For Quick Alerts
ALLOW NOTIFICATIONS  
For Daily Alerts

ಹಣ್ಣುಗಳು ಆರೋಗ್ಯಕರ ಆದ್ರೆ ಮಿಶ್ರ ಹಣ್ಣುಗಳ ಸೇವನೆ ಆರೋಗ್ಯಕರವಲ್ಲ, ಏಕೆ?

|

ಸರಿಯಾಗಿ ತಿನ್ನುವುದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಇರುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಇದು ಸರಿಯಾದ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಸಮಯದಲ್ಲಿ ತಿನ್ನುವುದನ್ನು ಒಳಗೊಂಡಿದೆ ಎಂಬುದನ್ನು ಮರೆಯಬೇಡಿ. ಇಂತಹ ಅನೇಕ ಪೋಷಕಾಂಶಗಳ ಪ್ರಯೋಜನಗಳನ್ನು ನೀಡುವ ಆಹಾರ ಗುಂಪೆಂದರೆ ಹಣ್ಣುಗಳು.

ಪೋಷಕಾಂಶಭರಿತ ಹಣ್ಣುಗಳು ಅನೇಕ ಲಾಭಗಳನ್ನು ಹೊಂದಿವೆ. ಹಾಗಂತ ಅದನ್ನು ಯಾವುದೇ ಸಮಯದಲ್ಲಿ, ಯಾವುದೇ ಪ್ರಮಾಣದಲ್ಲಿ ತಿನ್ನುವುದು ಸರಿಯೇ? ಇಲ್ಲ, ಹಣ್ಣುಗಳನ್ನು ತಿನ್ನಲು ಸಹ ಹಲವಾರು ನಿಯಮಗಳಿವೆ. ಆ ಪ್ರಕಾರ ಸೇವಿಸಿದರಷ್ಟೇ ಅಗತ್ಯ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುವುದು.

ಹಣ್ಣು ಸೇವನೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಮೂಲ ನಿಯಮಗಳ ಬಗ್ಗೆ ತಜ್ಞರು ಏನು ಹೇಳುತ್ತಾರೆ? ಹೇಗೆ ಸೇವಿಸಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ದಿನಕ್ಕೆ ಎರಡು ಹಣ್ಣುಗಳನ್ನು ಸೇವಿಸಿ:

ದಿನಕ್ಕೆ ಎರಡು ಹಣ್ಣುಗಳನ್ನು ಸೇವಿಸಿ:

ದಿನಕ್ಕೆ ಎರಡು ಹಣ್ಣುಗಳನ್ನು (ನಾಲ್ಕರಿಂದ ಐದು ಬಾರಿ) ಸೇವಿಸಿದರೆ ನಿಮ್ಮ ಚರ್ಮದ ಹೊಳಪು ಹೆಚ್ಚಾಗುತ್ತದೆ. ಜೊತೆಗೆ ಮಧುಮೇಹ ಮತ್ತು ಇನ್ಸುಲಿನ್ ಪ್ರತಿರೋಧದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಂದರೆ ದಿನಕ್ಕೆ ಎರಡು ಸೇಬು, ಎರಡು ಬಾಳೆಹಣ್ಣು ಈ ರೀತಿ ಸೇವಿಸಿ. ಅವುಗಳನ್ನು ಒಮ್ಮೆಲೆ ಸೇವಿಸಬಾರದು. ಆಗಾಗ ತಿನ್ನುತ್ತಿರಬೇಕು

ಹಣ್ಣಿನ ಪ್ರಮಾಣ:

ಹಣ್ಣಿನ ಪ್ರಮಾಣ:

