For Quick Alerts
ALLOW NOTIFICATIONS  
For Daily Alerts

ರಕ್ತನಾಳಗಳ ಉಬ್ಬುವಿಕೆಗೆ ಕಾರಣಗಳು, ಲಕ್ಷಣಗಳು, ಚಿಕಿತ್ಸೆ ಮತ್ತು ತಡೆಯಲು ಸಲಹೆ

|

ನಮ್ಮ ದೇಹದಲ್ಲಿ ಪ್ರತಿಯೊಂದು ಅಂಗಾಂಗಗಳು ಅತೀ ಅಗತ್ಯವಾಗಿರುವುದು. ಮುಖ್ಯವಾಗಿ ಸಣ್ಣ ಅಂಗಾಂಗಳಿಂದ ಹಿಡಿದು ದೊಡ್ಡ ಅಂಗಾಂಗಗಳ ತನಕ ಪ್ರತಿಯೊಂದರ ಕಾರ್ಯ ಮಹತ್ವದ್ದಾಗಿದೆ. ಇಲ್ಲಿ ಒಂದು ಅಂಗಾಂಗ ತನ್ನ ಕಾರ್ಯ ನಿಲ್ಲಿಸಿದರೆ ಆಗ ಅದರಿಂದ ದೊಡ್ಡ ಮಟ್ಟದಲ್ಲಿ ಆರೋಗ್ಯ ಏರುಪೇರು ಕಾಣಿಸಿಕೊಳ್ಳುವುದು. ಹೀಗಾಗಿ ಯಾವುದೇ ಅಂಗಾಂಗವನ್ನು ನಾವು ಕಡೆಗಣಿಸುವಂತಿಲ್ಲ.

Varicose Veins

ರಕ್ತನಾಳಗಳು ನಮ್ಮ ದೇಹದ ಪ್ರತಿಯೊಂದು ಅಂಗಾಂಗಳಿಗೆ ರಕ್ತ ಸರಬರಾಜಿನ ಕೆಲಸ ಮಾಡುವುದು. ಆದರೆ ಕೆಲವೊಂದು ಸಲ ರಕ್ತನಾಳಗಳು ಉಬ್ಬಿಕೊಂಡು, ಗಂಟು ಕಟ್ಟಿಕೊಂಡಿರುವುದು. ಇಂತಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದು ಕಾಲಿನಲ್ಲಿ. ನಿಂತುಕೊಂಡೇ ಕೆಲಸ ಮಾಡುವುದು ಮತ್ತು ನಡೆಯುವ ವೇಳೆ ಉಬ್ಬಿಕೊಂಡಿರುವ ರಕ್ತನಾಳಗಳ ಮೇಲೆ ಪರಿಣಾಮ ಬೀರುವುದು.

ಕೆಲವು ಜನರಲ್ಲಿ ಉಬ್ಬಿರುವ ರಕ್ತನಾಳ (ವೆರಿಕೋಸ್ ವೇನ್ಸ್) ಮತ್ತು ಗಂಟುಕಟ್ಟಿದ್ದ ರಕ್ತನಾಳವು ಕಾಣಿಸುವುದು. ಇದನ್ನು ಸಾಮಾನ್ಯವಾಗಿ ಜೇಡರ ರಕ್ತನಾಳವೆಂದು ಕೂಡ ಕರೆಯುವರು. ಇಂತಹ ರಕ್ತನಾಳಗಳು ಸೌಂದರ್ಯದ ಮೇಲೆ ಕೂಡ ಗಂಭೀರ ಪರಿಣಾಮ ಬೀರುವುದು. ಇನ್ನು ಕೆಲವರಲ್ಲಿ ಉಬ್ಬಿರುವ ರಕ್ತನಾಳಗೂ ನೋವು ಮತ್ತು ಕಿರಿಕಿರಿ ಉಂಟು ಮಾಡುವುದು. ಕೆಲವೊಂದು ಸಂದರ್ಭದಲ್ಲಿ ಉಬ್ಬಿರುವ ರಕ್ತನಾಳಗಳು ತುಂಬಾ ಗಂಭೀರ ಸಮಸ್ಯೆ ಉಂಟು ಮಾಡುವುದು.

