For Quick Alerts
ALLOW NOTIFICATIONS  
For Daily Alerts

ಕಿವಿಯ ಹಿಂದೆ ಗಡ್ಡೆ, ಇದು ಕ್ಯಾನ್ಸರ್‌ನ ಲಕ್ಷಣವಾಗಿರುತ್ತೆ, ಎಚ್ಚರ!

|

ಮಾರಣಾಂತಿಕ ಕ್ಯಾನ್ಸರ್‌ನ ನಾನಾ ರೂಪಗಳಲ್ಲಿ ಲಾಲಾರಸ ಗ್ರಂಥಿಯ ಕ್ಯಾನ್ಸರ್ ಕೂಡ ಒಂದು. ಬಾಯಿ ಹಾಗೂ ಮುಖದಲ್ಲಿ ಕಂಡುಬರುವ ಈ ಗ್ರಂಥಿಗಳಲ್ಲಿ ಲೂಬ್ರಿಕೇಟಿಂಗ್ ಎಂಬ ದ್ರವ ರೂಪುಗೊಳ್ಳುತ್ತಿದ್ದು, ಅದು ಕಿಣ್ವಗಳು, ಪ್ರತಿಕಾಯಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ, ಇದು ಬಾಯಿ ಮತ್ತು ಗಂಟಲಿನ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.

ಈ ಲಾಲಾರಸ ಗ್ರಂಥಿಗಳಲ್ಲಿ ಗೆಡ್ಡೆಗಳ ರಚನೆಯೇ ಕ್ಯಾನ್ಸರ್. ಹಾಗಾದರೆ, ಇದರ ಲಕ್ಷಣ, ಕಾರಣಗಳು ಹಾಗೂ ಇದನ್ನು ಗುಣಪಡಿಸುವ ಮಾರ್ಗಗಳಾವುವು ನೋಡೋಣ ಬನ್ನಿ.

ಪ್ರಮುಖ ಲಾಲಾರಸ ಗ್ರಂಥಿಗಳು:

ಪ್ರಮುಖ ಲಾಲಾರಸ ಗ್ರಂಥಿಗಳು:

ಮುಖ್ಯವಾಗಿ ಮೂರು ಲಾಲಾರಸ ಗ್ರಂಥಿಗಳಿವೆ, ಅವುಗಳೆಂದರೆ, ಪರೋಟಿಡ್, ಸಬ್ಲಿಂಗುವಲ್ ಮತ್ತು ಸಬ್ಮಂಡಿಬುಲಾರ್.

ಪರೋಟಿಡ್ ಗ್ರಂಥಿ:

ಪರೋಟಿಡ್ ಗ್ರಂಥಿ:

ಪರೋಟಿಡ್ ಗ್ರಂಥಿಗಳು ಅತಿದೊಡ್ಡ ಲಾಲಾರಸ ಗ್ರಂಥಿಗಳಾಗಿದ್ದು, ಕಿವಿಯ ಮುಂಭಾಗದಲ್ಲಿ ಕಂಡುಬರುತ್ತದೆ. ಇಲ್ಲಿ ಗೆಡ್ಡೆ ಬೆಳೆಯುವ ಸಾಧ್ಯತೆ ಹೆಚ್ಚು. ಇಲ್ಲಿ ಬೆಳೆಯುವ ಹೆಚ್ಚಿನ ಗೆಡ್ಡೆಗಳು ಹಾನಿಕರವಲ್ಲದಿದ್ದರೂ, ಇದು ಅತ್ಯಂತ ಮಾರಣಾಂತಿಕ ಲಾಲಾರಸ ಗ್ರಂಥಿಯ ಗೆಡ್ಡೆಗಳಿಗೆ ಆರಂಭಿಕ ಸ್ಥಳವಾಗಿದೆ.

ಸಬ್ಲಿಂಗುವಲ್ ಗ್ರಂಥಿ:

ಸಬ್ಲಿಂಗುವಲ್ ಗ್ರಂಥಿ:

ಸಬ್ಲಿಂಗುವಲ್ ಗ್ರಂಥಿಗಳು ನಾಲಿಗೆಯ ಕೆಳಗೆ ಕಂಡುಬರಲಿದ್ದು, ಆಕಾರದಲ್ಲಿ ಚಿಕ್ಕದಾಗಿರುತ್ತವೆ. ಈ ಗ್ರಂಥಿಗಳಲ್ಲಿ ಗೆಡ್ಡೆ ಪ್ರಾರಂಭವಾಗುವುದು ಅಪರೂಪ.

