Just In
Don't Miss
- Sports
ಯಾವುದೇ ಕ್ರಮಾಂಕದಲ್ಲಾದರೂ ಬ್ಯಾಟಿಂಗ್ ಮಾಡಬಲ್ಲೆ: ಕ್ರಿಸ್ ಗೇಲ್ ಆತ್ಮವಿಶ್ವಾಸದ ಮಾತು
- News
ಮಾರ್ಚ್ 16ರಂದು ಬಿಎಸ್ಎನ್ಎಲ್, ಬ್ಯಾಂಕು, ಬಿಇಎಂಎಲ್ ಕಾರ್ಮಿಕರ ಪ್ರತಿಭಟನೆ
- Automobiles
ಹಡಗುಗಳ ಕೆಳಭಾಗ ಕೆಂಪು ಬಣ್ಣ ಹೊಂದಿರಲು ಕಾರಣಗಳಿವು
- Finance
ಯುಪಿಐ ದಾಖಲೆ: ಫೆಬ್ರವರಿಯಲ್ಲಿ 2.29 ಬಿಲಿಯನ್ ವಹಿವಾಟು
- Movies
ಮತ್ತೆ ಕಿರುತೆರೆಯಲ್ಲಿ ಪುನೀತ್ ರಾಜ್ ಕುಮಾರ್: ಪವರ್ ಸ್ಟಾರ್ ಶೋ ಯಾವುದು?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಥೈರಾಯ್ಡ್ ಕ್ಯಾನ್ಸರ್: ಕಾರಣ, ಲಕ್ಷಣಗಳು, ಚಿಕಿತ್ಸೆ
ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆ ಎನ್ನುವುದು ಬಹುತೇಕ ಜನರನ್ನು ಕಾಡುತ್ತಿದೆ. ಥೈರಾಯ್ಡ್ ಎನ್ನುವುದು ನಮ್ಮ ಗಂಟಲಿನಲ್ಲಿರುವ ಚಿಟ್ಟೆಯಾಕಾರದ ಒಂದು ಗ್ರಂಥಿ. ಈ ಗ್ರಂಥಿಯಲ್ಲಿ ಬಿಡುಗಡೆಯಾಗುವ ಹಾರ್ಮೋನ್ ಹೃದಯ ಬಡಿತ, ದೇಹದ ಉಷ್ನತೆ, ಚಯಾಪಚಯ ಕ್ರಿಯೆ, ರಕ್ತದೊತ್ತಡ, ಮೈತೂಕ ಇವುಗಳು ಸರಿಯಾಗಿರುವಂತೆ ನೋಡಿಕೊಳ್ಳುತ್ತದೆ.
ಯಾವಾಗ ಥೈರಾಯ್ಡ್ ಹಾರ್ಮೋನ್ ಉತ್ಪತ್ತಿಯಲ್ಲಿ ವ್ಯತ್ಯಾಸ ಉಂಟಾಗುತ್ತದೆಯೋ ಆಗ ದೇಹದಲ್ಲಿ ಸಾಕಷ್ಟು ವ್ಯತ್ಯಾಸ ಉಂಟಾಗುವುದು. ಅದರಲ್ಲಿ ಮೈತೂಕ ಮೇಲೆ ತುಂಬಾ ಪರಿಣಾಮ ಬೀರುವುದು. ಇದ್ದಕ್ಕಿದ್ದಂತೆ ತುಂಬಾ ಮೈ ತೂಕ ಹೆಚ್ಚಾಗುವುದು, ತುಂಬಾ ಮೈ ತೂಕ ಕಡಿಮೆಯಾಗುವುದು ಇವೆಲ್ಲಾ ಥೈರಾಯ್ಡ್ ಹಾರ್ಮೋನ್ ವ್ಯತ್ಯಾಸವಾಗಿದೆ ಎಂಬುವುದರ ಲಕ್ಷಣವಾಗಿವೆ.