ರಕ್ತನಾಳಗಳ ಉಬ್ಬುವಿಕೆಯ ಲಕ್ಷಣಗಳು

ರಕ್ತನಾಳಗಳ ಉಬ್ಬುವಿಕೆಯ ಲಕ್ಷಣಗಳು

ಉಬ್ಬಿರುವ ರಕ್ತನಾಳಗೂ ಯಾವುದೇ ನೋವು ಉಂಟು ಮಾಡುವುದಿಲ್ಲ. ಆದರೆ ಉಬ್ಬಿರುವ ರಕ್ತನಾಳಗ ಲಕ್ಷಣಗಳು ಈ ರೀತಿಯಾಗಿ ಇದೆ.

* ರಕ್ತನಾಳಗಳು ಕಡುನೇರಳೆ ಅಥವಾ ನೀಲಿ ಬಣ್ಣ ಹೊಂದಿರುವುದು

* ರಕ್ತನಾಳಗಳು ಗಂಟು ಕಟ್ಟಿರಬಹುರು ಅಥವಾ ತಿರುಚಿಕೊಂಡಿರಬಹುದು.

* ನೋವಿನ ಅಥವಾ ಬೇರೆ ಲಕ್ಷಣಗಳು ಕಾಣಿಸಿಕೊಳ್ಳುವುದು.

* ಸೆಳೆತ ಅಥವಾ ಕಾಲು ಭಾರವಾಗುವಂತಹ ಭಾವನೆ

* ಉರಿ, ಸಿಡಿತ, ಸ್ನಾಯು ಸೆಳೆತ ಮತ್ತು ಕಾಲುಗಳ ಕೆಳಗಿನ ಭಾಗದಲ್ಲಿ ಊತ ಉಂಟಾಗುವುದು.

* ದೀರ್ಘ ಸಮಯ ನಿಂತ ಅಥವಾ ಕುಳಿತುಕೊಂಡ ಬಳಿಕ ನೋವು ಮತ್ತಷ್ಟು ತೀವ್ರವಾಗುವುದು.

* ರಕ್ತನಾಳಗಳಲ್ಲಿ ತುರಿಕೆ ಕಾಣಿಸಿಕೊಳ್ಳುವುದು.

* ರಕ್ತನಾಳದ ಸುತ್ತಲಿನ ಚರ್ಮದ ವರ್ಣ ಕುಂದುವುದು.

ರಕ್ತನಾಳಗಳ ಉಬ್ಬುವಿಕೆಗೆ ಕಾರಣಗಳು

ರಕ್ತನಾಳಗಳ ಉಬ್ಬುವಿಕೆಗೆ ಕಾರಣಗಳು

ದುರ್ಬಲ ಅಥವಾ ಹಾನಿಗೀಡಾಗಿರುವ ಕವಾಟಗಳಿಂದಾಗಿ ಉಬ್ಬಿರುವ ರಕ್ತನಾಳದ ಸಮಸ್ಯೆ ಕಾಣಿಸಿಕೊಳ್ಳುವುದು. ಅಪಧಮನಿಗಳು ಹೃದಯದಿಂದ ರಕ್ತವನ್ನು ಬೇರೆ ಅಂಗಾಂಗಳಿಗೆ ಪೂರೈಕೆ ಮಾಡುವುದು ಮತ್ತು ರಕ್ತನಾಳಗಳು ದೇಹದ ಬೇರೆ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ಪೂರೈಕೆ ಮಾಡುವುದು. ಇದರಿಂದ ರಕ್ತವನ್ನು ಮರುಬಳಕೆ ಮಾಡಿಕೊಳ್ಳಲು ಸಾಧ್ಯವಾಗುವುದು. ಹೃದಯಕ್ಕೆ ರಕ್ತವನ್ನು ಸಾಗಿಲು ಕಾಲಿನಲ್ಲಿ ರಕ್ತನಾಳಗಳು ಗುರುತ್ವಾಕರ್ಷಣೆ ವಿರುದ್ಧ ಕೆಲಸ ಮಾಡಬೇಕಾಗುತ್ತದೆ.

