For Quick Alerts
ALLOW NOTIFICATIONS  
For Daily Alerts

ನವರಾತ್ರಿಯಲ್ಲಿ ಉಪವಾಸ ಮಾಡಿದರೆ ದೊರೆಯುವ ಪ್ರಯೋಜನಗಳೇನು?

|

ಅಕ್ಟೋಬರ್ 15ರಿಂದ ದೇಶದಾದ್ಯಂತ ನವರಾತ್ರಿ ಆಚರಣೆ ನಡೆಯುತ್ತಿದೆ. 9 ದಿನಗಳ ದುರ್ಗೆಯ 9 ವಿವಿಧ ಅವತಾರಗಳನ್ನು ಆರಾದಿಸಿ ದೇವಿಯ ಕೃಪೆಗೆ ಪಾತ್ರರಾಗಲು ಭಕ್ತರು ಈ ಸಮಯದಲ್ಲಿ ಕಠಿಣ ಪೂಜಾ ನಿಯಮಗಳನ್ನು ಪಾಲಿಸುತ್ತಾರೆ. ನವರಾತ್ರಿ ಆಚರಣೆಯ ನಿಮಯಗಳಲ್ಲೊಂದು ಉಪವಾಸ ಮಾಡುವುದು. 9 ದಿನಗಳವರೆಗೆ ಉಪವಾಸ ಆಚರಣೆ ಮಾಡಲಾಗುವುದು. ಈ ಸಮಯದಲ್ಲಿ ಹಣ್ಣುಗಳು, ನವಣೆ ಇಂಥ ಪದಾರ್ಥಗಳನ್ನು ಮಾತ್ರ ಸೇವಿಸಬಹುದು.

ದೇವಿಯ ಕೃಪೆಗಾಗಿ ನಾವು ನವರಾತ್ರಿ ಉಪವಾಸ ಮಾಡುತ್ತೇವೆ. ಆದರೆ ಈ ರೀತಿ ಉಪವಾಸ ಆಚರಣೆಯಿಂದ ಆರೋಗ್ಯಕ್ಕೆ ಅನೇಕ ಗುಣಗಳಿವೆ ಗೊತ್ತಾ? ಉಪವಾಸ ಮಾಡುವುದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:

ಉಪವಾಸದಿಂದ ದೇವಿಯನ್ನು ಮೆಚ್ಚಿಸುವುದು ಮಾತ್ರವಲ್ಲ, ನಮ್ಮ ದೇಹವನ್ನು ಶುದ್ಧ ಮಾಡುವುದು ಕೂಡ

ಉಪವಾಸದಿಂದ ದೇವಿಯನ್ನು ಮೆಚ್ಚಿಸುವುದು ಮಾತ್ರವಲ್ಲ, ನಮ್ಮ ದೇಹವನ್ನು ಶುದ್ಧ ಮಾಡುವುದು ಕೂಡ

ಆಯುರ್ವೇದದ ಪ್ರಕಾರ ಉಪವಾಸ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆ ಮತ್ತಷ್ಟು ಚೆನ್ನಾಗಿ ಕೆಲಸ ಮಾಡುತ್ತದೆ. ಉಪವಾಸ ಮಾಡಿದಾಗ ದೇಹದಲ್ಲಿ ಸಂಗ್ರಹವಾಗಿರುವ ಬೇಡದ ಕೊಬ್ಬು ಕರಗುವುದು, ದೇಹದಲ್ಲಿರುವ ಕಶ್ಮಲವನ್ನು ಹೊರಹಾಕಲು ಸಹಾಯ ಮಾಡುತ್ತೆ. ದೇಹವನ್ನು ಒಳಗಿನಿಂದ ಶುದ್ಧ ಮಾಡಿದಾಗ ಮನಸ್ಸು ಕೂಡ ಶಾಂತವಾಗಿರುತ್ತೆ. ಇದರಿಂದ ಆಧ್ಯಾತ್ಮದ ಕಡೆಗೆ ಮನಸ್ಸನ್ನು ಮತ್ತಷ್ಟು ಕೇಂದ್ರೀಕರಿಸಲು ಸಾಧ್ಯವಾಗುವುದು.

ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ

ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ

ಸಾಮಾನ್ಯವಾಗಿ ಹೊತ್ತಿಗೆ ಸರಿಯಾಗಿ ಊಟ ಮಾಡುತ್ತೇವೆ, ಆಗ ಹಸಿವು ಆಗಿರಬೇಕೇನೂ ಇಲ್ಲ, ಹಸಿವು ಇಲ್ಲದಿದ್ದರೂ ತಿನ್ನುತ್ತೇವೆ, ಈ ರೀತಿ ಹಸಿವು ಉಂಟಾಗುವ ಮೊದಲು ತಿನ್ನುವುದರಿಂದ ನಮ್ಮ ಜೀರ್ಣಾಂಗ ಕ್ರಿಯೆಯ ಸಾಮಾರ್ಥ್ಯ ಕಡಿಮೆಯಾಗುವುದು. ಇದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು. ಉಪವಾಸ ಮಾಡಿದಾಗ ನಮ್ಮಲ್ಲಿ ಹಸಿವು ಹೆಚ್ಚುವುದು, ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಧ್ಯಾನದಲ್ಲಿ ಮತ್ತಷ್ಟು ಆಳವಾಗಿ ತೊಡಗಿಕೊಳ್ಳಬಹುದು

ಧ್ಯಾನದಲ್ಲಿ ಮತ್ತಷ್ಟು ಆಳವಾಗಿ ತೊಡಗಿಕೊಳ್ಳಬಹುದು

ನವರಾತ್ರಿ ಎಂಬುವುದು ನಮ್ಮ ಮನಸ್ಸನ್ನು ನಿಯಂತ್ರಿಸುವ ಆಚರಣೆಯಾಗಿದೆ. ನಮ್ಮಲ್ಲಿರುವ ಕಾಮ, ಕ್ರೋಧ, ಮದ-ಮತ್ಸರ ಈ ಎಲ್ಲಾ ಲೋಪಗಳನ್ನು ಜಯಿಸಬೇಕು ಎಂಬುವುದನ್ನು ನವರಾತ್ರಿ ಸೂಚಿಸುತ್ತದೆ. ಈ ಸಮಯದಲ್ಲಿ ಹಣ್ಣುಗಳನ್ನಷ್ಟೇ ತಿನ್ನುವುದರಿಂದ ನಮ್ಮ ದೇಹ ಶುದ್ಧವಾಗುವುದು, ದೇಹ ಶುದ್ಧವಾದಾಗ ಮನಸ್ಸು ಕೂಡ ಶುದ್ಧವಾಗುವುದು, ಇದರಿಂದ ಮನಸ್ಸಿಟ್ಟು ಧ್ಯಾನ ಮಾಡಬಹುದು. ಉಪವಾಸ ಮಾಡಿದಾಗ ದೇಹ ಶುದ್ಧವಾದರೆ, ಧ್ಯಾನ ಮಾಡಿದಾಗ ಮನಸ್ಸು ಶುದ್ಧವಾಗುವುದು. ದೇಹ ಹಾಗೂ ಮನಸ್ಸು ಎರಡೂ ಶುದ್ಧವಾಗಿದ್ದರೆ ಆರೋಗ್ಯ ಹೆಚ್ಚುವುದು.

