Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಮಲೇಷ್ಯಾದಲ್ಲಿ ಹೊಸ ತಳಿಯ ಕೊರೊನಾವೈರಸ್, ಇದು 10 ಪಟ್ಟು ಅಧಿಕ ಅಪಾಯಕಾರಿ, ಲಸಿಕೆಗೂ ಬಗ್ಗಲ್ಲ
ಚೀನಾದ ವುಹಾನ್ ನಗರದಲ್ಲಿ ಕಂಡು ಬಂದ ಕೊರೊನಾವೈರಸ್ ಇದೀಗ ಇಡೀ ವಿಶ್ವವನ್ನೇ ವ್ಯಾಪಿಸಿ ಜನರು ನಲುಗುವಂತೆ ಮಾಡಿದೆ. ಈ ವೈರಸ್ ಬಂದಾಗಿನಿಂದ ಇದರ ಕುರಿತ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಈಗಾಗಲೇ ಭಾರತ ಸೇರಿ ಹಲವು ರಾಷ್ಟ್ರಗಳಲ್ಲಿ ಕೊರೊನಾವೈರಸ್ ತಡೆಗಟ್ಟಲು ಲಸಿಕೆ ಸಿದ್ಧವಾಗಿದ್ದು ಅದು ಪ್ರಾಯೋಗಿಕ ಹಂತದಲ್ಲಿವೆ.
ಪ್ರಾಯೋಗಿಕವಾಗಿ ಯಶಸ್ವಿಯಾದರೆ ಬೇಗನೆ ಈ ಲಸಿಕೆಗಳು ಮಾರುಕಟ್ಟೆಗೆ ಬರಲಿವೆ. ಲಸಿಕೆ ಮಾರುಕಟ್ಟೆಗೆ ಬಂದರೆ ಈ ಕೊರೊನಾ ಆತಂಕದಿಂದ ಮುಕ್ತಿ ಪಡೆಯಬಹುದು ಎಂದು ಎಲ್ಲರೂ ಯೋಚಿಸುತ್ತಿರುವಾಗಲೇ ಈ ವೈರಸ್‌ನ ಭಯಾನಕ ಸ್ವರೂಪವೊಂದು ತಿಳಿದು ಬಂದಿದೆ.
ಮಲೇಷ್ಯಾದಲ್ಲಿ ಪತ್ತೆಯಾದ ಹೊಸ ಕೊರೊನಾ ವೈರಸ್ ತಳಿ ಈಗ ಇರುವ ಕೊರೊನಾ ವೈರಸ್‌ಗಿಂತ ಹತ್ತು ಪಟ್ಟು ಅಪಾಯಕಾರಿಯಾಗಿದೆ ಎಂಬ ಅಂಶ ತಿಳಿದು ಬಂದಿದೆ.

ಕೊರೊನಾವೈರಸ್ ಹೊಸ ತಳಿ
ಇದುವರೆಗೆ ಜಗತ್ತಿನಲ್ಲಿ D614G ಎಂದು ಕರೆಯಲ್ಪಡುವ ಕೊರೊನಾವೈರಸ್ ಪತ್ತೆಯಾಗಿತ್ತು. ಆದರೆ ಇದೀಗ ಮಲೇಷ್ಯಾದಲ್ಲಿ 45 ಜನರಲ್ಲಿ ಕಾಣಿಸಿಕೊಂಡಿರುವ ಕೊರೊನಾವೈರಸ್ ಬೇರೆ ತಳಿಯಾಗಿದ್ದು, ಈ ವೈರಸ್ ತುಂಬಾ ಅಪಾಯಕಾರಿಯಾಗಿದೆ. ಭಾರತದಿಂದ ಮರಳಿದ್ದ ರೆಸ್ಟೋರೆಂಟ್ ಮಾಲಿಕ ಹಾಗೂ ಫಿಲಿಫೈನ್ಸ್‌ನಿಂದ ಮರಳಿದ ಗುಂಪು ಜನರಲ್ಲಿ ಈ ರೀತಿಯ ವೈರಸ್ ಪತ್ತೆಯಾಗಿದೆ.

ಲಸಿಕೆಗಳು ಈ ತಳಿಯ ಮೇಲೆ ಪ್ರಭಾವ ಬೀರಲ್ಲ
ಲಸಿಕೆ ಕುರಿತು ಈಗ ನಡೆಸುತ್ತಿರುವ ಸಂಶೋಧನೆಗಳು ಯಾವುದೂ ಈ ತಳಿಯ ಕೊರೊನಾವೈರಸ್ ಮೇಲೆ ಪರಿಣಾಮ ಬೀರಲ್ಲ ಎನ್ನುತ್ತಾರೆ ಮಲೇಷ್ಯಾದ ಆರೋಗ್ಯ ಮಹಾ ನಿರ್ದೇಶಕರಾಗಿರುವ ನೂರ್ ಹಿಶಾಮ್ ಅಬ್ದುಲ್ಲಾ.
ಸೆಲ್ ಪ್ರೆಸ್‌ನಲ್ಲಿ ಪ್ರಕಟವಾಗಿರುವ ವರದಿಯು ಕೊರೊನಾ ವೈರಸ್‌ಗೆ ಕಂಡು ಹಿಡಿಯುತ್ತಿರುವ ಲಸಿಕೆಯು ಈ ತಳಿಯ ವೈರಸ್ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳಿದೆ?
ಈ ಹೊಸ ಕೊರೊನಾವೈರಸ್ ತಳಿ ಅತ್ಯಂತ ಭಯಾನಕ ಕಾಯಿಲೆಯಾಗಲಿದೆ ಎಂಬುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಜನರು ಎಚ್ಚರಿಕೆಯಿಂದ ಇದ್ದರೆ ಮಾತ್ರ ಈ ರೋಗ ತಡೆಗಟ್ಟಲು ಸಾಧ್ಯ
'ಕೊರೊನಾ ವೈರಸ್ ತಳಿ ಮಲೇಷ್ಯಾದಲ್ಲಿ ಕಂಡು ಬಂದಿರುವುದರಿಂದ ಜನರು ಅತ್ಯಂತ ಮುನ್ನೆಚ್ಚರಿಕೆಯಿಂದ ಇರಬೇಕು, ಜನರ ಸಹಕಾರ ಇದ್ದರೆ ಮಾತ್ರ ನಾವೆಲ್ಲಾ ಸೇರಿ ಈ ಸೋಂಕಿನ ಚೈನ್ ಬ್ರೇಕ್ ಮಾಡಬಹುದು' ಎಂದು ನೂರ್ ಹಿಶಾಮ್ ಅಬ್ದುಲ್ಲಾ ಹೇಳಿದ್ದಾರೆ.

ಮಲೇಷ್ಯಾದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ
ವಿಶ್ವದ ಇತರ ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವಾಗ ಮಲೇಷ್ಯಾ ಸೋಂಕು ಹರಡದಂತೆ ತಡೆಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಶನಿವಾರ 26, ಭಾನುವಾರ 25 ಕೇಸ್‌ಗಳು ಪತ್ತೆಯಾಗಿದ್ದು ಜುಲೈ 28ರ ಬಳಿಕ ಅತೀ ಹೆಚ್ಚು ಕೊರೊನಾ ಶನಿವಾರ, ಭಾನುವಾರ ಪತ್ತೆಯಾಗಿದೆ.



Click it and Unblock the Notifications
