For Quick Alerts
ALLOW NOTIFICATIONS  
For Daily Alerts

ಕೊರೊನಾ ವೈರಸ್: ಆಫೀಸ್‌ನಲ್ಲಿ ರೋಗಾಣುಗಳು ಹರಡುವ ಸ್ಥಳಗಳಿವು, ಎಚ್ಚರ!

|

ಕೊರೊನಾ ವೈರಸ್‌ನಷ್ಟು ಈ ಹಿಂದೆ ಯಾವುದೇ ಬ್ಯಾಕ್ಟಿರಿಯಾ ಆತಂಕ ಉಂಟು ಮಾಡಿರಲಿಲ್ಲ. ಕೊರೊನಾ ಸೋಂಕು ಒಬ್ಬ ವ್ಯಕ್ತಿಯ ದೇಹದಲ್ಲಿ ಇದ್ದರೆ ಅವನು ಹೋದ ಕಡೆಯೆಲ್ಲಾ, ಅವನು ಮುಟ್ಟಿದ ಕಡೆಯೆಲ್ಲಾ ಹರಡುವ ಭಯಂಕರ ವೈರಸ್‌ ಅದಾಗಿರುವುದರಿಂದ ಜನರು ಕೊರೊನಾ ವೈರಸ್ ಎಂದು ಕೇಳಿದ ತಕ್ಷಣ ಬೆಚ್ಚಿ ಬೀಳುತ್ತಿದ್ದಾರೆ.

Top Germiest Places In Office | Boldsky Kannada
 Germiest Places At Office

ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗಲಂತೂ ಎಲ್ಲಿ ವೈರಸ್‌ ಹರಡಿ ಬಿಡುತ್ತದೋ ಎಂಬ ಭಯ ಪ್ರತಿಯೊಬ್ಬರಲ್ಲೂ ಇದೆ. ಇನ್ನು ಕೆಲವೊಂದು ಕಡೆ ಬ್ಯಾಕ್ಟಿರಿಯಾಗಳು ಹೆಚ್ಚಾಗಿ ಕೂತಿರುತ್ತವೆ. ಇಲ್ಲಿ ನಾವು ಆಫೀಸ್‌ನಲ್ಲಿ ಯಾವ ಕಡೆಗಳಲ್ಲಿ ಬ್ಯಾಕ್ಟಿರಿಯಾ ಹೆಚ್ಚಿರುವ ಸಾಧ್ಯತೆ ಇದೆ ಎಂಬುವುದರ ಬಗ್ಗೆ ಹೇಳಿದ್ದೇವೆ ನೋಡಿ:

ಲಿಫ್ಟ್

ಲಿಫ್ಟ್

ಆಫೀಸ್, ಬಿಲ್ಡಿಂಗ್‌ಗಳಲ್ಲಿ ಲಿಫ್ಟ್‌ ಬಳಸುತ್ತಿದ್ದೀರಾ? ಹಾಗಾದರೆ ಮೇಲೆ-ಕೆಳಗೆ ಹೋಗಲು ಅದರ ಬಟನ್ ಪ್ರೆಸ್ ಮಾಡುತ್ತೀರಾ ತಾನೆ? ಈ ಬಟನ್‌ನಲ್ಲಿ ವೈರಸ್‌ ಕೂರುವ ಸಾಧ್ಯತೆ ಇದೆ. ಲಿಫ್ಟ್ ಬಟನ್ ಬಳಸಿದ ಬಳಿಕ ಹ್ಯಾಂಡ್ ಸ್ಯಾನಿಟೈಸರ್ ಬಳಸಿ.

ಡೋರ್‌ ಹ್ಯಾಂಡಲ್‌

ಡೋರ್‌ ಹ್ಯಾಂಡಲ್‌

ಸೋಕಾಣುಗಳು ವ್ಯಕ್ತಿಯಿಂದ-ವ್ಯಕ್ತಿಗೆ ಡೋರ್ ಹ್ಯಾಂಡಲ್‌ ಮೂಲಕ ಕೂಡ ಹರಡುತ್ತದೆ. ಕಾಯಿಲೆ ಇರುವ ವ್ಯಕ್ತಿ, ಕೆಮ್ಮಿದಾಗ, ಸೀನಿದಾಗ ಕೈಗಳನ್ನು ಅಡ್ಡ ಹಿಡಿದು ನಂತರ ಸ್ವಚ್ಛ ಮಾಡಿದರೆ ಡೋರ್ ಹ್ಯಾಂಡಲ್ ಮುಟ್ಟಿದರೆ, ನಂತರ ಆ ಡೋರ್ ಮುಟ್ಟಿದ ವ್ಯಕ್ತಿಗೆ ರೋಗ ಹರಡಬಹುದು.