ಸಾತ್ವಿಕ ಗುಣ ಹೆಚ್ಚುವುದು

ಸಾತ್ವಿಕ ಗುಣ ಹೆಚ್ಚುವುದು

ಮನುಷ್ಯರಲ್ಲಿ ಸಾತ್ವಿಕ ಹಾಗೂ ತಾಮಸ ಎರಡೂ ಗುಣಗಳಿರುತ್ತವೆ, ಇವುಗಳಲ್ಲಿ ನಾವು ಯಾವುದನ್ನು ಹೆಚ್ಚು ಪೋಷಿಸುತ್ತೇವೆ ಎನ್ನುವುದರ ಮೇಲೆ ನಮ್ಮ ವ್ಯಕ್ತಿತ್ವ ರೂಪವಾಗುವುದು. ನಮ್ಮಲ್ಲಿರುವ ಸಾತ್ವಿಕ ಗುಣಗಳನ್ನು ಪೋಷಣೆ ಮಾಡಿದರೆ ನಮ್ಮಲ್ಲಿ ಒಳ್ಳೆಯ ಗುಣಗಳು ಹೆಚ್ಚಾಗುವುದು, ಧನಾತ್ಮಕ ಶಕ್ತಿ ಹೆಚ್ಚುವುದು. ಇದರಿಂದ ನಮ್ಮ ಪ್ರಾರ್ಥನೆ ಮತ್ತಷ್ಟು ಶಕ್ತಿಯನ್ನು ಪಡೆಯುವುದು. ನಾವು ಉತ್ಸಾಹದಿಂದ ಇರುತ್ತೇವೆ. ಸಾತ್ವಿಕ ಗುಣಗಳಿದ್ದರೆ ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದು, ಬದುಕಿನಲ್ಲಿ ಒಳ್ಳೆಯ ರೀತಿಯಲ್ಲಿ ಗುರಿ ಮುಟ್ಟಲು ಸಾಧ್ಯವಾಗುವುದು.

ತೂಕ ಇಳಿಕೆಗೆ ಸಹಕಾರಿ

ತೂಕ ಇಳಿಕೆಗೆ ಸಹಕಾರಿ

ನವರಾತ್ರಿ 9 ದಿನಗಳವರೆಗೆ ಕಟ್ಟುನಿಟ್ಟಿನ ಉಪವಾಸ ಮಾಡಿದರೆ ಅಂದರೆ ವ್ರತದ ನಿಯಮಕ್ಕೆ ತಕ್ಕ ಆಹಾರಗಳನ್ನು ಮಾತ್ರ ಸೇವಿಸಿದರೆ ನಿಮ್ಮ ತೂಕದಲ್ಲಿ ಬದಲಾವಣೆಯನ್ನು ಸಹ ಕಾಣಬಹುದು. ಮೈ ಬೊಜ್ಜು ಕರಗುವುದರಿಂದ ದೇಹವು ಆಕರ್ಷಕವಾಗಿ ಕಾಣುವುದು.

ದೇಹದಲ್ಲಿ ಸಕ್ಕರೆಯಂಶ ನಿಯಂತ್ರಿಸಬಹುದು

ದೇಹದಲ್ಲಿ ಸಕ್ಕರೆಯಂಶ ನಿಯಂತ್ರಿಸಬಹುದು

ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿದ್ದರೆ ಮಧುಮೇಹದ ಸಮಸ್ಯೆ ಕಾಡುವುದಿಲ್ಲ. ಉಪವಾಸ ಮಾಡಿದಾಗ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿರುತ್ತದೆ. ಜೀರ್ಣ ವ್ಯವಸ್ಥೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವುದರಿಂದ ದೇಹದಲ್ಲಿ ಇನ್ಸುಲಿನ್ ಸರಿಯಾದ ಪ್ರಮಾಣದಲ್ಲಿ ಇರುತ್ತದೆ.

ಮನಸ್ಸು ಶಾಂತವಾಗಿರುತ್ತದೆ

ಮನಸ್ಸು ಶಾಂತವಾಗಿರುತ್ತದೆ

2013ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಆಕ್ಸಿಡೇಟಿವ್‌ ಒತ್ತಡ ಕಡಿಮೆ ಮಾಡುವುದು, ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯ ಕೂಡ ವೃದ್ಧಿಸುವುದು. ನವರಾತ್ರಿಯಲ್ಲಿ ದೇವಿಯ ಆರಾಧನೆ ಮಾಡುತ್ತಾ ಮನಸ್ಸು ಪೂರ್ತಿ ಅವಳನ್ನು ತುಂಬಿಕೊಂಡಿರುತ್ತೇವೆ, ಇದರಿಂದ ಮನಸ್ಸು ಶಾಂತವಾಗಿರುವುದು.

English summary

Navratri Fasting : Why do people fast during Navratri and what are the benefits in Kannada

Navratri Fasting : Why do people fast during Navratri and what are the benefits in Kannada,
X
Desktop Bottom Promotion