For Quick Alerts
ALLOW NOTIFICATIONS  
For Daily Alerts

ಅತಿಯಾದ ವ್ಯಾಯಾಮದಿಂದ ಆಗಬಹುದು ಕಿಡ್ನಿ ಫೈಲ್ಯೂರ್‌, ಹುಷಾರ್!

|

ಮನುಷ್ಯನ ದೇಹ ಒಂದು ಯಂತ್ರವಿದ್ದಂತೆ. ಆಹಾರ ಸೇವನೆಯಿಂದ ಹಿಡಿದು ಮಲ ವಿಸರ್ಜನೆ ಹಾಗೂ ಮೂತ್ರ ವಿಸರ್ಜನೆಯವರೆಗೆ ಎಲ್ಲವೂ ಒಂದು ಪ್ರಕ್ರಿಯೆಯ ರೀತಿ ನಡೆಯುತ್ತದೆ. ನಾವು ಆಹಾರ ಸೇವನೆ ಮಾಡಿದ ಸಂದರ್ಭದಲ್ಲಿ ಅದರಲ್ಲಿನ ಕೆಲವು ಭಾಗ ವಿಷಕಾರಿ ಅಂಶವಾಗಿ ನಮ್ಮ ದೇಹದಲ್ಲಿ ಮಾರ್ಪಾಡಾಗುತ್ತದೆ. ಇದು ಸರಿಯಾದ ಸಮಯಕ್ಕೆ ನಮ್ಮ ಮೂತ್ರ ಪಿಂಡಗಳಿಂದ ಹೊರ ಹೋಗದೆ ಇದ್ದರೆ ಸಾಕಷ್ಟು ಏರುಪೇರು ಉಂಟಾಗುತ್ತದೆ.

ವಿಶೇಷವಾಗಿ ಕಿಡ್ನಿಗಳಲ್ಲಿ ಕಲ್ಲುಗಳು ಕಂಡು ಬಂದು ಕಿಡ್ನಿಗಳು ಊದಿಕೊಳ್ಳುತ್ತವೆ. ಇಂತಹ ಸಮಯದಲ್ಲಿ ವ್ಯಾಯಾಮ ಮಾಡಲು ಹೋದರೆ ಅದರಿಂದ ಕಿಡ್ನಿಗಳ ಮಾಂಸ - ಖಂಡಗಳಿಗೆ ಹಾನಿಯಾಗುತ್ತದೆ. ಮಾಂಸ - ಖಂಡಗಳು ತಮ್ಮಲ್ಲಿನ ಅಂಶಗಳನ್ನು ರಕ್ತದ ಹರಿವಿಗೆ ಬಿಡುಗಡೆ ಮಾಡುವುದರಿಂದ ಆರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸವನ್ನು ನಾವು ಕಾಣಬಹುದು. ಆರೋಗ್ಯದ ಇಂತಹ ಅಸ್ವಸ್ಥತೆಯನ್ನು ವೈದ್ಯಕೀಯ ಭಾಷೆಯಲ್ಲಿ Rhabdomyolysis ಎಂದು ಕರೆಯುತ್ತಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಈ ಸಂದರ್ಭದಲ್ಲಿ ನಿಮ್ಮ ಕಿಡ್ನಿಗಳು ತಮ್ಮಲ್ಲಿನ ವಿಷಕಾರಿ ಅಂಶಗಳನ್ನು ಮತ್ತು ಬೇಡದ ತ್ಯಾಜ್ಯಗಳನ್ನು ನಿಮ್ಮ ದೇಹದಿಂದ ಹೊರ ಹಾಕಲು ಸಾಧ್ಯವಾಗುವುದಿಲ್ಲ.

Rhabdomyolysis ಉಂಟಾಗಲು ಕಾರಣವೇನು?

Rhabdomyolysis ಉಂಟಾಗಲು ಕಾರಣವೇನು?