ಡೆಸ್ಕ್‌ಟಾಪ್

ಡೆಸ್ಕ್‌ಟಾಪ್

ಡೆಸ್ಕ್‌ಟಾಪ್‌ನಲ್ಲೂ ಕೂಡ ಟಾಯ್ಲೆಟ್‌ಗಿಂತ ಹೆಚ್ಚು ಬ್ಯಾಕ್ಟಿರಿಯಾಗಳು ಇರುತ್ತದೆ. ಒಂದು ಇಂಚಿನಷ್ಟು ಅಗಲವಿರುವ ಸ್ಥಳದಲ್ಲಿ 21000ಕ್ಕೂ ಅಧಿಕ ಬ್ಯಾಕ್ಟಿರಿಯಾಗಳು ಇರುತ್ತವೆ ಅಂದರೆ ಊಹಿಸಿ ಡೆಸ್ಕ್‌ಟಾಪ್‌ನಲ್ಲಿ ಎಷ್ಟೊಂದು ಸಾವಿರ ಸೂಕ್ಷಾಣು ಜೀವಿಗಳು ಕುಳಿತಿರುತ್ತವೆ. ಆದ್ದರಿಂದ ಇದನ್ನು ವಾರಕ್ಕೊಮ್ಮೆಯಾದರೂ ಸ್ವಚ್ಛ ಮಾಡಬೇಕು.

ಕೀಬೋರ್ಡ್

ಕೀಬೋರ್ಡ್

ಆಫೀಸ್‌ನಲ್ಲಿ ಕೀಬೋರ್ಡ್ ಬಳಸುತ್ತಿದ್ದರಂತೂ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಇದರ ಬಟನ್‌ಗಳ ಮಧ್ಯೆ ಸೋಂಕಾಣಗಳು ಕೂತರೆ ಸುಲಭದಲ್ಲಿ ಹೋಗುವುದಿಲ್ಲ. ಬೇರೆಯವರು ಬಳಸಿದ ಕೀಬೋರ್ಡ್ ಬಳಸುವಾಗ ಸ್ವಲ್ಪ ಒರೆಸಿ ಬಳಸುವುದು ಒಳ್ಳೆಯದು.

ಟೆಲಿಫೋನ್

ಟೆಲಿಫೋನ್

ಆಫೀಸ್‌ನಲ್ಲಿ ಟೆಲಿಫೋನ್‌ ಇದ್ದರೆ ಅದನ್ನು ಎಲ್ಲರೂ ಬಳಸುತ್ತಾರೆ. ಕೆಮ್ಮು, ಶೀತ ಇರುವವರು ಬಳಸಿದಾಗ ಆ ಮೂಲಕವೂ ರೋಗಾಣುಗಳು ಹರಡಲು ಸಾಧ್ಯತೆ ಇದೆ. ಲ್ಯಾಂಡ್‌ಫೋನ್‌ನಲ್ಲಿ 25,000ಕ್ಕೂ ಅಧಿಕ ಸೋಂಕಾಣುಗಳು ಇರುತ್ತವೆ.

 ಆಫೀಸ್‌ ಉಪಕರಣಗಳಲ್ಲಿ

ಆಫೀಸ್‌ ಉಪಕರಣಗಳಲ್ಲಿ

ಪ್ರಿಂಟರ್, ಫ್ಯಾಕ್ಸ್, ಪೋಸ್ಟೇಜ್ ಮೀಟರ್ ಇತ್ಯಾಧಿ ಸಾಧನಗಳಲ್ಲಿ ರೋಗಾಣುಗಳಿರುತ್ತವೆ. ಅವುಗಳನ್ನು ಮುಟ್ಟಿದಾಗ ಸ್ಯಾನಿಟೈಸರ್ ಬಳಸುವುದು ಒಳ್ಳೆಯದು.

ವಾಟರ್‌ಕೂಲರ್

ವಾಟರ್‌ಕೂಲರ್

ನಾವು ಶುದ್ಧವಾದ ನೀರು ಎಂದು ವಾಟರ್‌ಕೂಲರ್‌ನಿಂದ ತರುವ ನೀರು ಶುದ್ಧವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ವಾಟರ್‌ ಕೂಲರ್‌ ಡೆಲಿವರಿ ಆಗುವಾಗ ಅದರಲ್ಲಿ ರೋಗಾಣುಗಳು ಸೇರುವ ಸಾಧ್ಯತೆ ಇದೆ. ವೈರಲ್ ಫೀವರ್, ಕಾಲರಾ ಮುಂತಾದ ಒಬ್ಬರಿಂದ-ಮತ್ತೊಬ್ಬರಿಗೆ ಹರಡುವ ರೋಗಗಳು ಇರುವಾಗ ಮನೆಯಿಂದಲೇ ಕುಡಿಯಲು ನೀರು ತರುವುದು ಒಳ್ಳೆಯದು.

