For Quick Alerts
ALLOW NOTIFICATIONS  
For Daily Alerts

ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್: ಕೋವಿಡ್ 19 ಈ ಸಮಯದಲ್ಲಿ ಇದರ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳಿವು

|

ಕೊರೊನಾವೈರಸ್ ಎರಡನೇ ಅಲೆಯಲ್ಲಿ ಆಕ್ಸಿಜನ್‌ಗೆ ಬೇಡಿಕೆ ತುಂಬಾನೇ ಹೆಚ್ಚಾಗಿದೆ. ದೇಶದಲ್ಲಿ ಆಕ್ಸಿಜನ್ ಬೇಡಿಕೆ ಪೂರೈಸಲು ವಿದೇಶದಿಂದಲೂ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ಆಮದು ಮಾಡಲಾಗಿದೆ. ಆದರೂ ಕೆಲವೊಂದು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತಕ್ಕ ಸಮಯಕ್ಕೆ ಆಕ್ಸಿಜನ್ ಸಿಗದೆ ಸಾವನ್ನಪ್ಪುತ್ತಿದ್ದಾರೆ.

ಕೊರೊನಾ ಸೋಂಕಿತರೆಲ್ಲರಿಗೆ ಆಕ್ಸಿಜನ್ ಬೇಕಾಗಿಲ್ಲ, ಯಾರ ಶರೀರಿದಲ್ಲಿ ಆಕ್ಸಿಜನ್ ಪ್ರಮಾಣ 90ಕ್ಕಿಂತಲೂ ಕಡಿಮೆಯಾಗುತ್ತದೋ ಅಂಥವರಿಗೆ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ ಅವಶ್ಯಕವಿರುತ್ತದೆ. ಈ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ ಎಂದರೇನು? ಯಾವಾಗ ಅವಶ್ಯಕ? ಅದನ್ನು ಬಳಸುವುದು ಹೇಗೆ ಹಾಗೂ ಯಾವಾಗ ಬಳಸಬಾರದು ಎಂಬುವುದರ ಬಗ್ಗೆ ಮಾಹಿತಿ ಇಲ್ಲಿದೆ.

ಯಾರಿಗೆ ಆಕ್ಸಿಜನ್ ಥೆರಪಿ ಅವಶ್ಯಕ?

ಯಾರಿಗೆ ಆಕ್ಸಿಜನ್ ಥೆರಪಿ ಅವಶ್ಯಕ?

ಆಮ್ಲಜನಕವನ್ನು ನಾವು ಗಾಳಿಯಿಂದ ಉಸಿರಾಟದ ಮೂಲಕ ತೆಗೆದುಕೊಂಡು ಅದು ಶ್ವಾಸಕೋಶದ ಮೂಲಕ ದೇಹದ ಇತರ ಭಾಗಗಳಿಗೆ ಹೀಗುತ್ತದೆ. ಕೊರೊನಾ ಶ್ವಾಸಕೋಶಕ್ಕೆ ಹಾನಿಯುಂಟು ಮಾಡಿದಾಗ ದೇಹದ ಇತರ ಭಾಗಗಳಿಗೆ ಆಮ್ಲಜನಕ ಪೂರೈಕೆಯಾಗುವುದಿಲ್ಲ, ಆಗ ದೇಹದಲ್ಲಿ ಆಕ್ಸಿಜನ್ ಅಂದ್ರೆ ಆಮ್ಲಜನಕದ ಪ್ರಮಾಣದ ಕಡಿಮೆಯಾಗುತ್ತದೆ. ಆಗಆಕ್ಸಿಜನ್ ಥೆರಪಿ ಅವಶ್ಯಕವಾಗಿರುತ್ತದೆ.

ಆಕ್ಸಿಜನ್ ಲೆವಲ್‌ ಅನ್ನು ಆಕ್ಸಿನ್‌ ಸ್ಯಾಚುರೇಷನ್ ಮೂಲಕ ಅಳೆಯಲಾಗುವುದು. ಇದನ್ನು SpO2 ಎಂದು ಕೂಡ ಕರೆಯಲಾಗುವುದು. ನಮ್ಮ ರಕ್ತದ ಹಿಮೋಗ್ಲೋಬಿನ್‌ನಲ್ಲಿ ಆಮ್ಲಜನಕ ಎಷ್ಟಿದೆ ಎಂದು ಅಳೆಯಲಾಗುವುದು. ನಮ್ಮ ದೇಹದಲ್ಲಿ ಆಕ್ಸಿಜನ್ ಅಥವಾ ಆಮ್ಲಜನಕ ಪ್ರಮಾಣ 95% - 100% ಇರಬೇಕು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಯಾರ ದೇಹದಲ್ಲಿ ಆಕ್ಸಿಜನ್‌ ಲೆವಲ್‌ ಶೇ.94ಕ್ಕಿಂತ ಕಡಿಮೆಯಾಗುತ್ತದೋ ಅವರಿಗೆ ಆಕ್ಸಿಜನ್ ಥೆರಪಿ ಅವಶ್ಯಕವಿರುತ್ತದೆ. ಆಕ್ಸಿಜನ್ ಶೇ.90ಕ್ಕಿಂತ ಕಡಿಮೆಯಾದರೆ ತುರ್ತು ನಿಗಾ ಘಟಕಕ್ಕೆ ವರ್ಗಾಯಿಸಬೇಕಾಗುತ್ತದೆ.

