For Quick Alerts
ALLOW NOTIFICATIONS  
For Daily Alerts

ಮುಂಬೈ, ಬೆಂಗಳೂರು, ಚೆನ್ನೈ ...ನಗರಗಳಲ್ಲಿ ಕೊರೊನಾ ಅಂತ್ಯ ಯಾವಾಗ ಗೊತ್ತೆ? ಈ ಕುರಿತು ವರದಿ ಏನು ಹೇಳಿದೆ

|

ಕೊರೊನಾ ಎಂಬ ವೈರಸ್‌ ಇಡೀ ವಿಶ್ವದ ಚಿತ್ರಣವನ್ನೇ ಬದಲಾಯಿಸಿದೆ. ಈ ವೈರಸ್‌ಗೆ ಲಸಿಕೆ ಯಾವಾಗ ಬರುತ್ತದೆ, ಈ ಕಾಯಿಲೆಯಿಂದ ಮುಕ್ತಿ ಯಾವಾಗ ಎಂದು ಜನರು ಕಾತರದಿಂದ ಎದುರು ನೋಡುತ್ತಿದ್ದಾರೆ.

When To End Corona In Indian Cities, Here Is What Reoprt Says About It

ದೇಶದ ನಗರಗಳು, ಸಿಟಿಗಳು ಕೊರೊನಾ ಹಾಟ್‌ಸ್ಪಾಟ್‌ಗಳಾಗಿವೆ. ಮಹಾರಾಷ್ಟ್ರ ಅತೀ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ರಾಜ್ಯವಾಗಿದೆ, ಪುಣೆಯಲ್ಲೂ ಕೇಸ್‌ಗಳು ಹೆಚ್ಚಾಗುತ್ತಿವೆ. ಎರಡು ತಿಂಗಳ ಹಿಂದೆ ಕರ್ನಾಟಕದಲ್ಲಿ ನೂರರ ಲೆಕ್ಕದಲ್ಲಿದ್ದ ಕೊರೊನಾ ಸೋಂಕಿತರ ಸಂಖ್ಯೆ ಇದೀಗ ಬೆಂಗಳೂರಿನಲ್ಲಿಯೇ ಪ್ರತಿದಿನ 2000ಕ್ಕೂ ಅಧಿಕ ಕೇಸ್‌ಗಳು ಪತ್ತೆಯಾಗುವಂತಾಗಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೇಸ್‌ಗಳು ಹೆಚ್ಚಾಗುತ್ತಿದ್ದು, ಇದೀಗ ದೇಶದ ಎಲ್ಲೆಡೆ ಅನ್‌ಲಾಕ್ ಪ್ರಕ್ರಿಯೆ ಇರುವುದರಿಂದ ಕೇಸ್‌ಗಳು ಮತ್ತಷ್ಟು ಅಧಿಕ ಕಂಡು ಬರುತ್ತಿವೆ.

ಕೊರೊನಾವೈರಸ್: ಭಾರತದ ಪರಿಸ್ಥಿತಿ

ಕೊರೊನಾವೈರಸ್: ಭಾರತದ ಪರಿಸ್ಥಿತಿ

ಭಾರತದಲ್ಲಿಯೇ ಪ್ರತಿದಿನ 50,000ಕ್ಕೂ ಅಧಿಕ ಕೇಸ್‌ಗಳು ಪತ್ತೆಯಾಗುತ್ತಿದ್ದು, ಸೋಂಕು ತಗುಲಿದವರ ಸಂಖ್ಯೆ 1, 804,258 ಏರಿಕೆಯಾಗಿದೆ. ಆಗಸ್ಟ್‌ 2ರ ಅಂಕಿ ಅಂಶಗಳ ಪ್ರಕಾರ 38, 158 ಜನರು ಕೋವಿಡ್‌ 19ಗೆ ಬಲಿಯಾಗಿದ್ದಾರೆ.

ಕೊರೊನಾ ಸೋಂಕು ತಗುಲಿದವರಲ್ಲಿ 1, 186, 981 ಜನರು ಚೇತರಿಸಿಕೊಂಡಿದ್ದಾರೆ. ಇನ್ನು 1, 225, 139 ಜನರ ವರದಿ ಬರಬೇಕಾಗಿದೆ. ಕೊರೊನಾ ತಗುಲಿ ಚೇತರಿಸಿಕೊಂಡವರ ಸಂಖ್ಯೆ ಶೇ. 97ರಷ್ಟಿದ್ದು, ಸತ್ತವರ ಸಂಖ್ಯೆ ಶೇ. 3ರಷ್ಟಿದೆ.

(ಇಲ್ಲಿ ನೀಡಿರುವ ಅಂಕಿ ಅಂಶಗಳು ಆಗಸ್ಟ್‌ 2ರವರೆಗಿನ ಅಂಕಿ ಅಂಶಗಳು ಮಾತ್ರ)

ಭಾರತದ ನಗರಗಳಲ್ಲಿ ಕೊರೊನಾ ಆರ್ಭಟಕ್ಕೆ ಕೊನೆ ಎಂದು?

