For Quick Alerts
ALLOW NOTIFICATIONS  
For Daily Alerts

ನಿಮ್ಮ ಪೋಷಕರ ಆರೋಗ್ಯ ಕಾಪಾಡಬೇಕೆ? ಹೀಗೆ ಮಾಡಿ

|

ಪೋಷಕರು ಅಂದರೆ ಕಣ್ಣಿಗೆ ಕಾಣುವ ದೇವರು ಅಂತಾರೆ. ಅದೇ ಕಾರಣಕ್ಕೆ ಸಂಸ್ಕೃತದಲ್ಲಿ ಮಾತೃ ದೇವೋಭವ, ಪಿತೃ ದೇವೋಭವ ಎಂಬ ಮಾತಿದೆ. ಹೌದು, ಖಂಡಿತವಾಗಿಯೂ ಪೋಷಕರು ದೇವರಿಗೆ ಸಮಾನ. ಯಾಕೆಂದರೆ ನಮ್ಮನ್ನು ಸಾಕಿ ಸಲುಹಿ ದೊಡ್ಡವರನ್ನಾಗಿ ಮಾಡುತ್ತಾರೆ. ನಮಗೆ ಶಿಕ್ಷಣ ಕೊಡಿಸುತ್ತಾರೆ. ಉತ್ತಮ ಬುದ್ಧಿಯನ್ನು ಕಲಿಸುತ್ತಾರೆ. ನಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡಲು ದಾರಿ ತೋರಿಸುತ್ತಾರೆ. ಆದರೆ, ದೊಡ್ಡವರಾದ ಮಕ್ಕಳು ಅವರ ಕಾಳಜಿ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವ ಅನೇಕ ಘಟನೆಗಳನ್ನು ನೋಡಿದ್ದೇವೆ. ಅವರನ್ನು ಆರೈಕೆ ಮಾಡುವುದು ಬಿಡಿ ಅವರ ಜೊತೆ ಮಾತು ಕೂಡ ಆಡುವುದಿಲ್ಲ.

ಆದರೆ ನಮ್ಮ ಭವಿಷ್ಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ಪೋಷಕರನ್ನು ನಾವು ಎಂದಿಗೂ ಮರೆಯಬಾರದು ವೃದ್ಧಾಪ್ಯ ಜೀವನದಲ್ಲಿ ಅವರ ಆರೈಕೆ ಮಾಡುತ್ತಿರಬೇಕು. ವಯಸ್ಸಾದಂತೆ ಪೋಷಕರ ಆರೋಗ್ಯ ಸಾಮಾನ್ಯವಾಗಿ ಹದಗೆಡುತ್ತಾ ಹೋಗುತ್ತದೆ. ಹೀಗಾಗಿ ಅವರ ಆರೋಗ್ಯ ಸೇರಿ, ಅವರ ಮಾನಸಿಕ ಆರೋಗ್ಯ, ಅವರ ಆಸೆಗಳನ್ನು ಈಡೇರಿಸುವ ಜವಾಬ್ಧಾರಿ ನಮ್ಮದಾಗಿದೆ.

ಅಲ್ಲದೇ ವೃದ್ಧ್ಯಾಪದಲ್ಲಿ ಅವರನ್ನು ಸಂತೋಷವಾಗಿ ಇಡುವ ಕರ್ತವ್ಯ ನಮ್ಮದಾಗಿರುತ್ತದೆ. ಇನ್ನು ಅನೇಕ ಕಡೆ ವೃದ್ದರು ವಯಸ್ಸು ಜಾಸ್ತಿಯಾಗುತ್ತಿದ್ದಂತೆ ಆರೋಗ್ಯವನ್ನು ಅವರು ನೋಡಿಕೊಳ್ಳುವುದಿಲ್ಲ. ಹೀಗಾಗಿ ಅವರ ಆರೋಗ್ಯ ನೋಡಿಕೊಳ್ಳುವ ಜವಾಬ್ಧಾರಿ ನಮ್ಮದಾಗಿರುತ್ತದೆ. ಅಲ್ಲದೇ ವಯಸ್ಸಾದಂತೆ ಪ್ರೊಟೀನ್, ಕ್ಯಾಲ್ಸಿಯಂ, ಖನಿಜಾಂಶಗಳ ಕೊರತೆ ಉಂಟಾಗುತ್ತದೆ. ಹೀಗಾಗಿ ಇವುಗಳು ಹೊಂದಿರುವ ಆಹಾರವ್ನ್ನು ನೀಡಿ ಅವರಿಗೆ ಯಾವುದೇ ರೋಗ ಬರದಂತೆ ನೋಡಿಕೊಳ್ಳಬೇಕು.

