For Quick Alerts
ALLOW NOTIFICATIONS  
For Daily Alerts

ಮುಟ್ಟಿಗೂ ಮುನ್ನಾದಿನಗಳಲ್ಲಿ ಉಂಟಾಗುವ ಭಾವನಾತ್ಮಕ ಕಿರಿಕಿರಿ ತಪ್ಪಿಸುವುದು ಹೇಗೆ?

|

ಋತುಮತಿಯಾಗಿರುವ ಪ್ರತಿ ಮಹಿಳೆಗೂ ಪ್ರತಿ ತಿಂಗಳು ಎದುರಾಗುವ ಮುಟ್ಟಿನ ದಿನಗಳ ಅನುಭವ ಪ್ರತಿ ಮಹಿಳೆಗೂ ಕೊಂಚ ಭಿನ್ನವಾಗಿಯೇ ಇರುತ್ತದೆ. ಈ ದಿನಗಳು ಆಗಮಿಸುವ ಕೆಲ ದಿನಗಳ ಮುಂಚಿನಿಂದಲೇ ಕೆಲವಾರು ದೇಹಸಂಬಂಧಿ ಮತ್ತು ಮಾನಸಿಕ ಪ್ರಭಾವಗಳು ಎದುರಾಗುತ್ತವೆ. ಈ ಪ್ರಭಾವಗಳನ್ನೇ ವೈದ್ಯವಿಜ್ಞಾನ ಒಟ್ಟಾರೆಯಾಗಿ ಪಿ ಎಂ ಎಸ್ (PMS, Premenstrual Syndrome) ಅಥವಾ ಮುಟ್ಟಿನ ಮುನ್ನಾದಿನದ ಲಕ್ಷಣ ಎಂದು ಕರೆಯುತ್ತದೆ.

ಏನಿದು ಪಿ ಎಂ ಎಸ್?

ಏನಿದು ಪಿ ಎಂ ಎಸ್?

ಇದನ್ನು ಅರ್ಥಮಾಡಿಕೊಳ್ಳುವ ಮುನ್ನ ಮಹಿಳೆಯ ಗರ್ಭಕೋಶದ ಕುರಿತಾಗಿ ಕೆಲವು ಮಾಹಿತಿಗಳನ್ನು ಅರಿತುಕೊಂಡಿರಬೇಕು. ಗರ್ಭಾಶಯ ಪ್ರತಿ ತಿಂಗಳೂ ಹೊಸ ಅಂಡಾಶಯವನ್ನು ಧರಿಸುತ್ತದೆ ಹಾಗೂ ಫಲಿತಗೊಳ್ಳಲು ಕಾಯುತ್ತದೆ. ಒಂದು ತಿಂಗಳ ಅವಧಿಯಲ್ಲಿ (ಇದನ್ನೇ ಮಾಸಿಕ ಋತುಚಕ್ರ ಎಂದು ಕರೆಯುತ್ತಾರೆ) ಫಲಿತಗೊಳ್ಳದೇ ಇದ್ದರೆ ಈ ಅಂಡಾಣುವನ್ನು ವಿಸರ್ಜಿಸಿ ಹೊಸ ಅಂಡಾಣುವನ್ನು ಬಿಡುಗಡೆ ಮಾಡುತ್ತದೆ. ಈ ಕ್ರಿಯೆ ಪ್ರತಿತಿಂಗಳೂ ರಜೋನಿವೃತ್ತಿ ಪಡೆಯುವವರೆಗೂ ನಡೆಯುತ್ತದೆ. ಈ ಕ್ರಿಯೆ ಸಂಭವಿಸುವ ಮುನ್ನಾದಿನಗಳಲ್ಲಿ ಕೆಳಹೊಟ್ಟೆಯ ಸೆಡೆತ, ಮನೋಭಾವನೆಗಳಲ್ಲಿ ಏರಿಳಿತ, ಹೊಟ್ಟೆಯುಬ್ಬರಿಕೆ, ಕಣ್ಣೀರಿನ ಹರಿವು ಹೆಚ್ಚಳವಾಗುವುದು, ದೇಹ ಅತಿಸಂವೇದಿಯಾಗುವುದು ಮೊದಲಾದದು ಎದುರಾಗುತ್ತವೆ. ಇದೇ ಕಾರಣಕ್ಕೆ ಈ ಸಮಯದಲ್ಲಿ ಹೆಚ್ಚಿನ ಮಹಿಳೆಯರು ಮಾನಸಿಕ ದುಗುಡವನ್ನು ಅನುಭವಿಸುತ್ತಾರೆ.

