For Quick Alerts
ALLOW NOTIFICATIONS  
For Daily Alerts

ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ ಪಾವತಿ ರಜೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

|

ಮುಟ್ಟಿನ ರಜೆ ಬೇಕೆಂದು ಕೇಳಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದಾರೆ. ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿರುವ ಈ ಅರ್ಜಿಯಲ್ಲಿ ಲಂಡನ್ ಯೂನಿವರ್ಸಿಟಿ ನಡೆಸಿರುವ ಅಧ್ಯಯನ ವರದಿಯನ್ನು ಉಲ್ಲೇಖಿಸಲಾಗಿದೆ.

PIL seeking menstrual leave with PIL filed in Supreme Court; Know details in kannada

ಮುಟ್ಟಿನ ಅವಧಿಯಲ್ಲಿ ವಿದ್ಯಾರ್ಥಿನಿಯರು ಹಾಗೂ ಉದ್ಯೋಗಸ್ಥ ಮಹಿಳೆಯರು ತುಂಬಾ ನೋವು ಅನುಭವಿಸುತ್ತಾರೆ. ಹೃದಯಾಘಾತವಾಗುವಾಗ ಯಾವ ರೀತಿಯ ಸಂಕಟ ಉಂಟಾಗುವುದೋ ಅದೇ ರೀತಿಯ ಸಂಕಟ ಪ್ರತಿ ತಿಂಗಳು ಅನುಭವಿಸುತ್ತಾರೆ. ಈ ಕಾರಣದಿಂದಾಗಿ ಮುಟ್ಟಿನ ದಿನಗಳಲ್ಲಿ ಅವರ ಕೆಲಸದ ಸಾಮರ್ಥ್ಯ ಕಡಿಮೆಯಾಗುತ್ತದೆ. ಆ ದಿನಗಳಲ್ಲಿ ಅವರಿಗೆ ರಜೆ ನೀಡಬೇಕೆಂದು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಲಾಗಿದೆ.

ಅಲ್ಲದೆ ಭಾರತದಲ್ಲಿ ಝೊಮ್ಯಾಟೊ, ಸ್ವಿಗ್ಗಿ, ಬೈಜೂಸ್, ಮಾತೃಭೂಮಿ ಸೇರಿದಂತೆ ಹಲವು ಕಂಪನಿಗಳು ಮುಟ್ಟಿನ ದಿನಗಳಲ್ಲಿ ಮಹಿಳೆಯರಿಗೆ ಪಾವತಿ ರಜೆ ನೀಡಲು ಒಪ್ಪಿರುವುದಾಗಿ ಅರ್ಜಿಯಲ್ಲಿ ಹೇಳಲಾಗಿದೆ.

ಮಹಿಳೆಯರಿಗೆ ಮುಟ್ಟಿನ ಆ ದಿನಗಳು

ಬಹುತೇಕ ಮಹಿಳೆಯರಿಗೆ ಮುಟ್ಟಿನ ಆ ದಿನಗಳು ನರಕವಾಗಿರುತ್ತದೆ. ತಿನ್ನಲು ಸಾಧ್ಯವಾಗುವುದಿಲ್ಲ, ವಾಂತಿ, ಬೇಧಿ, ವಿಪರೀತ ಕಿಬ್ಬೊಟ್ಟೆ ನೋವು ಹೀಗೆ ಆ ದಿನಗಳಲ್ಲಿ ಬಳಲಿ ಬೆಂಡಾಗುತ್ತಾರೆ. ಕೆಲವರಿಗಂತೂ ಆ ದಿನಗಳಲ್ಲಿ ನಿಲ್ಲಲೂ ತ್ರಾಣವಿರಲ್ಲ ಅಷ್ಟು ಹಿಂಸೆ ಅನುಭವಿಸುತ್ತಾರೆ.