ಹಣ್ಣುಗಳನ್ನು ಅತಿಯಾಗಿ ತಿನ್ನುವುದು ಸುಲಭ, ಆದರೆ ಪ್ರಮಾಣವನ್ನು ನಿಯಂತ್ರಿಸುವುದು ಮುಖ್ಯ. ಹಣ್ಣುಗಳು ಫ್ರಕ್ಟೋಸ್ ಅನ್ನು ಒಳಗೊಂಡಿರುತ್ತವೆ. ಇದು ಒಂದು ರೀತಿಯ ಕಾರ್ಬೋಹೈಡ್ರೇಟ್ ಆಗಿದ್ದು, ಅಧಿಕವಾಗಿ ತೆಗೆದುಕೊಂಡರೆ ತೂಕ ಹೆಚ್ಚಾಗಲು ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಾಗಲು ಕಾರಣವಾಗಬಹುದು. ಆದ್ದರಿಂದ ಹಣ್ಣುಗಳ ಪೋಷಕಾಂಶಗಳ ಮೌಲ್ಯವನ್ನು ತಿಳಿದುಕೊಂಡು, ಹಣ್ಣಿನ ಭಾಗವನ್ನು ಆಯ್ಕೆ ಮಾಡಿ. ಸೇಬು ಆದರೆ ಇಡೀ ಒಂದು ಸೇಬು, ಅನಾನಸ್ ಆದರೆ ಎರಡು ಪೀಸ್ ಹೀಗೆ ನೋಡಿಕೊಂಡು ತಿನ್ನಿ.

ಹಣ್ಣಿನ ಜ್ಯೂಸ್ ಡಯೆಟ್ ನ ಭಾಗ:

ಹಣ್ಣಿನ ಜ್ಯೂಸ್ ಡಯೆಟ್ ನ ಭಾಗ:

ನಿಮ್ಮ ಆಹಾರದಲ್ಲಿ ಅನೇಕ ಹಣ್ಣುಗಳನ್ನು ಸೇರಿಸಲು ಹಣ್ಣಿನ ರಸ ತಯಾರಿಸುವುದು ಉತ್ತಮ ಮಾರ್ಗವಾಗಿದೆ. ಸಂಸ್ಕರಿಸಿದ ಹಣ್ಣಿನ ಜ್ಯೂಸ್ ಗಿಂತ ಮನೆಯಲ್ಲಿ ತಯಾರಿಸಿದ ಜ್ಯೂಸ್ ಗಳನ್ನು ಕುಡಿಯುವುದು ಉತ್ತಮ, ಏಕೆಂದರೆ ಇದರಲ್ಲಿ ಫೈಬರ್‌ ಅಂಶ ಹೆಚ್ಚಾಗಿರುತ್ತದೆ. ಇನ್ನೊಂದು ವಿಚಾರವೆಂದರೆ ಆ ಹಣ್ಣಿನ ರಸವನ್ನು ಸಂಗ್ರಹಿಸಬೇಡಿ, ತಯಾರಿಸಿದ ನಿಮಿಷದಲ್ಲಿ ಕುಡಿಯಿರಿ.

ಸೀಸನಲ್ ಹಣ್ಣುಗಳನ್ನು ಆಯ್ಕೆ ಮಾಡಿ:

ಸೀಸನಲ್ ಹಣ್ಣುಗಳನ್ನು ಆಯ್ಕೆ ಮಾಡಿ:

ಎಲ್ಲೆಲ್ಲಿಂದಲೂ ತರಿಸಿಕೊಳ್ಳುವ ಬದಲು, ನಿಮ್ಮ ಪ್ರದೇಶದಲ್ಲಿ ಬೆಳೆದ ಕಾಲೋಚಿತ ಹಣ್ಣುಗಳನ್ನು ಆರಿಸಿ. ಕಾಲೋಚಿತ ಹಣ್ಣುಗಳು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಬಜೆಟ್ ಸ್ನೇಹಿಯಾಗಿವೆ. ಆಮದು ಮಾಡಿಕೊಂಡ ಹಣ್ಣುಗಳು ದುಬಾರಿ, ಅಷ್ಟೇ ಅಲ್ಲ, ತುಂಬಾ ದಿನಗಳವರೆಗೆ ಸಂರಕ್ಷಿಸಿಡಲಾಗಿರುತ್ತದೆ.

