For Quick Alerts
ALLOW NOTIFICATIONS  
For Daily Alerts

ಕೊರೊನಾದಿಂದ ಚೇತರಿಸಿದವರು ಎಷ್ಟು ದಿನಗಳ ಬಳಿಕ ಸೆಕ್ಸ್ ಮಾಡಬಹುದು?

|

ಕೊರೊನಾವೈರಸ್‌ ಆರ್ಭಟಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಲಾಕ್‌ಡೌನ್‌ ಸಮಯದಲ್ಲಿ ನಿಯಂತ್ರಣದಲ್ಲಿದ್ದ ಕೊರೊನಾವೈರಸ್‌ ಲಾಕ್‌ಡೌನ್ ತೆರವಾದ ಬಳಿಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಸೋಂಕಿತರ ಜೊತೆಗೆ ದೇಶದಲ್ಲಿ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.

When can start covid 19 recovered patient sex life

ಕೊರೊನಾ ಸೋಂಕಿತರ ಹೆಚ್ಚಾಗುತ್ತಿದ್ದರು, ಸೋಂಕಿತರು ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇನ್ನು ಕೋವಿಡ್‌-19ನಿಂದ ಗುಣಮುಖರಾದವರು ಮನೆಗೆ ಹಿಂತಿರುಗಿದ ಮೇಲೆ ಸ್ವಲ್ಪ ದಿನಗಳ ಕಾಲ ಮುನ್ನೆಚ್ಚರಿಕೆವಹಿಸಬೇಕಾಗುತ್ತದೆ.

ಈ ಲೇಖನದಲ್ಲಿ ಕೋವಿಡ್‌ 19ನಿಂದ ಗುಣಮುಖರಾದವರು ತಮ್ಮ ಲೈಂಗಿಕ ಚಟುವಟಿಕೆ ಎಷ್ಟು ದಿನಗಳ ನಂತರ ಪ್ರಾರಂಭಿಸಬಹುದು, ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಾಗ ವಹಿಸಿಕೊಳ್ಳಬೇಕಾದ ಮುನ್ನೆಚ್ಚರಿಕೆಕ್ರಮಗಳೇಣು ಎಂಬುವುದರ ಬಗ್ಗೆ ಹೇಳಲಾಗಿದೆ ನೋಡಿ:

 30 ದಿನಗಳವರೆಗೆ ಅಂತರ ಕಾಯ್ದುಕೊಳ್ಳಬೇಕು

30 ದಿನಗಳವರೆಗೆ ಅಂತರ ಕಾಯ್ದುಕೊಳ್ಳಬೇಕು

ಕೋವಿಡ್‌ 19ನಿಂದ ಚೇತರಿಸಿಕೊಂಡ ಬಳಿಕ 30 ದಿನಗಳವರೆಗೆ ಗಂಡ-ಹೆಂಡತಿ ಅಂತರ ಕಾಯ್ದುಕೊಳ್ಳುವಂತೆ ತಜ್ಞರು ಸಲಹೆ ನೀಡಿದ್ದಾರೆ. ಥಾಯಿ ಡಿಸೀಜ್ ಕಂಡ್ರೋಲ್‌ ಡಿಪಾರ್ಟ್‌ಮೆಂಟ್‌ನ ಹಿರಿಯ ವೈದ್ಯಕೀಯ ಪರಿಣಿತರಾಗಿರುವ ವೀರವತ್ ಮನೋಸೂತಿಯವರು ಕೋವಿಡ್‌ 19ನಿಂದ ಚೇತರಿಸಿಕೊಂಡ ಬಳಿಕ 30 ದಿನದವರೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಾರದು ಹಾಗೂ ಕಿಸ್‌ ಕೂಡ ಮಾಡಬಾರದು ಎಂದು ಸಲಹೆ ನೀಡಿದ್ದಾರೆ. ಏಕೆಂದರೆ ಸೋಂಕಾಣುಗಳು ಬಾಯಿಯ ಮೂಲಕವೂ ಹರಡುವ ಸಾಧ್ಯತೆ ಇದೆ.