ಈ ದಿನಗಳು ಮಹಿಳೆಯರಿಗೆ ತುಂಬಾ ಕಷ್ಟದ ದಿನಗಳಾಗಿರುವುದರಿಂದ ಈ ದಿನಗಳಲ್ಲಿ ರಜೆ ಬೇಕು ಎಂಬ ಕೂಗು ಆಗಾಗ ಕೇಳಿ ಬರುತ್ತಿರುತ್ತದೆ. ಆದರೆ ಭಾರತದಲ್ಲಿ ಮುಟ್ಟಿನ ದಿನಗಳಲ್ಲಿ ಪಾವತಿ ರಜೆಯಿಲ್ಲ, ಈಗ ಈ ದಿನ ಪಾವತಿ ರಜೆ ಬೇಕೆಂದು ಉಚ್ಛನ್ಯಾಯಾಲಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಮುಟ್ಟಿನ ದಿನಗಳಲ್ಲಿ 3 ದಿನಗಳ ರಜೆಗೆ ಅನುಮತಿ ನೀಡಿದ ಮೊದಲ ಪಾಶ್ಚಾತ್ಯ ರಾಷ್ಟ್ರ-ಸ್ಪೇನ್‌

ಸ್ಪೇನ್‌ ರಾಷ್ಟ್ರ ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ 3 ದಿನ ಪಾವತಿ ರಜೆ ನೀಡುವ ಮೂಲಕ ಮುಟ್ಟಿಇನ ದಿನಗಳಲ್ಲಿ ಪಾವತಿ ರಜೆ ನೀಡಿದ ಮೊದಲ ಪಾಶ್ಚಾತ್ಯ ರಾಷ್ಟ್ರವಾಗಿದೆ.

ಯಾವಾವ ದೇಶಗಳಲ್ಲಿದೆ?

ಜಾಂಬಿಯಾ, ಕೆಲವೊಂದು ಏಷ್ಯಾನ್‌ ರಾಷ್ಟ್ರಗಳಲ್ಲಿ ಅಂದರೆ ಜಪಾನ್‌, ಇಂಡೋನೇಷ್ಯಾ, ದಕ್ಷಿಣ ಕೊರಿಯಾ, ಈ ರಾಷ್ಟ್ರಗಳಲ್ಲಿ ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಕೆಲಸದಿಂದ ರಜೆ ತೆಗೆದುಕೊಳ್ಳಬಹುದು. ಯುನೈಟೆಡ್‌ ಸ್ಟೇಟ್‌ನಲ್ಲಿ ರಜೆ ಇದೆ ಆದರೆ ಆ ದಿನಕ್ಕೆ ಹಣ ಪಾವತಿಸುವುದಿಲ್ಲ.

ಮುಟ್ಟಿನ ರಜೆ ಬಗ್ಗೆ ಪರ-ವಿರೋಧ ವಾದವಿದೆ

ಮುಟ್ಟಿನ ರಜೆ ಮಹಿಳೆಯರಿಗೆ ಒಂದು ರೀತಿಯಲ್ಲಿ ಅನುಕೂಲಕರ ಅಂತ ಅನಿಸಿದರೂ ಉದ್ಯೋಗದಲ್ಲಿ ಮಹಿಳೆಯರಿಗೇ ಹೊಡೆತ ಬೀಳಬಹುದು ಎಂಬ ವಾದವಿದೆ.

ಮುಟ್ಟಿನ ಸಮಯದಲ್ಲಿ ಈ ರೀತಿ ರಜೆ ನೀಡಿದರೆ ಅದು ಅವರ ಕೆಲಸದ ಮೇಲೆ ಪರಿಣಾಮಬೀರುವುದು, ಇದರಿಂದ ಕಂಪನಿಗಳು ಮಹಿಳಾ ಉದ್ಯೋಗಿಗಳನ್ನು ಮಿತಿಯಲ್ಲಿಷ್ಟೇ ತೆಗೆದುಕೊಳ್ಳಬಹುದು ಎಂಬ ವಾದವಿದೆ. ಇನ್ನು ಕೆಲವರು ಇದು ಆರ್ಟಿಕಲ್ 14ಕ್ಕೆ ವಿರೋಧವಾಗಿದೆ. ಪುರುಷರ ಹಾಗೂ ಮಹಿಳೆಯರು ಸಮಾನರು. ಮಹಿಳೆಯರಿಗೆ ಮುಟ್ಟಿನ ರಜೆ ನೀಡಿದರೆ ಅದು ಕೆಲಸದಲ್ಲಿ ತಾರತಮ್ಯವಾಗುವುದು ಎಂದು ಕೂಡ ಹೇಳುತ್ತಿದ್ದಾರೆ.

