For Quick Alerts
ALLOW NOTIFICATIONS  
For Daily Alerts

ಪಿಸಿಒಎಎಸ್‌ಗೆ ಈ ಆಹಾರಗಳು ಅತೀ ಅಪಾಯಕಾರಿ

|

ಪಿಸಿಒಎಸ್ ಸಮಸ್ಯೆ ಇತ್ತೀಚಿನ ಬಹುತೇಕ ಮಂದಿ ಮಹಿಳೆಯರು ಅನುಭವಿಸುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆ. ಪಿಸಿಒಎಸ್ ನಿಂದ ಬಳಲುತ್ತಿರುವವರಿಗೆ ದೇಹದಲ್ಲಿ ರಕ್ತದ ಒತ್ತಡ, ಮಧುಮೇಹ ಹೃದಯದ ತೊಂದರೆ ತುಂಬಾ ಜಾಸ್ತಿ ಇರುತ್ತದೆ ಎಂದು ಹೇಳುತ್ತಾರೆ.

These Healthy Food Are Worse For Your PCOS

ದೇಹದಲ್ಲಿ ಪಿಸಿಓಎಸ್ ಸಮಸ್ಯೆ ಹೆಚ್ಚಾದಷ್ಟು ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಕೂಡ ಹೆಚ್ಚುತ್ತದೆ. ಇದರಿಂದ ನಮ್ಮ ದೇಹ ಹೆಚ್ಚಾಗಿ ಉತ್ಪತ್ತಿಯಾದ ಇನ್ಸುಲಿನ್ ಅಂಶದ ವಿರುದ್ಧ ಪ್ರತಿರೋಧಕತೆಯನ್ನು ಬೆಳೆಸಿಕೊಳ್ಳುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ಈ ರೀತಿ ಹೆಚ್ಚಾದ ಇನ್ಸುಲಿನ್ ಅಂಶದ ಕಾರಣದಿಂದ ಮಧುಮೇಹ ತುಂಬಾ ಜಾಸ್ತಿಯಾಗುತ್ತದೆ.

ನಮ್ಮ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಅಂಶ ಸಾಮಾನ್ಯ ಮಟ್ಟದಲ್ಲಿ ಇರುವಂತೆ ನೋಡಿಕೊಳ್ಳಲು ನಮ್ಮ ದೇಹ ಅದಕ್ಕೆ ಪೂರಕವಾಗಿ ಹೆಚ್ಚಿನ ಪ್ರಮಾಣದ ಇನ್ಸುಲಿನ್ ಅಂಶವನ್ನು ಉತ್ಪತ್ತಿ ಮಾಡುತ್ತದೆ. ಆದರೆ ವೈದ್ಯರ ಪ್ರಕಾರ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಈ ರೀತಿಯ ಇನ್ಸುಲಿನ್ ಅಂಶ ಕೂಡ ಸಾಮಾನ್ಯ ಮಟ್ಟದಲ್ಲಿರಬೇಕು. ಒಂದು ವೇಳೆ ಇದು ಮಿತಿಮೀರಿದರೆ ವಿಶೇಷವಾಗಿ ಮಹಿಳೆಯರಲ್ಲಿ ಲೈಂಗಿಕ ಹಾರ್ಮೋನು ಎಂದು ಖ್ಯಾತಿಯಾದ ' ಟೆಸ್ಟೋಸ್ಟೆರೋನ್ ' ಉತ್ಪತ್ತಿ ಕೂಡ ಜಾಸ್ತಿಯಾಗುತ್ತದೆ.

