For Quick Alerts
ALLOW NOTIFICATIONS  
For Daily Alerts

ಇದು ಕೊರೊನಾವೇ ಎಂದು ಸೂಚಿಸುವ ಪ್ರಮುಖ ಲಕ್ಷಣಗಳಿವು

|

2020ರಲ್ಲಿ ಕೊರೊನಾವೈರಸ್ ಕುರಿತು ಇದ್ದ ಆತಂಕ ಈಗ ಅಷ್ಟು ಇಲ್ಲ, ಕಾರಣ ಭಾರತದಲ್ಲಿಕೊರೊನಾ ಸೋಂಕಿತರ ಸಂಖ್ಯೆ ತುಂಬಾ ಇಳಿಮುಖವಾಗಿದೆ. ಅದರಲ್ಲೂಈ ವರ್ಷ ಲಸಿಕೆ ಸಿಗುತ್ತಿರುವುದು ಮತ್ತಷ್ಟು ಭರವಸೆ ಮೂಡಿಸಿದೆ.

ಹಾಗಂತ ಕೊರೊನಾವೈರಸ್‌ ಬಗ್ಗೆ ನಿರ್ಲಕ್ಷ್ಯ ಮಾಡುವಂತಿಲ್ಲ, ಏಕೆಂದರೆ ಈಗಲೂ ಹಲವಾರು ಕೊರೊನಾ ಪಾಸಿಟಿವ್ ಕೇಸ್‌ಗಳು ಬರುತ್ತಿವೆ. ಕೆಮ್ಮು, ಜ್ವರ, ಉಸಿರಾಟಕ್ಕೆ ತೊಂದರೆ ಇವೆಲ್ಲಾ ಕೊರೊನಾವೈರಸ್‌ ಲಕ್ಷಣಗಳಾಗಿವೆ, ಇದರ ಜೊತೆಗೆ ನಾಲಗೆಗೆ ರುಚಿ ಇಲ್ಲದಿರುವುದು, ವಾಸನೆ ಗ್ರಹಿಸಲು ಸಾಧ್ಯವಾಗದಿರುವುದು ಕೊರೊನಾವೈರಸ್ ಲಕ್ಷಣಗಳಾಗಿವೆ ಎಂದು ಹೊಸ ಅಂತರರಾಷ್ಟ್ರೀಯ ಅಧ್ಯಯನ ತಿಳಿಸಿದೆ.

ಅಧ್ಯಯನ ವರದಿ

ಅಧ್ಯಯನ ವರದಿ

ಲಂಡನ್‌ನ ಹಾರ್ವಡ್ ಮೆಡಿಕಲ್ ಸ್ಕೂಲ್ ಯೂನಿವರ್ಸಿಟಿ ಕಾಲೇಜ್‌ ನಡೆಸಿರುವ ಸಮೀಕ್ಷೆ ಪ್ರಕಾರ ವಾಸನೆ ಗ್ರಹಿಸಲು ಸಾಧ್ಯವಾಗದಿರುವುದು, ಬಾಯಿಗೆ ರುಚಿ ಸಿಗದಿರುವುದು ಕೊರೊನಾವೈರಸ್ ಸೋಂಕಿನ ಪ್ರಮುಖ ಲಕ್ಷಣವಾಗಿದೆ.

ಇಲ್ಲಿ ಕೊರೊನಾ ವೈರಸ್‌ ಸೋಂಕಿದಾಗ ಕಂಡು ಬರುವ ಇತರ ಕೆಲ ಲಕ್ಷಣಗಳ ಬಗೆಯೂ ಹೇಳಲಾಗಿದೆ ನೋಡಿ:

ತಲೆನೋವು

ತಲೆನೋವು

JAMA ನ್ಯೋರೋಲಾಜಿಯಲ್ಲಿ ಪ್ರಕಟವಾದ ಅಧ್ಯಯನ ವರದಿ ಪ್ರಕಾರ ಶೇ.8ರಷ್ಟು ಕೊರೊನಾ ಸೋಂಕಿತರಿಗೆ ನರ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ, ಅದರಲ್ಲೂ ತಲೆನೋವು ಕಂಡು ಬರುವುದು ಸರ್ವೇ ಸಾಮಾನ್ಯವಾಗಿದೆ.

 ಗಂಟಲು ಕೆರೆತ

ಗಂಟಲು ಕೆರೆತ

ಶೀತ-ಕೆಮ್ಮು ಉಂಟಾದಾಗ ಗಂಟಲು ಕೆರೆತ ಉಂಟಾಗುವುದು ಸಹಜ, ಆದ್ದರಿಂದ ಗಂಟಲು ಕೆರೆತ ಉಂಟಾದ ತಕ್ಷಣ ಅದು ಕೊರೊನಾಸೋಂಕು ಆಗಿರಬಹುದು ಎಂದು ಭಾವಿಸಬೇಕಾಗಿಲ್ಲ. ಗಂಟಲು ಕೆರೆತ ಜೊತೆಗೆ ಕೊರೊನಾದ ಇತರ ಲಕ್ಷಣಗಳಾದ ಬಾಯಿಗೆ ರುಚಿಯಿಲ್ಲದಿರುವುದು, ವಾಸನೆ ಗ್ರಹಿಸಲು ಸಾಧ್ಯವಾಗದಿದ್ದರೆ ಅದು ಕೊರೊನಾ ಅಂತ ಹೇಳಬಹುದು.