ಮನುಷ್ಯನಿಗೆ ಎರಡು ರೀತಿಯಲ್ಲಿ Rhabdomyolysis ಸಮಸ್ಯೆ ಉಂಟಾಗುತ್ತದೆ. ಪ್ರತ್ಯಕ್ಷವಾಗಿ ಅಂದರೆ ನೇರವಾಗಿ ಮತ್ತು ಪರೋಕ್ಷವಾಗಿ. ಆದರೆ ಎರಡು ರೀತಿಯಲ್ಲೂ ಸಹ ಮಾಂಸ - ಖಂಡಗಳಿಗೆ ಹಾನಿಯಾಗುವುದು ಖಂಡಿತ. ಉದಾಹರಣೆಗೆ ಯಾವಾಗ ನಮಗೆ ಅಪ್ಪಿ ತಪ್ಪಿ ಅಪಘಾತವಾಗುತ್ತದೆ, ಅಥವಾ ನಾವು ಆಯಾ ತಪ್ಪಿ ಕೆಳಗೆ ಬೀಳುತ್ತೇವೆ, ಇಲ್ಲವೆಂದರೆ ವಿದ್ಯುತ್ ಶಾಕ್ ಹೊಡೆಯುತ್ತದೆ, ಅಥವಾ ಹಾವು ಕಚ್ಚಿದ ಸಂದರ್ಭದಲ್ಲಿ ಇಲ್ಲವೆಂದರೆ ದೀರ್ಘ ಕಾಲದಲ್ಲಿ ನಮ್ಮ ಕೈ ಕಾಲು ಹಿಡಿದುಕೊಳ್ಳುತ್ತದೆ ಅಂತಹ ಸಂದರ್ಭವನ್ನು ನೇರವಾದ ಹಾನಿ ಎಂದು ಕರೆಯುತ್ತೇವೆ.

ಆದರೆ ಪರೋಕ್ಷವಾಗಿ ನಮ್ಮ ಮಾಂಸಖಂಡಗಳಿಗೆ ಹಾನಿಯಾಗುವುದು ಎಂದರೆ ಅತಿಯಾದ ಮದ್ಯಪಾನ, ಅಥವಾ ವೈದ್ಯರನ್ನು ಕೇಳದೆ ಮಾಡದೆ ಔಷಧಿಗಳನ್ನು ತೆಗೆದುಕೊಳ್ಳುವುದು ಮತ್ತು ಇದರಿಂದ ಅಡ್ಡ - ಪರಿಣಾಮಗಳು ಉಂಟಾಗಿ ಮಾಂಸ - ಖಂಡಗಳಿಗೆ ಹಾನಿಯಾಗುವುದು, ಮಾನಸಿಕ ಅಸ್ವಸ್ಥತೆಗೆ ತೆಗೆದುಕೊಳ್ಳುವ ಔಷಧಿಗಳು, ವಿಪರೀತ ಶೆಕೆ ಉಂಟಾಗುವುದು ಬ್ಯಾಕ್ಟೀರಿಯಾ ಅಥವಾ ವೈರಸ್ ಸೋಂಕು ತಾಗುವುದು ಇತ್ಯಾದಿ ಆಗಿರುತ್ತವೆ.

ಬೇರೆ ಬಗೆಯ ರೋಗಲಕ್ಷಣಗಳನ್ನು ಗಮನಿಸುವುದಾದರೆ....

ಬೇರೆ ಬಗೆಯ ರೋಗಲಕ್ಷಣಗಳನ್ನು ಗಮನಿಸುವುದಾದರೆ....