ಹಾಗಾದರೆ ವೃದ್ದ ಪೋಷಕರನ್ನು ಅವರ ವೃದ್ಧಾಪ್ಯ ಸಮಯದಲ್ಲಿ ನಾವು ಹೇಗೆ ನೋಡಿಕೊಳ್ಳಬೇಕು? ಅವರ ಆರೈಕೆ ಹೇಗೆ? ಅವರನ್ನು ಸಂತೋಷಪಡಿಸುವುದು ಹೇಗೆ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಆರೋಗ್ಯದ ಬಗ್ಗೆ ಪ್ರೇರಣೆ!

ಆರೋಗ್ಯದ ಬಗ್ಗೆ ಪ್ರೇರಣೆ!

ಹೌದು, ಪ್ರೇರಣೆಯಿಂದ ಏನು ಬೇಕಾದರೂ ಬದಲಿಸಬಹುದು. ಆರೋಗ್ಯದ ಬಗ್ಗೆ ನಮಗೆ ಪ್ರೇರಣೆ ನೀಡುವ ಜೊತೆಗೆ ಪೋಷಕರಿಗೂ ಪ್ರೇರಣೆ ನೀಡುವ ಕೆಲಸ ಮಾಡಿದರೆ ಅರ್ಧದಷ್ಟೂ ರೋಗ ದೂರ ಓಡುತ್ತದೆ. ಅವರಿಗೆ ನಿತ್ಯವೂ ಆರೋಗ್ಯದ ಬಗ್ಗೆ ಪ್ರೇರಣೆ ನೀಡಬೇಕು. ಬೆಳಗ್ಗೆ ಎದ್ದು ಜಾಗಿಂಗ್ ಹೋಗಲು ನಾವು ಅವರೊಂದಿಗೆ ಹೋಗುವ ಮೂಲಕ ಪ್ರೇರಣೆ ನೀಡಬೇಕು. ಪೋಷಕರೊಂದಿಗೆ ಇದ್ದು ಅವರಿಗೆ ಪ್ರೇರಣೆ ನೀಡಲು ನಾವು ಸಮಯವನ್ನು ಕಂಡುಕೊಳ್ಳಬೇಕು. ಒಂದು ವೇಳೆ ನಾವು ಅವರಿಗೆ ಪ್ರೇರಣೆ ನೀಡಿದಿದ್ದರೆ ಅವರು ಕೂಡ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಅಲ್ಲದೇ ಯಾವುದಕ್ಕೂ ಅವರಿಗೂ ಇಂಟ್ರೆಸ್ಟ್ ಇಲ್ಲದ ಹಾಗೇ ಆಗುತ್ತೆ. ಇದರಿಂದ ಅವರ ಆರೋಗ್ಯವೂ ಕೆಡುತ್ತೆ. ಹೀಗಾಗಿ ಹೆತ್ತವರ ಆರೋಗ್ಯದ ಕಾಳಜಿಗಾಗಿ ನಾವು ಅವರೊಂದಿಗೆ ಇದ್ದು ಪ್ರೇರಣೆ ನೀಡುತ್ತಿರಬೇಕು.

ಚೆನ್ನಾಗಿ ಮಾತನಾಡಿ, ಅವರ ಕಣ್ಣ ಮುಂದೆಯೇ ಇರಿ!

ಚೆನ್ನಾಗಿ ಮಾತನಾಡಿ, ಅವರ ಕಣ್ಣ ಮುಂದೆಯೇ ಇರಿ!