ಸಬ್ಮಂಡಿಬುಲಾರ್ ಗ್ರಂಥಿ:

ಸಬ್ಮಂಡಿಬುಲಾರ್ ಗ್ರಂಥಿ:

ಸಬ್ಮಂಡಿಬುಲಾರ್ ಗ್ರಂಥಿಗಳು ದವಡೆಯ ಕೆಳಭಾಗದಲ್ಲಿರುತ್ತವೆ. ಅಮೇರಿಕನ್ ಕ್ಯಾನ್ಸರ್ ಸೊಸೈಟಿ (ACS) ಪ್ರಕಾರ, ಸುಮಾರು 10-20% ರಷ್ಟು ಗೆಡ್ಡೆಗಳು ಇಲ್ಲಿ ಪ್ರಾರಂಭವಾಗುತ್ತವೆ ಮತ್ತು ಸರಿಸುಮಾರು 50% ಮಾರಣಾಂತಿಕವಾಗಿವೆ.

ಲಾಲಾರಸ ಗ್ರಂಥಿಯ ಕ್ಯಾನ್ಸರ್‌ಗೆ ಸಾಮಾನ್ಯ ಕಾರಣಗಳು:

ಲಾಲಾರಸ ಗ್ರಂಥಿಯ ಕ್ಯಾನ್ಸರ್‌ಗೆ ಸಾಮಾನ್ಯ ಕಾರಣಗಳು:

ಈ ಕೆಳಗಿನ ಕೆಲವು ಅಂಶಗಳು ಲಾಲಾರಸ ಗ್ರಂಥಿಯ ಕ್ಯಾನ್ಸರ್ ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುತ್ತವೆ ಎಂದು ತಿಳಿದುಬಂದಿದೆ.

ವಿಕಿರಣ ಮಾನ್ಯತೆ: ಹಿಂದಿನ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್‌ಗಳಿಗೆ ವಿಕಿರಣ ಚಿಕಿತ್ಸೆಗೆ(ಲೇಸರ್ ಚಿಕಿತ್ಸೆ) ಒಳಗಾದ ಜನರು ನಂತರ ಜೀವನದಲ್ಲಿ ಲಾಲಾರಸ ಗ್ರಂಥಿಯ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಸಾಧ್ಯತೆ ಹೊಂದಿರುತ್ತಾರೆ.

ವಯಸ್ಸು: ಜನರು ವಯಸ್ಸಾದಂತೆ, ಲಾಲಾರಸ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಅಪಾಯವು ಹೆಚ್ಚಾಗುತ್ತದೆ.

ಲಿಂಗ: ಮಹಿಳೆಯರಿಗಿಂತ ಪುರುಷರಿಗೆ ಲಾಲಾರಸದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು.

ಮಾಲಿನ್ಯಕಾರಕಗಳು: ನಿಕ್ಕಲ್ ಮಿಶ್ರಲೋಹದ ಧೂಳು ಮತ್ತು ಸಿಲಿಕಾ ಧೂಳಿನಂತಹ ವಸ್ತುಗಳಿಗೆ ಕೆಲಸದ ಸ್ಥಳದಲ್ಲಿ ಒಡ್ಡಿಕೊಳ್ಳುವುದು ಸಹ ಒಂದು ಅಂಶವಾಗಿರಬಹುದು.

ಅನುವಂಶಿಕತೆ: ಅನುವಂಶಿಕ ಅಂಶಗಳು ಸಹ ಅಪಾಯವನ್ನು ಹೆಚ್ಚಿಸಬಹುದು.

ಧೂಮಪಾನ

ಧೂಮಪಾನ

HIV ನಂತಹ ವೈರಲ್ ಸೋಂಕುಗಳು

ಹೆಚ್ಚು ಸೆಲ್ ಫೋನ್ ಬಳಕೆ ಕೂಡ ಒಂದು ಕಾರಣವಾಗಬಹುದು ಆದರೆ, ಅದನ್ನು ಪರಿಶೀಲಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.

