For Quick Alerts
ALLOW NOTIFICATIONS  
For Daily Alerts

ಕೋವಿಡ್ 19 ಲಸಿಕೆ ಪಡೆದ ಬಳಿಕ ದೇಹದಲ್ಲಾಗುವ ಬದಲಾವಣೆಗಳಿವು

|

ಕೋವಿಡ್‌ 19 ಲಸಿಕೆ ತೆಗೆದುಕೊಳ್ಳುವುದರಿಂದ ದೇಹದಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗುವುದು, ಇವುಗಳು ಕೊರೊನಾ ವೈರಸ್‌ ವಿರುದ್ಧ ಹೋರಾಡು ಸಾಮರ್ಥ್ಯವನ್ನು ಹೊಂದಿದೆ ಎಂಬುವುದು ಸಂಶೋಧನೆಯಿಂದ ಸಾಬೀತಾಗಿದೆ. ಆದ್ದರಿಂದಲೇ ಪ್ರತಿಯೊಬ್ಬರು ಕೋವಿಡ್‌ 19 ಲಸಿಕೆ ತೆಗೆದುಕೊಳ್ಳಬೇಕು, ಅದರಲ್ಲೂ ಒಂದು ಡೋಸ್‌ ಸಾಲದು , ಎರಡು ಡೋಸ್ ಲಸಿಕೆ ಬೇಕೇ ಬೇಕು ಎಂದು ಹೇಳಲಾಗುತ್ತದೆ.

ಕೋವಿಡ್ 19 ಲಸಿಕೆ ತೆಗೆದುಕೊಂಡಾಗ ನಮ್ಮ ದೇಹದಲ್ಲಾಗುವ ಬದಲಾವಣೆಗಳೇನು? ಕೆಲವರಿಗೆ ಏಕೆ ಅಡ್ಡಪರಿಣಾಮ ಬಂದರೆ ಜ್ವರ, ಸುಸ್ತು ಕಾಣಿಸಿಕೊಳ್ಳುತ್ತದೆ? ಇನ್ನು ಕೆಲವರಿಗೆ ಏಕೆ ಲಸಿಕೆ ಪಡೆದ ಬಳಿಕ ಈ ರೀತಿ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಎಂದು ನೋಡೋಣ ಬನ್ನಿ:

ನೀವು ಲಸಿಕೆ ಪಡೆದಾಗ ಏನಾಗುತ್ತೆ?

ನೀವು ಲಸಿಕೆ ಪಡೆದಾಗ ಏನಾಗುತ್ತೆ?

ಲಸಿಕೆ ಪಡೆಯುವುದರಿಂದ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುವುದು. ಲಸಿಕೆಯನ್ನು SARS-CoV-2ನಂಥ ದುರ್ಬಲ ಅಥವಾ ಸತ್ತ ವೈರಸ್‌ಗಳನ್ನು ಬಳಸಿ ತಯಾರಿಸಲಾಗುವುದು. ಲಸಿಕೆ ಚುಚ್ಚಿದಾಗ ಈ ದುರ್ಬಲ ವೈರಸ್‌ ಅಂಶಗಳು ನರಗಳ ಜೀವ ಕಣಗಳಲ್ಲಿ ಸೇರುತ್ತವೆ. ಹೀಗಾಗಿ ದೇಹಕ್ಕೆ ಹೊರಗಿನಿಂದ ಕೊರೊನಾ ವೈರಸ್‌ ದಾಳಿ ಮಾಡಿದಾಗ ಕೂಡಲೇ ಗುರುತಿಸಿ ಆ ವೈರಸ್‌ ಅನ್ನು ಸೋಲಿಸುವ ಕೆಲಸ ಮಾಡುತ್ತದೆ.

ಲಸಿಕೆ ಪಡೆದ ಬಳಿಕ ಕೆಲವರಲ್ಲಿ ಅಡ್ಡ ಪರಿಣಾಮಗಳು ಕಂಡು ಬರುವುದೇಕೆ?

ಲಸಿಕೆ ಪಡೆದ ಬಳಿಕ ಕೆಲವರಲ್ಲಿ ಅಡ್ಡ ಪರಿಣಾಮಗಳು ಕಂಡು ಬರುವುದೇಕೆ?

ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಈ ಲಸಿಕೆಗೆ ಸ್ಪಂದಿಸುತ್ತಿದೆ ಎಂಬುವುದು ಈ ಅಡ್ಡಪರಿಣಾಮಗಳ ಲಕ್ಷಣವಾಗಿದೆ. ಕೆಲವರಿಗೆ ಲಸಿಕೆ ಪಡೆದ ಭಾಗದಲ್ಲಿ ಊತ, ನೋವು, ಜ್ವರ, ಸುಸ್ತು, ತಲೆ ನೋವು, ಚಳಿಯಾಗುವುದು, ವಾಂತಿ, ಸ್ನಾಯುಗಳಲ್ಲಿ ಮುಂತಾದ ಅಡ್ಡಪರಿಣಾಮಗಳು ಕಂಡು ಬರುವುದು.