ಈಗ ಏನಾಗಿದೆ ಅಂದರೆ ಓದಿದ ಬಳಿಕ ಅನೇಕರು ಪಟ್ಟಣ ಸೇರುತ್ತಿದ್ದಾರೆ. ಇದು ಅನೇಕರಿಗೆ ಅನಿವಾರ್ಯ ಕೂಡ. ಮಕ್ಕಳು ಒಂದು ಕಡೆ ಪೋಷಕರು ಒಂದು ಕಡೆ ಆಗುತ್ತಿದ್ದಾರೆ. ಇದು ಸಾಮಾನ್ಯವಾಗಿ ಹಿರಿಯ ಮನಸ್ಸುಗಳಿಗೆ ನೋವುಂಟು ಮಾಡುತ್ತಿದೆ. ವಯಸ್ಸಾದಂತೆ ಮಕ್ಕಳ ಆಸರೆ ಹಿರಿ ಮನಸ್ಸುಗಳು ಬಯಸುತ್ತವೆ. ಅವರೊಂದಿಗೆ ನಗುತ್ತಾ ಮಾತನಾಡಲು ಇಷ್ಟಪಡುತ್ತದೆ. ಅವರನ್ನು ಕಾಣಲು ಬಯಸುತ್ತದೆ. ಆದರೆ ದೂರದಲ್ಲಿದ್ದರೆ ಅನೇಕರಿಗೆ ಈ ಬಗ್ಗೆ ಚಿಂತೆ ಮೂಡಿ ಇಲ್ಲದ ರೋಗಗಳು ಬರುತ್ತವೆ. ಹೀಗಾಗಿ ಅವರನ್ನು ನಿತ್ಯ ನಗಿಸುತ್ತಿದ್ದರೆ, ಅವರ ಕಣ್ಣ ಮುಂದೆಯೇ ಇದ್ದರೆ ಅವರ ಆರೋಗ್ಯ ,ಮನಸ್ಸು ತುಂಬಾನೆ ಚೆನ್ನಾಗಿರುತ್ತದೆ.

ಹೊರಗೆ ಕರೆದುಕೊಂಡು ಹೋಗಿ!

ಹೊರಗೆ ಕರೆದುಕೊಂಡು ಹೋಗಿ!

ಪೋಷಕರು ಮನೆಯಲ್ಲಿ ಇರಲು ಬಯಸುವುದಿಲ್ಲ ದೇವಸ್ಥಾನಕ್ಕೆ ಹೋಗುವುದು, ಬೇರೆ ಬೇರೆ ಸ್ಥಳಗಳನ್ನು ಕಾಣಲು ಇಳಿ ಮನಸ್ಸು ಬಯಸುತ್ತೆ. ಈ ರೀತಿ ಒಂದು ಬಾರಿ ಅವರನ್ನು ಹೊರಗೆ ಕರೆದುಕೊಂಡು ಹೋದರೆ ಅವರ ಮನಸ್ಸು ತುಂಬಾನೇ ಹಿಗುತ್ತೆ ಮಕ್ಕಳ ಮೇಲೂ ಪ್ರೀತಿ ಜಾಸ್ತಿಯಾಗುತ್ತೆ. ಮನೆಯಲ್ಲೇ ಇದ್ದು ಕತ್ತಲೆ ಕೋಣೆಯ ವಾಸ ಅವರಿಗೆ ಇನ್ನಿಲ್ಲದ ಮಾನಸಿಕ ತೊಂದರೆ, ಆರೋಗ್ಯ ಸಮಸ್ಯೆ ತಂದಿಡುತ್ತೆ. ಹೀಗಾಗಿ ಹೊರಗೆ ಕರೆದುಕೊಂಡು ಹೋಗಿ ಅವರ ಮನಸ್ಸು ಸಂತೋಷಗೊಳಿಸಿದರೆ ಅವರು ಬದಲಾಗುತ್ತಾರೆ. ಅವರ ಆರೋಗ್ಯವೂ ಚೆನ್ನಾಗಿ ಇರುತ್ತೆ.

ಆಹಾರ ಸೇವನೆಯಲ್ಲಿ ಶಿಸ್ತು!

ಆಹಾರ ಸೇವನೆಯಲ್ಲಿ ಶಿಸ್ತು!

