For Quick Alerts
ALLOW NOTIFICATIONS  
For Daily Alerts

ನಿಮಗೆ ತುಪ್ಪದ ಕಾಫಿ ಗೊತ್ತೆ? ಇದರಿಂದಾಗುವ ಆರೋಗ್ಯ ಪ್ರಯೋಜನ ಅಷ್ಟಿಷ್ಟಲ್ಲ!

|

ಪ್ರತಿನಿತ್ಯ ನಾವು ಎದ್ದ ಕೂಡಲೇ ಕಾಫಿ ಅಥವಾ ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತೇವೆ. ಹೆಚ್ಚಾಗಿ ಉಷ್ಣ ಪ್ರದೇಶಗಳಲ್ಲಿ ಚಹಾ ಮತ್ತು ಶೀತ ಪ್ರದೇಶಗಳಲ್ಲಿ ಕಾಫಿಯನ್ನು ಹೆಚ್ಚಾಗಿ ಕುಡಿಯುವರು ಎನ್ನುವ ಮಾತಿದೆ. ಚಹಾ ಮತ್ತು ಕಾಫಿಗೆ ಹೋಲಿಕೆ ಮಾಡಿದರೆ ವಿಶ್ವದೆಲ್ಲೆಡೆಯಲ್ಲಿ ಕಾಫಿ ಕುಡಿಯುವವರ ಸಂಖ್ಯೆಯು ಹೆಚ್ಚಾಗಿದೆ ಎಂದು ಹೇಳಲಾಗುತ್ತದೆ. ಕಾಫಿಯಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಲಾಗುತ್ತದೆ. ಇದರಲ್ಲಿ ಹೊಸ ಆವಿಷ್ಕಾರವೇ ಬುಲೆಟ್ ಫ್ರೂಫ್ ಕಾಫಿ. ಕಿಟೊ ಡಯೆಟ್ ಪಾಲಿಸುವವರಲ್ಲಿ ಇದು ಇಂದು ಜನಪ್ರಿಯವಾಗಿದೆ. ಕಾಫಿಯನ್ನು ಮತ್ತೊಂದು ರೀತಿಯ ಕಾಫಿಯು ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಇದು ತುಪ್ಪದ ಕಾಫಿ. ಏನಿದು ತುಪ್ಪದ ಕಾಫಿ?, ಈ ಬಗ್ಗೆ ನಾವು ಲೇಖನದಲ್ಲಿ ತಿಳಿಯುವ.

ತುಪ್ಪದ ಕಾಫಿ ಎಂದರೇನು?

ತುಪ್ಪದ ಕಾಫಿ ಎಂದರೇನು?

ಆಯುರ್ವೇದದಲ್ಲಿ ಹಿಂದಿನಿಂದಲೂ ತುಪ್ಪವನ್ನು ಹಲವಾರು ರೀತಿಯ ಔಷಧಗಳಿಗೆ ಬಳಸಿಕೊಂಡು ಬರಲಾಗುತ್ತಾ ಇದೆ. ಹಾಗೆ ಇದನ್ನು ಭಾರತೀಯರು ಹೆಚ್ಚಾಗಿ ಅಡುಗೆಯಲ್ಲೂ ಬಳಕೆ ಮಾಡುವರು. ತುಪ್ಪ ದೋಸೆ ಬಗ್ಗೆ ದಕ್ಷಿಣ ಭಾರತೀಯರಿಗೆ ಖಂಡಿತವಾಗಿಯೂ ತಿಳಿದಿದೆ. ಅದೇ ತುಪ್ಪದ ಕಾಫಿ ಬಗ್ಗೆ ನಾವು ತಿಳಿಯುವ. ತುಪ್ಪದ ಕಾಫಿಯು ಹಲವಾರು ರೀತಿಯ ಆರೋಗ್ಯ ಲಾಭಗಳನ್ನು ನೀಡುವುದು ಮತ್ತು ಬೆಣ್ಣೆ ಕಾಫಿಯು ಸಹ ಹೆಚ್ಚು ರುಚಿ ಹಾಗೂ ಸಿಹಿ ಆಗಿರುವುದು.

