ್ಲಿ ಸ್ಪಿನ್ ಅಗ್ನಿ ಪರೀಕ್ಷೆ!
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Movies
Tejaswini Prakash: ಪಾರ್ವತಿಯಾಗಿ ಮೋಡಿ ಮಾಡುತ್ತಿರುವ ಕಿರುತೆರೆಯ ಫೇಮಸ್ ಖಳನಾಯಕಿ
- Automobiles
ಹಳೆಯ ಕಾರನ್ನು ಮಾರಾಟ ಮಾಡುತ್ತಿದ್ದೀರಾ?: ಟಾಟಾದಿಂದ ದೊಡ್ಡ ಘೋಷಣೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಶ್ವ ವಿಶೇಷ ಚೇತನ ದಿನ 2022: 18 ವರ್ಷದ ಕೆಳಗಿನ ಮಕ್ಕಳಲ್ಲಿ ಈ ಬಗೆಯ ಲಕ್ಷಣಗಳಿದ್ದರೆ ಟರೆಟ್ ಸಿಂಡ್ರೋಮ್ ಇರಬಹುದು
ವಿಶೇಷ ಚೇತನ ಎಂಬುವುದು ನರಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದೆ, ಇದನ್ನು ಇಂಗ್ಲಿಷ್‌ನಲ್ಲಿ ಟುರೆಟ್ ಸಿಂಡ್ರೋಮ್ ( Tourette's syndrome (TS)) ಎಂದು ಕರೆಯಲಾಗುವುದು. ಇದು ಇದ್ದಕ್ಕಿದ್ದಂತೆ ಬರಬಹುದು, ಈ ಕಾಯಲೆ ಬಂದವರು ವಿಚಿತ್ರ ಶಬ್ದ ಮಾಡುವುದು, ವಿಚಿತ್ರವಾಗಿ ವರ್ತಿಸುವುದು ಮಾಡಲಾರಂಭಿಸುತ್ತಾರೆ. ಈ ಸಿಂಡ್ರೋಮ್ ಇರುವವರು ಆಗಾಗ ಕಣ್ಣು ಮಿಟುಕಿಸುವುದು, ಮಾತುಗಳಿಗೆ ತೊದಲುವುದು, ನಾಲಗೆ ಹೊರಗಡೆ ಹಾಕುವುದು ಮಾಡುತ್ತಾರೆ.
ಈ ರೀತಿಯ ಲಕ್ಷಣಗಳು ಮಕ್ಕಳಾಗಿರುವಾಗಲೇ ಅಂದ್ರೆ 18 ವರ್ಷಕ್ಕಿಂತ ಮೊದಲೇ ಕಂಡು ಬರುವುದು, ಅದರಲ್ಲೂ ಗಂಡು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಟುರೆಟ್ ಸಿಂಡ್ರೋಮ್‌ಗೆ ಕಾರಣವೇನು?
ಈ ಟುರೆಟ್ ಸಿಂಡ್ರೋಮ್ ಬರಲು ನಿಖರ ಕಾರಣವೇನು ಎಂಬುವುದು ಗೊತ್ತಿಲ್ಲ. ಸಂಶೋಧಕರು ಇದು ವಂಶವಾಹಿಯಾಗಿ ಅಥವಾ ಪರಿಸರದಲ್ಲಿನ ವಿಷಕಾರಿಕ ವಸ್ತುಗಳು ಅಥವಾ ಭ್ರೂಣ ಆರೋಗ್ಯಕರವಾಗಿ ಬೆಳವಣಿಗೆಯಾಗದೇ ಇದ್ದಾಗ ಈ ರೀತಿಯಾಗಬಹುದು ಎಂದು ಹೇಳುತ್ತಾರೆ.
ಟುರೆಟ್ ಸಿಂಡ್ರೋಮ್ ಲಕ್ಷಣಗಳೇನು?
ವಿಶೇಷ ಚೇತನ ಅಥವಾ ಟುರೆಟ್ ಲಕ್ಷಣಗಳು ಸಾಮಾನ್ಯವಾಗಿ 5-10 ವರ್ಷದೊಳಗೆ ಕಂಡು ಬರುತ್ತದೆ. ಕೆಲವರಿಗೆ ಮೈಲ್ಡ್ ಲಕ್ಷಣಗಳಿದ್ದರೆ ಇನ್ನು ಕೆಲವರಿಗೆ ಗಂಭೀರ ಲಕ್ಷಣಗಳಿರಬಹುದು.
* ಕಣ್ಣುಗಳನ್ನು ಆಗಾಗ ಮಿಟುಕಿಸುವುದು, ಮಾತುಗಳು ತೊದಲುವುದು, ತಲೆ ಒಂದು ಕಡೆಗೆ ವಾಲುವುದು
* ಭುಜ ಒಂದು ಕಡೆ ವಾಲುವಂತೆ ಇರುವುದು, ಕುತ್ತಿಗೆ ಒಂದು ಕಡೆ ಜಾರುವುದು, ದೇಹಬಾಗುವುದು ಇವೆಲ್ಲಾ ಗಂಭೀರ ಲಕ್ಷಣಗಳಾಗಿವೆ.