ಮುಟ್ಟಿನ ದಿನಗಳು ಯಾವಾಗ ಪ್ರಾರಂಭವಾಗುತ್ತವೆ?

ಮುಟ್ಟಿನ ದಿನಗಳು ಯಾವಾಗ ಪ್ರಾರಂಭವಾಗುತ್ತವೆ?

ಅಂಡಾಣು ಬಿಡುಗಡೆಯಾದ ಸುಮಾರು ಇಪ್ಪತ್ತೆಂಟನೇ ದಿನಕ್ಕೆ ಇದು ದೇಹದಿಂದ ವಿಸರ್ಜಿಸಲ್ಪಡುತ್ತದೆ. ಈ ಸಮಯದಲ್ಲಿ ಆಕೆಯ ದೇಹದಲ್ಲಿ ಪ್ರೊಜೆಸ್ಟರಾನ್ ಮತ್ತು ಈಸ್ಟೋಜೆನ್ ಎಂಬ ರಸದೂತಗಳು ಗರಿಷ್ಟ ಪ್ರಮಾಣದಲ್ಲಿರುತ್ತವೆ. ಈ ರಸದೂತಗಳ ಪ್ರಭಾವದಿಂದಲೇ ಮಹಿಳೆಯ ದೇಹ ಮತ್ತು ಮನಸ್ಸಿನಲ್ಲಿ ಎದುರಾಗುವ ಪ್ರಭಾವಗಳು ಇತರರಿಗೆ ಈ ದಿನಗಳು ಬಂದಿರುವ ಸ್ಪಷ್ಟ ಸೂಚನೆಗಳನ್ನು ನೀಡುತ್ತವೆ.

ನಿಮ್ಮ ಭಾವನಾತ್ಮಕ ಆರೋಗ್ಯವನ್ನು ನಿಯಂತ್ರಿಸಿ

ನಿಮ್ಮ ಭಾವನಾತ್ಮಕ ಆರೋಗ್ಯವನ್ನು ನಿಯಂತ್ರಿಸಿ

ನಿಮ್ಮ ಒತ್ತಡದ ಮಟ್ಟಗಳು, ಆಹಾರ ಪದ್ಧತಿ ಮತ್ತು ಜೀವನಶೈಲಿಯ ಆಯ್ಕೆಗಳು ನಿಮ್ಮ ಮುಟ್ಟಿನ ದಿನಗಳ ಮುನ್ನಾದಿನಗಳ ತೀವ್ರತೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಇವು ಕೆಲವೊಮ್ಮೆ ನೋವು ಮತ್ತು ಭಯಾನಕವಾಗಬಹುದು ಆದರೆ ನಿಮ್ಮ ತೀವ್ರವಾದ ಮುಟ್ಟಿಗೂ ಮುನ್ನಾದಿನಗಳ ರೋಗಲಕ್ಷಣಗಳನ್ನು ಸೌಮ್ಯ ಲಕ್ಷಣಗಳಾಗಿ ಪರಿವರ್ತಿಸುವ ಮಾರ್ಗಗಳಿವೆ. ವಿಪರೀತ ಮುಟ್ಟಿಗೂ ಮುನ್ನಾದಿನಗಳ ರೋಗಲಕ್ಷಣಗಳಿಗೆ ಔಷಧಿಗಳ ಅಗತ್ಯವಿರುತ್ತದೆ.

ಮುಟ್ಟಿನ ದಿನಗಳು ಆಗಮಿಸುವ ಮುನ್ನ ನಿಮ್ಮ ಭಾವನಾತ್ಮಕ ಆರೋಗ್ಯವನ್ನು ನೀವು ಹೇಗೆ ನಿಯಂತ್ರಿಸಬಹುದು ಎಂಬುದು ಇಲ್ಲಿದೆ.