ಕಾಲುಗಳ ಕೆಳಗಿನ ಭಾಗದಲ್ಲಿರುವಂತಹ ಸ್ನಾಯು ಸಂಕೋಚನವು ಪಂಪ್ ನಂತೆ ಕೆಲಸ ಮಾಡುತ್ತದೆ ಮತ್ತು ಸಂಕೋಚನಗೊಂಡಿರುವ ನಾಡಿಯ ಗೋಡೆಗಳು ರಕ್ತವು ಹೃದಯಕ್ಕೆ ಮರಳಲು ನೆರವಾಗುವುದು. ನಾಡಿಯಲ್ಲಿ ಇರುವಂತಹ ತೆಳುವಾದ ಕವಾಟಗಳು ಹೃದಯಕ್ಕೆ ರಕ್ತ ಪೂರೈಕೆ ಆಗುವ ವೇಳೆ ತೆರೆದುಕೊಳ್ಳುವುದು ಮತ್ತು ರಕ್ತವು ಮರಳಿ ಬರದಂತೆ ಅದು ಮುಚ್ಚಿಕೊಳ್ಳುವುದು. ಈ ಕವಾಟಗಳು ದುರ್ಬಲಗೊಂಡರೆ ಅಥವಾ ಹಾನಿಯಾದರೆ ಆಗ ರಕ್ತವು ಹಿಮ್ಮುಖವಾಗಿ ಹರಿಯುವುದು ಮತ್ತು ನಾಡಿಗಳಲ್ಲಿ ಜಮೆಯಾಗುವುದು. ಇದರಿಂದಾಗಿ ನಾಡಿಗಳು ತಿರುಚುವುದು ಅಥವಾ ಗಂಟು ಕಟ್ಟುವುದು.

ರಕ್ತನಾಳಗಳ ಉಬ್ಬುವಿಕೆಯ ಅಪಾಯಗಳು

ರಕ್ತನಾಳಗಳ ಉಬ್ಬುವಿಕೆಯ ಅಪಾಯಗಳು

ನಾಡಿಗಳು ಯಾಕೆ ಹಿಗ್ಗುವುದು ಮತ್ತು ಕವಾಟಗಳಿಗೆ ತೊಂದರೆ ಯಾಕೆ ಆಗುತ್ತದೆ ಎಂದು ತಜ್ಞರಿಗೂ ತಿಳಿದಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ಇದಕ್ಕೆ ಯಾವುದೇ ಸ್ಪಷ್ಟ ಕಾರಣಗಳು ಇಲ್ಲ. ಅದಾಗ್ಯೂ, ಕೆಲವೊಂದು ಅಪಾಯಗಳು ಇದರಿಂದ ಬರುವುದು.

* ಲಿಂಗ: ಪುರುಷರಿಗಿಂತ ಹೆಚ್ಚಾಗಿ ಈ ಸಮಸ್ಯೆಯು ಮಹಿಳೆಯರಿಗೆ ಕಾಡುವುದು. ಮಹಿಳೆಯರಲ್ಲಿನ ಹಾರ್ಮೋನ್ ಗಳು ನಾಡಿಗಳಿಗೆ ಆರಾಮ ನೀಡುವುದು ಇದಕ್ಕೆ ಕಾರಣವಾಗಿರಬಹುದು. ಗರ್ಭನಿರೋಧಕ ಮಾತ್ರೆಗಳು ಅಥವಾ ಹಾರ್ಮೋನ್ ಥೆರಪಿಯು ಇದಕ್ಕೆ ಕಾರಣವಾಗಿರಬಹುದು.

* ಅನುವಂಶಿಕತೆ, ಬೊಜ್ಜು

ದೇಹದ ತೂಕ ಅತಿಯಾಗಿರುವುದು, ಬೊಜ್ಜು ಅಥವಾ ಅನುವಂಶಿಕವಾಗಿ ಸಹ ಉಬ್ಬುವ ರಕ್ತನಾಳಗಳ ಸಮಸ್ಯೆಯನ್ನು ಹೆಚ್ಚು ಕಾಡುವುದು.

