For Quick Alerts
ALLOW NOTIFICATIONS  
For Daily Alerts

ಸರ್ಜಿಕಲ್ ಮಾಸ್ಕ್ ಬಳಸುವಾಗ ಈ ತಪ್ಪುಗಳನ್ನು ಮಾಡದಿರಿ

|

ಫೇಸ್ ಮಾಸ್ಕ್ ಎಂಬ ಸಾಧನ ಕೆಲವಾರು ವರ್ಷಗಳಿಂದಲೂ ಬಳಕೆಯಲ್ಲಿದ್ದರೂ ಇದಕ್ಕೆ ಅಪಾರವಾದ ಪ್ರಾಮುಖ್ಯತೆ ಲಭಿಸಿದ್ದು ಕೋವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದ. ಇದಕ್ಕೆ ಕನ್ನಡದ ಹೆಸರು ಹೇಗಿರಬಹುದು? ವಿವಿಧ ಮಾಧ್ಯಮಗಳು ಬೇರೆ ಬೇರೆ ಹೆಸರಿನಿಂದ ಕರೆಯುತ್ತಿವೆ. ಕೆಲವು 'ಮುಖ ಗುರಾಣಿ' ಎಂದು ಕರೆದರೆ, ಕೆಲವು 'ಮುಖ ಪಟ್ಟಿ','ಮುಖದ ಮಾಸ್ಕ್' ಎಂದೆಲ್ಲಾ ಕರೆಯುತ್ತಿವೆ. ವಾಸ್ತವದಲ್ಲಿ, ಇಂದು ನಮ್ಮ ಉಡುಗೆಯ ಅವಿಭಾಜ್ಯ ಅಂಗವಾಗಿರುವ ಈ ಮುಖಗುರಾಣಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಧರಿಸಲೇಬೇಕಾದ ಅಗತ್ಯವಸ್ತುವೂ ಆಗಿದೆ. ಇವುಗಳಲ್ಲಿ ಕೆಲವಾರು ವಿಧಗಳ ಮುಖಗುರಾಣಿಗಳಿವೆ.

ಭಾರೀ ಬೇಡಿಕೆಯ ಅಂಗವಾಗಿ ಮಾರುಕಟ್ಟೆಯಲ್ಲಿ ಎದುರಾಗಿರುವ ಕೊರತೆಯಿಂದಾಗಿ ನಮ್ಮ ಗುರಾಣಿಗಳನ್ನು ನಾವೇ ಮಾಡಿಕೊಳ್ಳುವಂತೆ ಸಲಹೆಯನ್ನೂ ಮಾಡಲಾಗುತ್ತಿದೆ. ಡಾ. ದೇವಿ ಶೆಟ್ಟಿಯವರೂ 'ಸರ್ಜಿಕಲ್ ಮಾಸ್ಕ್' ಎಂಬ ಮುಖಗುರಾಣಿಯನ್ನು ಸಾರ್ವಜನಿಕರು ಕೊಳ್ಳದೇ ವೃತ್ತಿಪರರಿಗೆ ದೊರಕುವಂತಾಗುವಂತೆ ಮಾಧ್ಯಮಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹಾಗಾಗಿ ಅನಿವಾರ್ಯವಾಗಿರುವ ಮುಖ ಗುರಾಣಿಯನ್ನು ಧರಿಸಬೇಕಾದರೆ ಸರಿಯಾದ ಕ್ರಮವನ್ನು ಮತ್ತು ಸರಿಯಾದ ಸಾಮಾಗ್ರಿಯಿಂದ ತಯಾರಿಸಲ್ಪಟ್ಟ ಉತ್ಪನ್ನವನ್ನೇ ಆಯ್ದುಕೊಳ್ಳುವುದು ಅಗತ್ಯವಾಗಿದೆ.

ನಮಗರಿವಿಲ್ಲದಂತೆಯೇ ನಾವು ತಪ್ಪಾದ ಉತ್ಪನ್ನ ಅಥವಾ ತಪ್ಪಾದ ರೀತಿಯಲ್ಲಿ ಈ ಸಾಧನಗಳನ್ನು ಬಳಸುತ್ತಿದ್ದಿರಬಹುದು. ಇಂದಿನ ಲೇಖನದಲ್ಲಿ ಈ ತಪ್ಪುಗಳ ಬಗ್ಗೆ ಪ್ರತಿಯೊಬ್ಬರೂ ಅರಿತಿರಬೇಕಾದ ಮಾಹಿತಿಗಳನ್ನು ಒದಗಿಸಲಾಗಿದೆ. ಇಂದಿನ ಲೇಖನದ ವ್ಯಾಪ್ತಿಯಲ್ಲಿ ಈ ಮಾಸ್ಕ್ ಅನ್ನು ಮುಖಗುರಾಣಿ ಎಂದೇ ಕರೆಯಲಾಗಿದೆ.