* ಆಗಾಗ ಗಂಟಲು ಸರಿಪಡಿಸುವುದು, ಕೆಮ್ಮುವುದು, ಸೀಟಿ ಹೊಡೆಯುವುದು, ಕಿರುಚುವುದು, ವಿಚಿತ್ರ ಶಬ್ದಗಳನ್ನು ಮಾಡುವುದು.
* ಹೇಳಿದ ಶಬ್ದಗಳನ್ನೇ ಪದೇ ಪದೇ ಹೇಳುವುದು, ಮಾಡಿದ್ದನ್ನೇ ಮಾಡುವುದು
ಇಂಥ ರೋಗಿಗಳಲ್ಲಿ ಖಿನ್ನತೆ, ಒತ್ತಡ, ಹಠ, ಒಸಿಡಿ, ತಮ್ಮ ಗಮನ ತುಂಬಾ ಸೆಳೆಯುವುದು, ಹೈಪರ್ ಆಕ್ಟಿವ್ ಈ ಬಗೆಯ ಲಕ್ಷಣಗಳು ಕಂಡು ಬರುವುದು.
ಯಾರಲ್ಲಿ ಈ ಕಾಯಿಲೆ ಅಪಾಯ ಹೆಚ್ಚು?
* ಕುಟುಂಬದಲ್ಲಿ ಯಾರಿಗಾದರೂ ಇದ್ದರೆ ಜನಿಸುವ ಮಕ್ಕಳಿಗೆ ವಂಶವಾಹಿಯಾಗಿ ಬರುವ ಸಾಧ್ಯತೆ ಇದೆ.
* ಲಿಂಗ: ಈ ಬಗೆಯ ಸಮಸ್ಯೆ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಯಾವಾಗ ವೈದ್ಯರಿಗೆ ತೋರಿಸಬೇಕು?
ಯಾವಾಗ ಮಗುವಿನಲ್ಲಿ ಸ್ವಲ್ಪ ವಿಚತ್ರ ವರ್ತನೆ ಅಥವಾ ಮಗು ವಿಚಿತ್ರವಾಗಿ ಶಬ್ದ ಮಾಡುವುದು, ಅಸಹಜ ವರ್ತನೆ ತೋರುತ್ತದೋ ಆ ರೀತಿಯ ವರ್ತನೆ ಒಂದು ವಾರಕ್ಕಿಮತ ಅಧಿಕ ದಿನವಿದ್ದರೆ ವೈದ್ಯರನ್ನು ಭೇಟಿ ಮಾಡಬೇಕು.
ಟುರೆಟ್ ಸಿಂಡ್ರೋಮ್ ಹೇಗೆ ಪತ್ತೆ ಮಾಡಲಾಗುವುದು
ಈ ಟುರೆಟ್ ಸಿಂಡ್ರೋಮ್ ಪತ್ತೆ ಹಚ್ಚಲು ನಿರ್ದಿಷ್ಟವಾದ ವಿಧಾನವಿಲ್ಲ, ವೈದ್ಯರು ಈ ಲಕ್ಷಣಗಳನ್ನು ನೋಡಿ ತೀರ್ಮಾನಕ್ಕೆ ಬರುತ್ತಾರೆ
* ಮಲ್ಟಿಪಲ್ ಮೋಟಾರ್ ಟಿಕ್(ಒಂದಕ್ಕಿಂತ ಅಧಿಕ ಶಬ್ದಗಳನ್ನು ಮಾಡುವುದು)
* 18 ವರ್ಷಕ್ಕಿಂತ ಮೊದಲು ಈ ಲಕ್ಷಣಗಳು ಕಂಡು ಬಂದರೆ
* ವಿಚಿತ್ರವಾದ ಶಬ್ದಗಳನ್ನು ದಿನದಲ್ಲಿ ತುಂಬಾ ಬಾರಿ ಮಾಡುತ್ತಿದ್ದರೆ
* ಬೇರೆ ಯಾವುದೇ ಆರೋಗ್ಯ ಸಮಸ್ಯೆಯಿಲ್ಲದೆ ಈ ರಿತಿ ವರ್ತಿಸುತ್ತಿದ್ದರೆ
ಗುಣಪಡಿಸಬಹುದೇ?