* ವಯಸ್ಸು

ವಯಸ್ಸಾಗುತ್ತಾ ಹೋದಂತೆ ಈ ಅಪಾಯವು ಹೆಚ್ಚಾಗುವುದು. ಯಾಕೆಂದರೆ ನಾಡಿನ ಕವಾಟಗಳಲ್ಲಿ ಹಾನಿಯಾಗುವುದು.

* ಕೆಲವು ಉದ್ಯೋಗ

ದಿನವಿಡೀ ನಿಂತುಕೊಂಡು ಕೆಲಸ ಮಾಡುವ ಪರಿಣಾಮವಾಗಿ ಉಬ್ಬುವ ರಕ್ತನಾಳದ ಸಮಸ್ಯೆಯು ಕಾಣಿಸಿಕೊಳ್ಳಬಹುದು.

* ಗರ್ಭಧಾರಣೆ

ಗರ್ಭಧಾರಣೆ ವೇಳೆ ರಕ್ತದ ಪ್ರಮಾಣವು ದೇಹದಲ್ಲಿ ಹೆಚ್ಚಾಗುವುದು, ಇದು ಭ್ರೂಣವು ಬೆಳೆಯಲು ನೆರವು ನೀಡುವುದು. ಆದರೆ ಕೆಲವೊಂದು ಅಡ್ಡಪರಿಣಾಮಗಳು ಕೂಡ ಇದರಿಂದಾಗಿ ಉಂಟಾಗಬಹುದು, ಅದರಿಂದ ಕಾಲುಗಳಲ್ಲಿ ರಕ್ತನಾಳಗಳು ಉಬ್ಬಬಹುದು.

* ಬೊಜ್ಜು

ದೇಹದ ತೂಕ ಅತಿಯಾಗಿರುವ ಪರಿಣಾಮವಾಗಿ ರಕ್ತನಾಳಗಳ ಮೇಲೆ ಇದು ಒತ್ತಡ ಹಾಕಬಹುದು.

ರಕ್ತನಾಳಗಳ ಉಬ್ಬುವಿಕೆಯಿಂದಾಗುವ ತೊಡಕುಗಳು

ರಕ್ತನಾಳಗಳ ಉಬ್ಬುವಿಕೆಯಿಂದಾಗುವ ತೊಡಕುಗಳು

ಹಿಂಗಾಲಿನ ಸಮೀಪದಲ್ಲಿ ಯಾವುದೇ ರೀತಿಯ ಗಾಯವಿದ್ದರೆ ಅದರ ನೋವಿನಿಂದಾಗಿ ಅದು ರಕ್ತನಾಳದ ಉಬ್ಬುವಿಕೆಗೆ ಕಾರಣವಾಗಬಹುದು. ಕೆಲವೊಂದು ಸಂದರ್ಭದಲ್ಲಿ ಕಾಲಿನ ರಕ್ತನಾಳಗಳು ಅದಾಗಿಯೇ ಉಬ್ಬಿಕೊಳ್ಳುವುದು, ಇದರಿಂದಾಗಿ ಕಾಲಿನಲ್ಲಿ ನೋವು ಮತ್ತು ಊತ ಕಾಣಿಸಿಕೊಳ್ಳುವುದು. ಚರ್ಮಕ್ಕೆ ತುಂಬಾ ಹತ್ತಿರದಲ್ಲಿ ಇರುವಂತಹ ರಕ್ತನಾಳವು ಒಡೆದು ರಕ್ತ ಒಸರಿ ಬರಬಹುದು. ಆದರೆ ಈ ವೇಳೆ ನೀವು ವೈದ್ಯರ ಸಲಹೆ ಪಡೆಯುವುದು ಅತೀ ಅಗತ್ಯವಾಗಿರುವುದು.