ಭಾರತದ ನಗರಗಳಲ್ಲಿ ಕೊರೊನಾ ಆರ್ಭಟಕ್ಕೆ ಕೊನೆ ಎಂದು?

ಕೊರೊನಾ ಯಾವಾಗ ಕೊನೆಯಾಗುತ್ತಿದೆ ಎಂಬುವುದರ ಬಗ್ಗೆ ತಜ್ಞರು ಹಲವಾರು ವರದಿಗಳನ್ನು ನೀಡಿದ್ದಾರೆ. ಕೆಲ ತಜ್ಞರು ಹೇಳುವ ಪ್ರಕಾರ ಎಲ್ಲೆಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆಯೋ ಆ ಸ್ಥಳಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಲಿದೆ ಎನ್ನುತ್ತಿದ್ದಾರೆ. ಈ ಕುರಿತು ದಿ ಟೈಮ್ಸ್ ಫ್ಯಾಕ್ಟ್‌ ಇಂಡಿಯಾ ಔಟ್‌ಬ್ರೇಕ್‌ ಕೂಡ ಏಪ್ರಿಲ್‌ನಿಂದ ಅಧ್ಯಯನ ನಡೆಸಿ ಕೊರೊನಾ ಸೋಂಕು ಯಾವ ರಾಜ್ಯಗಳಲ್ಲಿ ಯಾವ ಸಮಯದಲ್ಲಿ ತಗ್ಗಲಿದೆ ಎಂಬ ಬಗ್ಗೆ ನೀಡಿರುವ ಲೆಕ್ಕಾಚಾರ ಹೀಗಿದೆ ನೋಡಿ.

ಜೈಪುರ: ಆಗಸ್ಟ್‌ 19ರಲ್ಲಿ ಕೊರೊನಾ ಸ್ಫೋಟಗೊಂಡು ಅಕ್ಟೋಬರ್‌ 8ರಷ್ಟರಲ್ಲಿ ಕೊನೆಯಾಗಲಿದೆ.

ಸೂರತ್‌: ಸೂರತ್‌ನಲ್ಲಿ ಆಗಸ್ಟ್ 9ರಂದು ಸ್ಫೋಟಗೊಂಡು ಸೆಪ್ಟಂಬರ್ 25ಕ್ಕೆ ಸೋಂಕು ಕೊನೆಯಾಗಲಿದೆ.

ಪುಣೆ: ಆಗಸ್ಟ್ 10ರಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಲಿದ್ದು ಅಕ್ಟೋಬರ್‌ 28ಕ್ಕೆ ಕೊನೆಯಾಗಲಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಆಗಸ್ಟ್ 15ಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಲಿದ್ದು, ಅಕ್ಟೋಬರ್ 31ಕ್ಕೆ ಕೊನೆಯಾಗಲಿದೆ.

ಮುಂಬೈ: ಈಗಾಗಲೇ ಕೊರೊನಾ ಇಲ್ಲಿ ಸ್ಪೋಟಗೊಂಡಿದ್ದು ಅಕ್ಟೋಬರ್‌ 12ಕ್ಕೆ ಆರ್ಭಟ ತಗ್ಗಲಿದೆ ಎಂದು ಲೆಕ್ಕಾಚಾರ ಮಾಡಲಾಗಿದೆ.

ಚೆನ್ನೈ: ಇಲ್ಲಿ ಕೂಡ ಕೊರೊನಾ ಸ್ಫೋಟಗೊಂಡಿದ್ದು ಸೆಪ್ಟೆಂಬರ್ 28ಕ್ಕೆ ಕೊರೊನಾ ಆರ್ಭಟ ಕೊನೆಯಾಗಲಿದೆ.

ಅಹ್ಮದಾಬಾದ್: ಇಲ್ಲಿ ಕೂಡ ಕೊರೊನಾ ಸ್ಫೋಟಗೊಂಡಿದ್ದು ಅಕ್ಟೋಬರ್‌ 12ಕ್ಕೆ ಆರ್ಭಟ ತಗ್ಗಲಿದೆ.

ಥಾಣೆ: ಥಾಣೆಯಲ್ಲಿ ಕೂಡ ಕೊರೊನಾ ಸ್ಪೋಟಗೊಂಡಿದ್ದು, ಅಕ್ಟೋಬರ್‌ 20ಕ್ಕೆ ಆರ್ಭಟ ಅಂತ್ಯವಾಗಲಿದೆ.

