For Quick Alerts
ALLOW NOTIFICATIONS  
For Daily Alerts

ಅತೀ ಬೆಳ್ಳಗಿರೋರಿಗೂ ಇಷ್ಟೊಂದು ಗೋಳು ಇರುತ್ತಾ..? ತುಂಬಾ ಬೆಳ್ಳಗಿರುವವರ ವ್ಯಥೆ ಇದೇ ನೋಡಿ

|

ಕಪ್ಪಗಿರುವವರು ಬೆಳ್ಳಗಾಗಬೇಕೆಂದು ಏನೆಲ್ಲಾ ಟ್ರೈ ಮಾಡ್ತಾರೆ, ಆದರೆ ಅತೀ ಬೆಳ್ಳಗಿರೋದು ಕೂಡಾ ಸಮಸ್ಯೆ ಎಂದು ಹೇಳುತ್ತಾರೆ ಬೆಳ್ಳಗಿರೋರು. ಹಾಲಿನಂತ ಬಿಳುಪು ಅಂದರೆ ಅದಕ್ಕಿಂತಲೂ ಬಿಳುಪು ಮೈಬಣ್ಣವನ್ನು ಹೊಂದಿರುವ ಜನರಿರುತ್ತಾರೆ. ದೇಹ, ಮುಖವೆಲ್ಲಾ ತೀರಾ ಬೆಳ್ಳಗಿರೋದು ಮಾತ್ರವಲ್ಲ, ದೇಹದಲ್ಲಿನ ನರನಾಡಿಯೆಲ್ಲಾ ಕಾಣುತ್ತೆ. ಈ ರೀತಿ ಬೆಳ್ಳಗಿರೋರಿಗೆ ಮೇಕಪ್ಪೇ ಬೇಡ. ಮುಖಕ್ಕೆ ಏನೂ ಹಚ್ಚಿಕೊಳ್ಳಬೇಕಿಲ್ಲ, ಏನೂ ಸಮಸ್ಯೆನೇ ಇರೋದಿಲ್ಲ ಅಂತಾ ನೀವಂದುಕೊಂಡರೆ ತಪ್ಪು.. ಇವರಿಗೂ ಹೇಳಲಾಗದಂತಹ ಸಮಸ್ಯೆಗಳಿವೆ.. ಅದೇನಪ್ಪಾ ಅನ್ನೋದಾದ್ರೆ ಈ ಲೇಖನ ಓದಿ.

123

1. ಸನ್‌ಸ್ಕ್ರೀನ್‌ ವಾರಕ್ಕೂ ಸಾಲಲ್ಲ

1. ಸನ್‌ಸ್ಕ್ರೀನ್‌ ವಾರಕ್ಕೂ ಸಾಲಲ್ಲ

ಬೆಳ್ಳಗೆ ಬಿಳುಚಿಕೊಂಡಿರೋರಿಗೆ ಸೂರ್ಯನ ಬಿಸಿಲೆಂದರೆ ದೂರ ಓಡುತ್ತಾರೆ ಯಾಕೆಂದರೆ ಸನ್‌ಟ್ಯಾನ್‌ ಭಯ. ಸೂರ್ಯನ ಬೆಳಕಿಗೆ ಕಪ್ಪಗಾಗುವುದಲ್ಲ. ಕೆಂಪಾಗಿ ಬಿಡುತ್ತಾರೆ. ಇನ್ನೊಂದು ರೀತಿಯಲ್ಲಿ ಹೃಏಳುವುದಾದರೆ ಸೂರ್ಯನ ಬೆಳಕಿಗೆ ಸುಟ್ಟು ಹೋದಂತೆ ಕೆಂಪಗೆ ಕಾಣುತ್ತಾರೆ. ಇವರು ಬೇಸಿಗೆಯಲ್ಲಂತೂ ಎಲ್ಲೇ ಹೋದರೂ ಸನ್‌ಸ್ಕ್ರೀನ್‌ ಬಾಟಲ್‌ ಬ್ಯಾಗ್‌ನಲ್ಲೇ ಇರಬೇಕು. ಅದೂ ಒಂದು ವಾರಕ್ಕೂ ಸಾಲುವುದಿಲ್ಲ ಎನ್ನುವುದು ಇವರ ಗೋಳು. ಯಾಕೆಂದರೆ ಮುಖಕ್ಕೆ ಮಾತ್ರವಲ್ಲ, ದೇಹಪೂರ್ತಿ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳಬೇಕಾಗುತ್ತೆ. ಕೆಲವರು ಇವರನ್ನು ಬಿಸಿಲಿನಲ್ಲಿ ನೋಡಿ ಸೂರ್ಯನಿಗಿಂತ ಬ್ರೈಟ್‌ ಆಗಿರೋ, ಇದ್ಯಾವುದಪ್ಪಾ ಲೈಟ್‌ ಎನ್ನಬಹುದು.

