For Quick Alerts
ALLOW NOTIFICATIONS  
For Daily Alerts

ಚಿಕನ್‌ಗುನ್ಯಾ, ಡೆಂಗ್ಯೂ, ಮಲೇರಿಯಾ ಜ್ವರದಿಂದ ಚೇತರಿಸಲು ಟಿಪ್ಸ್

|

ಇತ್ತೀಚೆಗೆ ಡೆಂಗ್ಯೂ ಕೇಸ್‌ಗಳು ಹೆಚ್ಚಾಗಿ ಕಂಡು ಬರುತ್ತಿವೆ. ಡೆಂಗ್ಯೂ, ಚಿಕನ್‌ಗುನ್ಯಾ, ಮಲೇರಿಯಾ ಇವೆಲ್ಲಾ ಸೊಳ್ಳೆಗಳಿಂದ ಬರುವ ಕಾಯಿಲೆಗಳಾಗಿದ್ದು ಬಂದರೆ ಚೇತರಿಸಿಕೊಳ್ಳಲು ವಾರಗಳೇ ಬೇಕಾಗುವುದು. ಚಿಕನ್‌ಗುನ್ಯಾ, ಡೆಂಗ್ಯೂನಿಂದ ಚೇತರಿಸಿಕೊಂಡರೂ ಸಂಧಿ ನೋವು, ಮೈ ಕೈ ನೋವು ಇವೆಲ್ಲಾ ಕೆಲವರಿಗೆ ವರ್ಷಗಳವರೆಗೆ ಕಾಡಬಹುದು.

ಇಂಥ ಕಾಯಿಲೆಗಳು ಬಂದಾಗ ಚಿಕಿತ್ಸೆ ಪಡೆಯುವುದರ ಜೊತೆಗೆ ಆಹಾರಕ್ರಮದ ಕಡೆಗೂ ತುಂಬಾನೇ ಗಮನ ನೀಡಬೇಕು, ಆಗ ಮಾತ್ರ ಬೇಗನೆ ಚೇತರಿಸಿಕೊಳ್ಳಲು ಸಾಧ್ಯ. ಚಿಕನ್‌ಗುನ್ಯಾ, ಡೆಂಗ್ಯೂ, ಮಲೇರಿಯಾ ಜ್ವರದಿಂದ ಬೇಗನೆ ಚೇತರಿಸಿಕೊಳ್ಳಲು ಏನು ಮಾಡಬೇಕೆಂಬ ಟಿಪ್ಸ್ ನೀಡಲಾಗಿದೆ ನೋಡಿ:

ಬೆಳಗ್ಗೆ ಗುಲ್ಕಂದ ತಿನ್ನಿ

ಬೆಳಗ್ಗೆ ಗುಲ್ಕಂದ ತಿನ್ನಿ

ಬೆಳಗ್ಗೆ ಒಂದು ಚಮಚ ಗುಲ್ಕಂದ ತಿನ್ನಿ ಅಥವಾ ಊಟಕ್ಕಿಂತ ಮುಂಚೆ ಸೇವಿಸಿ. ಇದನ್ನು ತಿನ್ನುವುದರಿಂದ ಅಸಿಡಿಟಿ, ವಾಂತಿ ಇವುಗಳನ್ನು ತಡೆಗಟ್ಟುತ್ತದೆ. ಇದು ಹೊಟ್ಟೆಯ ಉಷ್ಣತೆ ಕಡಿಮೆ ಮಾಡುವುದು. ಅಲ್ಲದೆ ಕಾಯಿಲೆ ಬಿದ್ದಾಗ ಜೀರ್ಣಕ್ರಿಯೆ ತುಂಬಾ ನಿಧಾನವಾಗುವುದು. ಗುಲ್ಕಂದ ಜೀರ್ಣಕ್ರಿಯೆ ಉತ್ತಮವಾಗಿ ನಡೆಯುವಂತೆ ಮಾಡಲು ಸಹಕಾರಿಯಾಗಿದೆ.

ಔಷಧೀಯ ಗುಣವಿರುವ ಪಾನೀಯ

ಔಷಧೀಯ ಗುಣವಿರುವ ಪಾನೀಯ

ನೀವು ಕಾಯಿಲೆ ಬಿದ್ದಾಗ ಔಷಧೀಯ ಗುಣವಿರುವ ಪಾನೀಯ ಮಾಡಿ ಕುಡಿಯುವುದರಿಂದ ಚೇತರಿಸಲು ಸಹಕಾರಿ. ಆ್ಯಂಟಿ ಇನ್‌ಫ್ಲೇಮಟರಿ ಡ್ರಿಂಜ್‌ ಎಂದು ಇದನ್ನು ಕರೆಯಲಾಗುವುದು. ಈ ಪಾನೀಯ ಮಾಡುವುದು ಸುಲಭ. ಒಂದು ಲೋಟ ಹಾಲಿಗೆ ಸ್ವಲ್ಪ ಅರಿಶಿಣ ಪುಡಿ, 2-3 ಎಸಳು ಕೇಸರಿ, ಸ್ವಲ್ಪ ನಟ್‌ಮಗ್‌ ಹಾಕಿ ಕುದಿಸಿ. ಒಂದು ಲೋಟ ಹಾಲು ಅರ್ಧ ಲೋಟ ಆಗುವಷ್ಟು ಹೊತ್ತು ಕುದಿಸಿ. ನಂತರ ಇದನ್ನು ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದು. ಇದು ಉರಿಯೂತ ಕಡಿಮೆ ಮಾಡುವಲ್ಲಿಯೂ ಸಹಕಾರಿ.