ಕೊರೊನಾವೈರಸ್ ಲಕ್ಷಣಗಳು

ಕೊರೊನಾವೈರಸ್ ಲಕ್ಷಣಗಳು

ಜ್ವರ

ಕೆಮ್ಮು

ಉಸಿರಾಟದಲ್ಲಿ ತೊಂದರೆ

ಚಳಿ

ಮೈಕೈ ನೋವು

ತಲೆನೋವು

ಗಂಟಲು ಕೆರೆತ

ಬಾಯಿ ರುಚಿ ಗುರುತಿಸುವ ಸಾಮಾರ್ಥ್ಯ ಕಳೆದುಕೊಳ್ಳುವುದು

ಶೇ. 80ರಷ್ಟು ಜನರಿಗೆ ಮೈಲ್ಡ್ ಲಕ್ಷಣಗಳಷ್ಟೇ ಕಂಡು ಬರುತ್ತದೆ.

ಮೊದಲಿಗೆ ಜ್ವರ ನಂತರ ಒಣ ಕೆಮ್ಮು ಕಂಡು ಬರುವುದು, ವಾರದ ನಂತರ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಳ್ಳುವುದು, ಈ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಮೈಲ್ಡ್ ಇದ್ದರೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದು.

ಕೊರೊನಾ ಸೋಂಕಿತರಲ್ಲಿ ಶೀತ ಕಂಡು ಬರುವುದು ತುಂಬಾ ಅಪರೂಪ.

ಹೃದಯ ಸಂಬಂಧಿ ಸಮಸ್ಯೆ, ಮಧುಮೇಹ, ಅಸ್ತಮಾ, ಹೈಪರ್‌ಟೆನ್ಷನ್ ಈ ರೀತಿಯ ತೊಂದರೆ ಇರುವವರಿಗೆ ಸೋಂಕು ತಗುಲಿದರೆ ಪರಿಸ್ಥಿತಿ ಸ್ವಲ್ಪ ಗಂಭೀರವಾಗುವುದು.

ಕೋವಿಡ್ 19 ರೋಗಿಗಳಿಗೆ ಮನೆಯಲ್ಲಿಯೇ ಚಿಕಿತ್ಸೆ : ಗೈಡ್‌ಲೈನ್

ಕೋವಿಡ್ 19 ರೋಗಿಗಳಿಗೆ ಮನೆಯಲ್ಲಿಯೇ ಚಿಕಿತ್ಸೆ : ಗೈಡ್‌ಲೈನ್

  • ಹುಷಾರು ಇಲ್ಲದಿದ್ದರೆ ಮೊದಲಿಗೆ ವಿಶ್ರಾಂತಿ ತೆಗೆದುಕೊಳ್ಳಬೇಕು. ಪ್ರತ್ಯೇಕ ಕೋಣೆಯಲ್ಲಿರಿ. ಮನೆಯಲ್ಲಿ ಮಕ್ಕಳು, ವಯಸ್ಸಾದವರು ಇದ್ದರೆ ಅವರಿಂದ ದೂರವಿರಿ, ಪ್ರತ್ಯೇಕ ಬಾತ್‌ರೂಂ ಇರುವ ಕೋಣೆ ಬಳಸಿ.
  • ವೈದ್ಯರ ಸಲಹೆ, ಸೂಚನೆ ಪಾಲಿಸಿ
  • ಈ ಸಮಯದಲ್ಲಿ, ಬೇಸರ, ಒಂಟಿತನ, ಖಿನ್ನತೆ ಕಾಡದಿರಲು ಪ್ರೀತಿ ಪಾತ್ರರ ಜೊತೆ ಫೋನ್‌ ಅಥವಾ ಇಂಟರ್‌ನೆಟ್‌ನಲ್ಲಿ ಸಂಭಾಷಣೆ ನಡೆಸಿ.
  • ರೋಗ ಲಕ್ಷಣಗಳು ಉಲ್ಭಣಗೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.
  • ಮನೆಯವರು ಕೂಡ ಕೊರೊನಾ ಸೋಂಕಿತರಿಗೆ ಧೈರ್ಯ ತುಂಬುವಂತೆ ನಡೆದುಕೊಳ್ಳಬೇಕು. ಅವರ ಜೊತೆ ನೇರ ಸಂಪರ್ಕ ಮಾಡಬೇಡಿ, ಅವರು ಬಳಸಿದ ತಟ್ಟೆ, ಲೋಟ, ಬಟ್ಟೆ ಚೆನ್ನಾಗಿ ಸೋಪ್‌ ನೀರಿನಲ್ಲಿ ಹಾಕಿ ತೊಳೆಯಿರಿ.

    ಸ್ವಲ್ಪ ಮುನ್ನೆಚ್ಚರಿಕೆ ಕ್ರಮದಿಂದ ಕೊರೊನಾ ಗೆಲ್ಲಬಹುದು.

English summary

When To End Corona In Indian Cities, Here Is What Report Says About It

When to end corona in indian cities, here is what report says about it, read on.
X
Desktop Bottom Promotion