ಪಿಸಿಓಎಸ್ ಮಹಿಳೆಯರಿಗೆ ಇಲ್ಲಿವೆ ಕೆಲವು ಆರೋಗ್ಯಕರ ಟಿಪ್ಸ್

ಅತಿಯಾದ ಸಕ್ಕರೆ ಅಂಶ ಸೇವಿಸಬೇಡಿ

ಅತಿಯಾದ ಸಕ್ಕರೆ ಅಂಶ ಸೇವಿಸಬೇಡಿ

ಆರೋಗ್ಯ ಸಂಶೋಧಕರ ಮಾಹಿತಿ ಪ್ರಕಾರ ಯಾವ ಮಹಿಳೆಯರು ಪಿಸಿಓಎಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆಯೋ, ಅಂತಹವರಿಗೆ ಮಧುಮೇಹ ಕಟ್ಟಿಟ್ಟ ಬುತ್ತಿ. ಏಕೆಂದರೆ ಪಿಸಿಓಎಸ್ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಲ್ಲಿ ಅದಾಗಲೇ ಇನ್ಸುಲಿನ್ ಮತ್ತು ಸಕ್ಕರೆ ಅಂಶದ ಪ್ರಮಾಣ ಮಿತಿಮೀರಿ ಹೋಗಿರುತ್ತದೆ.

ಇಂತಹ ಸಮಯಗಳಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್ ಅಂಶವನ್ನು ಹೊಂದಿರುವ ಆಹಾರವನ್ನು ಸೇವಿಸುವುದರಿಂದ ಮತ್ತು ಬೆಳಗ್ಗೆ ಸಂಜೆ ಸಕ್ಕರೆಯುಕ್ತ ಕಾಫಿ - ಟೀ ಕುಡಿಯುವುದರಿಂದ ಆರೋಗ್ಯ ಇನ್ನಷ್ಟು ಹದಗೆಡುತ್ತದೆ. ಇದರ ಜೊತೆಗೆ ಸಕ್ಕರೆ ಅಂಶ ತೀರಾ ಹೆಚ್ಚಾಗಿ ಪಿಸಿಓಎಸ್ ಸಮಸ್ಯೆ ವಿಪರೀತವಾಗುತ್ತದೆ ಎಂದು ಹೇಳುತ್ತಾರೆ.

ಆದ್ದರಿಂದ ಪಿಸಿಓಎಸ್ ಸಮಸ್ಯೆ ಹೊಂದಿರುವ ಮಹಿಳೆಯರು ಕೃತಕ ಸಿಹಿ ಅಂಶದ ಜೊತೆಗೆ ಯಾವುದೇ ಬಗೆಯ ಬೇಕರಿ ಸಿಹಿ ತಿಂಡಿಗಳು, ಮನೆಯಲ್ಲಿ ಮಾಡಿದ ಸಿಹಿ ಅಡುಗೆಗಳು, ಕೂಲ್ ಡ್ರಿಂಕ್ಸ್, ಕಾಫಿ, ಚಹಾ, ಐಸ್ ಕ್ರೀಮ್, ಚಾಕ್ಲೇಟ್ ಇತ್ಯಾದಿ ಆಹಾರ ಪದಾರ್ಥಗಳಿಂದ ದೂರವೇ ಉಳಿಯಬೇಕಾಗುತ್ತದೆ.

ಮಾಂಸಾಹಾರ ನಿಷಿದ್ಧ

ಮಾಂಸಾಹಾರ ನಿಷಿದ್ಧ

ಮಾಂಸಾಹಾರದಲ್ಲಿ ಸ್ಯಾಚುರೇಟೆಡ್ ಕೊಬ್ಬಿನ ಅಂಶ ಮತ್ತು ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಿದ್ದು, ಮನುಷ್ಯನ ಅತಿ ಮುಖ್ಯ ಭಾಗವಾದ ಹೃದಯಕ್ಕೆ ಸಂಬಂಧ ಪಟ್ಟ ಹೃದಯ ರಕ್ತನಾಳದ ಕಾಯಿಲೆಯನ್ನು ಉಂಟುಮಾಡುತ್ತದೆ. ಆರಂಭಿಕ ದಿನಗಳಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬರದೇ ಇರುವುದರಿಂದ ಸಾಮಾನ್ಯವಾಗಿ ಯಾರೂ ಇದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ.

