For Quick Alerts
ALLOW NOTIFICATIONS  
For Daily Alerts

ಫ್ರಾನ್ಸ್‌ನಲ್ಲಿ ಒಮಿಕ್ರಾನ್‌ಗಿಂತ ವೇಗವಾಗಿ ಹರಡುವ ಹೊಸ ರೂಪಾಂತರ ಪತ್ತೆ

|

ಜಗತ್ತಿನಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿದೆ, ಹೊಸದಾಗಿ ಪತ್ತೆಯಾದ ಒಮಿಕ್ರಾನ್‌ ವೇಗವಾಗಿ ಹರಡುತ್ತಿರುವುದರಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಒಮಿಕ್ರಾನ್‌ ಡೆಲ್ಟಾಗಿಂತ ಶೇ.70ರಷ್ಟು ವೇಗವಾಗಿ ಹರಡುತ್ತಿದೆ, ಇದೀಗ ಫ್ರಾನ್ಸ್‌ನಲ್ಲಿ ಮತ್ತೊಂದು ಹೊಸ ರೂಪಾಂತರ ಕಂಡು ಬಂದಿದ್ದು ಇನ್ನು B.1.640.2 ಅಥವಾ IHU ಎಂದು ಕರೆಯಲಾಗಿದೆ.

ಈ ರೂಪಾಂತರ ಕೂಡ ಅಪಾಯಕಾರಿಯಾಗಿದೆಯೇ? ಇದರ ಬಗ್ಗೆ ತಜ್ಞರು ಹೇಳಿರುವುದು ಏನು ಎಂದು ನೋಡೋಣ ಬನ್ನಿ:

ಕೋವಿಡ್ 19 ಹೊಸ ರೂಪಾಂತರ IHU

ಕೋವಿಡ್ 19 ಹೊಸ ರೂಪಾಂತರ IHU

* ಇದು 46 ತಳಿಗಳನ್ನು ಅಂದರೆ ಒಮಿಕ್ರಾನ್‌ಗಿಂತ ಹೆಚ್ಚಿನ ತಳಿಗಳನ್ನು ಹೊಂದಿದ್ದು ಇದು ಲಸಿಕೆ ಪಡೆದವರಲ್ಲಿ ಹಾಗೂ ಕೋವಿಡ್‌ 19 ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಇದು ಹರಡುವ ಸಾಧ್ಯತೆ ಕಡಿಮೆ

* 12 ಜನರಲ್ಲಿ ಈ ಹೊಸ ರೂಪಾಂತರ ಕಂಡು ಬಂದಿದ್ದು ಇವರು ಆಫ್ರಿಕಕ್ಕೆ ಹೋಗಿ ಬಂದವರು ಆಗಿದ್ದರು.

* ಈ ವೈರಸ್‌ ಕೂಡ ವೇಗವಾಗಿ ಹರಡುವುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ

* ಇದರ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮತ್ತಷ್ಟು ಅಧ್ಯಯನಗಳನ್ನು ನಡೆಸುತ್ತಿದೆ.

ಫ್ರಾನ್ಸ್‌ನಲ್ಲಿ ಒಮಿಕ್ರಾನ್ ಅಟ್ಟಹಾಸ

ಫ್ರಾನ್ಸ್‌ನಲ್ಲಿ ಒಮಿಕ್ರಾನ್ ಅಟ್ಟಹಾಸ

ಇದೀಗ ಫ್ರಾನ್ಸ್, ಇತರ ಯುರೋಪಿಯನ್‌ ರಾಷ್ಟ್ರಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಒಮಿಕ್ರಾನ್‌ ಕಂಡು ಬರುತ್ತಿದೆ. ಕಳೆದ ವಾರದಿಂದ ಪ್ರತಿದಿನ 160000 ಕೇಸ್‌ಗಳು ಕಂಡು ಬರುತ್ತಿದೆ, ಇದು ದಿನಕ್ಕೆ 2 ಲಕ್ಷ ತಲುಪಬಹುದು ಎಂದು ಹೇಳಲಾಗುತ್ತಿದೆ. ಇದೀಗ ಹೊಸದಾಗಿ ಪತ್ತೆಯಾಗಿರುವ IHU ಕೂಡ ವೇಗವಾಗಿ ಹರಡುವುದರಿಂದ ಮತ್ತೊಂದು ಕಂಟಕ ಎದುರಾಗಿದೆ.

ಫ್ರಾನ್ಸ್‌ನಲ್ಲಿ ಇನ್ನೂ ಸಾಕಷ್ಟು ಜನರು ಲಸಿಕೆ ಪಡೆದಿಲ್ಲ

ಫ್ರಾನ್ಸ್‌ನಲ್ಲಿ ಇನ್ನೂ ಸಾಕಷ್ಟು ಜನರು ಲಸಿಕೆ ಪಡೆದಿಲ್ಲ

ಫ್ರಾನ್ಸ್‌ನಲ್ಲಿ ಸಾಕಷ್ಟು ಜನರು ಲಸಿಕೆ ಪಡೆದಿಲ್ಲ, ಈ ಕಾರಣದಿಂದಾಗಿ ಕೊರೊನಾ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಈಗ ಜನರು ದಿನನಿತ್ಯ ಓಡಾಡಬೇಕಾದರೆ ಹೆಲ್ತ್‌ ಪಾಸ್‌ ಹಿಡಿದಿರಬೇಕು. ಆದ್ರೆ ಮಾತ್ರ ರೆಸ್ಟೋರೆಂಟ್, ಬಾರ್, ಥಿಯೇಟರ್, ಜಿಮ್‌ಗಳಿಗೆ ಪ್ರವೇಶಿಸಲು ಅವಕಾಶ ಸಿಗುವುದು. ಹೆಲ್ತ್‌ ಪಾಸ್ ಬದಲಿಗೆ ವ್ಯಾಕ್ಸಿನ್‌ ಪಾಸ್‌ ಜಾರಿಗೆ ತರಲು ಚಿಂತನೆ ನಡೆಸುತ್ತಿದೆ.

English summary

New highly mutated COVID-19 variant IHU detected in France; All you need to know in kannada

New highly mutated COVID-19 variant IHU detected in France; All you need to know in kannada, read on...
Story first published: Tuesday, January 4, 2022, 16:34 [IST]
X
Desktop Bottom Promotion