ALSO READ:ತೂಕ ಇಳಿಸಿಕೊಳ್ಳಬೇಕೇ ಹಾಗಾದ್ರೆ ದೋಸೆ ತಿನ್ನಿ

ತುಪ್ಪ ಕಾಫಿಯ ಆರೋಗ್ಯ ಲಾಭಗಳು

1. ಅಸಿಡಿಟಿ ಕಡಿಮೆ ಮಾಡುವುದು

1. ಅಸಿಡಿಟಿ ಕಡಿಮೆ ಮಾಡುವುದು

ಹೆಚ್ಚಿನ ಜನರಿಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿದರೆ ಅದರಿಂದ ಅಸಿಡಿಟಿ ಉಂಟಾಗುವುದು. ಆದರೆ ತುಪ್ಪವನ್ನು ಸೇರಿಸಿದರೆ ಅದರಿಂದ ಅಸಿಡಿಟಿ ಕಡಿಮೆ ಮಾಡುವುದು ಮತ್ತು ಉರಿಯೂತ ಕೂಡ ತಗ್ಗುವುದು. ಯಾಕೆಂದರೆ ಇದರಲ್ಲಿ ಬ್ಯೂಟರಿಕ್ ಆಮ್ಲ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಇವೆ. ಇದು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇದು ಆರೋಗ್ಯಕಾರಿ ಚಯಾಪಚಯ ಕ್ರಿಯೆಗೆ ನೆರವಾಗುವುದು.

2. ತೂಕ ಇಳಿಸಲು ಸಹಕಾರಿ

2. ತೂಕ ಇಳಿಸಲು ಸಹಕಾರಿ

ನೀವು ಬೆಳಗ್ಗೆ ಈ ಕಾಫಿ ಕುಡಿದರೆ ಅದರಿಂದ ತೂಕ ಇಳಿಸಿಕೊಳ್ಳಲು ಸಹಕಾರಿ ಆಗಲಿದೆ. ನೀವು ಕಿಟೊ ಡಯೆಟ್ ನ್ನು ಪಾಲಿಸದೆ ಇದ್ದರೆ ಮತ್ತು ತುಪ್ಪದ ಕಾಫಿ ಕುಡಿಯುತ್ತಿದ್ದರೆ ಆಗ ನೀವು ಖಂಡಿತವಾಗಿಯೂ ತೂಕ ಹೆಚ್ಚಿಸಿಕೊಳ್ಳಲಿದ್ದೀರಿ. ಕಾಫಿಯು ತೃಪ್ತಿಯನ್ನು ನಿಯಂತ್ರಿಸುವುದು ಮತ್ತು ತುಪ್ಪದಲ್ಲಿ ಶೂನ್ಯ ಕಾರ್ಬೋಹೈಡ್ರೇಟ್ಸ್ ಇದೆ ಮತ್ತು ಒಮೆಗಾ 3 ಹಾಗೂ ಒಮೆಗಾ6 ಕೊಬ್ಬಿನಾಮ್ಲವು ತೂಕ ಕಳೆದುಕೊಳ್ಳಲು ಸಹಕಾರಿ ಆಗಿರಲಿದೆ.

3. ಮನಸ್ಥಿತಿ ಸುಧಾರಣೆ ಮಾಡುವುದು

3. ಮನಸ್ಥಿತಿ ಸುಧಾರಣೆ ಮಾಡುವುದು

ತುಪ್ಪದಲ್ಲಿ ಇರುವಂತಹ ಒಮೆಗಾ-3 ಕೊಬ್ಬಿನಾಮ್ಲವು ನರಗಳ ಅಂಗಾಂಶಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ಮತ್ತು ಹಾರ್ಮೋನ್ ಉತ್ಪತ್ತಿ ಸುಧಾರಣೆ ಮಾಡುವುದು. ಇದರಿಂದಾಗಿ ಮನಸ್ಥಿತಿ ಸಹ ಸಂತೋಷವಾಗಿ ಇರುವುದು.

ALSO READ:ಅಧ್ಯಯನದ ಪ್ರಕಾರ ಭಾರತದಲ್ಲಿ ಶೇ. 63% ಉದ್ಯೋಗಿಗಳು ಅಧಿಕ ತೂಕ ಹೊಂದಿದವರು!