ರಕ್ತನಾಳಗಳ ಉಬ್ಬುವಿಕೆಗೆ ಲಭ್ಯವಿರುವ ಚಿಕಿತ್ಸೆಗಳು

ರಕ್ತನಾಳಗಳ ಉಬ್ಬುವಿಕೆಗೆ ಲಭ್ಯವಿರುವ ಚಿಕಿತ್ಸೆಗಳು

ರೋಗಿಗೆ ಯಾವುದೇ ಲಕ್ಷಣಗಳು ಅಥವಾ ಅಸ್ವಸ್ಥತೆ ಇಲ್ಲದಿದ್ದರೆ ಮತ್ತು ಉಬ್ಬಿರುವ ರಕ್ತನಾಳಗಳ ದೃಷ್ಟಿಯಿಂದ ತೊಂದರೆಯಾಗದಿದ್ದರೆ ಚಿಕಿತ್ಸೆಯ ಅಗತ್ಯವಿಲ್ಲ. ಆದರೆ, ರೋಗಲಕ್ಷಣಗಳು ಇದ್ದು, ನೋವು ಅಥವಾ ಅಸ್ವಸ್ಥತೆಯನ್ನು ಕಡಿಮೆ ಮಾಡಲು, ಕಾಲುಗಳ ಹುಣ್ಣು, ಚರ್ಮದ ಬಣ್ಣ ಅಥವಾ ಇತರೆ ತೊಂದರೆಗಳನ್ನು ಪರಿಹರಿಸಲು ಚಿಕಿತ್ಸೆಯ ಅಗತ್ಯವಿರುತ್ತದೆ.

ಶಸ್ತ್ರಚಿಕಿತ್ಸೆ

ಶಸ್ತ್ರಚಿಕಿತ್ಸೆ

ಉಬ್ಬಿರುವ ರಕ್ತನಾಳಗಳು ದೊಡ್ಡದಾಗಿದ್ದರೆ, ಅವುಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಬೇಕಾಗಬಹುದು ಹಾಗೂ ಇದನ್ನು ಸಾಮಾನ್ಯವಾಗಿ ಸಾಮಾನ್ಯ ಅರಿವಳಿಕೆ ಅಡಿಯಲ್ಲಿ ಮಾಡಲಾಗುತ್ತದೆ. ಈ ಚಿಕಿತ್ಸೆಯ ನಂತರ ಹೆಚ್ಚಿನ ಸಂದರ್ಭಗಳಲ್ಲಿ ರೋಗಿಯು ಅಂದೇ ಮನೆಗೆ ಹೋಗಬಹುದಾಗಿರುತ್ತದೆ. ಎರಡೂ ಕಾಲುಗಳಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದರ ಆಸ್ಪತ್ರೆಯಲ್ಲಿ ದಾಖಲಾಗಬೇಕಾಗುತ್ತದೆ.

ಸಣ್ಣ ರಕ್ತನಾಳಗಳನ್ನು ಮುಚ್ಚಲು ಲೇಸರ್ ಚಿಕಿತ್ಸೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ ಮತ್ತು ಜೇಡ ರಕ್ತನಾಳಗಳಿಗೆ ಮಲಿನ ರಕ್ತನಾಳದ ಮೇಲೆ ಬೆಳಕಿನ ಬಲವಾದ ಸ್ಫೋಟಗಳನ್ನು ಅನ್ವಯಿಸಲಾಗುತ್ತದೆ, ಕಾಲಾನಂತರ ಅದು ಮಸುಕಾಗುತ್ತದೆ.

ಬಂಧನ ಮತ್ತು ಹೊರತೆಗೆಯುವಿಕೆ

ಬಂಧನ ಮತ್ತು ಹೊರತೆಗೆಯುವಿಕೆ

ರಕ್ತನಾಳದ ಮೇಲ್ಭಾಗದಲ್ಲಿರುವ ರೋಗಿಯ ತೊಡೆಸಂದು ಬಳಿ ಮತ್ತು ಪಾದದ ಕೆಳಗೆ ಅಥವಾ ಮೊಣಕಾಲಿನವರೆಗೆ ಎರಡು ಕಡೆ ಛೇಧಿಸಿ, ರಕ್ತನಾಳದ ಮೇಲ್ಭಾಗವನ್ನು ಕಟ್ಟಿ ಮುಚ್ಚಲಾಗುತ್ತದೆ. ತೆಳುವಾದ ತಂತಿಯನ್ನು ರಕ್ತನಾಳದ ಕೆಳಭಾಗದಲ್ಲಿ ಥ್ರೆಡ್ ಮಾಡಿ ನಂತರ ಹೊರತೆಗೆಯಲಾಗುತ್ತದೆ, ಅದರೊಂದಿಗೆ ರಕ್ತನಾಳವನ್ನು ತೆಗೆದುಕೊಳ್ಳುತ್ತದೆ.