ತಪ್ಪು ಸಾಮಾಗ್ರಿ ಬಳಸಿ ತಯಾರಿಸಲಾದ ಉತ್ಪನ್ನಗಳು:

ತಪ್ಪು ಸಾಮಾಗ್ರಿ ಬಳಸಿ ತಯಾರಿಸಲಾದ ಉತ್ಪನ್ನಗಳು:

ತಾತ್ತ್ವಿಕವಾಗಿ, ಕೊರೋನಾವೈರಸ್ ಕಣಗಳನ್ನು ತಡೆಗಟ್ಟುವಷ್ಟು ಮುಖಗುರಾಣಿ ಸಮರ್ಥವಾಗಿರಬೇಕು ಮತ್ತು ಈ ಬಟ್ಟೆಯ ಮೂಲಕ ಉಸಿರಾಟಕ್ಕೆ ಅಡ್ಡಿಯಾಗದಂತಿರಬೇಕು. ಇವೆಲ್ಲವೂ ಇದ್ದೂ ಧರಿಸಲು ಆರಾಮದಾಯಕವಾಗದಿದ್ದರೆ, ನೀವು ಅದನ್ನು ಸರಿಯಾಗಿ ಧರಿಸುವ ಸಾಧ್ಯತೆ ಕಡಿಮೆ. ಇತ್ತೀಚಿನ ಅಧ್ಯಯನ ಒಂದರಲ್ಲಿ ಕೆಲವು ಬಟ್ಟೆಗಳು ಎರಡೂ ಗುಣಲಕ್ಷಣಗಳನ್ನು ಹೊಂದಿವೆ ಎಂದು ಕಂಡುಹಿಡಿದಿದೆ. ಕಂಚುಕಗಳ ಪ್ಯಾಡ್‌ಗಳಿಂದ ಹಿಡಿದು ಕಾಫಿ ಫಿಲ್ಟರ್‌ಗಳವರೆಗಿನ 30 ಬಗೆಯ ವಸ್ತುಗಳನ್ನು ಸಂಶೋಧಕರು ಅಧ್ಯಯನ ಮಾಡಿದಾಗ, ಹಗುರವಾದ ಡೆನಿಮ್, ಪೇಪರ್ ಟವೆಲ್ ಮತ್ತು 80 ರಿಂದ 120 ಥ್ರೆಡ್ ಎಣಿಕೆಯೊಂದಿಗೆ 100 ಪ್ರತಿಶತದಷ್ಟು ಹತ್ತಿಯ ಬೆಡ್‌ಶೀಟ್‌ಗಳು ಈ ಕಾರ್ಯಕ್ಕೆ ಸೂಕ್ತ ಎಂದು ಕಂಡುಕೊಳ್ಳಲಾಗಿದೆ.

ನೈಸರ್ಗಿಕ ನಾರುಗಳಿಂದ ತಯಾರಿಸಿದ ಬಟ್ಟೆಗಳು ಮತ್ತು ಬಿಗಿಯಾದ ನೇಯ್ಗೆ ಇರುವ ಬಟ್ಟೆಗಳು ಸಹ ವೈರಸ್ ಕಣಗಳನ್ನು ಫಿಲ್ಟರ್ ಮಾಡುವಲ್ಲಿ ಉತ್ತಮವೆಂದು ಕಂಡುಕೊಳ್ಳಲಾಗಿದೆ. ಸಾಮಾನ್ಯವಾಗಿ ಅನ್ವಯವಾಗುವ ನಿಯಮದ ಪ್ರಕಾರ ನಿಮ್ಮ ಬಟ್ಟೆಯನ್ನು ನೀವು ಬೆಳಕಿಗೆ ಅಡ್ಡಲಾಗಿ ಹಿಡಿದಾಗ ಇದರ ಮೂಲಕ ಬೆಳಕನ್ನು ನೋಡಬಹುದಾದರೆ, ಇದರ ನೇಯ್ಗೆ ತುಂಬಾ ಸಡಿಲ ಎಂದು ತಿಳಿದುಕೊಳ್ಳಬಹುದು. ಅಲ್ಲದೇ ನೀವು ಬಳಸುವ ಯಾವುದೇ ಸಾಮಾಗ್ರಿಯಾದರೂ ಅದು ಬಟ್ಟೆ ಒಗೆಯುವ ಯಂತ್ರದಲ್ಲಿ ತೊಳೆದು ಒಣಗಿಸುವಂತಿರಬೇಕು, ಈ ಮೂಲಕ ನೀವು ಅದನ್ನು ನಿಯಮಿತವಾಗಿ ಸ್ವಚ್ಛ ಗೊಳಿಸಿ ಮರುಬಳಕೆ ಮಾಡಿಕೊಳ್ಳುವಂತಿರಬೇಕು.

ಧರಿಸುವಾಗ ಮತ್ತು ತೆಗೆಯುವಾಗ ಮಾಡುವ ತಪ್ಪುಗಳು:

ಧರಿಸುವಾಗ ಮತ್ತು ತೆಗೆಯುವಾಗ ಮಾಡುವ ತಪ್ಪುಗಳು:

