For Quick Alerts
ALLOW NOTIFICATIONS  
For Daily Alerts

ಕೋವಿಡ್‌ 19 ಚುಚ್ಚುಮದ್ದು ಕಡ್ಡಾಯವಾದರೆ ಮಕ್ಕಳಿಗೆ ಸುರಕ್ಷಿತವೇ?

|

ಕೊರೋನಾ - ಬಹುಷಃ ಈ ಹೆಸರನ್ನು ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ಕೂಡ ಸಾಯುವವರೆಗೂ ಮರೆಯುವುದಿಲ್ಲ ಎನಿಸುತ್ತದೆ. ಏಕೆಂದರೆ ಇಡೀ ವಿಶ್ವದ ಇತಿಹಾಸದಲ್ಲೇ ಇಂತಹ ಭಯಾನಕ ಅಟ್ಟಹಾಸ ಮೆರೆದ ಖಾಯಿಲೆ ಮತ್ತೊಂದಿಲ್ಲ. 2020 ನೇ ಇಸವಿಯನ್ನು ಸಂಪೂರ್ಣವಾಗಿ ತನ್ನ ಕೈವಶ ಮಾಡಿಕೊಂಡ ಹೆಗ್ಗಳಿಕೆ ಕೊರೋನಾಗೆ ಸಲ್ಲುತ್ತದೆ. ಕೊರೋನಾದ ಸಲುವಾಗಿ ಸಾವು ಸಂಭವಿಸಿದವರ ಮನೆಯಲ್ಲಿ ಉಳಿದ ಮಂದಿ ಈಗಲೂ ಕೂಡ ನಿದ್ರೆಯಲ್ಲೂ ಬೆಚ್ಚಿ ಬೀಳುವಂತೆ ಮಾಡಿದಂತಹ ಕಾಯಿಲೆ ಇದು.

ಸಂಶೋಧಕರಿಗೆ ಹಾಗೂ ವೈದ್ಯರಿಗೆ ಕೊರೋನಾದ ಕಾರ್ಯ ವೈಖರಿಯನ್ನು ಅರ್ಥ ಮಾಡಿಕೊಳ್ಳಲು ವರ್ಷ ಕಳೆದರೂ ಇನ್ನೂ ಸಾಧ್ಯವಾಗಿಲ್ಲ. ಏಕೆಂದರೆ ಯಾವುದೇ ಸಮಯದಲ್ಲಿ ಕೊರೋನಾ ವೈರಸ್ ತನ್ನ ಗುಣ ಲಕ್ಷಣಗಳನ್ನು ಬದಲಾಯಿಸಬಹುದು. ಜನರಲ್ಲಿ ಹೊಸ ಹೊಸ ರೋಗ ಲಕ್ಷಣಗಳನ್ನು ಹುಟ್ಟುಹಾಕಬಹುದು. ಸಂಪೂರ್ಣವಾಗಿ ಕಡಿಮೆಯಾಗಿ ಮತ್ತೊಮ್ಮೆ ಎಲ್ಲಾ ಕಡೆ ಹೆಚ್ಚಾಗಬಹುದು. ಹಾಗಾಗಿಯೇ ಹೊರಗೆ ಅತ್ಯಂತ ಪರಿಣಾಮಕಾರಿಯಾದ ಒಂದು ಲಸಿಕೆಯನ್ನು ಕಂಡು ಹಿಡಿಯಲು ಇಷ್ಟೊಂದು ಸಮಯ ತೆಗೆದುಕೊಳ್ಳುತ್ತಿದೆ.

ಕೊರೊನಾ ಲಸಿಕೆ ಪರಿಣಾಮಕಾರಿಯೇ?

ಕೊರೊನಾ ಲಸಿಕೆ ಪರಿಣಾಮಕಾರಿಯೇ?