ಥೈರಾಯ್ಡ್ ಸಮಸ್ಯೆ ಅಧಿಕವಾದರೆ ಥೈರಾಯ್ಡ್ ಕ್ಯಾನ್ಸರ್ ಕೂಡ ಉಂಟಾಗಬಹುದು. ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ ಪ್ರಕಾರ ಪುರುಷರಿಗಿಂತ ಮಹಿಳೆಯರಲ್ಲಿ ಅದರಲ್ಲೂ ಮೂವತ್ತು ವರ್ಷ ಮೇಲ್ಪಟ್ಟವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಇಲ್ಲಿ ನಾವು ಥೈರಾಯ್ಡ್ ಕ್ಯಾನ್ಸರ್‌ಗೆ ಕಾರಣ, ಅದರ ಲಕ್ಷಣಗಳು ಹಾಗೂ ಮತ್ತಿತ್ತರ ಮಾಹಿತಿ ನೀಡಿದ್ದೇವೆ ನೋಡಿ:

ಥೈರಾಯ್ಡ್ ಕ್ಯಾನ್ಸರ್ ವಿಧಗಳು
1. ಡಿಫರೆನ್ಷಿಯಟಡ್ ಥೈರಾಯ್ಡ್ ಕ್ಯಾನ್ಸರ್
ಇದು ಥೈರಾಯ್ಡ್ ಫಾಲಿಕ್ಯೂಲರ್ ಕಣಗಳಲ್ಲಿ ಕಂಡು ಬರುತ್ತದೆ. ಇದರಲ್ಲಿ ಕ್ಯಾನ್ಸರ್ ಕಣಗಳು ಉತ್ಪತ್ತಿಯಾಗಿ ಹಾರ್ಮೋನ್‌ಗಳಲ್ಲಿ ಸಂಗ್ರಹವಾಗುತ್ತವೆ. ಇದರಲ್ಲಿ 2 ವಿಧ
* ಪಾಲಿಲರಿ ಕ್ಯಾನ್ಸರ್
ಥೈರಾಯ್ಡ್ ರೋಗಿಗಳಲ್ಲಿ 10ರಲ್ಲಿ 8 ಜನರಲ್ಲಿ ಈ ಕ್ಯಾನ್ಸರ್ ಕಾಣಿಸಿಕೊಂಡಿರುತ್ತದೆ. ಈ ಕ್ಯಾನ್ಸರ್ ನಿಧಾನಕ್ಕೆ ಬೆಳೆಯುತ್ತದೆ ಹಾಗೂ ಯಾವುದೇ ಲಕ್ಷಣಗಳು ಕಾಣಿಸುವುದಿಲ್ಲ. ಇದು ಮೂವತ್ತರಿಂದ 50 ವರ್ಷದವರಲ್ಲು ಅದರಲ್ಲೂ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದು ಶೇ.50ರಷ್ಟು ರೋಗಿಗಳಲ್ಲಿ ದುಗ್ಧರಸ ಗ್ರಂಥಿಗಳ ಮೂಲಕ ಹರಡುತ್ತದೆ. ಆದರೂ ಇದನ್ನು ಗುಣಪಡಿಸಬಹುದು.
*ಫಾಲಿಕ್ಯೂಲರ್ ಕ್ಯಾನ್ಸರ್
ಹೆಚ್ಚಾಗಿ ಕಂಡು ಬರುವ ಮತ್ತೊಂದು ಬಗೆಯ ಕ್ಯಾನ್ಸರ್ ಎಂದರೆ ಫಾಲಿಕ್ಯೂಲರ್ ಕ್ಯಾನ್ಸರ್. ಇದು ಥೈರಾಯ್ಡ್ ಸಮಸ್ಯೆ ಇರುವವರಲ್ಲಿ 10ರಲ್ಲಿ ಒಬ್ಬ ವ್ಯಕ್ತಿಯಲ್ಲಿ ಕಂಡು ಬರುತ್ತದೆ. ಇದು ಪಾಲಲರಿ ಕ್ಯಾನ್ಸರ್‌ಗಿಂತ ಗಂಭೀರವಾದ್ದದು. ಇದು 40 ವರ್ಷ ಮೇಲ್ಪಟ್ಟವರಲ್ಲಿ ಕಂಡು ಬರುತ್ತದೆ. ಇದು ಅಯೋಡಿಯನ್ ಕೊರತೆಯಿಂದಾಗಿ ಉಂಟಾಗುತ್ತದೆ. ಅಲ್ಲದೆ ಈ ಕ್ಯಾನ್ಸರ್ ದುಗ್ಧರಸಗಳ ಮೂಲಕ ದೇಹದ ಇತರ ಅಂಗಗಳಿಗೆ ಹರಡುವುದಿಲ್ಲ.

