For Quick Alerts
ALLOW NOTIFICATIONS  
For Daily Alerts

ಮಹಿಳಾ ದಿನದ ವಿಶೇಷ: ಪೀರಿಯಡ್ ಅಂಡರ್ ವೇರ್ ಬಿಡುಗಡೆ ಮಾಡಿದ ಉನ್ಮೋದ ಸಂಸ್ಥೆ

|

ಮಹಿಳೆಯರ ಪಾಲಿಗೆ ವರದಾನವಾಗುವ ವಸ್ತುವೊಂದನ್ನು ಇಂದು ಬಿಡುಗಡೆ ಮಾಡಲಾಗಿದೆ. ಅದೇ ಪೀರಿಯಡ್ ಅಂಡರ್ ವೇರ್. ಇದು ಎನ್‌ಸಿ ಜಾನ್ ಅವರ ಸುಸ್ಥಿರ ಮತ್ತು ನೈತಿಕ ಫ್ಯಾಷನ್ ಮತ್ತು ಉಡುಪು ಬ್ರಾಂಡ್ ಆದ ಉನ್ಮೋದ & ಸನ್ಸ್ ಪ್ರೈವೇಟ್ ಲಿಮಿಟೆಡ್ನ, ಸುಸ್ಥಿರ ಮುಟ್ಟಿನ ದಿನಗಳಿಗಾಗಿ ಡಿಸೈನ್ ಮಾಡಲಾದ ಒಳಉಡುಪಾಗಿದೆ. ಇದು ಮರುಬಳಕೆ ಮಾಡಬಹುದಾದ ಮುಟ್ಟಿನ ಸಮಯದಲ್ಲಿ ಬಳಸಬಹುದಾದ ಒಳ ಉಡುಪು ಆಗಿದ್ದು, ಆರಾಮದಾಯಕ, ಬಾಳಿಕೆ ಬರುವ ವಸ್ತುವಾಗಿದೆ. ಇದು 4 ಪದರಗಳಿಂದ ಮಾಡಲ್ಪಟ್ಟಿದ್ದು, ಸ್ಟೇನ್-ಫ್ರೀ, ಲೀಕ್-ಪ್ರೂಫ್, ವಾಸನೆ-ಮುಕ್ತ ಮತ್ತು ಬ್ಯಾಕ್ಟೀರಿಯಾ ವಿರೋಧಿ ರಕ್ಷಣೆಯನ್ನು ನೀಡುತ್ತದೆ.

Unmoda Launches Sustainable Period Underwear

ಪರಿಸರ ಸ್ನೇಹಿ ವಸ್ತು:

ಮುಟ್ಟಿನ ಸಮಯದಲ್ಲಿ ಮಹಿಳೆಯರ ಕಷ್ಟಕ್ಕೆ ಪರಿಹಾರ ಪ್ರತಿಕ್ರಿಯೆಯಾಗಿ ಈ ಬ್ರಾಂಡ್ ಅನ್ನು ಸ್ಥಾಪಿಸಲಾಯಿತು. ಋತುಸ್ರಾವದ ನೈರ್ಮಲ್ಯ ಉತ್ಪನ್ನಗಳು ಭಾರತದ ಪುರಸಭೆಯ ತ್ಯಾಜ್ಯಗಳಲ್ಲಿ 6% ನಷ್ಟು ಕೊಡುಗೆ ನೀಡುತ್ತವೆ. ಹೆಣ್ಣುಮಕ್ಕಳ ಮತ್ತು ಮಹಿಳೆಯರ ಬೇಡಿಕೆಯನ್ನು ಪೂರೈಸಲು ತಿಂಗಳಿಗೆ 1 ಮಿಲಿಯನ್ ಸ್ಯಾನಿಟರಿ ಪ್ಯಾಡ್‌ಗಳನ್ನು ಉತ್ಪಾದಿಸಲಾಗುತ್ತದೆ. ಪರಿಣಾಮವಾಗಿ ವಾರ್ಷಿಕವಾಗಿ 12 ಬಿಲಿಯನ್ ಪ್ಯಾಡ್‌ಗಳನ್ನು ಭಾರತದಲ್ಲಿ ಉತ್ಪಾದನೆ ಮತ್ತು ವಿಲೇವಾರಿ ಮಾಡುತ್ತದೆ. ಇದು ಯೋಚನೆ ಮಾಡಬೇಕಾದ ವಿಚಾರ ಏಕೆಂದರೆ ಒಂದು ಪ್ಯಾಡ್ ಕೊಳೆಯಲು ಸುಮಾರು 800 ವರ್ಷಗಳು ತೆಗೆದುಕೊಳ್ಳಬಹುದು. ಇದೇ ಕಾರಣಕ್ಕಾಗಿ ಎಲ್ಲರಿಗೂ ಸುಲಭವಾಗಿ ದೊರಕುವ ಮತ್ತು ಪರಿಸರಕ್ಕೆ ಉತ್ತಮವಾದ ಉತ್ಪನ್ನ ನೀಡುವಲ್ಲಿ ಉನ್ಮೋದ ಶ್ರಮಿಸುತ್ತದೆ.