ಸಂಶೋಧನೆಗಳು ಹೇಳುವ ಪ್ರಕಾರ ತಯಾರಾದ ಲಸಿಕೆ ಕೂಡ ಶೇಕಡ 100% ವೈರಸ್ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಹೇಳುವುದಕ್ಕೆ ಬರುವುದಿಲ್ಲ. ಒಂದು ವರ್ಷ ಕಳೆದ ನಂತರ ಮತ್ತೊಮ್ಮೆ ಇದೇ ರೀತಿ ಕೊರೋನಾ ವೈರಸ್ ಸೋಂಕು ತನ್ನ ಉಪಟಳ ಮೆರೆಯುವ ಸಾಧ್ಯತೆ ಹೆಚ್ಚಾಗಿದೆ.

ನಿಮಗೆಲ್ಲಾ ತಿಳಿದಿರುವ ಹಾಗೆ ಕೊರೋನಾ ವೈರಸ್ ಮಹಾಮಾರಿ ಈಗಾಗಲೇ ಬೇರೆ ದೇಶಗಳಲ್ಲಿ ಎರಡನೆಯ ಅಲೆ ಮತ್ತು ಮೂರನೆಯ ಅಲೆ ಎಂದು ಸದ್ದು ಮಾಡಿಕೊಂಡು ಅಟ್ಟಹಾಸ ಮೆರೆಯುತ್ತಿದೆ. ಆದರೆ ನಮ್ಮ ದೇಶದಲ್ಲಿ ಹಾಗಾಗಬಾರದು ಎಂದರೆ ಸರಿಯಾದ ಸಮಯಕ್ಕೆ ಲಸಿಕೆ ತಯಾರಾಗಿ ನಮ್ಮ ದೇಶದ ಜನರಿಗೆ ಎಲ್ಲರಿಗೂ ಮೊದಲೇ ನೀಡಿದರೆ ಕೊರೋನಾ ವೈರಸ್ ಸಂತತಿಯನ್ನು ಕಟ್ಟಿ ಹಾಕಬಹುದು ಎಂಬುದು ತಜ್ಞರ ಲೆಕ್ಕಾಚಾರ. ಆದರೆ ಲಸಿಕೆ ಇನ್ನೂ ಕ್ಲಿನಿಕಲ್ ಟ್ರಯಲ್ ಹಂತದಲ್ಲಿದೆ. ಸಂಶೋಧನೆಗಳು ಹಾಗೂ ಕೆಲವೊಂದು ಮಾಹಿತಿ ಮೂಲಗಳು ಹೇಳುವ ಪ್ರಕಾರ 2021 ಮೇ ಅಥವಾ ಜೂನ್ ತಿಂಗಳಿನಲ್ಲಿ ಸಾರ್ವಜನಿಕರ ಬಳಕೆಗೆ ಲಸಿಕೆ ಸಿಗಬಹುದು ಎಂಬ ಲೆಕ್ಕಾಚಾರ ಇದೆ. ವೈದ್ಯಕೀಯ ಮಾಹಿತಿಯ ಮೇರೆಗೆ ಸಾಕಷ್ಟು ಜನರಿಗೆ ಕೊರೋನಾ ವೈರಸ್ ಲಸಿಕೆ ನೀಡಲೇಬೇಕಾದ ಅನಿವಾರ್ಯತೆ ಇದೆ. ಅವರಿಗೆ ಈ ಹಿಂದೆ ಕೊರೋನಾ ವೈರಸ್ ಸೋಂಕು ತಾಗಿರಲಿ ಅಥವಾ ತಾಗದಿರಲಿ. ಕೇವಲ ಒಬ್ಬರಿಗೆ ಅಥವಾ ಇಬ್ಬರಿಗೆ ಲಸಿಕೆ ನೀಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ.

ಹಾಗಾದರೆ ಮಕ್ಕಳ ಪಾಡೇನು?

ಹಾಗಾದರೆ ಮಕ್ಕಳ ಪಾಡೇನು?

