For Quick Alerts
ALLOW NOTIFICATIONS  
For Daily Alerts

ಯಾವ ಯುವಕರಿಗೆ ಕೊರೊನಾ ಸೋಂಕು ತಗುಲಿದರೆ ಪರಿಸ್ಥಿತಿ ಗಂಭೀರವಾಗುವುದು

|

ಕೊರೊನಾ ಎರಡನೇ ಅಲೆ ಮೊದಲಿನ ಅಲೆಯಂತೆ ಅಲ್ಲ. ಮೊದಲನೇ ಅಲೆಯಲ್ಲಾದರೆ ಕೊರೊನಾ ಸೋಂಕು ಹೆಚ್ಚಾಗಿ ವಯಸ್ಸಾದವರಲ್ಲಿ ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಕಂಡು ಬರುತ್ತಿತ್ತು. ಆದರೆ ಕೊರೊನಾ ಎರಡನೇ ಅಲೆಯಲ್ಲಿ ಗಟ್ಟಿ ಮುಟ್ಟಾದ ಯುವಕರಲ್ಲಿ ಕೂಡ ಕಂಡು ಬರುತ್ತಿದೆ. ಅಷ್ಟೇ ಅಲ್ಲ ಚಿಕ್ಕ ಪ್ರಾಯದವರು ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವುದರಿಂದ ಕೊರೊನಾ ಸೋಂಕಿನ ಬಗ್ಗೆ ಆತಂಕ ಹೆಚ್ಚಾಗಿದೆ.

ಇತ್ತೀಚೆಗೆ 18-34 ವರ್ಷದರಲ್ಲಿ ಗಂಭೀರ ಸೋಂಕಿನ ಲಕ್ಷಣಗಳು ಕಂಡು ಬಂದು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಶೇ.20ರಷ್ಟು ಸೋಂಕಿತರಿಗೆ ಐಸಿಯು ಅಗ್ಯತವಿದೆ, ಶೇ.10ರಷ್ಟು ಸೋಂಕಿತರಿಗೆ ವೆಂಟಿಲೇಷನ್ ಬೇಕಾಗುತ್ತದೆ.

ಸಂಶೋಧನೆ ಪ್ರಕಾರ ಚಿಕ್ಕ ಪ್ರಾಯದವರಲ್ಲೂ ಗಂಭೀರ ಸೋಂಕಿನ ಲಕ್ಷಣಗಳು ಕಂಡು ಬರುತ್ತಿವೆ.

ಪ್ರತೀ 5 ಯುವ ಕೊರೊನಾ ಸೋಂಕಿತರಲ್ಲಿ ಒಬ್ಬರಿಗೆ ಐಸಿಯು ಅಗ್ಯತವಿರುತ್ತದೆ.

ಚಿಕ್ಕ ಪ್ರಾಯವರಲ್ಲಿ ಕೊರೊನಾ ಸೋಂಕು

ಚಿಕ್ಕ ಪ್ರಾಯವರಲ್ಲಿ ಕೊರೊನಾ ಸೋಂಕು

ಸಂಶೋಧಕರ ಪ್ರಕಾರ 18-34 ವರ್ಷದವರಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಂಡು ಬರುತ್ತಿದ್ದು, ಅವರಲ್ಲಿ

* ಶೇ. 20ರಷ್ಟು ಜನರಿಗೆ ಐಸಿಯು ಅಗ್ಯತವಿರುತ್ತದೆ

* ಅದರಲ್ಲಿ ಶೇ. 10ರಷ್ಟು ಜನರಿಗೆ ವೆಂಟಿಲೇಟರ್ ಅಗ್ಯತವಿರುತ್ತದೆ.

* ಶೇ. 3ರಷ್ಟು ಜನರು ಸಾವನ್ನಪ್ಪುತ್ತಿದ್ದಾರೆ.