ಇತರರು ರೋಗಿಯಂತೆ ಭಾವಿಸುವುದು

ಇತರರು ರೋಗಿಯಂತೆ ಭಾವಿಸುವುದು

ಕೆಲವರು ಹುಟ್ಟಿದಾಗಿನಿಂದಲೇ ಚರ್ಮವು ಅತೀ ಬಿಳಿ ಅಂದರೆ ಬಿಳುಚಿದಂತೆ ಇರುತ್ತದೆ. ಇವರ ಚರ್ಮವನ್ನು ಕಂಡು ಕೆಲವರು ಏನಾದರೂ ಆರೋಗ್ಯ ಸಮಸ್ಯೆ ಇದೆಯಾ ಎಂದು ಕೇಳುವುದೂ ಇದೆ. ಅತೀ ಕಪ್ಪಾಗಿದ್ದರೆ ಅದನ್ನೂ ಕೇಳುತ್ತಾರೆ ಜನ. ಅತೀ ಬೆಳ್ಳಗಿದ್ದರೂ ಜನ ಕೇಳದೆಯೇ ಬಿಟ್ಟಾರೆ..?. ನಮ್ಮಲ್ಲಂತೂ ಹೆಚ್ಚಿನವರ ಮೈಬಣ್ಣ ಕಂದು. ಗುಂಪಿನಲ್ಲಿ ಯಾರಾದರೂ ಬೆಳ್ಳಗೆ ಬಿಳುಚಿಕೊಂಡ ಮೈಬಣ್ಣದವರು ಕಂಡರೆ ಅವರಿಗೇನೋ ಸ್ಕಿನ್‌ ಪ್ರಾಬ್ಲಂ ಇರಬೇಕು ಎಂದು ಹೇಳುತ್ತಾರೆ.

ಯಾವ ಮೇಕಪ್‌ ಫೌಂಡೇಷನ್‌ ಕೂಡಾ ಮುಖಕ್ಕೆ ಸರಿ ಹೊಂದದು

ಯಾವ ಮೇಕಪ್‌ ಫೌಂಡೇಷನ್‌ ಕೂಡಾ ಮುಖಕ್ಕೆ ಸರಿ ಹೊಂದದು

ಬೆಳ್ಳಗಿರೋರಿಗೆ ಯಾಕಪ್ಪಾ ಮೇಕಪ್‌ ಅನ್ನುವವರಿದ್ದಾರೆ. ಆದರೂ ಎಲ್ಲರೂ ಮೇಕಪ್‌ ಮಾಡುವಾಗ ತಾವೂ ಮಾಡಿಕೊಳ್ಳಬೇಕೆನ್ನುವ ಮನಸ್ಸಾಗದೇ..? ಸಮಸ್ಯೆ ಎಂದರೆ ಇವರ ಬಿಳುಚಿದ ಮುಖಕ್ಕೆ ಯಾವ ಫೌಂಡೇಷನ್‌ ಕೂಡಾ ಸರಿಹಿಡಿಯುವುದಿಲ್ಲ. ಲೈಟ್‌ ಆಗಿ ಫೌಂಡೇಶನ್‌ ಕ್ರೀಂ ಹಚ್ಚಿದರೂ ತುಂಬಾ ಗಾಢವಾಗಿ ಕಾಣಬಹುದು. ಬೇರೆಯವರು ದೆವ್ವ, ಪಿಶಾಚಿ ಎಂದು ಇತರರು ಟೀಕಿಸಬಹುದು. ಕಣ್ಣಿನ ನೆರಳೂ ಕೂಡಾ ಇಂಥವರಿಗೆ ಐಶ್ಯಾಡೋ ಹಾಕಿದಂತೆ ಕಾಣುತ್ತದೆ.