ಹೀಗೊಂದು ಪ್ರಶ್ನೆ ಪ್ರತಿಯೊಬ್ಬ ಪೋಷಕರಲ್ಲಿ ಮೂಡದೆ ಇರದು. ಕ್ಲಿನಿಕಲ್ ಟ್ರಿಯಲ್ ಹಂತದಲ್ಲಿರುವ ಲಸಿಕೆ ದೊಡ್ಡವರಿಗೆ ಸುರಕ್ಷಿತ ಎನಿಸಿದರೂ ಮಕ್ಕಳಿಗೆ ಅವರ ಆರೋಗ್ಯದ ಮೇಲೆ ಇದು ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಬಗ್ಗೆ ಇನ್ನೂ ಎಲ್ಲೂ ಕೂಡ ಯಾವುದೇ ಮಾಹಿತಿ ಹೊರ ಬಂದಿಲ್ಲ. ಒಂದು ವೇಳೆ ಸರ್ಕಾರ ದೇಶದ ಎಲ್ಲಾ ಮಕ್ಕಳಿಗೆ ಲಸಿಕೆ ನೀಡಲೇಬೇಕು ಎಂದು ಆದೇಶ ಹೊರಡಿಸಿದರೆ ಏನು ಮಾಡುವುದು? ಈ ರೀತಿಯ ಪ್ರಶ್ನೆಗಳು ಪ್ರತಿಯೊಬ್ಬ ತಂದೆ ತಾಯಿಯರ ಮನಸ್ಸಿನಲ್ಲಿ ಬಂದೇ ಬರುತ್ತದೆ.

ಮೊಟ್ಟ ಮೊದಲಿಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಒಂದು ವಿಷಯ ಇದೆ.

ಕೋವಿಡ್ - 19 ಲಸಿಕೆ ಎಲ್ಲರಿಗೂ ಸುರಕ್ಷಿತವೇ?

ಕೋವಿಡ್ - 19 ಲಸಿಕೆ ಎಲ್ಲರಿಗೂ ಸುರಕ್ಷಿತವೇ?

ಕೆಲವು ಸಂಶೋಧನೆಗಳ ಮೂಲಗಳು ಹೇಳುವ ಪ್ರಕಾರ ಪ್ರತಿಯೊಬ್ಬರಿಗೂ ಕೊರೋನಾ ವೈರಸ್ ಲಸಿಕೆ ಸರಿಯಾದ ರೀತಿಯಲ್ಲಿ ಹಂಚಿಕೆಯಾಗುತ್ತದೆ ಎಂಬ ಬಗ್ಗೆ ಈಗಲೂ ಕೂಡ ಅನುಮಾನವಿದೆ. ಸ್ವತಃ ವೈದ್ಯಕೀಯ ಸಿಬ್ಬಂದಿಗಳು ಈ ಬಗ್ಗೆ ದ್ವಂದ್ವ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಕೊರೋನಾ ವೈರಸ್ ಲಸಿಕೆಯನ್ನು ಜನರಿಗೆ ನೀಡುವ ಮುಂಚೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ಸರ್ಕಾರಗಳು ಪಾಲನೆ ಮಾಡುತ್ತಿರುವ ಬಗ್ಗೆ ಅನುಮಾನವಿದೆ. ಲಸಿಕೆ ನೀಡಿದ ನಂತರ ಜನರ ಆರೋಗ್ಯದಲ್ಲಿ ಎದುರಾಗುವ ಬದಲಾವಣೆಗಳನ್ನು ಸರ್ಕಾರ ಹತ್ತಿಕ್ಕಲು ಏನು ಕ್ರಮ ಕೈಗೊಂಡಿದೆ ಎಂದು ಜನರು ಕೇಳುತ್ತಿದ್ದಾರೆ.