ಆದರೆ ದಿನಕಳೆದಂತೆ ದೇಹದ ತೂಕ ಕ್ರಮೇಣವಾಗಿ ಹೆಚ್ಚಾಗುವುದರ ಜೊತೆಗೆ ದೇಹದಲ್ಲಿ ಈಗಾಗಲೇ ಅಸಮತೋಲನಗೊಂಡಿರುವ ಹಾರ್ಮೋನಿನ ವ್ಯತ್ಯಾಸವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. ಇದರಿಂದ ಪಿಸಿಓಎಸ್ ಸಮಸ್ಯೆಯಲ್ಲಿ ತೊಳಲಾಡುತ್ತಿರುವ ಮಂದಿಗೆ ಕಂಟಕ ತಪ್ಪಿದ್ದಲ್ಲ

ಜಂಕ್ ಫುಡ್ಸ್ ಸೇವನೆಯಲ್ಲಿ ಮಿತಿಯಿರಲಿ

ಜಂಕ್ ಫುಡ್ಸ್ ಸೇವನೆಯಲ್ಲಿ ಮಿತಿಯಿರಲಿ

ಇತ್ತೀಚಿನ ಜನರಲ್ಲಿ ರಸ್ತೆಬದಿಯ ಯಾವುದೇ ಜಂಕ್ ಫುಡ್ ಹೆಸರು ಹೇಳಿದರೂ ಬಾಯಲ್ಲಿ ನೀರೂರುತ್ತದೆ. ಕೆಲವರಂತೂ ಮನೆಯ ಆಹಾರದ ಕಡೆಗೆ ತಿರುಗಿಯೂ ನೋಡುವುದಿಲ್ಲ. ಆದರೆ ಅವರಿಗೇ ಗೊತ್ತಿಲ್ಲದೆ ನಿಧಾನವಾಗಿ ಸಾವಿನ ಕಡೆಗೆ ಹತ್ತಿರವಾಗುತ್ತಿರುತ್ತಾರೆ. ಏಕೆಂದರೆ ಸಂಸ್ಕರಿಸಿದ ರಸ್ತೆಬದಿಯ ಆಹಾರ ಪದಾರ್ಥಗಳಲ್ಲಿ ಆಹಾರ ಕೆಡದಂತೆ ದೀರ್ಘಕಾಲ ಉಳಿಯಲು ಅದಕ್ಕೆ ಹೆಚ್ಚು ಉಪ್ಪಿನ ಅಂಶ ಮತ್ತು ಪ್ರಿಸರ್ವೇಟಿವ್ಸ್ ಬಳಸಿರುತ್ತಾರೆ.

ಇದರ ಜೊತೆಗೆ ಸಂಸ್ಕರಿಸಿದ ಆಹಾರಗಳಲ್ಲಿ ದೇಹಕ್ಕೆ ಅನಾರೋಗ್ಯ ಉಂಟುಮಾಡುವ ಮಸಾಲೆ ಪದಾರ್ಥಗಳು, ಕೊಬ್ಬಿನ ಅಂಶಗಳು, ಕೃತಕ ಸಿಹಿ ಅಂಶಗಳು ಸಾಕಷ್ಟಿದ್ದು, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗಲು ಮತ್ತು ರಕ್ತದ ಒತ್ತಡ ಮಿತಿಮೀರಿ ಹೋಗಲು ಇವುಗಳೇ ಕಾರಣವಾಗುತ್ತವೆ.

ಜಂಕ್ ಫುಡ್ ಗಳಲ್ಲಿರುವ ಸಕ್ಕರೆ ಅಂಶ ಗ್ಲೈಸಿಮಿಕ್ ಸೂಚ್ಯಂಕವನ್ನು ಹೆಚ್ಚು ಮಾಡಿ ಮಧುಮೇಹದ ರೋಗಲಕ್ಷಣಗಳನ್ನು ಜಾಸ್ತಿ ಮಾಡುತ್ತದೆ. ಇದರಿಂದ ಪಿಸಿಓಎಸ್ ಸಮಸ್ಯೆಯಲ್ಲಿರುವ ಮಹಿಳೆಯರಿಗೆ ದೇಹದಲ್ಲಿ ಬೊಜ್ಜಿನ ಅಂಶ ಉಂಟಾಗಲು ಕಾರಣವಾಗುತ್ತದೆ.

