For Quick Alerts
ALLOW NOTIFICATIONS  
For Daily Alerts

ಈಗ ದೇಶದ ಯಾವುದೇ ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯವಲ್ಲ, ಆದರೆ ತಜ್ಞರ ಎಚ್ಚರಿಕೆ ಕಡೆಗಣಿಸುವಂತಿಲ್ಲ

|

ಎರಡು ವರ್ಷದಿಂದ ಮಾಸ್ಕ್‌ ಹಾಕಿ-ಹಾಕಿ ಯಾವಾಗಪ್ಪಾ ಮೊದಲಿನ ಜೀವನಕ್ಕೆ ಮರಳುವುದು ಎಂದು ಎಲ್ಲರಿಗೂ ಅನಿಸಲಾರಂಭಿಸಿತ್ತು, ಚಳಿಯಿರುವಾಗ ಮಾಸ್ಕ್‌ ಬೆಚ್ಚನೆಯ ಅನುಭವ ನೀಡಿದರೆ ಬೇಸಿಗೆಯಲ್ಲಿ ತುಂಬಾನೇ ಕಿರಿಕಿರಿ ಅನಿಸುವುದು. ಮುಖ ತುರಿಸಲಾರಂಭಿಸುವುದು, ಕೆಲವರಿಗೆ ಅಲರ್ಜಿ ಕೂಡ ಉಂಟಾಗುವುದು. ಆದರೆ ಕೊರೊನಾದಿಂದ ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸುವುದು ಅನಿವಾರ್ಯವಾಗಿತ್ತು.

ಇದೀಗ ದೇಶದ ಎಲ್ಲಾ ಮಾಸ್ಕ್ ಧರಿಸಬೇಕೆಂಬ ನಿಯಮವನ್ನು ಸಡಿಲಿಸಿದೆ. ದೇಶದಲ್ಲಿ ಕೊರೊನಾ ತುಂಬಾನೇ ಇಳಿಮುಖವಾಗಿರುವುದರಿಂದ ಎಲ್ಲಾ ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯವಲ್ಲ. ಆದರೆ ತಜ್ಞರು ಹೇಳುವ ಪ್ರಕಾರ ಮಾಸ್ಕ್‌ ಧರಿಸುವ ಅಭ್ಯಾಸವನ್ನು ಮುಂದುವರೆಸುವುದು ಒಳ್ಳೆಯದು ಎಂದು ಹೇಳುತ್ತಿದ್ದಾರೆ, ಏಕೆ ಎಂಬುವುದಕ್ಕೆ ಕಾರಣಗಳನ್ನು ನೀಡಿದ್ದಾರೆ ನೋಡಿ:

 ಮಾಸ್ಕ್‌ ಧರಿಸುವುದರಿಂದ ಸೀಸನಲ್‌ ಕಾಯಿಲೆ ತಡೆಗಟ್ಟಬಹುದು

ಮಾಸ್ಕ್‌ ಧರಿಸುವುದರಿಂದ ಸೀಸನಲ್‌ ಕಾಯಿಲೆ ತಡೆಗಟ್ಟಬಹುದು

ಸಾಧಾರಣವಾಗಿ ಕಾಲ ಬದಲಾದಾಗ ಕಾಡುವ ಕೆಮ್ಮು, ಶೀತ, ಜ್ವರದಂಥ ಸಮಸ್ಯೆಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು. ಹೊರಗಡೆ ಹೋಗುವಾಗ ಮಾಸ್ಕ್‌ ಧರಿಸುವುದರಿಂದ ಈ ರೀತಿಯ ಸೀನನಲ್ ಕಾಯಿಲೆಗಳಿಂದ ರಕ್ಷಣೆ ಪಡೆಯಬಹುದು.

ಹೊಸ ಕೊರೊನಾ ರೂಪಾಂತರ ಬಂದ್ರೆ ಬೇಗನೆ ಹರಡುವುದು

ಹೊಸ ಕೊರೊನಾ ರೂಪಾಂತರ ಬಂದ್ರೆ ಬೇಗನೆ ಹರಡುವುದು

ಕೊರೊನಾ ಕಡಿಮೆಯಾಗಿದೆಯೇ ಹೊರತು ಸಂಪೂರ್ಣಾಗಿ ದೂರಾಗಿಲ್ಲ. ಜಗತ್ತಿ ಹಲವು ಕಡೆ ಬೇರೆ-ಬೇರೆ ಹೊಸ ರೂಪಾಂತರ ಪತ್ತೆಯಾಗುತ್ತಿವೆ. ಮಾಸ್ಕ್‌ ಧರಿಸದೇ ಓಡಾಡುತ್ತಿದ್ದರೆ ಒಂದು ವೇಳೆ ಹೊಸ ಕೊರೊನಾ ರೂಪಾಂತರ ಬಂದ್ರೆ ಬೇಗನೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು.

ದುರ್ಬಲ ರೋಗ ನಿರೋಧಕ ಶಕ್ತಿ ಇರುವವರು ಮಾಸ್ಕ್‌ ಧರಿಸಿ

ದುರ್ಬಲ ರೋಗ ನಿರೋಧಕ ಶಕ್ತಿ ಇರುವವರು ಮಾಸ್ಕ್‌ ಧರಿಸಿ

ದುರ್ಬಲ ರೋಗ ನಿರೋಧಕ ಶಕ್ತಿ ಇರುವವರಿಗೆ ಅಥವಾ ಬೇರೆ ಆರೋಗ್ಯ ಸಮಸ್ಯೆಯಿದ್ದರೆ ಮಾಸ್ಕ್‌ ಧರಿಸುವುದು ಒಳ್ಳೆಯದು. ಏಕೆಂರೆ ಇಂಥವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ, ಆದ್ದರಿಂದ ಕಾಯಿಲೆ ಹರಡುವುದು.

ಮಾಸ್ಕ್‌ ಬೇಕು, ಆದರೆ ಅತ್ಯಾವಶ್ಯಕವಲ್ಲ, ಜಾಗ್ರತೆ ಇರಲಿ

ಮಾಸ್ಕ್‌ ಬೇಕು, ಆದರೆ ಅತ್ಯಾವಶ್ಯಕವಲ್ಲ, ಜಾಗ್ರತೆ ಇರಲಿ

ಕೋವಿಡ್‌ 19 ತಡೆಗಟ್ಟುವಲ್ಲಿ ಮಾಸ್ಕ್‌ ತುಂಬಾನೇ ಪ್ರಮುಖ ಪಾತ್ರವಹಿಸಿದೆ. ಆದರೆ ಈಗ ಕೊರೊನಾ ದೂರಾಗಿರುವುದರಿಂದ ಅತ್ಯಾವಶ್ಯಕವಲ್ಲ, ಆದರೆ ಇದನ್ನು ಧರಿಸುವುದರಿಂದ ಮತ್ತಿತರ ಕಾಯಿಲೆಯನ್ನೂ ತಡೆಗಟ್ಟಬಹುದು. ಆದ್ದರಿಂದ ಜನರ ಗುಂಪು ಇರುವ ಕಡೆ ಅಥವಾ ದೂಳು ಇರುವ ಕಡೆ ಓಡಾಡುವಾಗ ಮಾಸ್ಕ್‌ ಧರಿಸಿದರೆ ಕಾಯಿಲೆ ತಡೆಗಟ್ಟಬಹುದು.

English summary

List of states where Covid-19 mask not mandatory; Here's What Doctors Warn

List of states where Covid-19 mask not mandatory; Here's What Doctors Warn, read on...
Story first published: Monday, April 4, 2022, 11:14 [IST]
X
Desktop Bottom Promotion