For Quick Alerts
ALLOW NOTIFICATIONS  
For Daily Alerts

ಒಮಿಕ್ರಾನ್‌ನ ಹೊಸ ರೂಪಾಂತರ ಸೆಂಟಾರಸ್ ಪತ್ತೆ: ಹೆಚ್ಚಿದೆ ಕೊರೊನಾ ಆತಂಕ

|

ಒಮಿಕ್ರಾನ್‌ನ ಹೊಸ-ಹೊಸ ರೂಪಾಂತರಗಳು ಪತ್ತೆಯಾಗುತ್ತಿರುವುದರ ಬಗ್ಗೆ ವೈರಾಲಾಜಿಸ್ಟ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಇದೀಗ ಒಮಿಕ್ರಾನ್ ರೂಪಾಂತರ BA.5 ಭಾರತದಲ್ಲಿ ಕೊರೊನಾ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಒಮಿಕ್ರಾನ್‌ನ ಈ ರೂಪಾಂತರ ಭಯಾನಕವಾಗಬಹುದು ಎಂದು ಅಂದಾಜಿಸಲಾಗಿದೆ, ಹೀಗಿರುವಾಗ ಒಮಿಕ್ರಾನ್‌ನ ಮತ್ತೊಂದು ರೂಪಾಂತರ ತಳಿ BA.2.75 ಯುಕೆಯಲ್ಲಿ ಪತ್ತೆಯಾಗಿದೆ.

ಈ ಹೊಸ ಒಮಿಕ್ರಾನ್‌ ರೂಪಾಂತರ ಅಪಾಯಕಾರಿಯೇ? ಇದರ ಲಕ್ಷಣಗಳೇನು ಎಂದು ನೋಡೋಣ ಬನ್ನಿ:

ಹೊಸ ಒಮಿಕ್ರಾನ್ ರೂಪಾಂತರ BA.2.75

ಹೊಸ ಒಮಿಕ್ರಾನ್ ರೂಪಾಂತರ BA.2.75

ಈ ಹೊಸ ಒಮಿಕ್ರಾನ್‌ ರೂಪಾಂತರ ಇತರ ರೂಪಾಂತರಗಳಾದ BA.5 ಮತ್ತು BA.2 ರೂಪಾಂತರಗಳಿಗಿಂತ ವೇಗವಾಗಿ ಹರಡುವುದು ಎಂದು ಹೇಳಲಾಗುತ್ತಿದೆ. ಈ ಹೊಸ ರೂಪಾಂತ ಯುಕೆ ಮಾತ್ರವಲ್ಲ ಯುಎಸ್‌, ಆಸ್ಟ್ರೇಲಿಯಾ, ಜರ್ಮನಿ ಹಾಗೂ ಕೆನಡಾ ದೇಶಗಳಲ್ಲಿ ಕಂಡು ಬರುತ್ತದೆ.

ಈ ರೂಪಾಂತರ ತುಂಬಾ ಅಪಾಯಕಾರಿಯೇ?

ಈ ರೂಪಾಂತರ ತುಂಬಾ ಅಪಾಯಕಾರಿಯೇ?

ಇದು ಇತರ ಒಮಿಕ್ರಾನ್‌ ರೂಪಾಂತರಗಳಿಗಿಂತ ತುಂಬಾ ಅಪಾಯಕಾರಿಯೇ ಎಮದು ನೋಡುವುದಾದರೆ ಇದರ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಈ ವೈರಸ್‌ ಈಗಷ್ಟೇ ಪತ್ತೆಯಾಗಿದ್ದು ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯುತ್ತಿದೆ ಎಂದು ECDC (The European Centre for Disease Prevention and Control) ಹೇಳಿದೆ.

ಲಸಿಕೆ ಪಡೆದರಿಗೂ ಈ ವೈರಸ್‌ ಬರಬಹುದು

ಲಸಿಕೆ ಪಡೆದರಿಗೂ ಈ ವೈರಸ್‌ ಬರಬಹುದು

ಇತರ ಕೊರೊನಾ ರೂಪಾಂತರಗಳು ಈ ಹಿಂದಿನ ರೂಪಾಂತರಗಳಂತೆಯಲ್ಲ, ಲಸಿಕೆ ಪಡೆದವರಿಗೆ ಹಾಗೂ ಈ ಹಿಂದೆ ಕೋವಿಡ್ 19 ಬಂದವರಿಗೆ ಕೊರೊನಾ ತಗುಲು ಸಾಧ್ಯತೆ ಕಡಿಮೆಯಿತ್ತು. ಆದರೆ ಈ ವೈರಸ್‌ ಲಸಿಕೆ ಪಡೆದವರಿಗೂ ಬರಬಹುದು.

ಆದರೆ ಲಸಿಕೆ ಮತ್ತು ಬೂಸ್ಟರ್‌ ತೆಗೆದುಕೊಳ್ಳುವುದು ಒಳ್ಳೆಯದು ಎಂದು ತಜ್ಞರು ಹೇಳುತ್ತಿದ್ದಾರೆ.

ನಾವು ಈಗಲೂ ಮುನ್ನೆಚ್ಚರಿಕೆವಹಿಸಬೇಕಾಗಿದೆ

ನಾವು ಈಗಲೂ ಮುನ್ನೆಚ್ಚರಿಕೆವಹಿಸಬೇಕಾಗಿದೆ

ಸಾಂಕ್ರಾಮಿಕದಿಂದ ನಾವು ಸಹಜ ಬದುಕಿನತ್ತ ಮರಳುತ್ತಿದ್ದೇವೆ, ಆದರೆ ತುಂಬಾನೇ ಎಚ್ಚರಿಕೆವಹಿಸಬೇಕಾಗಿದೆ.

* ಈ ಹಿಂದೆಗಿಂತಲೂ ಎಚ್ಚರವಹಿಸಬೇಕಾಗಿದೆ.

* ಮನೆಯಿಂದ ಹೊರಗಡೆ ಹೊಗುವಾಗ ಕೊರೊನಾ ನಿಯಂತ್ರಣದ ಎಲ್ಲಾ ಮುನ್ನೆಚ್ಚರಿಕೆವಹಿಸಿ.

English summary

What is Centaurus Covid variant? New fast-spreading Covid variant reported in UK ; Know Details in Kannada

New Omicron variant Centaurus reported in UK, here are more information, read on...
X
Desktop Bottom Promotion