ಸೋಂಕಿನಿಂದ ಚೇತರಿಸಿಕೊಂಡರೂ ವೀರ್ಯಾಣುಗಳಲ್ಲಿ ಸೋಂಕು ಪತ್ತೆ

ಸೋಂಕಿನಿಂದ ಚೇತರಿಸಿಕೊಂಡರೂ ವೀರ್ಯಾಣುಗಳಲ್ಲಿ ಸೋಂಕು ಪತ್ತೆ

ಚೀನಾದ ಶಾಂಘೈ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದ ಪುರುಷರ ವೀರ್ಯಾಣುಗಳನ್ನು ತೆಗೆದು ಪರೀಕ್ಷೆಗೆ ಒಳಪಡಿಸಲಾಯಿತು. ಈ ಪರೀಕ್ಷೆಯಲ್ಲಿ ಜನವರಿ 26ಕ್ಕೆ ವೀರ್ಯಾಣುಗಳನ್ನು ತೆಗೆದು ಪರೀಕ್ಷಿಸಲಾಗಿತ್ತು, ನಂತರ ಫೆಬ್ರವರಿ 16ಕ್ಕೆ ಪರೀಕ್ಷೆ ನಡೆಸಲಾಗಿತ್ತು. ಆಗ ಅವರ ವೀರ್ಯಾಣುಗಳಲ್ಲಿ ಸೋಂಕಿನ ಅಂಶವಿರುವುದು ಪತ್ತೆಯಾಗಿತ್ತು. ಆದ್ದರಿಂದ ಸೋಂಕಿನಿಂದ ಗುಣಮುಖರಾದರೂ ಕನಿಷ್ಠ 30 ದಿನಗಳವರೆಗೆ ಅಂತರ ಕಾಯ್ದುಕೊಳ್ಳಬೇಕು ಹಾಗೂ ಕಿಸ್ ಮಾಡುವಂತಿಲ್ಲ.

 ಸೆಕ್ಸ್ ಮಾಡುವಾಗ ಕಾಂಡೋಮ್ ಧರಿಸಬೇಕು

ಸೆಕ್ಸ್ ಮಾಡುವಾಗ ಕಾಂಡೋಮ್ ಧರಿಸಬೇಕು

30 ದಿನಗಳ ಬಳಿಕ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಾಗ ಕಾಂಡೋಮ್ ಧರಿಸುವುದು ಸುರಕ್ಷಿತ. ಅಲ್ಲದೆ ಕೋವಿಡ್‌ 19ನಿಂದ ಚೇತರಿಸಿಕೊಂಡವರು ಸ್ವಲ್ಪ ಸಮಯ ಗರ್ಭಧಾರಣೆಯಾಗದಿರುವುದು ಸೂಕ್ತ. ಇದನ್ನು ತಡೆಗಟ್ಟುವಲ್ಲಿ ಕೂಡ ಕಾಂಡೋಮ್ ಬಳಸುವುದರಿಂದ ಸಾಧ್ಯವಾಗುತ್ತದೆ.

 ಇತರ ಸಲಹೆಗಳು

ಇತರ ಸಲಹೆಗಳು

  • ಕೋವಿಡ್‌ 19ತಡೆಗಟ್ಟಲು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಷಾಯ ಮಾಡಿ ಕುಡಿಯಬೇಕು.
  • ಆರೋಗ್ಯಕರ ಆಹಾರ ಸೇವಿಸಬೇಕು, ಸಾಕಷ್ಟು ನೀರು ಕುಡಿಯಿರಿ.
  • ಪ್ರತಿದಿನ ಯೋಗ ಮತ್ತು ಪ್ರಾಣಯಾಮ ಮಾಡಿ.
  • ಹೊರಗಡೆ ಓಡಾಡುವಾಗ ಮಾಸ್ಕ್‌ ಧರಿಸಿ.
  • ಕೈಗಳಿಗೆ ಆಗಾಗ ಸ್ಯಾನಿಟೈಸರ್ ಹಚ್ಚಿ.
English summary

When Can COVID-19 Recovered Patient Starts Sex Life

Veerawat Manosutthi, a senior medical expert at the Thai Disease Control Department, has advised that patients who have overcome COVID-19 should avoid getting intimate for 30 days, and has even warned against kissing.
X
Desktop Bottom Promotion