ಆ ದಿನಗಳಲ್ಲಿ ರಜೆ ಕೊಡಿ, ಬೇರೆ ದಿನಗಳಲ್ಲಿ ಕೆಲಸ ಮಾಡುತ್ತಾರೆ

ಇನ್ನು ಕೆಲವರು ಮುಟ್ಟಿನ ಸಮಯ ಮಹಿಳೆಯರಿಗೆ ತುಂಬಾ ಕಷ್ಟವಾಗಿರುವುದರಿಂದ ಆ ದಿನಗಳಲ್ಲಿ ರಜೆ ಕೊಟ್ಟು ಬೇರೆ ದಿನಗಳಲ್ಲಿ ಬಾಕಿಯುಳಿದ ಕೆಲಸ ಮಾಡಬಹುದು, ಇದರಿಂದ ಮಹಿಳೆಯರ ಕೆಲಸದ ಮೇಲೂ ಯಾವುದೇ ಕೆಟ್ಟ ಪರಿಣಾಮ ಬೀರಲ್ಲ ಎಂದು ವಾದಿಸುತ್ತಿದ್ದಾರೆ.

ಭಾರತದಲ್ಲಿ ಇದುವರೆಗೆ ಈ ನಿಯಮ ಬಂದಿರಲಿಲ್ಲ, ಇದೀಗ ಮೊದಲ ಬಾರಿಗೆ ಸುಪ್ರೀಂಕೋರ್ಟ್‌ಗೆ ಈ ಪ್ರಕರಣ ತಲುಪಿದೆ, ತೀರ್ಪು ಇನ್ನಷ್ಟೇ ಬರಬೇಕಾಗಿದೆ.

ಕೇರಳದ ಕಾಲೇಜಿನಲ್ಲಿ 1912ರಿಂದಲೇ ವಿದ್ಯಾರ್ಥನಿಯರಿಗೆ ಮುಟ್ಟಿನ ರಜೆ ನೀಡುತ್ತಿದೆ

ಎರ್ನಾಕುಲಂ ಜಿಲ್ಲೆಯಲ್ಲಿರುವ ಕಾಲೇಜಿನಲ್ಲಿ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ನೋವು ಕಾರಣ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದರೆ ಅವರಿಗೆ ಮತ್ತೊಂದು ಪರೀಕ್ಷೆ ನೀಡುತ್ತಿದೆ. ಈ ಕುರಿತು ಇತಿಹಾಸಕಾರ ಪಿ ಭಾಸ್ಕರನ್‌ಉನ್ನಿ ಅವರ ಪುಸ್ತಕದಲ್ಲಿ ಉಲ್ಲೇಖವಿದೆ.

ಮುಟ್ಟಿನ ಬಗ್ಗೆ ಹೇಳಲು ಈಗಲೂ ಹಿಂಜರಿಯುತ್ತಾರೆ

ಎಷ್ಟೋ ಹೆಣ್ಮಕ್ಕಳು ಅಂಗಡಿಗೆ ಹೋಗಿ ಸ್ಯಾನಿಟರಿ ಪ್ಯಾಡ್‌ ಖರೀದಿಸಲು ನಾಚಿಕೆ ಪಡುತ್ತಾರೆ. ಇನ್ನು ಮುಟ್ಟಿನ ದಿನಗಳಲ್ಲಿ ಎಷ್ಟೇ ನೋವಾದರೂ ಬೇರೆಯವರಿಗೆ ಹೇಳಲು ಅಂಜಿಕೆಯಾಗಿ ಕಷ್ಟಪಟ್ಟು ಆಫೀಸ್‌ಗೆ, ಕಾಲೇಜಿಗೆ ಬರುತ್ತಾರೆ. ಈ ಮುಟ್ಟಿನ ರಜೆ ಸಿಕ್ಕರೆ ಈ ಬಗೆಯ ಹಿಂಜರಿಕೆ ಕಡಿಮೆಯಾಗಬಹುದು.

ಈ ಮುಟ್ಟಿನ ರಜೆ ಬಗ್ಗೆ ನಿಮ್ಮ ಅಭಿಪ್ರಾಯವೇನು?

English summary

PIL seeking menstrual leave with PIL filed in Supreme Court; Know details in kannada

Menstrual leave: PIL filed in Supreme Court seeking paid leave in those days, read on...
X
Desktop Bottom Promotion