Rhabdomyolysis ಸಮಸ್ಯೆಯ ರೋಗ ಲಕ್ಷಣಗಳು ಒಬ್ಬರಿಂದ ಒಬ್ಬರಿಗೆ ಬದಲಾಗುತ್ತಿರುತ್ತವೆ. ಕೆಲವರಿಗೆ Rhabdomyolysis ಸಮಸ್ಯೆ ಯಾವ ಕಾರಣಕ್ಕೆ ಉಂಟಾಗಿದೆ ಎಂಬುದರ ಆಧಾರದ ಮೇಲೆ ರೋಗ ಲಕ್ಷಣಗಳು ಕಂಡುಬರುತ್ತದೆ. ರೋಗ ಲಕ್ಷಣಗಳು ಕೇವಲ ದೇಹದ ಒಂದು ಭಾಗದಲ್ಲಿ ಮಾತ್ರ ಇರಬಹುದು ಅಥವಾ ಇಡೀ ದೇಹದ ತುಂಬಾ ಹರಡಬಹುದು. ಕೆಲವು ರೋಗ - ಲಕ್ಷಣಗಳು ನಮ್ಮ ಭುಜದಲ್ಲಿ ನೋವನ್ನು ಉಂಟು ಮಾಡಿದರೆ, ಇನ್ನು ಕೆಲವು ನಮ್ಮ ಸೊಂಟದ ಭಾಗದಲ್ಲಿ ಹಾಗೂ ತೊಡೆಗಳ ಭಾಗದಲ್ಲಿ ವಿಪರೀತ ನೋವು ಕಂಡು ಬರಲು ಕಾರಣವಾಗುತ್ತವೆ.

ಇನ್ನೂ ಕೆಲವರಿಗೆ ಕೈಕಾಲುಗಳಲ್ಲಿ ಹೆಚ್ಚು ಸುಸ್ತು ಆಯಾಸ ಕಂಡು ಬರುವ ಜೊತೆಗೆ ಮೂತ್ರದ ಬಣ್ಣ ತುಂಬಾ ಗಾಢವಾಗಿ ಬದಲಾಗುತ್ತದೆ ಕೆಲವರಿಗೆ ಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ಕಂದು ಬಣ್ಣದ ಮೂತ್ರ ಕಂಡುಬಂದರೆ ಇನ್ನು ಕೆಲವರಿಗೆ ಕೆಂಪು ಬಣ್ಣದ ಮೂತ್ರ ತುಂಬಾ ಭಯ ಹುಟ್ಟಿಸುತ್ತದೆ. ಇದರ ಜೊತೆಗೆ ವಾಕರಿಕೆ, ವಾಂತಿ ಹೊಟ್ಟೆ ನೋವಿನ ಜೊತೆಗೆ ಹೃದಯ ಬಡಿತ ಹೆಚ್ಚಾಗುತ್ತದೆ. ಒಂದು ವೇಳೆ ನೀವು ಇಂತಹ ಯಾವುದಾದರೂ ರೋಗ - ಲಕ್ಷಣಗಳನ್ನು ಅನುಸರಿಸುತ್ತಿದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡದೆ ವೈದ್ಯರ ಬಳಿ ಹೋಗಿ ನಿಮ್ಮ ಮೂತ್ರ ಹಾಗೂ ರಕ್ತದ ಪರೀಕ್ಷೆ ಮಾಡಿಸಿಕೊಳ್ಳಿ.

Rhabdomyolysis ಸಮಸ್ಯೆಯನ್ನು ತಡೆಗಟ್ಟುವುದು ಹೇಗೆ?

Rhabdomyolysis ಸಮಸ್ಯೆಯನ್ನು ತಡೆಗಟ್ಟುವುದು ಹೇಗೆ?