ಕೆನ್ನೆ ಕೆಂಪಾಗುವುದನ್ನು ಮರೆಮಾಡಲಾಗುವುದು

ಕೆನ್ನೆ ಕೆಂಪಾಗುವುದನ್ನು ಮರೆಮಾಡಲಾಗುವುದು

ಯಾರಾದರೂ ಛೇಡಿಸಿದಾಗ ನಾಚಿಕೆಯಿಂದ ಕೆನ್ನೆ ಕೆಂಪಾಗುವುದು ಸಹಜ. ಕಂದು ಬಣ್ಣದವರಾದರೆ ಕೆನ್ನೆ ಕೆಂಪಾಗೋದು ಕೂಡಾ ಕಾಣದು. ಆದರೆ ಇವರು ಎಷ್ಟು ನಾಚಿಕೊಳ್ಳುತ್ತಾರೋ ಅಷ್ಟು ಕೆನ್ನೆ ಕೆಂಪಾಗುತ್ತೆ.ಕೆನ್ನೆ ಕೆಂಪಗಾಗುವುದನ್ನು ತಡೆಯಲೂ ಅಸಾಧ್ಯ. ನಾಚಿಕೆ ಮಾತ್ರವಲ್ಲ, ಮುಜುಗರಕ್ಕೊಳಗಾದಾಗಲೂ, ಸಂತೋಷ, ದುಃಖ, ಕೋಪ, ವ್ಯಾಯಾಮ ಮಾಡುವಾಗ ಅಷ್ಟೇ ಯಾಕೆ ಸುಮ್ಮನೆ ಕುಳಿತಿದ್ದರೂ ಕೆನ್ನೆಯ ಬ್ಲಶ್‌ ಹಾಗೇ ಇರುತ್ತದೆ.

ಕ್ಯಾಮರಾ ಫ್ಲಾಶ್‌ ಆದರೆ ಫೋಟೋದಲ್ಲಿ ಕಾಣಿಸಲಾರರು

ಕ್ಯಾಮರಾ ಫ್ಲಾಶ್‌ ಆದರೆ ಫೋಟೋದಲ್ಲಿ ಕಾಣಿಸಲಾರರು

ಅನೇಕ ಬಾರಿ ಕತ್ತಲಲ್ಲಿ ಫೋಟೋ ತೆಗೆಯೋವಾಗ ಫ್ಲ್ಯಾಶ್‌ ಬಳಸುತ್ತೇವೆ. ಫ್ಲ್ಯಾಶ್‌ ಬಳಸಿದರೆ ಕತ್ತಲಲ್ಲೂ ಮುಖ ಕಾಣುತ್ತದೆ. ಆದರೆ ಬಿಳುಪಾದ ಮೈ ಬಣ್ಣ ಇರೋರು ಫ್ಲ್ಯಾಶ್‌ ಆನ್‌ ಮಾಡಿ ಫೋಟೋ ತೆಗೆದರೆ ಅವರ ಕಣ್ಣು ಮಾತ್ರ ಕಾಣುತ್ತದೆ. ಫ್ಲ್ಯಾಶ್‌ಗೆ ಅವರ ಮುಖವೂ ರಿಪ್ಲೆಕ್ಟ್‌ ಆಗಿ ಮುಖವೂ ಬೆಳಕಿನಂತೆ ಹೊಳೆಯುತ್ತದೆ, ಹೊರತು ಅದು ಮುಖವೆಂದು ತಿಳಿಯುವುದು ಎರಡು ಕಣ್ಣುಗಳನ್ನು ನೋಡಿದಾಗ ಮಾತ್ರ. ಹಾಗಾಗಿ ಕ್ಯಾಮೆರಾ ಫ್ಲ್ಯಾಶ್‌ ಒಂದು ರೀತಿಯಲ್ಲಿ ಇವರ ಶತ್ರು.