ಆಹಾರದಲ್ಲಿ ಪೋಷಕರನ್ನು ಶಿಸ್ತು ಪಾಲಿಸುವಂತೆ ಪ್ರೀತಿಯಿಂದ ಕೋರಿಕೊಳ್ಳಬೇಕು. ಕೊಬ್ಬು, ಸಿಹಿ, ಕರಿದ ಪದಾರ್ಥಗಳ ಅತಿ ಸೇವನೆಯಿಂದ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿ, ಶರೀರದ ತೂಕ ವೃದ್ಧಿಯಾಗುತ್ತದೆ. ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಸಸ್ಯಾಹಾರ- ಸಾತ್ವಿಕ ಆಹಾರ ಸೇವನೆ- ಹಿತಮಿತ ಆಹಾರ ಸೇವನೆಯಿಂದ ವೃದ್ಧಾಪ್ಯದ ಲಕ್ಷಣಗಳು ಬೇಗ ಬರುವುದಿಲ್ಲ. ಹಿತಮಿತ ಆಹಾರ ಸೇವನೆಗೆ ಆದ್ಯತೆ ನೀಡುವುದು ಉತ್ತಮ. ಅಲ್ಲದೇ ನಿಮ್ಮ ಪೋಷಕರು ವಯಸ್ಸಾದಂತೆ, ಅವರಿಗೆ ಹೆಚ್ಚಿನ ಪೋಷಕಾಂಶಗಳು, ಜೀವಸತ್ವಗಳು, ಖನಿಜಗಳು, ಇತ್ಯಾದಿಗಳ ಅಗತ್ಯವಿರುತ್ತದೆ.ಆದ್ದರಿಂದ ಅವರಿಗೆ ಕ್ಯಾಲ್ಸಿಯಂ, ಸೋಡಿಯಂ, ಪೊಟ್ಯಾಸಿಯಮ್, ವಿಟಮಿನ್ಗಳಂತಹ ಸತ್ವ ಇರುವ ಆಹಾರಗಳನ್ನೇ ನೀಡುವುದು ಒಳ್ಳೆಯದು. ಈ ಮೂಲಕ ಸಮತೋಲನ ಕಾಪಾಡಿಕೊಳ್ಳಬಹುದು.

ಆರೋಗ್ಯದ ನಿಗಾವಹಿಸಲು ಹೀಗೆ ಮಾಡಿ!

ಆರೋಗ್ಯದ ನಿಗಾವಹಿಸಲು ಹೀಗೆ ಮಾಡಿ!

ಪೋಷಕರು ಇಳಿವಯಸ್ಸಿಗೆ ಕಾಲಿಡುತ್ತಿದ್ದಂತೆ ವಯೋಸಹಜವಾಗಿ ಅನೇಕ ಬದಲಾವಣೆಗಳು ಎಲ್ಲರಲ್ಲೂ ಸಾಮಾನ್ಯವಾಗಿ ಕಾಣುತ್ತದೆ. ಅನಾರೋಗ್ಯಗಳು ಬರುವುದು ಕಾಮನ್ ಆಗಿ ಬಿಟ್ಟಿದೆ. ದೇಹದ ಪ್ರತಿಯೊಂದು ಅಂಗಾಂಗವ್ಯವಸ್ಥೆಯೂ ದುರ್ಬಲವಾಗುತ್ತದೆ. ಜೀರ್ಣಾಂಗಗಳು ದುರ್ಬಲಗೊಂಡು ಆಹಾರ ಜೀರ್ಣವಾಗುವುದು ಕಷ್ಟ. ಅಪೌಷ್ಟಿಕತೆ ಉಂಟಾಗುತ್ತದೆ. ಮಲಬದ್ದತೆ ಬರುತ್ತದೆ. ಹೃದಯ-ರಕ್ತ ಚಲನಾವ್ಯವಸ್ಥೆಯಲ್ಲಿ ಕೊರತೆ, ಹೃದಯಾಘಾತ, ಲಕ್ವಾ ಹೊಡೆಯಬಹುದು. ಉಸಿರಾಟದ ವ್ಯವಸ್ಥೆ ಶಿಥಿಲವಾಗಿ ಉಸಿರಾಟ ಏರುಪೇರಾಗುತ್ತದೆ. ಮೂಳೆ-ಕೀಲು-ಚಾಲನೆ ಕಷ್ಟವಾಗುತ್ತದೆ. ಮಿದುಳಿನ ನರಮಂಡಲ ಬಲಹೀನವಾಗಿ ಮರೆವು, ಬುದ್ಧಿಶಕ್ತಿ ಕುಗ್ಗುತ್ತದೆ, ಸಮತೋಲನವಿಲ್ಲದೆ ಬಿದ್ದು ಮೂಳೆ-ಮುರಿಯಬಹುದು. ಪಾರ್ಕಿನ್ಸನ್ ಕಾಯಿಲೆ. ಆಲ್‌ಝೈಮರ್‌‌ಕಾಯಿಲೆ ಬರಬಹುದು. ಆದರೆ ಒಂದು ಹಂತಕ್ಕೆ ಬರುತ್ತಿದ್ದಂತೆ ನಾವು ನಮ್ಮ ಪೋಷಕರ ಆರೋಗ್ಯದ ಬಗ್ಗೆ ನಿಗಾ ಇಡುವುದು ಒಳ್ಳೆಯದು. ಈ ಮೂಲಕ ಮುಂದಾಗುವ ದೊಡ್ಡ ಸಮಸ್ಯೆಯಿಂದ ಅವರನ್ನು ರಕ್ಷಣೆ ಮಾಡಬಹುದು.