ಒಬ್ಬ ವ್ಯಕ್ತಿಗೆ Rhabdomyolysis ಸಮಸ್ಯೆ ಒಮ್ಮೆಲೇ ಹೆಚ್ಚಾಗುವುದಿಲ್ಲ. ಒಮ್ಮೆ ಪ್ರಾರಂಭವಾಗಿ ಕ್ರಮೇಣವಾಗಿ ಬಗೆಬಗೆಯ ರೋಗ - ಲಕ್ಷಣಗಳು ಸಹಿತ ದೇಹದಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ. ನೀವು ವ್ಯಾಯಾಮ ಶಾಲೆಯಲ್ಲಿ ಯಾವ ಪ್ರಮಾಣದಲ್ಲಿ ನಮ್ಮ ದೇಹಕ್ಕೆ ಕಸರತ್ತು ನೀಡುವಿರಿ ಎಂಬುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ನಿಮ್ಮ ವ್ಯಾಯಾಮ ತಜ್ಞರನ್ನು ಭೇಟಿಯಾಗಿ ನಿಮ್ಮ ದೇಹಕ್ಕೆ ಅನುಗುಣವಾಗಿ ಎಷ್ಟು ನಿಮಿಷಗಳ ವ್ಯಾಯಾಮ ಅವಶ್ಯಕ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಅದಕ್ಕಿಂತ ಹೆಚ್ಚಿನ ವ್ಯಾಯಾಮವನ್ನು ಎಂದಿಗೂ ಮಾಡಲು ಹೋಗಬೇಡಿ.

ನಿಮ್ಮ ದೇಹ ನೀಡುವ ಕೆಲವೊಂದು ಸೂಚನೆಗಳನ್ನು ತಪ್ಪದೆ ಗಮನಿಸಿ

ನಿಮ್ಮ ದೇಹ ನೀಡುವ ಕೆಲವೊಂದು ಸೂಚನೆಗಳನ್ನು ತಪ್ಪದೆ ಗಮನಿಸಿ

ಒಂದು ವೇಳೆ ಮೇಲಿನ ಬಗೆಬಗೆಯ ರೋಗ - ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದು ವೈದ್ಯರು ನಿಮಗೆ Rhabdomyolysis ಸಮಸ್ಯೆ ಇದೆ ಎಂದು ಖಾತರಿ ಪಡಿಸಿದರೆ ಅದಕ್ಕೆ ಅಗತ್ಯವಾಗಿ ಬೇಕಾದಂತಹ ಚಿಕಿತ್ಸೆಗಳನ್ನು ನೀಡಲು ಮುಂದಾಗುತ್ತಾರೆ ಮುಖ್ಯವಾಗಿ ನಿಮ್ಮ ದೇಹ ಸಾಕಷ್ಟು ಪ್ರಮಾಣದಲ್ಲಿ ಮೂತ್ರವನ್ನು ಉತ್ಪತ್ತಿ ಮಾಡಿ ಅದನ್ನು ವಿಷಕಾರಿ ಅಂಶಗಳು ಸಹಿತ ಮತ್ತು ಬೇಡದ ತ್ಯಾಜ್ಯಗಳ ಸಹಿತ ದೇಹದಿಂದ ಹೊರ ಹಾಕಲು ಅನುಕೂಲವಾಗುವಂತೆ ಮಾಡುತ್ತಾರೆ. ಇದರ ಜೊತೆಗೆ ನಿಮ್ಮ ದೇಹದಲ್ಲಿ ಎಲೆಕ್ಟ್ರೋಲೈಟ್ ಅಂಶಗಳ ಸಮತೋಲನ ಕಂಡು ಬರುವ ಹಾಗೆ ನೋಡಿಕೊಂಡು ನಿಮ್ಮ ಹೃದಯವನ್ನು ರಕ್ಷಣೆ ಮಾಡುತ್ತಾರೆ. ಕೆಲವು ಬಾರಿ ನಿಮಗೆ ಶಸ್ತ್ರಚಿಕಿತ್ಸೆಯ ಅಗತ್ಯ ಬಂದರೂ ಬರಬಹುದು ನಿಮ್ಮ ಸದ್ಯದ ಆರೋಗ್ಯ ಪರಿಸ್ಥಿತಿಯ ಮೇಲೆ ನಿಂತಿರುತ್ತದೆ.

English summary

Too Much Exercise Can Lead To Kidney Failure

Too much exercise can lead to kidney failure, Read on....
X