ಕೊರೊನಾ ಸೋಂಕು ಕಂಡು ಬರುತ್ತಿರುವ ಯುವ ಜನತೆಯಲ್ಲಿ ಶೇ.57ರಷ್ಟು ಸೋಂಕು ಯುವಕರಲ್ಲಿ ಕಂಡು ಬರುತ್ತಿದೆ. ಅದರಲ್ಲೂ ಕೊರೊನಾ ಸೋಂಕಿತ ಯುವಕರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ.

ಸೆಂಟರ್ ಫಾರ್ ಡಿಸೀಜ್ ಕಂಟ್ರೋಲ್ ಅಂಡ್ ಪ್ರಿವೆನ್ಸ್ಷನ್ ಪ್ರಕಾರ 45-64 ವರ್ಷದ ಸೋಂಕಿತರಲ್ಲಿ ಶೇ. 40ರಷ್ಟು ಸೋಕಿತರಿಗೆ ವೆಂಟಿಲೇಟರ್ ಅಗ್ಯತಬಿದ್ದರೆ 20-45 ವರ್ಷ ಒಳಗಿನವರಲ್ಲಿ ಶೇ. 12ರಷ್ಟು ಸೋಂಕಿತರಿಗೆ ವೆಂಟಿಲೇಟರ್ ಬೇಕಾಗುವುದು.

ಯಾರಿಗೆ ಕೊರೊನಾ ಸೋಂಕು ತಗುಲಿದರೆ ಅಪಾಯ ಹೆಚ್ಚು?

ಯಾರಿಗೆ ಕೊರೊನಾ ಸೋಂಕು ತಗುಲಿದರೆ ಅಪಾಯ ಹೆಚ್ಚು?

ಒಬೆಸಿಟಿ, ಹೈಪರ್‌ ಟೆನ್ಷನ್, ಮಧುಮೇಹ ಈ ರೀತಿಯ ಸಮಸ್ಯೆಗಳಿದ್ದರೆ ಅಂಥವರಿಗೆ ಕೊರೊನಾ ಸೋಂಕು ತಗುಲಿದರೆ ಅಪಾಯ ಹೆಚ್ಚು.

ಒಬೆಸಿಟಿ ತುಂಬಾನೇ ಅಪಾಯಕಾರಿ

ತುಂಬಾ ದಪ್ಪಗಿರುವವರಿಗೆ ಕೊರೊನಾ ಸೋಂಕು ತಗುಲಿದರೆ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದು. ಇದನ್ನು ವೈದ್ಯಕೀಯ ಭಾಷೆಯಲ್ಲಿ disseminated intravascular coagulation ಎಂದು ಕರೆಯಲಾಗುವುದು. ಈ ರೀತಿಯಾದಾಗ ಅತ್ಯಧಿಕ ರಕ್ತಸ್ರಾವ ಉಂಟಾಗುತ್ತದೆ ಅಲ್ಲದೆ ದೇಹದಲ್ಲಿ ಆಮ್ಲಜನಕರ ಪ್ರಮಾಣ ತುಂಬಾನೇ ಕಡಿಮೆಯಾಗುತ್ತದೆ. ಇದರಿಂದಾಗಿ ಉಸಿರಾಟಕ್ಕೆ ಕಷ್ಟವಾಗಿ ಸಾವು ಸಂಭವಿಸುವುದು.

ಸಾಮಾಜಿಕ ಅಂತರ ಕಾಪಾಡಿ

ಸಾಮಾಜಿಕ ಅಂತರ ಕಾಪಾಡಿ

ಈಗ ಕೊರೊನಾ ಬಾರದಂತೆ ತಡೆಯಲು ನಮ್ಮ ಮುಂದೆ ಇರುವ ದಾರಿಯೆಂದರೆ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್‌ ಧರಿಸುವುದು, ಆಗಾಗ ಕೈ ತೊಳೆಯುವುದು.

* ನಾನು ಆರೋಗ್ಯವಾಗಿದ್ದೇನೆ, ನಂಗೇನು ವಯಸ್ಸಾಗಿಲ್ಲ ಎಂದು ನಿರ್ಲಕ್ಷ್ಯ ತೋರಿ ಅನಗ್ಯತವಾಗಿ ಮನೆಯಿಂದ ಹೊರಗಡೆ ಸುತ್ತಾಡಬೇಡಿ.