ಅಲೋವೆರಾ ಸದಾ ಬಳಸಬೇಕಾಗುತ್ತೆ

ಅಲೋವೆರಾ ಸದಾ ಬಳಸಬೇಕಾಗುತ್ತೆ

ಬಿಸಿಲಿಗೆ ಹೋದರೆ ಚರ್ಮ ಸುಟ್ಟು ಹೋದಂತೆ ಕೆಂಪಗಾಗುವುದು ಬಿಳುಪು ಮೈಬಣ್ಣದವರಲ್ಲಿ ಸಾಮಾನ್ಯ. ಯಾವ ಕ್ರೀಂ ಹಚ್ಚಿದರೂ ಈ ಕೆಂಪು ಹೋಗಲಾರದು. ಇದನ್ನು ನಿವಾರಿಸಲು ಉತ್ತಮ ಮದ್ದೆಂದರೆ ಅಲೋವೆರಾ ಜೆಲ್‌. ಹಾಗಾಗಿ ಎಲ್ಲೇ ಹೋಗಲಿ ಸನ್‌ಸ್ಕ್ರೀನ್‌ನಂತೆ ಅಲೋವೆರಾ ಜೆಲ್‌ ಇಟ್ಟುಕೊಳ್ಳಲೇಬೇಕಾಗುತ್ತದೆ.

ಬಿಳಿ ಬಟ್ಟೆಯೂ ಧರಿವಂತಿಲ್ಲ, ಕಪ್ಪು ಬಣ್ಣದ ಬಟ್ಟೆಯನ್ನೂ ಧರಿಸುವಂತಿಲ್ಲ

ಬಿಳಿ ಬಟ್ಟೆಯೂ ಧರಿವಂತಿಲ್ಲ, ಕಪ್ಪು ಬಣ್ಣದ ಬಟ್ಟೆಯನ್ನೂ ಧರಿಸುವಂತಿಲ್ಲ

ಅತೀ ಬಿಳುಚಿಕೊಂಡವರಿಗೆ ಬಿಳಿ ಬಣ್ಣದ ಬಟ್ಟೆಯಂತೂ ಅವರ ಚರ್ಮದ ಬಣ್ಣದೊಂದಿಗೆ ಮಿಶ್ರಣವಾದಂತೆ ಕಾಣುತ್ತದೆ. ಅವರು ಹಾಕಿಕೊಂಡಿರುವ ಬಿಳಿ ಬಣ್ಣದ ಬಟ್ಟೆ ಹಾಗೂ ಅವರ ಚರ್ಮದ ಕಲರ್‌ ಆಲ್‌ಮೋಸ್ಟ್ ಒಂದೇ ಬಣ್ಣ ಆಗಿರುತ್ತದೆ. ಹಾಗಂತ ಕಪ್ಪು ಬಣ್ಣದ ಡ್ರೆಸ್‌ ಹಾಕಿದರೆ ವಿರೋಧಾಭಾಸ ಆಗುವುದಂತೂ ಪಕ್ಕಾ. ಬಿಳುಪು ಚರ್ಮದ ಬಣ್ಣಕ್ಕೂ ಕಪ್ಪು ಬಣ್ಣಕ್ಕೂ ಹೊಂದಾಣಿಕೆಯೇ ಆಗದು. ಹ್ಯಾಲೋವಿನ್‌ ನೈಟ್‌ನಲ್ಲಿ ಬಿಳಿ ದೆವ್ವದ ವೇಷಕ್ಕೆ ಕಪ್ಪು ಬಣ್ಣದ ಬಟ್ಟೆ ಹಾಕಿದರೆ ಹೇಗೆ ಕಾಣುತ್ತೋ ಹಾಗೇ ಇರುತ್ತದೆ. ಅತೀ ಬಿಳುಪಿಗೂ ಕಪ್ಪು ಬಣ್ಣಕ್ಕೂ ಮ್ಯಾಚ್‌ ಆಗದು.