ಗಂಜಿ

ಗಂಜಿ

ಇನ್ನು ಜ್ವರ ಬಂದಾಗ ಅನ್ನ ತಿನ್ನುವ ಬದಲಿಗೆ ಗಂಜಿ ಮಾಡಿ ಕುಡಿಯಬೇಕು, ಕುಚಲಕ್ಕಿ ಅಥವಾ ಬೆಳ್ತಕ್ಕಿ ಗಂಜಿ ಮಾಡಿ ಕುಡಿಯಿರಿ. ಇದರಿಂದ ಜೀರ್ಣಕ್ರಿಯೆಗೆ ಸಹಕಾರಿ ಹಾಗೂ ಗಂಜಿ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುವಲ್ಲಿಯೂ ಸಹಕಾರಿ.

ಸ್ವಲ್ಪ ಹೊತ್ತು ಸುಪ್ತ ಬದ್ಧ ಕೋನಾಸನದಲ್ಲಿ ಮಲಗಿ

ಸ್ವಲ್ಪ ಹೊತ್ತು ಸುಪ್ತ ಬದ್ಧ ಕೋನಾಸನದಲ್ಲಿ ಮಲಗಿ

ಇದೇನು ತುಂಬಾ ಕಷ್ಟದ ಭಂಗಿಯಲ್ಲ, ಯಾರೂ ಕೂಡ ಅಭ್ಯಾಸ ಮಾಡಬಹುದು. ಬೆನ್ನು ಕೆಳಗೆ ಇರುವಂತೆ ಮಲಗಿ ಕಾಲುಗಳನ್ನು ಪಾದಗಳನ್ನು ಸೇರಿಸಿ ರಿಲ್ಯಾಕ್ಡ್ ಆಗಿ ಮಲಗಿ. ಇದರಿಂದ ಬೆನ್ನುನೀವು ಕಡಿಮೆಯಾಗುವುದು, ಜೊತೆಗೆ ತಲೆಸುತ್ತು ಕೂಡ ಕಡಿಮೆಯಾಗುವುದು.

FAQ's
  • ಡೆಂಗ್ಯೂ ಬಂದವರಿಗೆ ನೀಡಲು ಸೂಪರ್ ಫುಡ್ಸ್

    * ತೆಳು ಮಾಂಸ
    * ಮೀನು
    * ಲಿವರ್
    * ಮೊಟ್ಟೆ
    * ಬೀನ್ಸ್, ಕಾಳುಗಳು, ಬಟಾಣಿ
    * ಹಣ್ಣುಗಳು, ನೀರು, ಎಳನೀರು
    * ಬಾದಾಮಿ, ವಾಲ್ನಟ್ಸ್
    * ಶುಂಠಿ, ಬೆಳ್ಳುಳ್ಳಿ, ಕಾಳು ಮೆಣಸು ಅವರ ಆಹಾರದಲ್ಲಿರಲಿ

  • ಮಲೇರಿಯಾ ರೋಗಿಗಳಿಗೆ ಯಾವ ಆಹಾರ ಒಳ್ಳೆಯದು?

    * ಕಾರ್ಬ್ಸ್‌ ಅಧಿಕವಿರುವ ಆಹಾರ ನೀಡಿ
    * ಗೋಧಿ ಬದಲಿಗೆ ಅಕ್ಕಿಯಿಂದ ತಯಾರಿಸಿದ ಆಹಾರ ನೀಡಿ
    * ಪಪ್ಪಾಯಿ, ಕಿತ್ತಳೆ, ಮೂಸಂಬಿ, ಬೆರ್ರಿ, ಕಿವಿ ಹಣ್ಣು ಇವುಗಳನ್ನು ನೀಡಿ
    * ಕ್ಯಾರೆಟ್‌, ಬೀಟ್‌ರೂಟ್‌ನಂಥ ಆಹಾರ ಹೆಚ್ಚು ನೀಡಿ.
    * ಮೀನು
    * ಚಿಕನ್ ಸೂಪ್
    * ಮೊಟ್ಟೆ
    ಇಂಥ ಆಹಾರಗಳನ್ನು ಅವರ ಆಹಾರದಲ್ಲಿ ಸೇರಿಸಿದರೆ ಬೇಗನೆ ಚೇತರಿಸಲು ಸಹಕಾರಿ.

  • ಚಿಕನ್‌ಗುನ್ಯಾ ಬಂದವರಿಗೆ ಅತ್ಯುತ್ತಮವಾದ ಆಹಾರ ಯಾವುದು?

    * ಎಳನೀರು
    * ಸೊಪ್ಪು-ತರಕಾರಿಗಳು
    * ಬೇಳೆ ಹಾಕಿ ಮಾಡಿದ ಸಾರು, ರಸಂ
    * ಕಿಚಡಿ
    * ಸೂಪ್
    * ವಿಟಮಿನ್ ಸಿ ಅಧಿಕವಿರುವ ಆಹಾರಗಳು
    * ನೀರು
    * ಅಮೃತ ಬಳ್ಳಿಯ ಜ್ಯೂಸ್‌

English summary

Tips Help to Speedy Recover from Dengue, Malaria Fever in Kannada

Tips Help to Speedy Recover from Dengue, Malaria Fever in Kannada, read on...
Story first published: Saturday, September 25, 2021, 12:38 [IST]
X
Desktop Bottom Promotion