ಮುಖಗುರಾಣಿ ಧರಿಸುವ ಮುನ್ನ ಏನು ನೆನಪಿಲ್ಲದಿದ್ದರೂ ಸರಿ, ಕೈ ತೊಳೆದುಕೊಳ್ಳುವುದು ಮುಖ್ಯ. ಏಕೆಂದರೆ ನಿಮ್ಮ ಗಮನಕ್ಕೆ ಬಾರದೇ ಕೈಗಳಲ್ಲಿರುವ ಸೋಂಕು ನೇರವಾಗಿ ಮುಖಗುರಾಣಿಗೆ ತಾಕಬಹುದು ಹಾಗೂ ರಕ್ಷಿಸಬೇಕಾದ ಸಾಧನವೇ ಸೋಂಕು ಉಂಟುಮಾಡಬಹುದು. National Jewish Health ಸಂಸ್ಥೆ ನೀಡಿರುವ ಸಲಹೆಯ ಪ್ರಕಾರ ಪ್ರತಿ ಬಾರಿ ಮುಖಗುರಾಣಿಯನ್ನು ಧರಿಸುವ ಮುನ್ನ ಮತ್ತು ಧರಿಸಿದ ಬಳಿಕ ಹಾಗೂ ಮತ್ತು ತೆಗೆಯುವ ಮುನ್ನ ಮತ್ತು ಬಳಿಕ ಕನಿಷ್ಟ ಇಪ್ಪತ್ತು ಸೆಕೆಂಡುಗಳ ಕಾಲವಾದರೂ ಸೋಪು ಹಾಕಿ ಚೆನ್ನಾಗಿ ತೊಳೆದುಕೊಳ್ಳಬೇಕು.

"ಇದರ ಮುಖ್ಯ ಸಂದೇಶವೆಂದರೆ ಕೈ ನೈರ್ಮಲ್ಯ" ಎಂದು ಸೋಂಕಿನ ನಿಯಂತ್ರಣ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದ (ಎಪಿಐಸಿ) ವೃತ್ತಿಪರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಆನ್ ಮೇರಿ ಪೆಟ್ಟಿಸ್, RN ರವರು ತಿಳಿಸುತ್ತಾರೆ. "ನೀವು ಅದನ್ನು ಅತಿಯಾಗಿ ಮಾಡಬಾರದು, ಆದರೆ ಸಾಕಷ್ಟು ಆರ್ದ್ರತೆಯನ್ನು ಒದಗಿಸಲು ಮರೆಯದಿರಿ, ಈ ಮೂಲಕ ನಿಮ್ಮ ಚರ್ಮವು ಸೋಂಕನ್ನು ಆಹ್ವಾನಿಸುವಷ್ಟು ಚಿಕ್ಕ ಮಟ್ಟಿಗಿನ ಸವೆತಗಳನ್ನು ಅಥವಾ ಸೂಕ್ಷ್ಮ ಗಾಯಗಳನ್ನು ಉಂಟುಮಾಡಬಾರದು" ಎಂದು ಅವರು ಹೇಳುತ್ತಾರೆ. ಅಂದರೆ, ಸಾಮಾನ್ಯವಾಗಿ ಕೈ ತೊಳೆಯುವ ತಪ್ಪುಗಳನ್ನು ನೀವು ಮಾಡುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಕೈ ತೊಳೆದ ಬಳಿಕ ಮುಖಗುರಾಣಿಯ ಕಿವಿಗೆ ತಾಕಿರುವ ಎಲಾಸ್ಟಿಕ್ ಭಾಗವನ್ನು ಮಾತ್ರವೇ ಸ್ಪರ್ಶಿಸಿ ಮೊದಲು ಒಂದು ಕಿವಿಗೆ ಸಿಕ್ಕಿಸಿಕೊಂಡ ಬಳಿಕ ಮುಖ ಮತ್ತು ಮೂಗು ಮುಚ್ಚುವಂತೆ ಆವರಿಸಿ ಅತ್ತಬದಿಯ ಎಲಾಸ್ಟಿಕ್ ಇನ್ನೊಂದು ಕಿವಿಯ ಹಿಂಬದಿಗೆ ಸಿಲುಕಿಸಿ. ಒಂದು ವೇಳೆ ನೀವು ಕನ್ನಡಕ ಧರಿಸುವವರಾಗಿದ್ದರೆ ಅಂತಿಮವಾಗಿ ಧರಿಸಿ.

ತಪ್ಪಾಗಿ ಧರಿಸುವುದು:

ತಪ್ಪಾಗಿ ಧರಿಸುವುದು:

ಒಂದು ವೇಳೆ ನಿಮ್ಮ ಮುಖಗುರಾಣಿಯಲ್ಲಿ ನೆರಿಗೆಗಳಿದ್ದರೆ ಇವು ಹೊರಕ್ಕೆ ಮಡಚಿರಬೇಕು ಮತ್ತು ಮಡಚಿರುವ ಅಂಚುಗಳು ಕಳಮುಖವಾಗಿ ಮಡಚಿದಂತಿರಬೇಕು. ಅಲ್ಲದೇ ನಡುಭಾಗ ಮೂಗು ಮತ್ತು ಬಾಯಿಯನ್ನು ಪೂರ್ಣವಾಗಿ ಆವರಿಸುವಂತಿರಬೇಕು ಹಾಗೂ ಸಾಮಾನ್ಯವಾಗಿ ಉಸಿರಾಡಲು ಸಾಧ್ಯವಾಗುವಂತಿರಬೇಕು ಎಂದು CDC ವಿವರಿಸುತ್ತದೆ.