ಲಸಿಕೆಯಲ್ಲಿರುವ ರೋಗಕಾರಕ ಅಂಶವು ನಮ್ಮ ದೇಹವನ್ನು ಪ್ರವೇಶಿಸಿದಾಗ ಬಿಳಿ ರಕ್ತ ಕಣಗಳು

ಲಸಿಕೆಯಲ್ಲಿರುವ ರೋಗಕಾರಕ ಅಂಶವು ನಮ್ಮ ದೇಹವನ್ನು ಪ್ರವೇಶಿಸಿದಾಗ ಬಿಳಿ ರಕ್ತ ಕಣಗಳು

ವೈರಸ್‌ ಹಾಗೂ ಪ್ರತಿಕಾಯಗಳನ್ನು ವಿಭಿಜಿಸಿ ದೇಹದಲ್ಲಿ ಅವುಗಳನ್ನು ಹರಡುವುದು. ಆದ್ದರಿಂದ ಲಸಿಕೆ ಪಡೆದ ಭಾಗದಲ್ಲಿ ಬಿಳಿ ರಕ್ತಕಣಗಳು ಹಾಗೂ ರೋಗಕಾರಕಗಳ ನಡುವೆ ಒಂದು ಯುದ್ಧವೇ ನಡೆಯುತ್ತದೆ, ಆದ್ದರಿಂದ ಲಸಿಕೆ ಚುಚ್ಚಿದ ಭಾಗದಲ್ಲಿ ನೋವು ಕಂಡು ಬರುವುದು. ಅಲ್ಲದೆ ಲಸಿಕೆ ಬಳಿಕ ಸೈಟೊಕಿನ್ಸ್ ಮತ್ತು ಕೆಮೊಕೈನ್‌ಗಳು ಸುಸ್ತಾಗುವುದು, ಇದರಿಂದಾಗಿ ಲಸಿಕೆ ಪಡೆದ ಜಾಗದಲ್ಲಿ ಉರಿ, ನೋವು ಮುಂತಾದ ಸಮಸ್ಯೆ ಕಂಡು ಬರುವುದು.

ಸೆಕೆಂಡ್‌ ಡೋಸ್‌ ಲಸಿಕೆ ಮಿಸ್‌ ಮಾಡ ಬಾರದು ಏಕೆ?

ಸೆಕೆಂಡ್‌ ಡೋಸ್‌ ಲಸಿಕೆ ಮಿಸ್‌ ಮಾಡ ಬಾರದು ಏಕೆ?

ಭಾರತದಲ್ಲಿ ಲಭ್ಯವಿರುವ ಕೊವಾಕ್ಸಿನ್‌ ಹಾಗೂ ಕೋವಿಶೀಲ್ಡ್‌ ಲಸಿಕೆಗಳನ್ನು ಎರಡು ಡೋಸ್‌ ಪಡೆಯಬೇಕು. ಮೊದಲನೇ ಡೋಸ್ ಪಡೆದಾಗ ವ್ಯಕ್ತಿಯ ದೇಹದಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗಿ ಕೋವಿಡ್ 19 ಸೋಂಕಿನ ವಿರುದ್ಧ ಹೋರಾಡುತ್ತೆ. ಆದರೆ ಈ ಪ್ರತಿಕಾಯಗಳು ತುಂಬಾ ದಿನ ಇರಲ್ಲ, ಆದ್ದರಿಂದ ಎರಡನೇ ಡೋಸ್ ಪಡೆದುಕೊಳ್ಳಬೇಕು. ಎರಡನೇ ಡೋಸ್‌ ಪಡೆದುಕೊಂಡರೆ ನಮ್ಮ ದೇಹವು ಕೋವಿಡ್ 19 ವಿರುದ್ಧ ತುಂಬಾ ಶಕ್ತವಾಗಿ ಹೋರಾಡುತ್ತೆ.

ಕೆಲವು ತಜ್ಞರು ಈ ಎರಡು ಡೋಸ್ ಅಲ್ಲದೆ ಬೂಸ್ಟರ್‌ನ ಅಗ್ಯತವಿದೆ ಎಂದು ಹೇಳುತ್ತಿದ್ದಾರೆ. ಭಾರತದಲ್ಲಿ ಇನ್ನೂ ಬೂಸ್ಟರ್‌ ನೀಡುತ್ತಿಲ್ಲ. ಕೋವಿಡ್‌ 19ನಿಂದ ಪಾರಾಗಲು ಪ್ರತಿಯೊಬ್ಬರು ಎರಡು ಡೋಸ್‌ ಲಸಿಕೆ ಹಾಕಿಸಿ.

English summary

What Happens Inside Your Body When You Get Your COVID vaccine in kannada

What happens inside your body when you get your COVID vaccine in kannada.
Story first published: Saturday, September 4, 2021, 15:24 [IST]
X
Desktop Bottom Promotion