ಮಕ್ಕಳಿಗೆ ಟುರೆಟ್ ಸಮಸ್ಯೆ ಅಂದ್ರೆ ವಿಶೇಷ ಚೇತನವಾದರೆ ಅವರನ್ನು ಸಂಪೂರ್ಣವಾಗಿ ಗುಣಪಡಿಸುವಷ್ಟು ಯಾವುದೇ ವೈದ್ಯಕೀಯ ಸೌಲಭ್ಯ ಇಲ್ಲಿಯವರೆಗೆ ಬಂದಿಲ್ಲ. ಕೆಲ ಮಕ್ಕಳಲ್ಲಿ ಲಕ್ಷಣಗಳು ತುಂಬಾನೇ ಕಡಿಮೆ ಇರುತ್ತದೆ, ಅಂಥ ಮಕ್ಕಳಿಗೆ ಯಾವುದೇ ಚಿಕಿತ್ಸೆ ಬೇಕಾಗಿಲ್ಲ. ಅವರಿಗೆ ಕೆಲವೊಂದು ಔಷಧಗಳು ಹಾಗೂ ವರ್ತನೆ ಚಿಕಿತ್ಸೆ(behavioural therapy) ನೀಡಿದರೆ ಸಾಕಾಗುವುದು.
ಬಿಹೇವಿಯರ್ ಥೆರಪಿ ನೀಡಿದರೆ ಅಂಥ ಮಕ್ಕಳಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುತ್ತದೆ. ಅವರು ಹಠ ಮಾಡುವುದು, ವಿಚಿತ್ರವಾಗಿ ವರ್ತಿಸುವುದು ಕಡಿಮೆಯಾಗುವುದು.
ಬಿಹೇವಿಯರ್ ಥೆರಪಿ: ಟುರೆಟ್ ಸಿಂಡ್ರೋಮ್ ಇರುವವರಿಗೆ ಬಿಹೇವಿಯರ್ ಥೆರಪಿ ಮೊದಲ ಆಯ್ಕೆ ಆಗಿದೆ. ಇದನ್ನು ನೀಡುವ ಮೂಲಕ ಆ ಮಗುವಿಗೆ ಒಂದು ಒಳ್ಳೆಯ ಬದುಕು ಕಟ್ಟಿಕೊಡಲು ಸಾಧ್ಯವಾಗುವುದು. ಬಿಹೇವಿಯರ್ ಥೆರಪಿಯಲ್ಲಿ 2 ವಿಧಾನಗಳಿವೆ.
1. ಹ್ಯಾಬಿಟ್ ರಿವರ್ಸಲ್ ಟ್ರೈನಿಂಗ್ habit-reversal training (HRT)
2. ಬಿಹೇವಿಯರಲ್ ಇಂಟರ್‌ವೆನ್ಷನ್ ಫಾರ್ ಟಿಕ್ (behavioural intervention for tics (CBIT)
ಈ ಎರಡು ತೆರಪಿ ಕೊಡಿಸಿದರೆ ಟುರೆಟ್ ಸಿಂಡ್ರೋಮ್ ಮಕ್ಕಳನ್ನು ಹ್ಯಾಂಡಲ್ ಮಾಡುವುದು ಸುಲಭವಾಗುವುದು.
ಔಷಧಗಳು: Antipsychotic ಔಷಧ ಈ ಬಗೆಯ ಸಿಂಡ್ರೋಮ್ ನಿಯಂತ್ರಣದಲ್ಲಿಡಲು ನೀಡಲಾಗುವುದು, ಆದರೆ ಇಂಥ ಔಷಧಗಳು ಅಡ್ಡಪರಿಣಾಮವನ್ನೂ ಬೀರುವುದು. ಮೈ ತೂಕ ಹೆಚ್ಚುವುದು, ಅಕ್ಯೂಟ್ ಡೈಸ್ಟೋನಿಕ್ (acute dystonic ) ಅಂದ್ರೆ ಮುಖ, ಕುತ್ತಿಗೆ, ಪೆಲ್ವಿಕ್ ಈ ಭಾಗಗಳ ಮೇಲೆ ಅಡ್ಡಪರಿಣಾಮ ಬೀರಬಹುದು.
ಇಂಥ ಮಕ್ಕಳನ್ನು ತುಂಬಾ ಚೆನ್ನಾಗಿ ಪ್ರೀತಿಯಿಂದ ನೋಡಿಕೊಳ್ಳಿ...
ಇದು ನರಸಂಬಂಧಿತ ಸಮಸ್ಯೆಯಾಗಿದೆ
ಇದು ಮಕ್ಕಳ ಬೌಧಿಕ ಹಾಗೂ ದೈಹಿಕ ಸಾಮರ್ಥ್ಯದ ಮೇಲೆ ಅಡ್ಡಪರಿಣಾಮಬೀರಬಹುದು
ಆಯಸ್ಸಿಗೂ ಈ ಟುರೆಟ್ ಸಿಂಡ್ರೋಮ್ ಕಾಯಿಲೆಗೂ ಸಂಬಂಧವಿಲ್ಲ.