ಬೇರೆ ದೇಶದಲ್ಲಿ ಅಂದರೆ ಈಗಾಗಲೇ ಅಭಿವೃದ್ಧಿ ಹೊಂದಿದ್ದೇವೆ ಎಂದು ಹಣೆಪಟ್ಟಿ ಹಾಕಿಕೊಂಡಿರುವ ದೇಶಗಳಲ್ಲಿ ಲಸಿಕೆ ಹಂಚುವ ವಿಚಾರದಲ್ಲಿ ಸಂಶೋಧಕರು ನೀಡುತ್ತಿರುವ ಹೇಳಿಕೆಗಳು ಅಚ್ಚರಿ ಹುಟ್ಟಿಸುತ್ತಿವೆ. ಕೆಲವರು ಹೇಳುವ ಪ್ರಕಾರ ನಾವು ಅಂದುಕೊಂಡಿದ್ದಕ್ಕಿಂತ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು ಎಂದು ಹೇಳುತ್ತಾರೆ. ಇನ್ನು ಕೆಲವರು ಲಸಿಕೆಯ ವಿಚಾರವಾಗಿ ಇನ್ನಷ್ಟು ಸಂಶೋಧನೆಯ ಅಗತ್ಯವಿದೆ. ಏಕೆಂದರೆ ಕೊರೋನಾ ವೈರಸ್ ದಿನದಿಂದ ದಿನಕ್ಕೆ ತನ್ನ ರೂಪುರೇಷೆಗಳನ್ನು ಬದಲಿಸುತ್ತಿದೆ. ಹಾಗಾಗಿ ಇದನ್ನು ಅರ್ಥ ಮಾಡಿಕೊಳ್ಳಲು ಮತ್ತು ಜನರಿಗೆ ನೇರವಾಗಿ ಲಸಿಕೆ ಸಿಗುವ ಹಾಗೆ ಮಾಡಲು ಇನ್ನಷ್ಟು ಸಮಯ ಬೇಕಾಗಬಹುದು ಎಂದು ಹೇಳುತ್ತಿದ್ದಾರೆ.

ಮಕ್ಕಳಿಗೆ ಲಸಿಕೆ ನೀಡುವ ವಿಚಾರಕ್ಕೆ ಬರುವುದಾದರೆ ಇದುವರೆಗೂ ಸಂಶೋಧನೆಗಳು ಕೇವಲ ವಯಸ್ಕರಿಗೆ ಮತ್ತು ವಯಸ್ಸಾದವರಿಗೆ ಮಾತ್ರ ಲಸಿಕೆ ಯ ಪರಿಣಾಮಗಳನ್ನು ಕ್ಲಿನಿಕಲ್ ಟ್ರಯಲ್ ಹಂತದಲ್ಲಿ ನಡೆಸುತ್ತಿದೆ. ಕೇವಲ Pfizer ಎಂಬ ಲಸಿಕಾ ಸಂಸ್ಥೆ ಮಾತ್ರ ಕೆಲವು ಮಕ್ಕಳ ಮೇಲೆ ಲಸಿಕೆ ನೀಡಿ ಪ್ರಯೋಗ ನಡೆಸಿದೆ. ಆದರೆ ಮಕ್ಕಳಲ್ಲಿ ಲಸಿಕೆಯ ನಂತರದ ಪರಿಣಾಮಗಳನ್ನು ಇದು ತಿಳಿಸಿಲ್ಲ. ಎಫ್ ಡಿ ಎ ಸಂಸ್ಥೆ ಕೂಡ ಮಕ್ಕಳಿಗೆ ದೊಡ್ಡವರಿಗೆ ನೀಡಿದಂತೆ ನೇರವಾಗಿ ಲಸಿಕೆ ನೀಡಲು ಸಾಧ್ಯವಾಗುವುದೇ ಎಂಬ ಬಗ್ಗೆ ಇನ್ನೂ ಯಾವುದೇ ಅನುಮೋದನೆ ವ್ಯಕ್ತಪಡಿಸಿಲ್ಲ.

ಒಂದು ವೇಳೆ ಸರ್ಕಾರ ಮಕ್ಕಳಿಗೆ ಲಸಿಕೆಯನ್ನು ಖಾಯಂಗೊಳಿಸಿದರೆ.......

ಒಂದು ವೇಳೆ ಸರ್ಕಾರ ಮಕ್ಕಳಿಗೆ ಲಸಿಕೆಯನ್ನು ಖಾಯಂಗೊಳಿಸಿದರೆ.......