ನಿರಂತರವಾಗಿ ಆರೋಗ್ಯ ತಪಾಸಣೆ ಮಾಡಿಸಿ!

ನಿರಂತರವಾಗಿ ಆರೋಗ್ಯ ತಪಾಸಣೆ ಮಾಡಿಸಿ!

ಪೋಷಕರಿಗೆ ವಯಸ್ಸಾದಂತೆ ರೋಗನಿರೋಧಕ ಶಕ್ತಿ ಕ್ಷೀಣಿಸುತ್ತದೆ. ಹೀಗಾಗಿ ಅನೇಕ ರೋಗಗಳು ಅವರಿಗೆ ಅಂಟಿಕೊಳ್ಳುತ್ತದೆ. ಸಾಮಾನ್ಯವಾಗಿ ಶುಗರ್, ಬಿಪಿಯಂತಹ ರೋಗಗಳ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಹೀಗಾಗಿ ನಿಮ್ಮ ಪೋಷಕರು 50 ವರ್ಷ ದಾಟಿದರೆ ಖಂಡಿತವಾಗಿಯೂ ಅವರಿಗೆ ಆರೋಗ್ಯ ತಪಾಸಣೆ ಮಾಡಿಸಿ. ಆರು ತಿಂಗಳಿಗೊಮ್ಮೆ ಅಥವಾ 1 ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿ ಈ ಮೂಲಕ ಅವರ ಆರೋಗ್ಯ ಸಮಸ್ಯೆಯನ್ನು ಕೊಂಚ ಮಟ್ಟಿಗೆ ನಿವಾರಿಸಬಹುದು. ಅಲ್ಲದೇ ಅವರಿಗೆ ಭವಿಷ್ಯದಲ್ಲಿ ಸಂಭವಿಸಬಹುದಾದ ದೊಡ್ಡ ಸಮಸ್ಯೆಯನ್ನು ನಿವಾರಿಸಬಹುದು.

ಈ ತಪಾಸಣೆಗಳನ್ನು ಮಿಸ್ ಮಾಡದೆ ಮಾಡಿಸಿ!

ಇಸಿಜಿ ಪರೀಕ್ಷೆ (ಹೃದಯಕ್ಕೆ)

ಮೂತ್ರ ಪರೀಕ್ಷೆ

ಮೂತ್ರಪಿಂಡ ತಪಾಸಣೆ

ಮಧುಮೇಹ ಪರೀಕ್ಷೆ

ರಕ್ತದೊತ್ತಡ ಪರೀಕ್ಷೆ

ರಕ್ತಹೀನತೆ ಪರೀಕ್ಷೆ

ಥೈರಾಯ್ಡ್ ತಪಾಸಣೆ

ಉತ್ತಮ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಅಳೆಯಲು ಲಿಪಿಡ್ ತಪಾಸಣೆ

ಮಾನಸಿಕ ಆರೋಗ್ಯ ಕಾಪಾಡುವುದು!

ಮಾನಸಿಕ ಆರೋಗ್ಯ ಕಾಪಾಡುವುದು!

