Just In
Don't Miss
- Automobiles
2026ರ ವೇಳಗೆ ಭಾರತದಲ್ಲಿ ಓಡಲಿದೆ ಮೊದಲ ಬುಲೆಟ್ ರೈಲು
- Technology
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದೀರಾ? ಎಷ್ಟು ದಂಡ ಬಾಕಿ ಇದೆ?..ಹೀಗೆ ತಿಳಿಯಿರಿ!
- Sports
ಭಾರತದ ಮುಂದಿನ ಟೆಸ್ಟ್ ಸರಣಿಗೆ ಸರ್ಫರಾಜ್ ಖಾನ್ ಆಯ್ಕೆ ಆಗಲಿ: ಸುನಿಲ್ ಗವಾಸ್ಕರ್
- News
ಶಾಪೂರ್ಜಿ ಪಲ್ಲೋಂಜಿ ಗ್ರೂಪ್ ಅಧ್ಯಕ್ಷರಾಗಿದ್ದ ಪಲ್ಲೋಂಜಿ ಮಿಸ್ತ್ರಿ ನಿಧನ
- Movies
ಅಭಿಮಾನಿಗಳಿಗೆ ಮನವಿ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್
- Finance
ಜಿಎಸ್ಟಿ ಕೌನ್ಸಿಲ್ ಸಭೆ ಆರಂಭ: ಈ ಮಾಹಿತಿ ತಿಳಿದಿರಿ
- Education
Cochin Shipyard Limited Recruitment 2022 : 106 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಬನ್ನೇರುಘಟ್ಟ - ಹೈಟೆಕ್ ನಗರ ಬೆಂಗಳೂರಿನಲ್ಲಿರುವ ಒಂದು ನೈಸರ್ಗಿಕ ತಾಣ
ಕೊರೊನಾ: BA.3 ವೈರಸ್‌ನಿಂದ ಮತ್ತೊಂದು ಗಂಡಾಂತರ ಕಾದಿದೆ
ಒಮಿಕ್ರಾನ್ ಹೊಸ ರೂಪಾಂತರ BA.3 ಹೆಚ್ಚು ಅಪಾಯಕಾರಿಯಾಗಿದೆ ಎಂದು ಹೊಸ ಅಧ್ಯಯನ ಹೆಳಿದೆ
ಕೋವಿಡ್ 19 ರೂಪಾಂತರಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ.
ಹೊಸ-ಹೊಸ ರೂಪಾಂತರ ಕಂಡು ಬರುತ್ತಲೇ ಇದೆ. ಇತ್ತೀಚೆಗೆ ಬಂದ ಒಮಿಕ್ರಾನ್‌ನಲ್ಲೂ ಹಲವಾರು ರೂಪಾಂತರಗಳಿವೆ. ಅವುಗಳನ್ನು ಒಮಿಕ್ರಾನ್ BA.1, BA.1.1, BA.2, ಮತ್ತು BA.3 ಎಂದು ಗುರುತಿಸಲಾಗಿದೆ. ಇದರ ಕುರಿತು ಹಲವಾರು ಅಧ್ಯಯನಗಳು ನಡೆಯತ್ತಿವೆ. ಅದರಲ್ಲಿ ಒಮಿಕ್ರಾನ್‌ನ ಉಪ ರೂಪಾಂತರಗಳು ಅಪಾಯಕಾರಿಯಾಗಿದೆ ಎಂದು ತಿಳಿದು ಬಂದಿದೆ.

ವಿಶ್ವದಲ್ಲಿ ಪತ್ತೆಯಾಗುತ್ತಿರುವ ಒಮಿಕ್ರಾನ್ ಉಪ ರೂಪಾಂತರಗಳು
ಇದೀಗ ವಿಶ್ವದ ಹಲವು ಕಡೆ BA.1, BA.1.1ಮತ್ತು BA.2 ರೂಪಾಂತರ ಪತ್ತೆಯಾಗಿದೆ. ಅಲ್ಲದೆ BA.3 ಮತ್ತು ಇತರ ಉಪ ರೂಪಾಂತರಗಳು ಕಂಡು ಬಂದಿದೆ. ಇದರ ಕುರಿತು ಅನೇಕ ಸಂಶೋಧನೆಗಳು ನಡೆಯುತ್ತಿವೆ. ಜಪಾನಿನಲ್ಲೂ ಇದರ ಕುರಿತು ಅಧ್ಯಯನ ನಡೆಸಲಾಯಿತು. ಇದರ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞೆ ಮರಿಯಾ ವ್ಯಾನ್ ಕಾರ್ಖೋವೆBA.3 ವೈರಸ್‌ನ ಅಪಾಯದ ಬಗ್ಗೆಯೂ ಎಚ್ಚರಿಸಿದ್ದಾರೆ.