ನಮಗೆಲ್ಲಾ ಈಗಾಗಲೇ ತಿಳಿದಿರುವ ಹಾಗೆ ಮಕ್ಕಳಿಗೆ ಅವರ ವಯಸ್ಸಿಗೆ ಅನುಗುಣವಾಗಿ ಪೋಲಿಯೋ, ದಿಫ್ಠೇರಿಯ, ಟೆಟಾನಸ್, ಮೀಸಲ್ಸ್, ರುಬೆಲ್ಲ, ಚಿಕನ್ ಪಾಕ್ಸ್, ಹೆಪಟೈಟಿಸ್ - ಬಿ ಸಮಸ್ಯೆಗಳಿಗೆ ಸರ್ಕಾರ ಮತ್ತು ಆರೋಗ್ಯ ಇಲಾಖೆ ಲಸಿಕೆಗಳನ್ನು ಖಾಯಂಗೊಳಿಸಿದೆ. ಆದರೆ ಕೊರೋನಾ ವೈರಸ್ ಗೆ ಸಂಬಂಧ ಪಟ್ಟಂತೆ ಲಸಿಕೆಯನ್ನು ಖಾಯಂಗೊಳಿಸುವ ಮುಂಚೆ ಸಾಕಷ್ಟು ಬಾರಿ ಚರ್ಚೆಯಾಗಬೇಕಾಗಿದೆ. ವೈದ್ಯರ, ಪೋಷಕರ, ಮಕ್ಕಳ ಹೀಗೆ ಅನೇಕರ ಒಪ್ಪಿಗೆ ಪಡೆಯಬೇಕಾಗಿದೆ.

ಲಸಿಕೆ ನೀಡುವ ಮುಂಚೆ ತಜ್ಞರು ಸಾಕಷ್ಟು ಆಯಾಮಗಳಲ್ಲಿ ಸಂಶೋಧನೆಗಳನ್ನು ನಡೆಸಬೇಕಾಗಿದೆ. ಕೋವಿಡ್ - 19 ಸೋಂಕು ಕೆಲವು ಮಕ್ಕಳಲ್ಲಿ ಸೌಮ್ಯವಾದ ರೋಗ - ಲಕ್ಷಣಗಳನ್ನು ತೋರಿಸಿದೆ. ತುಂಬಾ ಕಡಿಮೆ ಪ್ರಮಾಣದಲ್ಲಿ ಮಕ್ಕಳ ಸಾವುಗಳು ಸಂಭವಿಸಿವೆ. ಆದರೆ ಶಾಲೆಗೆ ಹೋಗುವ ಮಕ್ಕಳು ಸುಲಭವಾಗಿ ಮನೆಯಲ್ಲಿನ ಪೋಷಕರಿಗೆ ಅಥವಾ ವಯಸ್ಸಾದವರಿಗೆ ಸೋಂಕು ಹರಡಿಸುವ ಸಾಧ್ಯತೆ ಇದೆ. ಎಲ್ಲಾ ಆಯಾಮಗಳಲ್ಲಿ ಸಂಶೋಧನೆ ನಡೆದು ಕೊರೋನಾ ವೈರಸ್ ಸೋಂಕು ಹಬ್ಬುವುದನ್ನು ತಡೆ ಹಾಕಲು ತಯಾರು ಮಾಡುತ್ತಿರುವ ಲಸಿಕೆ ಮಕ್ಕಳ ಆರೋಗ್ಯದ ಮೇಲೆ ಯಾವುದೇ ಕೆಟ್ಟ ಪರಿಣಾಮಗಳನ್ನು ಬೀರುವುದಿಲ್ಲ ಎಂದು ಸಾಬೀತಾದ ನಂತರ ಮಕ್ಕಳಿಗೆ ಅವರ ದೇಹದ ರೋಗ - ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಲಸಿಕೆಯನ್ನು ನೀಡುವಂತಾಗಲಿ ಎಂಬುದೇ ಎಲ್ಲರ ಅಭಿಲಾಷೆ.

English summary

Should A COVID-19 vaccine be mandatory for Kids?

Should A Covid 19 vaccine be mandatory for kids, read on...
X