ತಲೆಸುತ್ತು

ತಲೆಸುತ್ತು

ಇದ್ದಕ್ಕಿದ್ದಂತೆ ತಲೆಸುತ್ತುವುದು ಕೂಡ ಕೊರೊನಾವೈರಸ್‌ನ ಲಕ್ಷಣವಾಗಿದೆ ಶೇ.38ರಷ್ಟು ಕೊರೊನಾ ಸೋಂಕಿತರು ತಮಗೆ ಈ ಲಕ್ಷಣಗಳು ಕಂಡು ಬಂದಿರುವುದಾಗಿ ಹೇಳಿದ್ದಾರೆ. ಕೊರೊನಾ ಸೋಂಕಿತರಲ್ಲಿ ಕಂಡು ಬರುವ 3ನೇ ಸಾಮಾನ್ಯ ಲಕ್ಷಣ ಇದಾಗಿದೆ.

ಜ್ವರ

ಜ್ವರ

ಅಧಿಕ ಕೋವಿಡ್ ಕೇಸ್‌ಗಳಲ್ಲಿ ಮೊದಲಿಗೆ ಕಂಡು ಬರುವುದು ಜ್ವರ ಆಗಿದೆ. ನಿಮಗೆ ಜ್ವರ ಮಾತ್ರ ಇದೆ ಎಂದು ವೈದ್ಯರು ಹೇಳಿದರೆ ಕೊರೊನಾ ಪರೀಕ್ಷೆ ಮಾಡಿಸುವ ಅಗ್ಯತವಿಲ್ಲ. ಜ್ವರದ ಜೊತೆಗೆ ಇತರ ಲಕ್ಷಣಗಳು ಕಂಡು ಬಂದರೆ ಅದು ಕೊರೊನಾ ಆಗಿರಬಹುದು. ಕೆಲವರಿಗೆ ಜ್ವರ ಕಾಣಿಸುವುದಿಲ್ಲ, ಇತರ ಕೋವಿಡ್ 19 ಲಕ್ಷಣಗಳು ಕಂಡು ಬರುತ್ತದೆ.

 ಹೊಟ್ಟೆ ಹಾಳಾಗುವುದು

ಹೊಟ್ಟೆ ಹಾಳಾಗುವುದು

ಕೊರೊನಾ ಸೋಂಕಿತ 5ರಲ್ಲಿ ಒಬ್ಬರಿಗೆ ವಾಂತಿ, ಬೇಧಿ, ಹೊಟ್ಟೆನೋವು ಈ ರೀತಿಯ ಸಮಸ್ಯೆಗಳು ಕಂಡು ಬಂದಿರುವುದಾಗಿ ಅಧ್ಯಯನ ಹೇಳಿದೆ. ಈ ರೀತಿಯ ಸಮಸ್ಯೆ ಇದ್ದವರು ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುವುದು ನಿಧಾನವಾಗಿರುತ್ತೆ.

ಹಸಿವು ಇಲ್ಲದಿರುವುದು

ಹಸಿವು ಇಲ್ಲದಿರುವುದು

ಕೊರೊನಾ ಸೋಂಕು ತಗುಲಿದಾಗ ರುಚಿ ಮತ್ತು ವಾಸನೆ ಗ್ರಹಿಸುವ ಸಾಮರ್ಥ್ಯ ಇಲ್ಲವಾಗುವುದರಿಂದ ಆಹಾರ ತಿನ್ನಬೇಕೆನಿಸುವುದಿಲ್ಲ. ಇಂಥ ಸಂದರ್ಭದಲ್ಲಿ ಗ್ರೀನ್‌ ಟೀ ಕುಡಿಯುವುದು ಒಳ್ಳೆಯದು ಎಂದು ಅಧ್ಯಯನ ಹೇಳಿದೆ.

ಗ್ರೀನ್‌ ಟೀ ಕೊರೊನಾವೈರಸ್‌ ಅನ್ನು ನಿಷ್ಕ್ರಿಯೆಗೊಳಿಸುವುದು ಎಂದು ಇತ್ತೀಚೆಗೆ ನಡೆಸಿದ ಅಧ್ಯಯನ ಹೇಳಿದೆ.

English summary

Most Prominent Signs That You Have Covid-19 Infection, As per Study

Most prominent signs that you have covid-19 infection, as per A Study, Have a look,
X
Desktop Bottom Promotion