BA.1, BA.1.1 ಮತ್ತು BA.2 ನಡುವೆ ದೊಡ್ಡ ವ್ಯತ್ಯಾಸವಿಲ್ಲ
ಒಮಿಕ್ರಾನ್ ಉಪ ರೂಪಾಂತರ BA.1, BA.1.1 ಮತ್ತು BA.2 ಸೋಂಕಿತರ ಮೇಲೆ ಅಧ್ಯಯನ ನಡೆಸಿದಾಗ ಈ ಉಪ ರೂಪಾಂತರಗಳಲ್ಲಿ ದೊಡ್ಡ ವ್ಯತ್ಯಾಸವೇನೂ ಇಲ್ಲ ಎಂಬುವುದು ತಿಳಿದು ಬಂದಿದೆ, ಹಲವು ದೇಶಗಳಲ್ಲಿ BA.1 ತಗುಲಿದ ಸೋಂಕಿತರನ್ನು BA.2 ತಗುಲಿದ ಸೋಂಕಿತರೊಂದಿಗೆ ಹೋಲಿಸಿದಾಗ ರೋಗ ಲಕ್ಷಣಗಳಲ್ಲಿ ದೊಡ್ಡ ವ್ಯತ್ಯಾಸವೇನೂ ಇಲ್ಲ ಎಂದು ತಿಳಿದು ಬಂದಿತ್ತು.

ಹೊಸ ಅಧ್ಯಯನ ಪ್ರಕಾರ BA.3 ಅಪಾಯಕಾರಿಯಾಗಲಿದೆ
ಜಪಾನಿನಲ್ಲಿ ನಡೆಸಿದ ಹೊಸ ಅಧ್ಯಯನ ಪ್ರಕಾರ ಒಮಿಕ್ರಾನ್ ರೂಪಾಂತರ BA.3ಹೆಚ್ಚು ಅಪಾಯಕಾರಿಯಾಗಲಿದೆ ಎಂದು ತಿಳಿದು ಬಂದಿದೆ. ಹ್ಯಾಮ್‌ಸ್ಟರ್‌ನಲ್ಲಿ ಕೊರೊನಾ ಸೋಂಕಿತರು ಹೆಚ್ಚಾಗಲು ಈ ರೂಪಾಂತರ ಕಾರಣವಾಗಲಿದೆ ಎಂದು ಹೇಳಿದೆ.

ಜಪಾನಿನಲ್ಲಿ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದ ಪ್ರಮುಖ ಅಂಶಗಳು
* ಒಮಿಕ್ರಾನ್ ರೂಪಾಂತರ BA.3 ನಿಂದ ಕೊರೊನಾ ಸೋಂಕು ಗಂಭೀರವಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
* BA.1 ಗಿಂತ BA.3ನ ವೈರಾಲಾಜಿಕಲ್ ಗುಣಲಕ್ಷಣಗಳು ಭಿನ್ನವಾಗಿದೆ ಎಂದು ತಿಳಿದು ಬಂದಿದೆ.
ಒಮಿಕ್ರಾನ್ ಮೈಲ್ಡ್ ಅಂತ ತಳ್ಳಿ ಹಾಕುವಂತಿಲ್ಲ, BA.3 ಹೆಚ್ಚು ಅಪಾಯಕಾರಿಯಾಗುವ ಸಾಧ್ಯತೆ ಇದೆ ಎಂದು ಹೊಸ ಅಧ್ಯಯನ ಎಚ್ಚರಿಸಿದೆ.