ಈ ಕ್ಯಾನ್ಸರ್‌ನ ಲಕ್ಷಣಗಳು:

ಲಾಲಾರಸ ಗ್ರಂಥಿಯ ಕ್ಯಾನ್ಸರ್ ಇರುವವರು ಈ ರೀತಿಯ ರೋಗಲಕ್ಷಣಗಳನ್ನು ಗಮನಿಸಬಹುದು:

ಮುಖದಲ್ಲಿ ಮರಗಟ್ಟುವಿಕೆ

ಮುಖ, ಕುತ್ತಿಗೆ ಅಥವಾ ಬಾಯಿಯ ಮೇಲೆ ನೋವುರಹಿತ ಉಂಡೆಯಾಕಾರದ ರಚನೆ

ಮುಖದ ಕೆಲವು ಸ್ನಾಯುಗಳನ್ನು ಚಲಿಸುವಲ್ಲಿ ತೊಂದರೆ

ಮುಖದ ದೌರ್ಬಲ್ಯ

ಕುತ್ತಿಗೆ, ಮುಖ, ಗಲ್ಲದ ಅಥವಾ ದವಡೆಯ ಪ್ರದೇಶದಲ್ಲಿ ಊತ ಅಥವಾ ನೋವು

 ರೋಗನಿರ್ಣಯ ವಿಧಾನ:

ರೋಗನಿರ್ಣಯ ವಿಧಾನ:

ಲಾಲಾರಸ ಗ್ರಂಥಿಯ ಕ್ಯಾನ್ಸರ್ ಅನ್ನು ಪತ್ತೆಹಚ್ಚಲು ಈ ಕೆಳಗಿನ ವಿಧಾನಗಳನ್ನು ಬಳಸಲಾಗುತ್ತದೆ:

ದೈಹಿಕ ಪರೀಕ್ಷೆ ಮತ್ತು ಆರೋಗ್ಯ ಇತಿಹಾಸ

MRI (ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್)

CT ಸ್ಕ್ಯಾನ್ (CAT ಸ್ಕ್ಯಾನ್)

ಪಿಇಟಿ ಸ್ಕ್ಯಾನ್ (ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ ಸ್ಕ್ಯಾನ್)

ಎಂಡೋಸ್ಕೋಪಿ

ಬಯಾಪ್ಸಿ

ಈ ಕ್ಯಾನ್ಸರ್‌ನ ವಿವಿಧ ಹಂತಗಳು:

ಹಂತ I:

ಗೆಡ್ಡೆಗಳು ತುಂಬಾ ಚಿಕ್ಕದಾಗಿರುತ್ತವೆ (2 ಸೆಂಟಿಮೀಟರ್‌ಗಳಿಗಿಂತ ಕಡಿಮೆ) ಮತ್ತು ದೇಹದ ಇತರ ಭಾಗಗಳಿಗೆ ಹರಡುವುದಿಲ್ಲ.

ಹಂತ II:

ಗೆಡ್ಡೆಗಳು ಸ್ವಲ್ಪ ದೊಡ್ಡದಾಗಿರುತ್ತವೆ (2 ಮತ್ತು 4 ಸೆಂ.ಮೀ ನಡುವೆ) ಆದರೆ ಮೂಲ ಗ್ರಂಥಿಯಲ್ಲಿ ಉಳಿಯುತ್ತವೆ.

ಹಂತ III:

ಕ್ಯಾನ್ಸರ್ ಗ್ರಂಥಿಯಿಂದ ಹರಡುತ್ತದೆ, ಮುಖ್ಯವಾಗಿ ಕುತ್ತಿಗೆಯ ಅದೇ ಭಾಗದಲ್ಲಿರುವ ದುಗ್ಧರಸ ಗ್ರಂಥಿಗಳಿಗೆ ಹರಡುತ್ತವೆ.