2. ಮೆಡ್ಯೂಲರಿ ಥೈರಾಯ್ಡ್ ಕ್ಯಾನ್ಸರ್ (MTC)
ಇದು ತುಂಬಾ ಅಪರೂಪವಾದ ಕ್ಯಾನ್ಸರ್ ಆಗಿದೆ. ಇದು ಥೈರಾಯ್ಡ್ ಸಮಸ್ಯೆ ಇರುವವರಲ್ಲಿ ಸೇ.4ರಷ್ಟು ಜನರಲ್ಲಿ ಮಾತ್ರ ಕಂಡು ಬರುತ್ತದೆ. ಥೈರಾಯ್ಡ್ ಗ್ರಂಥಿಯಲ್ಲಿ ಈ ಕ್ಯಾನ್ಸರ್ ಬೆಳೆಯುತ್ತದೆ. ಇದರಲ್ಲಿ ಸ್ಪೋರಾಡಿಕ್ MTC ಹಾಗೈ ಫ್ಯಾಮಿಲಿಯಾಲ್ MTC ಎಂಬ ಬಗೆಗಳಿವೆ. ಫ್ಯಾಮಿಲಿಯಾಲ್ MTC ವಂಶಪಾರಂಪರ್ಯವಾಗಿ ಬರುವ ಸಾಧ್ಯತೆ ಇದೆ.

3 ಅನಾಪ್ಲಾಸ್ಟಿಕ್ ಥೈರಾಯ್ಡ್ ಕ್ಯಾನ್ಸರ್ (ATC)
ಇದನ್ನು ಅನ್‌ಡಿಫರನ್ಷಿಯಟೇಟ್ ಕಾರ್ಸಿನೋಮಾ ಎಂದು ಎಂದು ಕೂಡ ಕರೆಯುತ್ತಾರೆ. ಇದು ಸಾಮಾನ್ಯ ಥೈರಾಯ್ಡ್ ಗ್ರಂಥಿಗಳಂತೆ ಕಾಣುವುದಿಲ್ಲ. ಇದು ಥೈರಾಯ್ಡ್ ರೋಗಿಗಳಲ್ಲಿ ಶೇ. 2ರಷ್ಟು ಜನರಲ್ಲಿ ಕಂಡು ಬರುತ್ತದೆ. ಇದು ಸಾಮಾನ್ಯವಾಗಿ 60 ವರ್ಷ ಮೇಲ್ಪಟ್ಟವರಲ್ಲಿ ಕಂಡು ಬರುತ್ತದೆ. ಇದು ಬಂದರೆ ಗುಣಪಡಿಸಲು ಸ್ವಲ್ಪ ಕಷ್ಟ. ಇದು ಬೇಗನೆ ಬೆಳೆಯುತ್ತದೆ ಹಾಗೂ ದೇಹದ ಇತರ ಭಾಗಗಳಿಗೆ ಹರಡುತ್ತದೆ.

ಥೈರಾಯ್ಡ್ ಕ್ಯಾನ್ಸರ್‌ಗೆ ಕಾರಣಗಳು
ಥೈರಾಯ್ಡ್ ಕ್ಯಾನ್ಸರ್ ಪ್ರಮುಖವಾಗಿ ಅನುವಂಶಿಕ ರೂಪಾಂತರಗಳಿಂದ ಉಂಟಾಗುತ್ತದೆ. ಇದಕ್ಕೆ ಏನು ನಿಖರವಾದ ಕಾರಣವೇನು ಎಂಬುವುದು ಇನ್ನೂ ತಿಳಿದು ಬಂದಿಲ್ಲ.