ಪಾರದರ್ಶಕ ಮನುಷ್ಯರು

ಪಾರದರ್ಶಕ ಮನುಷ್ಯರು

ಅತೀ ಬಿಳುಚಿಕೊಂಡ ಮೈಬಣ್ಣ ಇರುವವರಲ್ಲಿ ನೀಲಿ ರಕ್ತನಾಳಗಳು ಎದ್ದು ಕಾಣುತ್ತವೆ. ಇಂಜೆಕ್ಷನ್‌ ಚುಚ್ಚಬೇಕಾದರೆ ರಕ್ತನಾಳವನ್ನು ಹುಡುಕಬೇಕಾಗಿಲ್ಲ. ಅತೀ ಬಿಳುಪಿರುವವರಲ್ಲಿ ಸಾಮಾನ್ಯವಾಗಿ ಕೆಲವೊಮ್ಮೆ ರಕ್ತನಾಳಗಳು ಎದ್ದು ಕಾಣುತ್ತವೆ. ಇದನ್ನು ಮರೆಮಾಡಲಂತೂ ಸಾಧ್ಯವೇ ಇಲ್ಲ.

ಅತೀ ಬಿಳುಪು, ಎಲ್ಲರೂ ವಿಚಿತ್ರವಾಗಿ ನೋಡುತ್ತಾರೆ ಎಂದು ನೊಂದುಕೊಳ್ಳಬೇಡಿ. ಅದು ನೈಸರ್ಗಿಕವಾಗಿ ನಿಮಗೆ ಸಿಕ್ಕ ಉಡುಗೊರೆ ಎಂದುಕೊಳ್ಳಿ. ಮೈಬಣ್ಣ ಹೇಗಿದ್ದರೂ ಒಳ್ಳೆಯ ಮನಸ್ಸು ಮುಖ್ಯ.ಮೈಬಣ್ಣಕ್ಕಾಗಿ ಕೊರಗಬೇಡಿ.ಅತೀ ಕಪ್ಪಾಗಿರುವವರು ಬಿಳಿ ಬಣ್ಣಕ್ಕಾಗಿ ಬೇಡುತ್ತಾರೆ. ಇರುವ ಮೈಬಣ್ಣಕ್ಕೆ ಅಡ್ಜಸ್ಟ್‌ ಆಗಿ, ನಿಮ್ಮ ಮೈಬಬಣ್ಣ ಯಾವುದೇ ಆಗಲಿ ಆ ಮೈಬಣ್ಣವೇ ನಿಮಗೆ ಸೌಂದರ್ಯವನ್ನು ಹೆಚ್ಚಿಸುತ್ತದೆ ಎನ್ನುವುದನ್ನು ನೆನಪಿಡಿ. ಯಾವುದೇ ಮೇಕಪ್‌ನ ಅವಶ್ಯಕತೆಯೂ ನಿಮಗಿಲ್ಲ ಎಂದು ಸಂತಸ ಪಡಿ.

ಕೆಂಪಗೆ ಗಿಳಿಯ ಕೊಕ್ಕಿನಂತಾಗುವ ಮೂಗು

ಕೆಂಪಗೆ ಗಿಳಿಯ ಕೊಕ್ಕಿನಂತಾಗುವ ಮೂಗು

ಧೂಳು, ಅಲರ್ಜಿಯಾದರೆ ಮೂಗು ಕೆಂಪಗಾಗಿ ಬಿಡುತ್ತದೆ ಕೆಲವರಿಗೆ. ಇದು ಹೆಚ್ಚು ಬಿಳುಚಿಕೊಂಡಿರುವ ಚರ್ಮದವರಿಗಂತೂ ಇನ್ನಷ್ಟು ಮೂಗು ಕೆಂಪು ಕೆಂಪಾಗಿ ಕಾಣುತ್ತದೆ. ಇದರಿಂದಾನೇ ನಿಮಗೆ ಅಲರ್ಜಿಯಾಗಿದೆ ಎಂದು ಸುಲಭವಾಗಿ ಹೇಳಬಹುದು.

English summary

Problems Only Pale People Will Understand in kannada

Here we are discussing about Are you the one who constantly struggles with the sun during the summertime? Do you always get burned or have problems finding the perfect foundation?. Read more.
X
Desktop Bottom Promotion