ಈ ಕ್ರಿಯೆಯು ಕೆಲವೊಮ್ಮೆ ಮೂಗೇಟುಗಳು, ರಕ್ತಸ್ರಾವ ಮತ್ತು ನೋವುಗಳಿಗೆ ಕಾರಣವಾಗಬಹುದು. ಅತ್ಯಂತ ಅಪರೂಪ ಸಂದರ್ಭಗಳಲ್ಲಿ, ಆಳವಾದ ರಕ್ತನಾಳದ ಥ್ರಂಬೋಸಿಸ್ ಇರಬಹುದು. ಈ ಸಂದರ್ಭದಲ್ಲಿ ರೋಗಿಗೆ 1ರಿಂದ 3 ವಾರಗಳ ವಿಶ್ರಾಂತಿ ಅಗತ್ಯವಿರುತ್ತದೆ.

ಸ್ಕ್ಲೇರೋಪತಿ

ಸ್ಕ್ಲೇರೋಪತಿ

ಸಣ್ಣ ಮತ್ತು ಮಧ್ಯಮ ಗಾತ್ರದ ಉಬ್ಬಿರುವ ರಕ್ತನಾಳಗಳಿಗೆ ರಾಸಾಯನಿಕ ಚುಚ್ಚಮದ್ದನ್ನು ಚುಚ್ಚಲಾಗುತ್ತದೆ, ಅದು ಅವುಗಳನ್ನು ಗುರುತು ಮಾಡುತ್ತದೆ ಮತ್ತು ಮುಚ್ಚುತ್ತದೆ. ಕೆಲವು ವಾರಗಳ ನಂತರ, ಅವು ಮಸುಕಾಗಬೇಕು. ರಕ್ತನಾಳವನ್ನು ಒಂದಕ್ಕಿಂತ ಹೆಚ್ಚು ಬಾರಿ ಚುಚ್ಚಬೇಕಾಗಬಹುದು.

ರೇಡಿಯೊಫ್ರೀಕ್ವೆನ್ಸಿ ಅಬ್ಲೇಶನ್

ರೇಡಿಯೊಫ್ರೀಕ್ವೆನ್ಸಿ ಅಬ್ಲೇಶನ್

ಸಾಮಾನ್ಯವಾಗಿ ದೊಡ್ಡ ಉಬ್ಬಿರುವ ರಕ್ತನಾಳಗಳಿಗೆ ಈ ಚಿಕಿತ್ಸೆಗೆ ಆದ್ಯತೆ ನೀಡಲಾಗುತ್ತದೆ. ಅಲ್ಟ್ರಾಸೌಂಡ್ ಸ್ಕ್ಯಾನ್ ಸಹಾಯದಿಂದ ಮೊಣಕಾಲಿನ ಮೇಲೆ ಅಥವಾ ಕೆಳಗೆ ಸಣ್ಣದಾಗಿ ಸೀಳಲಾಗುತ್ತದೆ, ಕಿರಿದಾದ ಟ್ಯೂಬ್ ಅನ್ನು ರಕ್ತನಾಳಕ್ಕೆ ಎಳೆಯಲಾಗುತ್ತದೆ. ನಂತರ ರೇಡಿಯೊಫ್ರೀಕ್ವೆನ್ಸಿ ಶಕ್ತಿಯು ರಕ್ತನಾಳವನ್ನು ಬಿಸಿಮಾಡುತ್ತದೆ, ಅದರ ಗೋಡೆಗಳು ಕುಸಿಯಲು ಕಾರಣವಾಗಿ ಪರಿಣಾಮಕಾರಿಯಾಗಿ ಮುಚ್ಚಲು ಸಹಕಾರಿಯಾಗುತ್ತದೆ. ರೇಡಿಯೊಫ್ರೀಕ್ವೆನ್ಸಿ ಅಬ್ಲೇಶನ್ ಅನ್ನು ಸಾಮಾನ್ಯವಾಗಿ ಅರಿವಳಿಕೆ ಮೂಲಕ ಮಾಡಲಾಗುತ್ತದೆ.