ಆಕ್ಸಿಜನ್ ಪ್ರಮಾಣ ಕಡಿಮೆಯಾಗುತ್ತಿದ್ದರೆ ಒಂದು ವೇಳೆ ಆಸ್ಪತ್ರೆಗೆ ದಾಖಲಾಗಲು ಅಥವಾ ಐಸಿಯು ಸಿಗಲು ತಡವಾಗದಿದ್ದರೆ ದೇಹದಲ್ಲಿ ಆಕ್ಸಿಜನ್ ಪ್ರಮಾಣ ಹೆಚ್ಚಿಸಲು ಎಲ್ಲಾ ಪ್ರಯತ್ನ ಮಾಡಬೇಕು. ವೈದ್ಯರೇ ಹೇಳುವಂತೆ ಆಕ್ಸಿಜನ್ ವ್ಯವಸ್ಥೆ ಸಿಗುವವರೆಗೆ prone positionನಲ್ಲಿ ಮಲಗಿ, ಇದು ದೇಹದಲ್ಲಿ ಆಕ್ಸಿಜನ್ ಪ್ರಮಾಣ ತುಂಬಾ ಕಡಿಮೆಯಾಗದಂತೆ ನೋಡಿಕೊಳ್ಳಲು ಸಹಾಯ ಮಾಡುತ್ತೆ.

ಆಕ್ಸಿಜನ್ ಕಾನ್ಸನ್‌ಟ್ರೇಟರ್‌ -ಹೇಗೆ ಕಾರ್ಯನಿರ್ವಹಿಸುತ್ತದೆ?

ಆಕ್ಸಿಜನ್ ಕಾನ್ಸನ್‌ಟ್ರೇಟರ್‌ -ಹೇಗೆ ಕಾರ್ಯನಿರ್ವಹಿಸುತ್ತದೆ?

ಗಾಳಿಯಲ್ಲಿ ಶೇ. 78ರಷ್ಟು ನೈಟ್ರೋಜನ್, ಶೇ. 21ರಷ್ಟು ಆಮ್ಲಜನಕವಿರುತ್ತದೆ. ಆಕ್ಸಿಜನ್ ಕಾನ್ಸನ್‌ಟ್ರೇಟರ್‌ ಸಾಧನವು ವಾತಾವರಣದಿಂದ ಗಾಳಿಯನ್ನು ತೆಗೆದುಕೊಂಡು ನೈಟ್ರೋಜನ್ ಫಿಲ್ಟರ್ ಮಾಡಿ, ಆಕ್ಸಿಜನ್ ಪ್ರಮಾಣ ಹೆಚ್ಚಿಸುತ್ತದೆ.

ಈ ಆಕ್ಸಿಜನ್‌ ಅನ್ನು ಆಕ್ಸಿಜನ್ ಟ್ಯಾಂಕ್ ಅಥವಾ ಸಿಲಿಂಡರ್ ಮೂಲಕ ವ್ಯಕ್ತಿಗೆ ನೀಡಲಾಗುವುದು. ಆಕ್ಸಿಜನ್‌ ಸಿಲಿಂಡರ್‌ ತುಂಬಿಸುತ್ತಾ ಇರಬೇಕು, ಆದರೆ ಕ್ಸಿಜನ್ ಕಾನ್ಸನ್‌ಟ್ರೇಟರ್‌ 24*7 ಗಾಳಿಯನ್ನು ಹೀರಿಕೊಂಡು, ನೈಟ್ರೋಜನ್ ಹೊರಹಾಕಿ ಆಮ್ಲಜನಕ ಸಂಗ್ರಹಿಸುವ ಕಾರ್ಯ ಮಾಡುತ್ತಿರುತ್ತದೆ.

ಯಾರು ಆಕ್ಸಿಜನ್ ಸಿಲಿಂಡರ್ ಬಳಸಬಹುದು, ಯಾವಾಗ ಬಳಸಬಹುದು?

ಯಾರು ಆಕ್ಸಿಜನ್ ಸಿಲಿಂಡರ್ ಬಳಸಬಹುದು, ಯಾವಾಗ ಬಳಸಬಹುದು?

ಕೋವಿಡ್ 19 ಸೋಂಕಿತರಲ್ಲಿ ಯಾವಾಗ ಶೇ. 94ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಆಕ್ಸಿಜನ್ ಇರುತ್ತದೋ ಆಗ ಆಕ್ಸಿಜನ್ ಸಿಲಿಂಡರ್‌ ಬಳಸಬೇಕಾಗುತ್ತದೆ.

ಆಕ್ಸಿಜನ್ ಸಿಲಿಂಡರ್ ನಾವೇ ಬಳಸಬಹುದು?

ಆಕ್ಸಿಜನ್ ಸಿಲಿಂಡರ್ ನಾವೇ ಬಳಸಬಹುದು?

ಇಲ್ಲ, ಮಾಡುವಂತಿಲ್ಲ, ನಾವೇ ಆಕ್ಸಿಜನ್ ಸಿಲಿಂಡರ್‌ ರೋಗಿಗೆ ನೀಡಿದರೆ ಅಪಾಯ ಹೆಚ್ಚು. ಆಸ್ಪತ್ರೆಗೆ ದಾಖಲಾಗಿ ಅಥವಾ ವೈದ್ಯರ ಮಾರ್ಗದರ್ಶನದಲ್ಲಿ ಮಾತ್ರ ಆಕ್ಸಿಜನ್ ಸಿಲಿಂಡರ್ ರೋಗಿಗೆ ನೀಡಬೇಕು.

English summary

Oxygen Concentrators During COVID-19: All You Need To Know in Kannada

What is oxygen concentrators, when would they be required, how are they to be used? or not used ? during COVID-19: All you need to know in Kannada,
X
Desktop Bottom Promotion