ಕಾಫಿ ಮೇಕರ್

ಕಾಫಿ ಮೇಕರ್

ಕಾಫಿ ಮೇಕರ್ ಎಷ್ಟು ಸ್ವಚ್ಛವಾಗಿದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ, ಮೆಷಿನ್‌ ಒಳಗಿಯೂ ಬ್ಯಾಕ್ಟಿರಿಯಾಗಳು ಬೆಳೆಯುತ್ತವೆ. ಕಾಫಿ ಮೇಕರ್‌ಗೆ ವಿನೆಗರ್‌ ಹಾಕಿ ಸ್ವಲ್ಪಹೊತ್ತು ನಂತರ ಎರಡರಿಂದ ಮೂರು ಬಾರಿ ನೀರು ಹಾಕಿ ಸ್ವಚ್ಛ ಮಾಡಿ ಬಳಸಬಹುದು.

ಕಾಫಿ ಮಗ್

ಕಾಫಿ ಮಗ್

ಆಫೀಸ್‌ನಲ್ಲಿ ಕಾಮನ್‌ ಆಗಿ ಬಳಸುವ ಕಾಫಿ ಮಗ್, ನೀರಿನ ಲೋಟಗಳಲ್ಲಿ ರೋಗಾಣುಗಳು ಇರುವ ಸಾಧ್ಯತೆ ಇದ್ದು, ನೀರು ಕುಡಿಯಲು, ಕಾಫಿ ಕುಡಿಯಲು ಪ್ರತ್ಯೇಕ ಲೋಟ ಬಳಸುವುದು ಒಳ್ಳೆಯದು.

ಸಿಂಕ್

ಸಿಂಕ್

ಮನೆಯಲ್ಲಾದರೂ, ಆಫೀಸ್‌ನಲ್ಲಾದರೂ ಸಿಂಕ್‌ನಲ್ಲಿ ರೋಗಾಣುಗಳು ತುಂಬಾ ಇರುತ್ತವೆ. ಸಿಂಕ್‌ ಬಳಸಿದಾಗ ಬಳಿಕ ಹ್ಯಾಂಡ್‌ ಸ್ಯಾನಿಟೈಸರ್ ಬಳಸಿ.

ಮೈಕ್ರೋವೇವ್ ಡೋರ್

ಮೈಕ್ರೋವೇವ್ ಡೋರ್

ಹೆಚ್ಚಿನ ಜನರು ತಾವು ತಂದ ಆಹಾರ ಬಿಸಿ ಮಾಡಲು ಮೈಕ್ರೋವೇವ್ ಬಳಸುತ್ತಾರೆ. ಹಾಗಾಗಿ ಯಾರಾದರೂ ಕಾಯಿಲೆ ಇರುವ ವ್ಯಕ್ತಿ ಅದನ್ನು ಬಳಸಿದರೆ ಅದರ ಡೋರ್‌ನಲ್ಲಿ ರೋಗಾಣುಗಳು ಇರುವ ಸಾಧ್ಯತೆ ಇದೆ. ಆದ್ದರಿಂದ ಮೈಕ್ರೋವೇವ್‌ ಬಳಸಿದ ಬಳಿಕ ಸ್ಯಾನಿಟೈಸರ್ ಬಳಸಿ.

 ವೆಂಡಿಂಗ್ ಮೆಷಿನ್

ವೆಂಡಿಂಗ್ ಮೆಷಿನ್

ಸ್ನ್ಯಾಕ್ಸ್‌, ಜ್ಯೂಸ್‌ಗಾಗಿ ಆಫೀಸ್‌ನಲ್ಲಿ ವೆಂಡಿಂಗ್‌ ಮೆಷಿನ್ ಇದ್ದರೆ ಅದನ್ನು ಬಳಸಿದ ಬಳಿಕ ಹ್ಯಾಂಡ್‌ಸ್ಯಾನಿಟೈಸರ್ ಬಳಸುವುದು ಒಳ್ಳೆಯದು. ಹಾಗೆಯೇ ಫ್ರಿಡ್ಜ್‌ ಡೋರ್‌ನಲ್ಲೂ ರೋಗಾಣುಗಳು ಇರುವ ಸಾಧ್ಯತೆ ಇದೆ.

ರೆಸ್ಟ್‌ ರೂಂ

ರೆಸ್ಟ್‌ ರೂಂ

ಇದನ್ನು ಎಲ್ಲರೂ ಬಳಸುವುದರಿಂದ ರೆಸ್ಟ್‌ರೂಂಗೆ ಹೋಗಿ ಬಂದ ಮೇಲೆ ಚೆನ್ನಾಗಿ ಕೈ ತೊಳೆಯಿರಿ. ನಂತರ ಹ್ಯಾಂಡ್‌ ಸ್ಯಾನಿಟೈಸರ್ ಬಳಸಿ.

ಈ ರೀತಿಯೆಲ್ಲಾ ಗಮನ ಹರಿಸಿದರೆ ಕೊರೊನಾ ವೈರಸ್‌ ಭೀತಿಯಿರುವ ಈ ಸಂದರ್ಭದಲ್ಲಿ ರೋಗಾಣುಗಳು ಹರಡದಂತೆ ಎಚ್ಚರವಹಿಸಬಹುದು.

English summary

More Germiest Places At Office

Here we listed most germs spread places at office, take a look.
X
Desktop Bottom Promotion