For Quick Alerts
ALLOW NOTIFICATIONS  
For Daily Alerts

Omicron Covid Variant : ವಿಶ್ವಕ್ಕೆ ಕಂಟಕವಾಗಿದೆ ಒಮಿಕ್ರಾನ್ ರೂಪಾಂತರಿ: ಲಕ್ಷಣಗಳೇನು? ಲಸಿಕೆಯಿಂದ ತಡೆಗಟ್ಟಬಹುದೇ?

|

ಕೊರೊನಾವೈರಸ್‌ನ ಆತಂಕ ಕಡಿಮೆಯಾಯಿತು ಎಂದು ಭಾವಿಸುವಷ್ಟರಲ್ಲಿ ವಿಶ್ವಕ್ಕೆ ಮತ್ತೆ ಗಂಡಾಂತರ ಎದುರಾಗಿದೆ. ಕೊರೊನಾ ರೂಪಾಂತರದ ಅನೇಕ ತಳಿಗಳು ಬಂದಿವೆ. ಆದರೆ ಈಗ ಕಾಣಿಸಿರುವ ಕೊರೊನಾ ಅತ್ಯಂತ ಅಪಾಯಕಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದು B.1.1.529 ರೂಪಾಂತರವಾಗಿದ್ದು ಇದಕ್ಕೆ ಒಮಿಕ್ರಾನ್‌ ಎಂದು ಹೆಸರಿಡಲಾಗಿದೆ.

ವಿಜ್ಞಾನಿಗಳು ಹಾಗೂ ಆರೋಗ್ಯ ತಜ್ಞರು ಈಗಾಗಲೇ ಇದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು ಮೊದಲಿಗೆ ಇದು ದಕ್ಷಿಣ ಆಫ್ರಿಕಾದ ಬೋಟ್ಸ್ವಾನದಲ್ಲಿ ಪತ್ತೆಯಾಯಿತು. ಇದು ಡೆಲ್ಟಾವೈರಸ್‌ಗಿಂತ ತುಂಬಾ ವೇಗವಾಗಿ ಹರಡುವುದರಿಂದ ಈ ವೈರಸ್‌ ಹೆಚ್ಚು ಅಪಾಯಕಾರಿಯಾಗಿದೆ. ಈ ವೈರಸ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಒಮಿಕ್ರಾನ್‌ ಕೋವಿಡ್ ರೂಪಾಂತರ ಎಂದರೇನು?

ಒಮಿಕ್ರಾನ್‌ ಕೋವಿಡ್ ರೂಪಾಂತರ ಎಂದರೇನು?

B.1.1.529 ರೂಪಾಂತರ ವೈರಸ್‌ ವಿಶ್ವಕ್ಕೆ ದೊಡ್ಡ ಆತಂಕವನ್ನು ಮೂಡಿಸಿದೆ. ಈ ವೈರಸ್‌ ಮೊದಲಿಗೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಯಿತು. ಪ್ರಪಂಚದಲ್ಲಿ ಹೆಚ್ಚು ಸಾವು-ನೋವುಗಳಿಗೆ ಕಾರಣವಾದ ಬೀಟಾ ರೂಪಾಂತರ ಕೂಡ ಮೊದಲಿಗೆ ಇಲ್ಲಿಯೇ ಕಂಡು ಬಂದಿತ್ತು. ಇದೀಗಾ ಒಮಿಕ್ರಾನ್‌ ವೈರಸ್‌ನಿಂದಾಗಿ ಆಸ್ಪತ್ರೆಗೆ ಸೇರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದು ಹರಡುವ ವೇಗ ತೀವ್ರವಾಗಿದ್ದು, ಮೊದಲ ಕೇಸ್‌ ಪತ್ತೆಯಾದ ಎರಡು ವಾರದೊಳಗಾಗಿ ದಕ್ಷಿಣ ಆಫ್ರಿಕಾದಲ್ಲಿ ತುಂಬಾ ಕೇಸ್‌ಗಳು ಕಂಡು ಬರುತ್ತಿರುವುದು ಆತಂಕ ಹೆಚ್ಚಿಸಿದೆ.

ಒಮಿಕ್ರಾನ್‌ ರೂಪಾಂತರ ತಡೆಗಟ್ಟಲು ಲಸಿಕೆಯಿಂದ ಸಾಧ್ಯವಿದೆಯೇ?

ಒಮಿಕ್ರಾನ್‌ ರೂಪಾಂತರ ತಡೆಗಟ್ಟಲು ಲಸಿಕೆಯಿಂದ ಸಾಧ್ಯವಿದೆಯೇ?