ಹಂತ IV :

ಕ್ಯಾನ್ಸರ್ಗಳು ದುಗ್ಧರಸ ಗ್ರಂಥಿಗಳಿಗೆ ಮತ್ತು ಕೆಲವು ಸಂದರ್ಭಗಳಲ್ಲಿ ದೇಹದ ಇತರ ಭಾಗಗಳಿಗೆ ಹರಡುತ್ತವೆ.

ಚಿಕಿತ್ಸಾ ವಿಧಾನ:

ಚಿಕಿತ್ಸಾ ವಿಧಾನ:

ಹಂತವನ್ನು ಪತ್ತೆಹಚ್ಚಿದ ನಂತರ, ವೈದ್ಯರು ಚೇತರಿಸಿಕೊಳ್ಳಲು ಹಲವಾರು ಚಿಕಿತ್ಸಾ ಆಯ್ಕೆಗಳಿವೆ. ಕ್ಯಾನ್ಸರ್ ಪ್ರಾಥಮಿಕ ಹಂತದಲ್ಲಿದ್ದರೆ, ಅದನ್ನು ಲೇಸರ್ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ಎರಡನೇ ಹಂತಕ್ಕೆ ಬಂದಿದ್ದರೆ, ಶಸ್ತ್ರಚಿಕಿತ್ಸೆ ಹಾಗೂ ವಿಕಿರಣ ಚಿಕಿತ್ಸೆಯ ಮೂಲಕ ತೆಗೆದುಹಾಕಬಹುದು. ಅದರ ನಂತರದ ಹಂತಗಳಿಗೆ ಕೀಮೋಥೆರಪಿ ಚಿಕಿತ್ಸೆ ನೀಡಲಾಗುವುದು.

ಮುನ್ನೆಚ್ಚರಿಕೆ ಕ್ರಮಗಳು:

ಲಾಲಾರಸ ಗ್ರಂಥಿಯ ಕ್ಯಾನ್ಸರ್ನಿಂದ ಚೇತರಿಸಿಕೊಳ್ಳುವ ರೋಗಿಗಳು ಉತ್ತಮ ಆರೋಗ್ಯ ಮತ್ತು ಮೌಖಿಕ ನೈರ್ಮಲ್ಯವನ್ನು ಅನುಸರಿಸಬೇಕು.

ಧೂಮಪಾನ, ಮದ್ಯಪಾನ ಮತ್ತು ಒತ್ತಡವನ್ನು ತಪ್ಪಿಸಬೇಕು.

ನಿಯಮಿತ ದೈಹಿಕ ಚಟುವಟಿಕೆಯೊಂದಿಗೆ ಉತ್ತಮ ಆಹಾರವು ಶಕ್ತಿಯನ್ನು ಪುನರ್ನಿರ್ಮಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ವೈದ್ಯಕೀಯ ತಪಾಸಣೆಗೆ ಬರುವುದು ಸಹ ಮುಖ್ಯವಾಗಿದೆ.

ತಡೆಗಟ್ಟುವ ಸಲಹೆಗಳು:

ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು, ತಲೆ ಮತ್ತು ಬಾಯಿಯ ಕ್ಯಾನ್ಸರ್ ಅನ್ನು ತಡೆಯಲು ಸಹಾಯ ಮಾಡುತ್ತದೆ. ಅವುಗಳ ಜೊತೆಗೆ ಈ ಅಂಶಗಳು ಸಹಾಯಕ್ಕೆ ಬರುತ್ತವೆ:

ಧೂಮಪಾನ ಮತ್ತು ಇತರ ತಂಬಾಕು ಉತ್ಪನ್ನಗಳನ್ನು ತಪ್ಪಿಸಿ

ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸಿ

ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ

ಆರೋಗ್ಯಕರವಾಗಿ ತಿನ್ನಿರಿ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಿ

ರೋಗಲಕ್ಷಣಗಳನ್ನು ಗಮನಿಸಿ, ಸೂಕ್ತ ಚಿಕಿತ್ಸೆ ಪಡೆಯಿರಿ.

English summary

Salivary Gland Cancer: Symptoms, Causes, Diagnosis, Treatment and Prevention in Kannada

Here we talking about Salivary Gland Cancer: Symptoms, Causes, Diagnosis, Treatment and Prevention in Kannada, read on
X
Desktop Bottom Promotion