ಸರಳ ವ್ಯಾಯಾಮ

ಸರಳ ವ್ಯಾಯಾಮ

ಬಹಳ ವ್ಯಸ್ತರಾದ ಜೀವನಕ್ರಮವನ್ನು ನಡೆಸದಿರಲು ನೀವು ಇಚ್ಛಿಸಿದ್ದರೂ, ಈ ಸಮಯದಲ್ಲಿ ಸರಳ ಯೋಗಾಸನಗಳು, ಈಜು ಅಥವಾ ಸರಳ ವ್ಯಾಯಾಮಗಳನ್ನು ಅಭ್ಯಾಸ ಮಾಡಬಹುದು ಹಾಗೂ ಈ ವ್ಯಾಯಾಮವು ನಿಮಗೆ ಆಹ್ಲಾದನೆ ನೀಡುವ ಎಂಡಾರ್ಫಿನ್ ‌ಗಳನ್ನು ಬಿಡುಗಡೆ ಮಾಡುತ್ತದೆ. ಹೊಟ್ಟೆಯುಬ್ಬರಿಕೆ ಮತ್ತು ಸೆಳೆತದಂತಹ ರೋಗಲಕ್ಷಣಗಳನ್ನು ನಿವಾರಿಸಲು ಸಹಾ ಇದು ಸಹಾಯ ಮಾಡುತ್ತದೆ.

ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಿ

ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಿ

ಮುಟ್ಟಿಗೂ ಮುನ್ನಾದಿನಗಳಲ್ಲಿ ದೇಹದಲ್ಲಿ ಪ್ರಸವಿಸುವ ರಸದೂತಗಳು ಹಸಿವನ್ನೂ ಹೆಚ್ಚಿಸುತ್ತವೆ. ಒಂದು ವೇಳೆ ಈ ಕರೆಗೆ ಓಗೊಟ್ಟರೆ ಹೆಚ್ಚಿನ ಪ್ರಮಾಣದ ಭರ್ಜರಿ ಊಟ ಹೊಟ್ಟೆ ಸೇರುವುದು ಖಚಿತ. ಅಲ್ಲದೇ ಹುಳಿ ಖಾರವನ್ನೂ ಹೆಚ್ಚೇ ದೇಹ ಈ ಸಮಯದಲ್ಲಿ ಬಯಸುವುದರಿಂದ ಇವು ಹೊಟ್ಟೆಯ ಸ್ಥಿತಿಯ ಮೇಲೂ ಪರಿಣಾಮಬೀರಿ ಮುಟ್ಟಿನ ದಿನಗಳ ಮುನ್ನಾದಿನಗಳ ತೊಂದರೆಗಳನ್ನು ಇನ್ನಷ್ಟು ಉಲ್ಬಣಗೊಳಿಸಬಹುದು. ಹಾಗಾಗಿ, ಆಹಾರ ಸೇವನೆಯ ಬಯಕೆ ಎಷ್ಟೇ ಭುಗಿಲೇಳಲಿ, ಕೊಂಚ ಮನಸ್ಸನ್ನು ನಿಯಂತ್ರಿಸಿ. ವಿಶೇಷವಾಗಿ ಸಕ್ಕರೆಯ ಸೇವನೆಯನ್ನು ಮಿತಗೊಳಿಸಿ, ಏಕೆಂದರೆ ಸಕ್ಕರೆ ಈ ಸಮಯದಲ್ಲಿ ಉರಿಯೂತಕ್ಕೆ ಕಾರಣವಾಗಬಹುದು. ಹಾಗಾಗಿ ಸಕ್ಕರೆಯ ಮಟ್ಟವನ್ನು ಸಂತುಲಿತಗೊಳಿಸಬಲ್ಲ, ಸರಳ ಮತ್ತು ಮಿತ ಪ್ರಮಾಣದ ಆಹಾರಗಳನ್ನು ಮಾತ್ರವೇ ಸೇವಿಸಿ.