ಹಣ್ಣು ತಿನ್ನಲು ಸಮಯ:

ಹಣ್ಣು ತಿನ್ನಲು ಸಮಯ:

ನೀವು ತೂಕ ನಷ್ಟ ಅಥವಾ ಸಕ್ಕರೆ ನಿಯಂತ್ರಣಕ್ಕಾಗಿ ಹಣ್ಣನ್ನು ತಿನ್ನಲು ಸಮಯ ಹುಡುಕುತ್ತಿದ್ದರೆ, ಮಧ್ಯಾಹ್ನದವರೆಗೂ ನಿಮಗೆ ಸಮಯವಿದೆ. ಮಧ್ಯಾಹ್ನದೊಳಗೆ ಹಣ್ಣುಗಳನ್ನು ಸೇವಿಸಿ. ಸಂಜೆಯ ನಂತರ, ಅಥವಾ ರಾತ್ರಿ ಊಟದ ಸಮಯದಲ್ಲಿ ಹಣ್ಣುಗಳನ್ನು ತಿನ್ನಲು ಬಯಸಿದರೆ, ಆಗ ನೀವು ಒಂದು ಕಪ್ ಪಪ್ಪಾಯಿ ತಿನ್ನಬಹುದು.

ಹಾಲಿನೊಂದಿಗೆ ಹಣ್ಣು:

ಹಾಲಿನೊಂದಿಗೆ ಹಣ್ಣು:

ಹಾಲಿನೊಂದಿಗೆ ಹಣ್ಣುಗಳನ್ನು ಬೆರೆಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿದೆ. ಹಾಲಿನೊಂದಿಗೆ ಹಣ್ಣುಗಳನ್ನು ಸೇವಿಸಬಹುದು. ಆದರೆ ನಿಮಗೆ ಮಧುಮೇಹ, ಪಿಸಿಓಎಸ್ ಅಥವಾ ಆರೋಗ್ಯ ಸಮಸ್ಯೆಗಳಿದ್ದರೆ ಅವುಗಳನ್ನು ಬೆರೆಸುವುದನ್ನು ತಪ್ಪಿಸಿ. ನಿಮ್ಮ ಸ್ಮೂಥಿಗಳಲ್ಲಿ ಡೈರಿ ಹಾಲಿನ ಬದಲು ಬಾದಾಮಿ ಹಾಲನ್ನು ಸೇರಿಸಿ.

ಪ್ರೋಟೀನ್ ಮೂಲದೊಂದಿಗೆ ಮಿಶ್ರಣ ಮಾಡಿ:

ಪ್ರೋಟೀನ್ ಮೂಲದೊಂದಿಗೆ ಮಿಶ್ರಣ ಮಾಡಿ:

ಮಧುಮೇಹ, ಬೊಜ್ಜು ಅಥವಾ ಪಿಸಿಓಎಸ್ ನಂತಹ ಆರೋಗ್ಯ ಸ್ಥಿತಿಗಳಿಂದಾಗಿ ಹಣ್ಣುಗಳ ಸಕ್ಕರೆ ಅಂಶದ ಬಗ್ಗೆ ಚಿಂತಿಸುತ್ತಿದ್ದರೆ ಅಥವಾ ನಿಮ್ಮ ಕಾರ್ಬೋಹೈಡ್ರೇಟ್ ಸೇವನೆಯನ್ನು ಸೀಮಿತಗೊಳಿಸಲು ಪ್ರಯತ್ನಿಸಿದರೆ ಹಣ್ಣುಗಳೊಂದಿಗೆ ಪ್ರೋಟೀನ್ ಸೇರಿಸಿ.

English summary

Nutrition Tips: Basic Rules to Follow While Eating Fruits in Kannada

One such food group that gives the benefits of many nutrients is of fruits. Packed with nutrients, fruits have multiple benefits. So, is eating them in any quantity at any time ok? Here we talking about Nutrition Tips: basic rules to follow while eating fruits in kannada, read on
X
Desktop Bottom Promotion