* ಜನರ ಗುಂಪು ಇರುವ ಕಡೆ ಹೋಗಬೇಡಿ, ಅಲ್ಲದೆ ಹೊರಗಡೆ ಹೋದಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ.

* ಮನೆಗೆ ಹೊರಗಿನವರು ಯಾರಾದರೂ ಬಂದ್ರೆ ನೀವು ಮಾಸ್ಕ್‌ ಧರಿಸಿರಿ, ಸಾಮಾಜಿಕ ಅಂತರ ಕಾಪಾಡಿ.

ಈಗ ಬಂದ ಕೊರೊನಾವೈರಸ್‌ಗೆ ಎಲ್ಲಾ ವಯಸ್ಸಿನವರೂ ಹುಷಾರಾಗಿರಬೇಕು

ಈಗ ಬಂದ ಕೊರೊನಾವೈರಸ್‌ಗೆ ಎಲ್ಲಾ ವಯಸ್ಸಿನವರೂ ಹುಷಾರಾಗಿರಬೇಕು

ಕೊರೊನಾ ವೈರಸ್ ಮೊದಲನೇ ಅಲೆಯಲ್ಲಿ ಮಕ್ಕಳಿಗೆ ಹಾಗೂ ಯುವಕರಿಗೆ ಬರುವುದು ತುಂಬಾ ಕಡಿಮೆ ಇತ್ತು. ಆದರೆ ಈಗ ಹಾಗೇನು ಇಲ್ಲ, ಪ್ರತಿಯೊಬ್ಬರು ಎಚ್ಚರವಹಿಸಬೇಕು. ಹಲವರು ಬದುಕಿನಲ್ಲಿ ಕೊರೊನಾ ಕರಾಳ ನರಕವನ್ನು ತೋರಿಸಿದೆ. ಕೊರೊನಾ ಬಂದ್ರೆ ಅದರ ರೋಗ ಲಕ್ಷಣಗಳು ಗಂಭೀರವಾದರೆ ಪ್ರಾಣವನ್ನು ಉಳಿಸಿಕೊಳ್ಳಲು ಹಣ, ಪ್ರಭಾವ ಏನೂ ಪ್ರಭಾವ ಬೀರಲ್ಲ. ಎಷ್ಟೋ ವೈದ್ಯರೇ ಪ್ರಾಣ ಚೆಲ್ಲಿದ್ದಾರೆ.

ಇನ್ನು ಕೆಲವರು ರೋಗ ಲಕ್ಷಣಗಳು ಕಂಡು ಬಂದಾಗ ಕೊರೊನಾ ಪರೀಕ್ಷೆ ಮಾಡಿಸುತ್ತಿಲ್ಲ, ರೋಗ ಲಕ್ಷಣಗಳು ತುಂಬಾ ಗಂಭೀರವಾದಾಗ ಪರೀಕ್ಷೆಗೆ ಹೋಗುತ್ತಾರೆ. ಅಷ್ಟೊತ್ತಿಗೆ ಕೊರೊನಾ ಶ್ವಾಸಕೋಶಕ್ಕೆ ಹಾನಿಯುಂಟು ಮಾಡಿರುತ್ತದೆ, ಇದು ಕೂಡ ಸಾವಿನ ಸಂಖ್ಯೆ ಹೆಚ್ಚಲು ಒಂದು ಪ್ರಮುಖ ಕಾರಣವಾಗಿದೆ.

ಆದ್ದರಿಂದ ಕೊರೊನಾ ಮಹಾಆರಿಯ ಈ ಸಂದರ್ಭದಲ್ಲಿ ನಿರ್ಲಕ್ಷ್ಯ ಬೇಡ.

English summary

These Conditions Put Young People at Higher Risk for COVID-19 in Kannada

These conditions put young people at higher risk for COVID-19, read on....
Story first published: Thursday, April 29, 2021, 12:35 [IST]
X
Desktop Bottom Promotion