ಸಿ.ಇ.ಒ ಮಾತು:

"ನಮ್ಮ ಗ್ರಹದ ಭವಿಷ್ಯವನ್ನು ಉಳಿಸಲು ನಾವು ಪ್ರತಿಯೊಬ್ಬರೂ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಮತ್ತು ಸಕ್ರಿಯ ಪಾತ್ರ ವಹಿಸಬೇಕು. ವ್ಯಕ್ತಿ ಮತ್ತು ಭೂಮಿಯ ಪರಿ ಮೇಲೆ ಣಾಮ ಬೀರುವ ಉಡುಪುಗಳನ್ನು ತಯಾರಿಸಲು ಉನ್ಮೋದ ತಂಡ ಬಯಸುತ್ತದೆ. ಫ್ಯಾಷನ್ ಉದ್ಯಮ ಮತ್ತು ನಮ್ಮ ಮನಸ್ಥಿತಿಗಳ ಈ ಕ್ರಾಂತಿಯ ಆರಂಭಿಕ ಹಂತವೆಂದರೆ ಈ ಪೀರಿಯಡ್ ಅಂಡರ್ ವೇರ್ ಆಗಿದೆ'' ಎಂದು ಎನ್ ಸಿ ಜಾನ್ & ಸನ್ಸ್ ಗಾರ್ಮೆಂಟ್ ವಿಭಾಗದ ಸಿಇಒ ಮತ್ತು ಉನ್ಮೋದದ ಸಂಸ್ಥಾಪಕ ಅಲೆಕ್ಸಾಂಡರ್ ನೆರೋತ್ ಹೇಳುತ್ತಾರೆ.

ಇದರ ಉದ್ದೇಶ:

ಸುಲಭವಾಗಿ ದೊರಕುವ ಪರಿಹಾರವನ್ನು ರಚಿಸುವುದು, ಜನರ ಮೇಲೆ ಸಕಾರಾತ್ಮಕವಾಗಿ ಪರಿಣಾಮ ಬೀರುವ ಪ್ರಬಲ ಮಾರ್ಗವಾಗಿದೆ. ಈ ಪೀರಿಯಡ್ ಅಂಡರ್ ವೇರ್ ನಂತಹ ಸುಸ್ಥಿರ ಉಡುಪುಗಳನ್ನು ಅಳವಡಿಸಿಕೊಳ್ಳುವುದು ವ್ಯಕ್ತಿಯ ಜೀವನದಲ್ಲಿ ಆಳವಾದ ಮತ್ತು ದೀರ್ಘಕಾಲೀನ ಪ್ರಭಾವವನ್ನು ಉಂಟುಮಾಡುವ ಮಾಧ್ಯಮವಾಗಿದೆ, ಆದರೆ ಪರಿಸರದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಉತ್ತಮ ಭವಿಷ್ಯದತ್ತ ಹೆಜ್ಜೆ ಹಾಕಲು ದೃಢನಿಶ್ಚಯದಲ್ಲಿರುವವರಿಗೆ ಉನ್ಮೋದ ಧ್ವನಿಯಾಗುವ ಉದ್ದೇಶ ಹೊಂದಿದೆ. ಇವರು ಉತ್ಪಾದಿಸುವ ಪ್ರತಿಯೊಂದು ತುಣುಕು ಕೇವಲ ಬಟ್ಟೆಗಿಂತ ಹೆಚ್ಚಾಗಿರಬೇಕು ಎಂದು ಬಯಸುತ್ತಾರೆ. ಇದು ಜನರಿಗೆ ಅಧಿಕಾರ ನೀಡುವ ಮತ್ತು ಸಕಾರಾತ್ಮಕ ಬದಲಾವಣೆಗೆ ಕಾರಣವಾಗುವ ರೀತಿಯಲ್ಲಿರಬೇಕು ಎಂದು ಬಯಸುತ್ತಾರೆ.

ಎನ್.ಸಿ. ಜಾನ್ ಬಗ್ಗೆ:

ಎನ್.ಸಿ. ಜಾನ್ & ಸನ್ಸ್ 75 ವರ್ಷಕ್ಕಿಂತಲೂ ಹಳೆಯದಾದ ಫ್ಯಾಮಿಲಿ ರನ್ಡ್ ವ್ಯವಹಾರವಾಗಿದ್ದು, ಕಳೆದ 29 ವರ್ಷಗಳಿಂದ ಉಡುಪಿನಲ್ಲಿದೆ. ಇವರು ನೈಸರ್ಗಿಕ ನೆಲದ ಹೊದಿಕೆಗಳು ಮತ್ತು ಸುಸ್ಥಿರ ಉಡುಪುಗಳನ್ನು ತಯಾರಿಸುತ್ತಾರೆ. ಉಡುಪುಗಳ 100% ಸುಸ್ಥಿರ ತಯಾರಕರಲ್ಲಿ ಒಬ್ಬರಾಗಿದ್ದು, ದೊಡ್ಡ ಪ್ರಮಾಣದ ಸುಸ್ಥಿರ ಮತ್ತು ಪರಿಸರ-ಸ್ನೇಹಿ ವಸ್ತುಗಳನ್ನು ಹೊಂದಿದ್ದಾರೆ. ನಮ್ಮ ಧ್ಯೇಯವಾಕ್ಯವು "ಪ್ರಕೃತಿಯೊಂದಿಗೆ ಸಾಮರಸ್ಯ". ಭೂಮಿಯನ್ನು ರಕ್ಷಿಸಿ, ಪ್ರೋತ್ಸಾಹ ನೀಡುವ ಈ ಸಂಸ್ಥೆ, ಕಂಪನಿಯನ್ನು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯೊಂದಿಗೆ ಜೋಡಿಣೆ ಮಾಡಿದ್ದಾರೆ.

English summary

Unmoda Launches Sustainable Period Underwear

Here we told about Unmoda Launches Sustainable Period Underwear,read on
Story first published: Saturday, March 6, 2021, 14:20 [IST]
X
Desktop Bottom Promotion