ಗುರಾಣಿಯ ಪಕ್ಕದ ಭಾಗ ತುಟಿಗಳ ಅಂಚಿನಿಂದ ಕನಿಷ್ಟ ಒಂದು ಇಂಚಿನಷ್ಟಾದರೂ ಆವರಿಸುವಷ್ಟು ಅಗಲವಿರಬೇಕು ಮತ್ತು ಕೆಳಭಾಗದ ನೆರಿಗೆ ಗದ್ದವನ್ನು ಪೂರ್ಣವಾಗಿ ಆವರಿಸುವಂತಿರಬೇಕು. ಈ ಭಾಗ ಗುರಾಣಿಯನ್ನು ದೃಢವಾಗಿ ಹಿಡಿದಿರಿಸುವಂತೆ ಇರಬೇಕು ಎಂದು notes Consumer ವಿವರಿಸುತ್ತದೆ. ಪುರುಷರು ಆದಷ್ಟೂ ತಮ್ಮ ಗಡ್ಡಗಳನ್ನು ಕಿರಿದಾಗಿಸುವ ಮೂಲಕ ಗದ್ದದ ಹಿಡಿತವನ್ನು ಬಲಯುತಗೊಳಿಸಬಹುದು.

ತೀರಾ ತಡವಾಗಿ ಧರಿಸುವುದು:

ತೀರಾ ತಡವಾಗಿ ಧರಿಸುವುದು:

ಕೆಲವರಿಗೆ ಯಾವುದಾದರೂ ರಕ್ಷಣಾತ್ಮಕ ಕ್ರಮವನ್ನು ಅನುಸರಿಸುವುದಾದರೆ ಅಂತಿಮ ಕ್ಷಣದವರೆಗೂ ಕಾಯುವ ದುರಭ್ಯಾಸವಿರುತ್ತದೆ. ಇಲ್ಲಿಯೂ ಹಾಗೇ, ಮುಖಗುರಾಣಿ ಧರಿಸುವುದು ಅನಿವಾರ್ಯ ಎನ್ನುವ ಕ್ಷಣದವರೆಗೂ ಇವರು ಸರಿಯಾಗಿ ಧರಿಸುವುದಿಲ್ಲ. ಉದಾಹರಣೆಗೆ ದಿನಸಿ ಅಂಗಡಿಯ ಒಳಬರುವಾಗ ದಾರಿಯುದ್ದಕ್ಕೂ ಹಾಗೇ ಬಂದು ಅಂತಿಮ ಕ್ಷಣದಲ್ಲಿ ಅಂಗಡಿಯ ಒಳಬರುವಾಗ ಗುರಾಣಿಯನ್ನು ಮೂಗಿನ ಮೇಲೆ ಎಳೆದುಕೊಳ್ಳುತ್ತಾರೆ.

ಆದರೆ ಈ ಕೆಲಕ್ಷಣಗಳ ನಿರ್ಲಕ್ಷ್ಯತೆಯೇ ಅತಿ ತಡವಾಗಿ ಪರಿಣಮಿಸಬಹುದು ಹಾಗೂ ಊಹಿಸದ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಬೇಲರ್ ಕಾಲೇಜ್ ಆಫ್ ಮೆಡಿಸಿನ್‌ನ ಡಾ. ಆಲಿಸನ್ ಹ್ಯಾಡಾಕ್ ಹೂಸ್ಟನ್ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ. ತಾತ್ತ್ವಿಕವಾಗಿ, ನಿಮ್ಮ ಮನೆಯ ಮುಂಬಾಗಿಲಿನಿಂದ ಹೊರಬರುವ ಮೊದಲೇ ನೀವು ಮುಖಗುರಾಣಿಯನ್ನು ಪೂರ್ಣವಾಗಿ ಧರಿಸಿರಬೇಕು. ನೀವು ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿದ್ದರೆ, ಇದು ಇನ್ನೂ ಮುಖ್ಯವಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ತಿಳಿಸುತ್ತದೆ. ಎಲಿವೇಟರುಗಳು ಮತ್ತು ಮೆಟ್ಟಿಲುಗಳು ವಿಶೇಷವಾಗಿ ಸೋಂಕಿನಿಂದ ಕೂಡಿರಬಹುದು.

ಅತಿ ಬೇಗನೆಯೇ ತೆಗೆಯುವುದು:

ಅತಿ ಬೇಗನೆಯೇ ತೆಗೆಯುವುದು:

ಇದೇ ಕ್ರಮದಲ್ಲಿ ಧರಿಸಿರುವ ಮುಖಗುರಾಣಿಯನ್ನು ತಾಳ್ಮೆ ಕಳೆದುಕೊಂಡು ಅಗತ್ಯಕ್ಕೂ ಮುನ್ನವೇ ತೆಗೆಯುವುದು ಇನ್ನೊಂದು ದೊಡ್ಡ ತಪ್ಪಾಗಿದೆ. ಡಾ. ಹ್ಯಾಡಾಕ್ ರವರ ಪ್ರಕಾರ ನೀವು ಮನೆಗೆ ಬರುವವರೆಗೂ ಮುಖಗುರಾಣಿ ನಿವಾರಿಸಬಾರದು. ಮನೆಗೆ ಬಂದ ಬಳಿಕ ಸರಿಯಾದ ಕ್ರಮದಲ್ಲಿಯೇ ನಿವಾರಿಸಬಹುದು ಮತ್ತು ಕೈಗಳನ್ನು ತೊಳೆದುಕೊಳ್ಳಬೇಕು.