ಈಗ ನೀಡಲಾಗಿರುವ ಕೊರೊನಾ ಲಸಿಕೆ ಈ ವೈರಸ್‌ ತಡೆಗಟ್ಟುವಲ್ಲಿ ಸಮರ್ಥವಾಗಿಲ್ಲ ಎಂದು ಕೇಳಿ ಬರುತ್ತಿದೆ. Pfizer'ಮತ್ತು BioNTech ಲಸಿಕೆ ಉತ್ಪಾದಕ ಕಂಪನಿಗಳು ಇದರ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ಲಸಿಕೆ ಮತ್ತಷ್ಟು ಪರಿಣಾಮಕಾರಿ ಮಾಡಲು ಪ್ರಯತ್ನಗಳನ್ನು ಮಾಡುತ್ತಿವೆ. ಇದೀಗ ಒಮಿಕ್ರಾನ್‌ ವೈರಸ್‌ ಲಸಿಕೆ ಪಡೆದವರಲ್ಲಿಯೂ ಕಂಡು ಬರುತ್ತಿದ್ದು ಈ ವೈರಸ್‌ ತಗುಲಿದರೆ ರೋಗ ನಿರೋಧಕ ಶಕ್ತಿ ಸಂಪೂರ್ಣ ಕಡಿಮೆಯಾಗುತ್ತಿದೆ. ಇದು ಡೆಲ್ಟಾ ವೈರಸ್‌ಗಿಂತ ಎರಡು ಪಟ್ಟು ಅಪಾಯಕಾರಿಯಾಗಿದ್ದು ವೈದ್ಯಕೀಯ ಜಗತ್ತಿಗೆ ಸವಾಲಾಗಿ ಪರಿಣಮಿಸಿದೆ.

ಒಮಿಕ್ರಾನ್‌ ವೈರಸ್‌ ಭಾರತದಲ್ಲಿ ಪತ್ತೆಯಾಗಿದೆಯೇ?

ಒಮಿಕ್ರಾನ್‌ ವೈರಸ್‌ ಭಾರತದಲ್ಲಿ ಪತ್ತೆಯಾಗಿದೆಯೇ?

ಈ ಭಯಾನಕ ವೈರಸ್‌ ಭಾರತದಲ್ಲಿ ಇನ್ನೂ ಪತ್ತೆಯಾಗಿಲ್ಲ. ಈ ವೈರಸ್‌ ಇದೀಗ ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದು ಇತರ ದೇಶಗಳು ಈ ವೈರಸ್‌ ತಮ್ಮ ದೇಶಕ್ಕೆ ಬಾರದಂತೆ ಎಚ್ಚರವಹಿಸುತ್ತಿದೆ.

ಒಮಿಕ್ರಾನ್‌ ರೂಪಾಂತರದ ಲಕ್ಷಣಗಳೇನು?

ಒಮಿಕ್ರಾನ್‌ ರೂಪಾಂತರದ ಲಕ್ಷಣಗಳೇನು?

ಎನ್‌ಐಸಿಡಿ (National Institute for Communicable Diseases)ಪ್ರಕಾರ ಈ ವೈರಸ್‌ನಲ್ಲಿ ಇತರ ಕೊರೊನಾ ಲಕ್ಷಣಗಳಿಗಿಂತೇನು ಭಿನ್ನವಾಗಿಲ್ಲ. ಈ ವೈರಸ್‌ನಲ್ಲೂ ಕೊರೊನಾ ಲಕ್ಷಣಗಳಾದ ಜ್ವರ, ಒಣ ಕೆಮ್ಮು, ಉಸಿರಾಟದ ತೊಂದರೆ ಇವೆಲ್ಲಾ ಕಂಡು ಬರುವುದು.

* ಆದರೆ ಈ ವೈರಸ್‌ ಇತರ ಕೊರೊನಾ ವೈರಸ್‌ಗಿಂತ ಅತಿ ವೇಗವಾಗಿ ಹರಡುವುದು.

* ಈ ರೂಪಾಂತರ ವೈರಸ್‌ ತಗುಲಿದರೆ ಸಂಪೂರ್ಣವಾಗಿ ರೋಗ ನಿರೋಧಕ ಶಕ್ತಿ ಕುಗ್ಗುವುದರಿಂದ ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿ ಉಂಟಾಗುವುದು.

ಕೊರೊನಾ ತಡೆಗಟ್ಟಲು ದೇಶಗಳು ಹಾಗೂ ಜನರು ಏನು ಮಾಡಬೇಕು?

ಕೊರೊನಾ ಕಡಿಮೆಯಾಗಿದೆ ಎಂದು ನಿರ್ಲಕ್ಷ್ಯ ತೋರಿದರೆ ಅಪಾಯ ತಪ್ಪಿದ್ದಲ್ಲ. ದೇಶಗಳು ತಮ್ಮ ದೇಶಗಳಿಗೆ ಈ ಭಯಾನಕ ವೈರಸ್‌ ಹರಡದಂತೆ ಮುನ್ನೆಚ್ಚರಿಕೆವಹಿಸಬೇಕಾಗಿದೆ.

ಜನರು ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್‌ ಧರಿಸಬೇಕು, ಸ್ಯಾನಿಟೈಸರ್‌ ಬಳಸಬೇಕು. ಹೀಗೆ ಎಲ್ಲಾ ಕೊರೊನಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

English summary

Omicron Covid-19 Variant Symptoms, Transmission, Vaccines Efficacy, Precuations and other details in Kannada

Omicron Covid-19 Variant Symptoms , Transmission, Vaccines Efficacy. Everything We Know About New COVID Variant Found In South Africa in Kannada
X
Desktop Bottom Promotion