ಡೈರಿ ಉತ್ಪನ್ನಗಳೂ ಬೇಡ

ಡೈರಿ ಉತ್ಪನ್ನಗಳೂ ಬೇಡ

ಕೆಲವು ಮಿತಿಮೀರಿದ ಪ್ರಕರಣಗಳನ್ನು ನೋಡಿ ವೈದ್ಯರು ಪಿಸಿಓಎಸ್ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ಡೇರಿ ಉತ್ಪನ್ನಗಳನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು ಎಂಬ ಕಟ್ಟಪ್ಪಣೆ ಮಾಡಿರುತ್ತಾರೆ. ಆದರೂ ಮಹಿಳೆಯರು ತಮ್ಮ ಆರೋಗ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತುಂಬಾ ಮಿತಿಯಲ್ಲಿ ಸೇವಿಸಬೇಕಾಗುತ್ತದೆ.

ಡೈರಿ ಉತ್ಪನ್ನಗಳಲ್ಲಿ ಕಾರ್ಬೋಹೈಡ್ರೆಟ್ ಅಂಶ ಹೆಚ್ಚಾಗಿರುತ್ತದೆ. ಇದರಿಂದ ದೇಹದಲ್ಲಿ ಗ್ಲೂಕೋಸ್ ಮಟ್ಟ ಹೆಚ್ಚಾಗಿ ಇನ್ಸುಲಿನ್ ಉತ್ಪತ್ತಿಯಾಗಲು ಕಾರಣವಾಗುತ್ತದೆ. ಹಾಗಾಗಿ ಸಮತೋಲನ ಆಹಾರದ ಜೊತೆಗೆ ಸ್ವಲ್ಪ ಎಚ್ಚರಿಕೆಯೂ ಅಗತ್ಯ ಎಂದು ಹೇಳಬಹುದು.

ಗ್ಲುಟೆನ್ ಅಂಶ ಹೊಂದಿರುವ ಆಹಾರಗಳು

ಗ್ಲುಟೆನ್ ಅಂಶ ಹೊಂದಿರುವ ಆಹಾರಗಳು

ಸಾಮಾನ್ಯವಾಗಿ ಮಧುಮೇಹದಿಂದ ಬಳಲುತ್ತಿರುವವರು ಹೆಚ್ಚು ಚಪಾತಿ ತಿನ್ನುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಪಿಸಿಓಎಸ್ ಸಮಸ್ಯೆಯನ್ನು ಅನುಭವಿಸುತ್ತಿರುವ ಮಹಿಳೆಯರು ಚಪಾತಿಯಂತಹ ಗ್ಲುಟೆನ್ ಅಂಶ ಹೊಂದಿರುವ ಆಹಾರಗಳನ್ನು ಸಾಧ್ಯವಾದಷ್ಟು ನಿಯಂತ್ರಣದಲ್ಲಿ ಇಡಬೇಕೆಂದು ವೈದ್ಯರು ಸೂಚಿಸುತ್ತಾರೆ. ಏಕೆಂದರೆ ಮಹಿಳೆಯರ ದೇಹದಲ್ಲಿ gluten ಅಂಶ ಹೆಚ್ಚಾದಷ್ಟು ಉರಿಯೂತ ಕಡಿಮೆಯಾಗುತ್ತದೆ.

ಜೊತೆಗೆ ಇಂತಹ ಆಹಾರಗಳಲ್ಲಿ ಗ್ಲೈಸೆಮಿಕ್ ಸೂಚಂಕ ಹೆಚ್ಚಿರುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ದೇಹದ ತೂಕ ಸಾಕಷ್ಟು ಹೆಚ್ಚಾಗುತ್ತದೆ. ಮುಖ್ಯವಾಗಿ ಚಪಾತಿ, ಅನ್ನ, ಪಾಸ್ತಾ ಸೇವನೆಯನ್ನು ಸ್ವಲ್ಪ ನಿಯಂತ್ರಣ ಮಾಡಿಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ. ಇದರಿಂದ ಕ್ರಮೇಣವಾಗಿ ದಿನಕಳೆದಂತೆ ಇನ್ಸುಲಿನ್ ಉತ್ಪತ್ತಿ ಮತ್ತು ಪ್ರತಿರೋಧಕತೆ ಸಮತೋಲನವಾಗುತ್ತದೆ.

English summary

These Healthy Food Are Worse For Your PCOS

Here we are discussing about These Healthy Food Are Worse For Your PCOS. If your body produces an excess amount of insulin it can lead to the overproduction of hormones, like testosterone, by the ovaries. Read more.
X
Desktop Bottom Promotion