ಆದರೆ ಮನೆ ತಲುಪುವ ಮುನ್ನವೇ ನೀವು ಇದನ್ನು ನಿವಾರಿಸಬೇಕಾದ ಅನಿವಾರ್ಯತೆ ಎದುರಾದರೆ ಇದನ್ನು ಎಂದೂ ಪ್ರಯಾಣಿಕರ ಸ್ಥಳದಲ್ಲಿ ವಿಸರ್ಜಿಸದಿರಿ ಮತ್ತು ನೀವು ಯಾವುದನ್ನಾದರೂ ಸ್ಪರ್ಶಿಸುವ ಮೊದಲು ಅದನ್ನು ಚೀಲದಲ್ಲಿ ಇರಿಸಿ ಮತ್ತು ಹ್ಯಾಂಡ್ ಸ್ಯಾನಿಟೈಜರ್ ಬಳಸಿ ಹಸ್ತಗಳನ್ನು ಸ್ವಚ್ಛಗೊಳಿಸಿಕೊಳ್ಳಿ. ನೀವು ಹೊರಗಿರುವ ಸಂಪೂರ್ಣ ಸಮಯದಲ್ಲಿ ಅಂದರೆ ಗರಿಷ್ಟ ಒಂದು ಮುಖಗುರಾಣಿಯನ್ನು 12 ಗಂಟೆಗಳವರೆಗೆ ಧರಿಸಬಹುದು ಎಂದು ಪೆಟಿಸ್ ಹೇಳುತ್ತಾರೆ, ಸಾಮಾನ್ಯವಾಗಿ ಅದು ನಿಮ್ಮ ಉಸಿರಾಟದಿಂದ ತೇವವಾಗುವುದಿಲ್ಲ. ಯಾವುದೇ ಮುಖವಾಡ ತೇವಗೊಂಡ ತಕ್ಷಣ, ಅದು ಇನ್ನು ಮುಂದೆ ಪರಿಣಾಮಕಾರಿಯಾಗುವುದಿಲ್ಲ ಮತ್ತು ಅದನ್ನು ಬದಲಾಯಿಸಬೇಕು.

ನಿಮ್ಮಿಂದಲೇ ಮುಖಗುರಾಣಿಗೆ ಎದುರಾಗುವ ಸೋಂಕು

ನಿಮ್ಮಿಂದಲೇ ಮುಖಗುರಾಣಿಗೆ ಎದುರಾಗುವ ಸೋಂಕು

"ನಾನು ಗಮನಿಸಿದ ಇನ್ನೊಂದು ವಿಷಯವೆಂದರೆ ಜನರು ಮುಖಗುರಾಣಿಯನ್ನು ಕೆಳಕ್ಕೆ ಎಳೆದು ಕುತ್ತಿಗೆಗೆ ಧರಿಸುತ್ತಾರೆ. ಅದು ಅಲ್ಲಿ ನೇತಾಡುತ್ತಿರುತ್ತದೆ ಮತ್ತು ರೋಗಾಣುಗಳನ್ನು ಸಂಗ್ರಹಿಸುತ್ತದೆ" ಎಂದು ಪೆಟಿಸ್ ಹೇಳುತ್ತಾರೆ. " ಅಂದರೆ ಮುಖಗುರಾಣಿ ಇದ್ದೂ ಪ್ರಯೋಜನವಿಲ್ಲದಂತೆ" ಆದಷ್ಟೂ ನಿಮ್ಮ ಮುಖವನ್ನು ಸ್ಪರ್ಶಿಸುವುದನ್ನು ತಪ್ಪಿಸಿ. ಸಾಮಾನ್ಯವಾಗಿ ಜನರು ಮುಖಗುರಾಣಿಯನ್ನು ಹೊಂದಿಸಿಕೊಳ್ಳಲು ಕೊಂಚ ಮೇಲಕ್ಕೆ ಅಥವಾ ಕೆಳಕ್ಕೆಳೆಯುವ ಮೂಲಕ ತಮ್ಮ ಕೈಯಲ್ಲಿರುವ ಸೋಂಕನ್ನು ಮುಖಗುರಾಣಿಗೆ ದಾಟಿಸಬಹುದು.

ಹಾಗಾಗಿ, ಒಂದು ವೇಳೆ ನಡುವೆ ಮುಖಗುರಾಣಿಯನ್ನು ಹೊಂದಿಸಿಕೊಳ್ಳುವುದು ಅನಿವಾರ್ಯ ಎನಿಸಿದರೆ ಇದಕ್ಕೂ ಮುನ್ನ ನಿಮ್ಮ ಕೈಗಳನ್ನು ತೊಳೆದುಕೊಳ್ಳಬೇಕು ಮತ್ತು ಹೊಂದಿಸಿಕೊಂಡ ಬಳಿಕವೂ ಮತ್ತೊಮ್ಮೆ ಕೈ ತೊಳೆದುಕೊಳ್ಳಬೇಕು. ಏನಾದರೂ ತಿನ್ನಬೇಕಾದಾಗ ಅಥವಾ ಕುಡಿಯಬೇಕಾದಾಗ ಮುಖಗುರಾಣಿಯನ್ನು ಕೊಂಚ ಕಾಲಕ್ಕೆ ನಿವಾರಿಸಬೇಕಾದರೂ ಈ ಕ್ರಮವನ್ನೇ ಕೈಗೊಳ್ಳಬೇಕು.