ರಕ್ತನಾಳಗಳ ಉಬ್ಬುವಿಕೆ ತಡೆಯುವುದು ಹೇಗೆ

ರಕ್ತನಾಳಗಳ ಉಬ್ಬುವಿಕೆ ತಡೆಯುವುದು ಹೇಗೆ

* ರಕ್ತನಾಳ ಉಬ್ಬುವ ಸಮಸ್ಯೆ ನಿವಾರಣೆ ಮಾಡಲು ಹೆಚ್ಚು ನಾರಿನಾಂಶ ಮತ್ತು ಕಡಿಮೆ ಉಪ್ಪಿನಾಂಶವಿರುವ ಆಹಾರ ಸೇವಿಸಬೇಕು.

* ಎತ್ತರ ಹಿಮ್ಮಡಿಯ ಚಪ್ಪಲಿ ಮತ್ತು ಬಿಗಿ ಬಟ್ಟೆ ಧರಿಸಬೇಡಿ.

* ವ್ಯಾಯಾಮ ಮಾಡಿ. ಹೆಚ್ಚು ನಡೆಯಿರಿ.

* ಆರೋಗ್ಯಕರ ತೂಕ ಕಾಪಾಡಿ.

* ದೀರ್ಘಕಾಲ ತನಕ ನಿಲ್ಲುವುದನ್ನು ಕಡೆಗಣಿಸಿ.

* ಕಾಲುಗಳನ್ನು ಒಂದರ ಮೇಲೆ ಮತ್ತೊಂದನ್ನು ಹಾಕಿ ಕುಳಿತುಕೊಳ್ಳಬೇಡಿ.

* ತಲೆದಿಂಬಿನ ಮೇಲೆ ಕಾಲು ಇಟ್ಟು ಕುಳಿತುಕೊಳ್ಳಿ ಅಥವಾ ಮಲಗಿ.

ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು?

ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು?

ವ್ಯಾಯಮ, ಕಾಲುಗಳನ್ನು ಮೇಲೆ ಕೆಳಗೆ ಮಾಡುವುದು ಅಥವಾ ಬಿಸಿ ನೀರು ಅಥವಾ ಬೇರೆ ಯಾವುದೇ ವಿಧಾನದಿಂದ ಶಾಖ ಕೊಡುವ ಮೂಲಕವಾಗಿ ನೋವು ಕಡಿಮೆ ಮಾಡಬಹುದು ಮತ್ತು ಇದು ಮತ್ತಷ್ಟು ತೀವ್ರವಾಗುವುದನ್ನು ತಡೆಯಬಹುದು.

ನೀವು ಈ ರೀತಿ ವಿಧಾನ ಅನುಸರಿಸಿದ ಬಳಿಕವೂ ಸಮಸ್ಯೆಯು ಹಾಗೆ ಇದ್ದರೆ ಮತ್ತು ಚಿಂತೆ ಆಗುತ್ತಲಿದ್ದರೆ ಆಗ ನೀವು ವೈದ್ಯರನ್ನು ಭೇಟಿ ಮಾಡಿ ಇದು ಮತ್ತಷ್ಟು ತೀವ್ರ ಸ್ವರೂಪಕ್ಕೆ ಹೋಗುವುದನ್ನು ತಡೆಯಲೇಬೇಕು.

English summary

Varicose Veins: Treatment, Causes, Symptoms and Prevention

Varicose veins are twisted, enlarged veins. Any superficial vein may become varicosed, but the veins most commonly affected are those in your legs. That's because standing and walking upright increases the pressure in the veins of your lower body.
X
Desktop Bottom Promotion