ಥೈರಾಯ್ಡ್ ಕ್ಯಾನ್ಸರ್ ಲಕ್ಷಣಗಳು
* ನೋವು ಇಲ್ಲದ ಗಡ್ಡೆ ಬೆಳೆಯುವುದು
* ಆಹಾರವನ್ನು ನುಂಗಲು ಕಷ್ಟವಾಗುವುದು
* ಧ್ವನಿಯಲ್ಲಿ ವ್ಯತ್ಯಾಸ ಉಂಟಾಗುವುಉದ
* ಗಂಟಲಿನಲ್ಲಿ ನೋವು
* ಕೆಮ್ಮು
* ಉಸಿರಾಡಲು ತೊಂದರೆ
ಸೂಚನೆ: ಗಂಟಲಿನಲ್ಲಿ ಗಡ್ಡೆ ಬೆಳೆಯುವುದು ಸಾಮಾನ್ಯ. ಎಲ್ಲರಿಗೂ ಇದು ಕ್ಯಾನ್ಸರ್ ಗಡ್ಡೆಗಳು ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಗಂಟಲಿನ ಸೋಂಕು ಉಂಟಾದಾಗ ಈ ರೀತಿ ಉಂಟಾಗುತ್ತದೆ. ತಜ್ಞರ ಬಳಿ ತೋರಿಸಿದರೆ ನಿಖರ ಮಾಹಿತಿ ದೊರೆಯುವುದು.

ಥೈರಾಯ್ಡ್ ಕ್ಯಾನ್ಸರ್ ಅಪಾಯ ಯಾರಿಗೆ ಹೆಚ್ಚು?
* 30 ವರ್ಷ ಮೇಲ್ಪಟ್ಟವರಲ್ಲಿ
* ಮಹಿಳೆಯರಿಗೆ
* ಮಗುವಾಗಿದ್ದಾಗ ರೇಡಿಯೇಷನ್ ತಾಗಿದ್ದರೆ
* ಅನುವಂಶೀಯವಾಗಿ ಬರಬಹುದು
* ಏಷ್ಯಾ ಖಂಡದಲ್ಲಿ ಹುಟ್ಟಿದವರಲ್ಲಿ
* ಧೂಮಪಾನಿಗಳಲ್ಲಿ
* ಅಧಿಕ ಮೈತೂಕ
* ಅಯೋಡಿನ್ ಕೊರತೆ ಇರುವವರಲ್ಲಿ
ಹೀಗೆ ಅನೇಕ ಕಾರಣಗಳಿಂದ ಥೈರಾಯ್ಡ್ ಕ್ಯಾನ್ಸರ್ ಉಂಟಾಗುವುದು. ಕೆಲವೊಂದು ಅಪಾಯಗಳನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ಅನುವಂಶೀಯವಾಗಿ ಬರುವುದು ಹಾಗೂ ಧೂಮಪಾನ. ಕೆಲವರಿಗೆ ಮೇಲೆ ಸೂಚಿಸಿದ ಯಾವುದೇ ಕಾರಣಗಳು ಇಲ್ಲದಿದ್ದರೂ ಥೈರಾಯ್ಡ್ ಕ್ಯಾನ್ಸರ್ ಬರುವುದು. ಆಗಾಗ ವೈದ್ಯಕೀಯ ಪರೀಕ್ಷೆ ಮಾಡಿಸುತ್ತಿದ್ದರೆ ಮೊದಲನೇ ಹಂತದಲ್ಲಿಯೇ ಗುಣಪಡಿಸಬಹುದು.

ಥೈರಾಯ್ಡ್ ಕ್ಯಾನ್ಸರ್ ಯಾವಾಗ ತುಂಬಾ ಅಪಾಯಕಾರಿ?
ಕ್ಯಾನ್ಸರ್ ಕಣಗಳು ದೇಹದ ಇತರ ಅಂಗಗಳಿಗೆ ಹರಡಿದರೆ ಅಪಾಯ ಹೆಚ್ಚು. ಇನ್ನು ಶಸ್ತ್ರ ಚಿಕಿತ್ಸೆಯಲ್ಲಿ ಚಿಕ್ಕ ಕ್ಯಾನ್ಸರ್ ಕಣಗಳು ಉಳಿದು ಬಿಟ್ಟರೆ ಆಗ ರೋಗ ಉಲ್ಬಣಗೊಂಡು ಅಪಾಯ ಉಂಟಾಗುವುದು.