ಕ್ಯಾಲ್ಸಿಯಂ ಸೇವಿಸಿ

ಕ್ಯಾಲ್ಸಿಯಂ ಸೇವಿಸಿ

ಇತ್ತೀಚೆಗೆ ಖ್ಯಾತ ಆಹಾರತಜ್ಞೆ ರಜುತಾ ದಿವೇಕರ್ ರವರು ನೀಡಿರುವ ಸಲಹೆಯ ಪ್ರಕಾರ, ಮಾಸಿದ ದಿನಗಳ ಸಮಯದಲ್ಲಿ ಕ್ಯಾಲ್ಸಿಯಂ ಸೇವನೆ ಸೂಕ್ತವಾಗಿದೆ. ಹಾಗಾಗಿ, ಈ ಸಮಯದಲ್ಲಿ ಕ್ಯಾಲ್ಸಿಯಂ ಸೇವಿಸಬಹುದೇ ಎಂಬುದನ್ನು ನಿಮ್ಮ ವೈದ್ಯರಲ್ಲಿ ಸಲಹೆ ಪಡೆದು ಸೂಕ್ತ ಪ್ರಮಾಣದಲ್ಲಿ ಗುಳಿಗೆಗಳನ್ನು ಸೇವಿಸಿ. ಅಲ್ಲದೇ ಕ್ಯಾಲ್ಸಿಯಂ ಮನೋಭಾವದ ಏರಿಳಿತಗಳನ್ನೂ ನಿಯಂತ್ರಿಸಬಲ್ಲುದು.

ಮದ್ಯ ಮತ್ತು ಕೆಫೇನ್ ಬೇಡ

ಮದ್ಯ ಮತ್ತು ಕೆಫೇನ್ ಬೇಡ

ಈ ಸಮಯದಲ್ಲಿ ಮದ್ಯ ಮತ್ತು ಕೆಫೀನ್ ಇರುವ ಯಾವುದೇ ದ್ರವಗಳನ್ನು ಸೇವಿಸದಿರಿ. ಇದರಿಂದ ಉದ್ವೇಗ ಮತ್ತು ನಿದ್ರಾಹಿತ್ಯಕ್ಕೆ ಒಳಗಾಗುವುದನ್ನು ತಪ್ಪಿಸಬಹುದು. ಮದ್ಯ ಸೇವನೆಯನ್ನು ತ್ಯಜಿಸುವುದರಿಂದ ಖಿನ್ನತಾ ನಿವಾರಕ ಪರಿಣಾಮವನ್ನೂ ಕಾಣಬಹುದು.

ಮಾನಸಿಕ ಒತ್ತಡವನ್ನು ನಿಯಂತ್ರಿಸಿ

ಮಾನಸಿಕ ಒತ್ತಡವನ್ನು ನಿಯಂತ್ರಿಸಿ

ಮುಟ್ಟಿನ ದಿನಗಳ ಮುನ್ನಾದಿನಗಳ ಕಿರಿಕಿರಿಯನ್ನು ಮಾನಸಿಕ ಒತ್ತಡ ಇನ್ನಷ್ಟು ಭುಗಿಲೆಬ್ಬಿಸಬಹುದು. ಹಾಗಾಗಿ, ಈ ಸಮಯದಲ್ಲಿ ಮನಸ್ಸನ್ನು ನಿಯಂತ್ರಣದಲ್ಲಿರಿಸಲು ಪ್ರಾಣಾಯಾಮ, ಧ್ಯಾನ ಮೊದಲಾದ ಕ್ರಿಯೆಗಳನ್ನು ಅನುಸರಿಸಿ. ಒಂದು ವೇಳೆ ಈ ಸಮಯದ ಮಾನಸಿಕ ಒತ್ತಡ ನಿಮಗೆ ಸಹಿಸಲಸಾಧ್ಯವಾಗಿದ್ದರೆ ಮಾನಸಿಕ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಿರಿ.

English summary

PMS Mood Swings: Causes and Tips to Ease the Symptoms

Famously called PMS, Premenstrual Syndrome is associated with a feeling of cramps, mood swings, bloating and can sometimes even lead to engulfed in tears. This is something that most women experience but understanding PMS is not easy. Just like our bodies, our PMS is unpredictable and err... sexist!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more