ಮುಖಗುರಾಣಿಯನ್ನು ಅನಗತ್ಯ ವ್ಯಕ್ತಿಗಳು ಧರಿಸುವುದು

ಮುಖಗುರಾಣಿಯನ್ನು ಅನಗತ್ಯ ವ್ಯಕ್ತಿಗಳು ಧರಿಸುವುದು

ಕೆನಡಾದ ಸಾರ್ವಜನಿಕ ಆರೋಗ್ಯ ಸಂಸ್ಥೆ ಮತ್ತು ಯು.ಎಸ್. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಸಂಸ್ಥೆಗಳು ಶಿಶುಗಳು ಮತ್ತು ಎರಡು ವರ್ಷದೊಳಗಿನ ಮಕ್ಕಳು ಎಂದಿಗೂ ಮುಖಗುರಾಣಿಗಳನ್ನು ಧರಿಸಬಾರದು ಎಂದು ಶಿಫಾರಸು ಮಾಡುತ್ತವೆ. ಏಕೆಂದರೆ, ಇವರ ಶ್ವಾಸಮಾರ್ಗಗಳು ಚಿಕ್ಕದಾಗಿದ್ದು, ಮುಖವಾಡದ ಮೂಲಕ ಉಸಿರಾಡುವುದು ಹೆಚ್ಚು ಕಷ್ಟಕರವಾಗುತ್ತದೆ ಎಂದು ಓಹಿಯೋದ ಕೊಲಂಬಸ್‌ನಲ್ಲಿರುವ ರಾಷ್ಟ್ರವ್ಯಾಪಿ ಮಕ್ಕಳ ಆಸ್ಪತ್ರೆ ವರದಿ ಮಾಡಿದೆ. ಶಿಶುಗಳು ಉಸಿರಾಡಲು ಹೆಣಗಾಡಲಾರಂಭಿಸಿದರೆ, ಮುಖವಾಡಗಳನ್ನು ಸ್ವತಃ ತೆಗೆದುಹಾಕಲು ಅವರಿಗೆ ಸಾಧ್ಯವಾಗುವುದಿಲ್ಲ, ಇದು ಉಸಿರುಗಟ್ಟುವಿಕೆಗೆ ಕಾರಣವಾಗಬಹುದು.

ಅವರ ಮುಖಗುರಾಣಿಗಳನ್ನು ಮುಟ್ಟಬಾರದು ಎಂಬ ಸೂಚನೆಗಳನ್ನು ಸಹ ಅವರು ಅನುಸರಿಸುವಂತೆ ಮಾಡಲು ಸಾಧ್ಯವಿಲ್ಲ. ಇದೇ ರೀತಿಯ ಕಾರಣಗಳಿಗಾಗಿ, ಬುದ್ಧಿಮಾಂದ್ಯತೆ ಅಥವಾ ಇತರ ಅರಿವಿನ ವಿಕಲಾಂಗತೆ ಹೊಂದಿರುವ ಜನರೂ ಮುಖವಾಡಗಳನ್ನು ಧರಿಸಬಾರದು, ಆದರೂ ಅವರ ಆರೈಕೆದಾರರು ಅದನ್ನು ಧರಿಸಬೇಕು.

ಅಂತಿಮವಾಗಿ, ಉಸಿರಾಟದ ಕಾಯಿಲೆಯಗಳಿರುವ ಜನರೂ ಮುಖಗುರಾಣಿಗಳನ್ನು ಸಹ ತ್ಯಜಿಸಬೇಕು, ಏಕೆಂದರೆ ಒಂದನ್ನು ಧರಿಸುವಾಗ ಅವರಿಗೆ ಸಾವಕಾಶವಾಗಿ ಉಸಿರಾಡಲು ಸಾಧ್ಯವಾಗುವುದಿಲ್ಲ.

ಮುಖಗುರಾಣಿಗಳನ್ನು ಆಗಾಗ ತೊಳೆಯದೇ ಇರುವುದು

ಮುಖಗುರಾಣಿಗಳನ್ನು ಆಗಾಗ ತೊಳೆಯದೇ ಇರುವುದು

ನೀವು ಒಂದು ವೇಳೆ ನಿಯಮಿತವಾಗಿ ಬಟ್ಟೆಯ ಮುಖಗುರಾಣಿಯನ್ನು ಧರಿಸುತ್ತಿದ್ದರೆ, ನೀವು ಅದನ್ನು ಪ್ರತಿ ಭಾರಿ ಧರಿಸಿದಾಗಲೆಲ್ಲಾ ಅದನ್ನು ತೊಳೆಯುವುದು ಉತ್ತಮ. ಬಟ್ಟೆ ತಡೆದುಕೊಳ್ಳಬಲ್ಲ ಅತ್ಯಂತ ಬಿಸಿ ನೀರಿನಲ್ಲಿ ಡಿಟರ್ಜೆಂಟ್ ಬಳಸಿ ತೊಳೆಯಬೇಕು. ಬಣ್ಣಗಳು ಮರೆಯಾಗುತ್ತಿರುವ ಬಗ್ಗೆ ಚಿಂತೆ ಮಾಡುವ ಸಮಯ ಇದಲ್ಲ. "ಶಾಖವು ಖಂಡಿತವಾಗಿಯೂ ಈ ಸೂಕ್ಷ್ಮಾಣುಜೀವಿಗಳನ್ನು ಕೊಲ್ಲುತ್ತದೆ" ಎಂದು ಪೆಟ್ಟಿಸ್ ತಿಳಿಸುತ್ತಾರೆ. ಆ ಕಾರಣಕ್ಕಾಗಿ, ಮುಖಗುರಾಣಿಯ ಬಟ್ಟೆ ಸಹಿಸಿಕೊಳ್ಳುವಷ್ಟು ಬಿಸಿಯಾದ ಸೆಟ್ಟಿಂಗ್‌ನಲ್ಲಿ ಬಟ್ಟೆಗಳ ಡ್ರೈಯರ್‌ ಇರಿಸಿ ಮುಖಗುರಾಣಿಗಳನ್ನು ಒಣಗಿಸಿಕೊಳ್ಳುವಂತೆ ತಜ್ಞರು ಸಲಹೆ ನೀಡುತ್ತಾರೆ.