4. ಲ್ಯಾಕ್ಟೋಸ್ ಅಸಹಿಷ್ಣುತೆ ಇರುವ ಜನರಿಗೆ ಒಳ್ಳೆಯದು

4. ಲ್ಯಾಕ್ಟೋಸ್ ಅಸಹಿಷ್ಣುತೆ ಇರುವ ಜನರಿಗೆ ಒಳ್ಳೆಯದು

ಲ್ಯಾಕ್ಟೋಸ್ ಅಸಹಿಷ್ಣುತೆ ಇರುವಂತಹ ಜನರಿಗೆ ತುಪ್ಪವು ತುಂಬಾ ಒಳ್ಳೆಯದು. ಯಾಕೆಂದರೆ ತುಪ್ಪವು ಹಾಲಿನ ಘನವಸ್ತುಗಳು ಮತ್ತು ಪ್ರೋಟೀನ್ ನಿಂದ ಮುಕ್ತವಾಗಿದೆ. ಬೆಣ್ಣೆಗೆ ಹೋಲಿಸಿದರೆ ತುಪ್ಪವು ಹೊಟ್ಟೆಗೆ ತುಂಬಾ ಒಳ್ಳೆಯದು.

5. ಶಕ್ತಿ ಹೆಚ್ಚಿಸುವುದು

5. ಶಕ್ತಿ ಹೆಚ್ಚಿಸುವುದು

ಕಾಫಿಯು ಶಕ್ತಿ ಹೆಚ್ಚಿಸುವುದು ಮತ್ತು ತುಪ್ಪದೊಂದಿಗೆ ಇದನ್ನು ಸೇರಿಸಿಕೊಂಡು ಕುಡಿದರೆ ಅದರಿಂದ ಶಕ್ತಿಯ ಮಟ್ಟವು ಮತ್ತಷ್ಟು ಹೆಚ್ಚಾಗುವುದು. ಕಾಫಿಯಲ್ಲಿ ಕೆಫಿನ್ ಅಂಶವಿದೆ ಮತ್ತು ಇದು ಶಕ್ತಿಯ ಮಟ್ಟ ಹೆಚ್ಚು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ALSO READ:ಕೆಲವೇ ದಿನಗಳಲ್ಲಿ ತೂಕ ಇಳಿಸಬಲ್ಲ ಸಿಹಿಗೆಣಸು!

ತುಪ್ಪದ ಕಾಫಿ ತಯಾರಿಸುವುದು ಹೇಗೆ

ತುಪ್ಪದ ಕಾಫಿ ತಯಾರಿಸುವುದು ಹೇಗೆ

ಕಾಫಿ ಮಾಡಿಕೊಂಡು ಅದನ್ನು ಒಂದು ಮಗ್ ಗೆ ಹಾಕಿಕೊಳ್ಳೀ ಮತ್ತು ಅದಕ್ಕೆ 1-2 ಚಮಚ ತುಪ್ಪ ಹಾಕಿಕೊಳ್ಳಿ. ನೀವು ಕುಡಿಯಲು ಬಯಸುವ ಕಾಫಿಯಷ್ಟು ತುಪ್ಪ ಹಾಕಿಕೊಳ್ಳಿ.

ಆರೋಗ್ಯಕಾರಿ ಆಹಾರ ಕ್ರಮ ಪಾಲಿಸಿ

ಆರೋಗ್ಯಕಾರಿ ಆಹಾರ ಕ್ರಮ ಪಾಲಿಸಿ

ಕಿಟೊ ಡಯೆಟ್ ಮಾಡುವಂತಹ ಜನರಿಗೆ ತುಪ್ಪದ ಕಾಫಿ ಸಲಹೆ ಮಾಡಲಾಗಿದೆ. ದೇಹಕ್ಕೆ ಬೇಕಾಗಿರುವಂತಹ ಪೋಷಕಾಂಶಗಳನ್ನು ತಪ್ಪಿಸಬೇಡಿ ಮತ್ತು ತುಪ್ಪ ಕಾಫಿಯಿಂದ ಹೆಚ್ಚಿನದನ್ನು ಪಡೆಯಿರಿ. ಆರೋಗ್ಯಕಾರಿ ಆಹಾರ ಕ್ರಮದ ಜತೆಗೆ ನೀವು ಇದನ್ನು ಕುಡಿಯಿರಿ.

English summary

What Do you know about Ghee Coffee And Its Health Benefits

Coffee is the most popular beverage in the world with millions of coffee drinkers worldwide. Coffee is being experimented in many ways. Bulletproof coffee is one such experimentation of the popular drink which is extremely famous among the keto diet followers. Another type of coffee called ghee coffee is also gaining popularity.
X
Desktop Bottom Promotion