ಕ್ಯಾನ್ಸರ್ ಪತ್ತೆ
ನಿಮ್ಮ ಆರೋಗ್ಯದ ಇತಿಹಾಸ: ವೈದ್ಯರು ಹಲವಾರು ಪ್ರಶ್ನೆಗಳನ್ನು ಕೇಳಿ ನಿಮ್ಮ ಆರೋಗ್ಯದ ಬಗ್ಗೆ ತಿಳಿಯುವರು. ಇದರಿಂದ ಗೊತ್ತಾಗುತ್ತದೆ.
ಪರೀಕ್ಷೆ
ಅಲ್ಟ್ರಾಸೌಂಡ್ ಬಳಸಿ ಪರೀಕ್ಷೆ ಮಾಡಿಸಿದಾಗ ರೋಗದ ಬಗ್ಗೆ ಗೊತ್ತಾಗುವುದು
ರಕ್ತ ಪರೀಕ್ಷೆ
ರಕ್ತ ಪರೀಕ್ಷೆಯಲ್ಲಿ ಥೈರಾಯ್ಡ್ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಕಂಡು ಬಂದರೆ ವೈದ್ಯರಿಗೆ ಅನುಮಾನ ಬಂದರೆ ಕ್ಯಾನ್ಸರ್ ಪರೀಕ್ಷೆ ಮಾಡಿಸುವಂತೆ ಸೂಚಿಸಬಹುದು.
ಥೈರಾಯ್ಡ್ ಕ್ಯಾನ್ಸರ್‌ಗೆ ಚಿಕಿತ್ಸೆ
ಸರ್ಜರಿ: ಶಸ್ತ್ರ ಚಿಕಿತ್ಸೆ ಮೂಲಕ ಕ್ಯಾನ್ಸರ್ ಗಡ್ಡೆ ತೆಗೆಯಲಾಗುವುದು. ಕೆಲವೊಮ್ಮೆ ಥೈರಾಯ್ಡ್ ಗ್ರಂಥಿಯನ್ನೇ ತೆಗೆಯಬಹುದು.
ಹಾರ್ಮೋನ್ ಚಿಕಿತ್ಸೆ
ಸರ್ಜರಿಗೆ ಒಳಗಾದ ರೋಗಿಗಳಿಗೆ ದೇಹದಲ್ಲಿ ಹಾರ್ಮೋನ್ ಸಮತೋಲನಕ್ಕಾಗಿ ಹಾರ್ಮೋನ್ ಚಿಕಿತ್ಸೆ ಮಾಡಲಾಗುವುದು.
ರೇಡಿಯೋಆ್ಯಕ್ಟಿವ್ ಅಯೋಡಿನ್
ಇದರಲ್ಲಿ ಸರ್ಜರಿ ಮಾಡದೆ ಕ್ಯಾನ್ಸರ್ ಕಣಗಳನ್ನು ಕೊಲ್ಲಲಾಗುವುದು.
ಟಾರ್ಗೆಟಡ್ ಥೆರಪಿ: ಇದರಲ್ಲಿ ಜೀನ್ಸ್, ಪ್ರೊಟೀನ್ಸ್ ಅಥವಾ ಜೀವಕೋಶಗಳು ಇವುಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾದ ಅಂಶ ಗುರುತಿಸಿ ಚಿಕಿತ್ಸೆ ನೀಡಲಾಗುವುದು.

ತಡೆಗಟ್ಟುವುದು ಹೇಗೆ:
* ಕುಟುಂಬದಲ್ಲಿ ಈ ಸಮಸ್ಯೆ ಯಾರಿಗಾದರೂ ಇದ್ದರೆ ನೀವೂ ವೈದ್ಯರನ್ನು ಕಂಡು ಪರೀಕ್ಷೆ ಮಾಡಿಸಿ.
* ರೇಡಿಯೋಆ್ಯಕ್ಟಿವ್ ಪವರ್ ಪ್ಲಾಂಟ್‌ಗಳಲ್ಲಿ ಕೆಲಸ ಮಾಡುತ್ತಿದ್ದರೆ ಆರೋಗ್ಯ ತಪಾಸಣೆ ಮಾಡಿಸಿ.
* ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದರೆ ವೈದ್ಯರ ಭೇಟಿ ಮಾಡಿ.