ಒಂದು ವೇಳೆ ನೀವು ಸಾಂದರ್ಭಿಕವಾಗಿ ಮುಖವಾಡವನ್ನು ಧರಿಸುತ್ತಿದ್ದರೆ, ಬಳಕೆಗಳ ನಡುವೆ ಕಾಗದದ ಚೀಲದಲ್ಲಿ ಒಣಗಲು ನೀವು ಬಿಡಬಹುದು. "ನೀವು ಅದನ್ನು ಒಮ್ಮೆ ಧರಿಸಿದ್ದರೆ ಮತ್ತು ಅದು ಒಂದು ವಾರವಾಗಿದ್ದರೆ, ಅದನ್ನು ಒಗೆಯದೇ ಮತ್ತೊಮ್ಮೆ ಧರಿಸಬಹುದು" ಎಂದು ಪೆಟಿಸ್ ಹೇಳುತ್ತಾರೆ, ಏಕೆಂದರೆ ವೈರಸ್ ಮೃದುವಾದ ಮೇಲ್ಮೈಗಳಲ್ಲಿ ಒಂದು ಅಥವಾ ಎರಡು ದಿನಗಳಿಗಿಂತ ಹೆಚ್ಚು ಕಾಲ ಬದುಕುಳಿಯಲಾರದು.

ಕಿರುಮಾರ್ಗಗಳನ್ನು ಅನುಸರಿಸುವುದು:

ಕಿರುಮಾರ್ಗಗಳನ್ನು ಅನುಸರಿಸುವುದು:

ಇಂದು ಮುಖಗುರಾಣಿಗಳ ಬಗ್ಗೆ ಅಂತರ್ಜಾಲದಲ್ಲಿ ಅಪಾರವಾದ ಮಾಹಿತಿ ಹರಿದುಬರುತ್ತಿದೆ. ಉದಾಹರಣೆಗೆ ತಕ್ಷಣ ಸ್ವಚ್ಛಗೊಳಿಸಲು ಕ್ರಿಮಿನಾಶಕ ಬಳಸಿ ತೊಳೆಯುವುದು ಅಥವಾ ಬಿಳಿಚುಕಾರಕ ದ್ರಾವಣ ಬಳಸುವುದು ಅಥವಾ ಸ್ಯಾನಿಟೈಸರ್ ಹಚ್ಚಿ ಮೈಕ್ರೋವೇವ್ ಅವನ್ ಒಳಗೆ ಇರಿಸುವುದು. ಆದರೆ, ತಜ್ಞರು ಈ ಎರಡೂ ವಿಧಾನಗಳನ್ನು ಶಿಫಾರಸು ಮಾಡುವುದಿಲ್ಲ. ಸೋಂಕುನಿವಾರಕ ಸಿಂಪಡಣೆಯ ರಾಸಾಯನಿಕಗಳು ನೀವು ಮುಖವಾಡವನ್ನು ಮತ್ತೆ ಧರಿಸುವ ಮೊದಲು ಕರಗಲು ಸಮಯವಿದ್ದರೂ ಸಹ, ಇದು ಇನ್ನೂ ಉಸಿರಾಟದ ಅಥವಾ ಚರ್ಮದ ಮೇಲೆ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು.

ಇದಲ್ಲದೆ, ಡಾ ಪೆಟಿಸ್ ತಿಳಿಸುವಂತೆ, ಈ ಬಗೆಯ ಉತ್ಪನ್ನಗಳು ದೃಢ ಮೇಲ್ಮೈ ಗಳಲ್ಲಿರುವ ವೈರಸ್ಸುಗಳನ್ನು ತೆಗೆದುಹಾಕುವಷ್ಟು ಚೆನ್ನಾಗಿ ಮೃದುವಾದ ಮೇಲ್ಮೈಗಳಿಂದ ವೈರಸ್ ಕಣಗಳನ್ನು ನಿವಾರಿಸುವುದಿಲ್ಲ. ಹಾಗಾಗಿ, ಈ ವಿಧಾನಗಳಿಂದ ಮುಖಗುರಾಣಿಗಳನ್ನು ತಕ್ಷಣವೇ ಸ್ವಚ್ಛಗೊಳಿಸಿ ಮರುಬಳಕೆ ಮಾಡಬಾರದು.