ವೃದ್ದ್ಯಾಪದಲ್ಲಿ ಪೋಷಕರಿಗೆ ಮನಸ್ಸು ಭಯ ಆತಂಕ, ದುಃಖ, ಕೋಪ, ಹತಾಶೆ, ನಿರಾಶೆಗಳಿಂದ ಆವೃತವಾಗುತ್ತದೆ. ಅಭದ್ರತೆ, ಅನಿಶ್ಚಯತೆ, ಮಕ್ಕಳು ಬಂಧುಮಿತ್ರರ ನಿರ್ಲಕ್ಷ್ಯ, ಆರ್ಥಿಕ ಅವಲಂಬನೆ, ಸಾವಿನ ಭಯವು ಮನಸ್ಸು ಪ್ರಕ್ಷುಬ್ಧಗೊಳ್ಳುವಂತೆ ಮಾಡುತ್ತದೆ. ಎಲ್ಲದಕ್ಕಿಂತ, ಒಂಟಿತನ, ಹಿಂದೆ ಮಾಡಿದ ತಪ್ಪುಗಳು, ತೆಗೆದುಕೊಂಡ ತಪ್ಪು ನಿರ್ಧಾರಗಳು, ಪಾಪಪ್ರಜ್ಞೆ ನಕ್ಷತ್ರಿಕನಂತೆ ಕಾಡತೊಡಗುತ್ತದೆ. ಹೀಗಾಗಿ ಶೇಕಡಾ 30 ರಿಂದ 50 ರಷ್ಟು ವೃದ್ಧರು ಖಿನ್ನತೆ ಮತ್ತು ಆತಂಕದ ಮನೋಬೇನೆಯಿಂದ ಬಳಲುತ್ತಾರೆ. ಜೊತೆಗೆ ವೃದ್ಧರಿಗೆ ಸೂಕ್ತ ಸಮಯಕ್ಕೆ ಸೂಕ್ತ ಚಿಕಿತ್ಸೆಯೂ ದೊರೆಯದಿರಬಹುದು. ವೈದ್ಯರಲ್ಲಿಗೆ-ಆಸ್ಪತ್ರೆಗೆ ಕರೆದೊಯ್ಯುವವರಿಲ್ಲ. ವೈದ್ಯ ಖರ್ಚನ್ನು ಭರಿಸುವವರಿಲ್ಲ. ಅಸಹಾಯಕತೆ ಆವರಿಸಿಕೊಳ್ಳುತ್ತದೆ. ಇದೆಲ್ಲಾ ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಇದಕ್ಕಾಗಿ ನಾವು ಅವರ ಜೊತೆ ಇದ್ದು ಅವರ ಅಭದ್ರತೆಯನ್ನು ಹೋಗಲಾಡಿಸಬೇಕು. ಖುಷಿ ಪಡಿಸಬೇಕು. ಹೊರಗೆ ಪಿಕ್ ನಿಗ್ ಗಳಿಗೆ ಕರೆದುಕೊಂಡು ಹೋಗಬೇಕು. ವಿವಿಧ ಕಾರ್ಯುಕ್ರಮಗಳಿಗೆ ಕರೆದುಕೊಂಡು ಹೋಗಬೇಕು. ಅಲ್ಲದೇ ಅವರದ್ದೆ ವಯಸ್ಸಿಅನ ವಯಸ್ಕರ ಜೊತೆ ಅವರಿಗೆ ಗೆಳೆತನ ಮಾಡಿಸಿಕೊಡಬೇಕು. ಬೆಳಗ್ಗೆ , ಸಂಜೆ ವಾಕಿಂಗ್ ಗೆ ಕರೆದುಕೊಂಡು ಹೋಗಬೇಕು. ಯಾವಾಗದರೂ ಒಂದು ಬಾರಿ ಹೊರಗೆ ಊಟಕೆಕ್ ಕರೆದುಕೊಂಡು ಹೋಗಬೇಕು. ಈ ಮೂಲಕ ಅವರ ಮನಸ್ಸು ಖುಷಿಯಿಂದ ತುಂಬುವಂತೆ ಮಾಡಬೇಕು.

English summary

Tips and Ways to Improve Your Parent's Health in kannada

Tips and Ways to Improve Your Parent's Health in kannada
X
Desktop Bottom Promotion