ತಪ್ಪು ವಿಧಾನದಲ್ಲಿ ಸಂಗ್ರಹಿಸುವುದು:

ತಪ್ಪು ವಿಧಾನದಲ್ಲಿ ಸಂಗ್ರಹಿಸುವುದು:

ನಡುನಡುವೆ ಆಗಾಗ ಮಾತ್ರವೇ ನಿಮಗೆ ಮುಖಗುರಾಣಿಯನ್ನು ಧರಿಸಿ ಉಳಿದ ಸಮಯದಲ್ಲಿ ನೀವು ಒಣಗಲು ಹಾಕುತ್ತಿದ್ದರೂ, ಅದನ್ನು ನಿಮ್ಮ ಜಾಕೆಟ್‌ನ ಪಕ್ಕದಲ್ಲಿರುವ ಕೊಕ್ಕೆಗೆ ತೂಗುಹಾಕಬೇಡಿ ಮತ್ತು ಮುಂದಿನ ಬಾರಿ ನೀವು ಹೊರಹೋಗುವಾಗ ಅದನ್ನು ನೇರವಾಗಿ ಧರಿಸದಿರಿ.

ಸುರಕ್ಷಿತ ವಿಧಾನವೆಂದರೆ ಎರಡು ತೊಳೆಯುವಿಕೆಯ ನಡುವಣ ಸಮಯದಲ್ಲಿ ಅದನ್ನು ಸ್ವಚ್ಛ ಒಣ ಕಾಗದದ ಚೀಲದಲ್ಲಿ ಸಂಗ್ರಹಿಸುವುದು ಉತ್ತಮ, ಆದ್ದರಿಂದ ಅದರ ಮೇಲ್ಮೈ ನಿಮ್ಮ ಮನೆಯಲ್ಲಿರುವ ಯಾವುದೇ ರೋಗಾಣುಗಳಿಂದ ಮುಕ್ತವಾಗಿರುತ್ತದೆ. ಈ ಉದ್ದೇಶಕ್ಕಾಗಿ ಪ್ಲಾಸ್ಟಿಕ್ ಚೀಲಗಳನ್ನು ಬಳಸುವುದನ್ನು ತಪ್ಪಿಸಿ, ಏಕೆಂದರೆ ಅವು ಸೂಕ್ಷ್ಮಾಣುಗಳ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. "ಅದನ್ನು ಕಾಗದದ ಚೀಲದಲ್ಲಿ ಇರಿಸಿ ಮತ್ತು ನೀವು ಅದನ್ನು ಮತ್ತೆ ಧರಿಸುವ ಮೊದಲು ಕೆಲವು ದಿನಗಳವರೆಗೆ ಅಲ್ಲಿಯೇ ಇರಲು ಬಿಡಿ, ಅಥವಾ ಅದನ್ನು ಒಗೆದು ಬಿಡುವುದೇ ಉತ್ತಮ" ಎಂದು ಪೆಟಿಸ್ ಹೇಳುತ್ತಾರೆ.

ಅನಗತ್ಯ ಕಾರಣಕ್ಕಾಗಿ ಧರಿಸುವುದು:

ಅನಗತ್ಯ ಕಾರಣಕ್ಕಾಗಿ ಧರಿಸುವುದು:

"ಸಾರ್ವಜನಿಕವಾಗಿ ಮುಖಗುರಾಣಿ ಧರಿಸುವುದರಿಂದ ನೀವು ಸಂಪೂರ್ಣವಾಗಿ ಸುರಕ್ಷಿತರಲ್ಲ. ಏಕೆಂದರೆ ಅದು ನಿಮ್ಮ ಸುತ್ತಲಿನ ಇತರರನ್ನು ಆ ಆರು ಅಡಿ [ಎರಡು ಮೀಟರ್] ಜಾಗದಲ್ಲಿರುವ ಗಾಳಿಯಲ್ಲಿ ತೇಲುತ್ತಿರುವ ಕಣಗಳಿಂದ ಮಾತ್ರವೇ ರಕ್ಷಿಸುತ್ತದೆ" ಎಂದು ಪೆಟಿಸ್ ಹೇಳುತ್ತಾರೆ. ವಾಸ್ತವವಾಗಿ, ಇನ್ನೂ ಮುಂದುವರೆಯುತ್ತಿರುವ ಸಂಶೋಧನೆಯ ಪ್ರಕಾರ ಯಾವುದೇ ರೋಗಲಕ್ಷಣಗಳನ್ನು ತೋರಿಸದ ಜನರಿಂದಲೂ ನಾವೆಲ್ ಕೊರೋನಾ ವೈರಸ್ ಹರಡುತ್ತದೆ. ಅದು ನೀವೂ ಆಗಿರಬಹುದು. ಮತ್ತು ಮುಖವಾಡ ಧರಿಸಲು ಇದು ಪ್ರಮುಖ ಕಾರಣವಾಗಿದೆ. ಹಾಗಾಗಿ, ಸಾರ್ವಜನಿಕ ಸ್ಥಳಕ್ಕೆ ಹೋಗುವಾಗ ತಪ್ಪದೇ ಮುಖಗುರಾಣಿಯನ್ನು ಧರಿಸಲೇಬೇಕು. ಯಾವುದೇ ಕಾರಣಕ್ಕೂ ಅನಿವಾರ್ಯ ಎನಿಸದ ಹೊರತು ಮನೆಯಿಂದ ಹೊರಗೇ ಹೋಗಬಾರದು.

English summary

The Mistake You're Probably Making With Your Face Mask

Now Face mask become part of our life, But when using that people use some mistakes, that will bring harm to body, Here are list of face mask mistakes you should avoid it.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X