For Quick Alerts
ALLOW NOTIFICATIONS  
For Daily Alerts

ಲ್ಯುಕೇಮಿಯಾದಿಂದ ರಿಷಿ ಕಪೂರ್ ನಿಧನ, ಈ ರೋಗಕ್ಕೆ ಕಾರಣ ಮತ್ತು ಲಕ್ಷಣಗಳು

|

24 ಗಂಟೆ ಅಂತರದಲ್ಲಿ ಬಾಲಿವುಡ್‌ನ ಎರಡು ದಿಗ್ಗಜ್ಜರು ಕಣ್ಮರೆಯಾಗಿದ್ದಾರೆ. ಒಬ್ಬರನ್ನೂ ಬಲಿ ತೆಗೆದುಕೊಂಡಿರುವುದು ಮಾತ್ರ ಕ್ಯಾನ್ಸರ್‌ ಎಂಬ ಹೆಮ್ಮಾರಿ. ಇರ್ಫಾನ್‌ ಖಾನ್‌ ಕರುಳಿನ ಸೋಂಕು ಮತ್ತು ಕ್ಯಾನ್ಸರ್‌ನಿಂದ ಸಾವನ್ನಪ್ಪಿದರೆ ರಿಷಿ ಕಪೂರ್‌ ರಕ್ತದ ಕ್ಯಾನ್ಸರ್‌ನಿಂದಾಗಿ ಕೊನೆಯುಸಿರು ಎಳೆದರು.

Leukaemia : Causes, Symptoms And Treatment

ರಕ್ತದ ಕ್ಯಾನ್ಸರ್ ಮಕ್ಕಳು ಹಾಗೂ ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದು ಪ್ರಾರಂಭದಲ್ಲಿ ಹೆಮಾಟೊಪಾಯಿಟಿಕ್ ಸಿಸ್ಟಮ್ ಅಂದರೆ ಮೂಳೆ ಮಜ್ಜೆಯ ಮೇಲೆ ಪ್ರಭಾವ ಬೀರಿ ಆರೋಗ್ಯಕರ ರಕ್ತಕಣಗಳಿಗೆ ಬದಲಾಗಿ ಕ್ಯಾನ್ಸರ್ ಕೋಶಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ.

ಲ್ಯುಕೇಮಿಯಾ ಅಂದರೆ ರಕ್ತಕ್ಯಾನ್ಸರ್‌ 5-7 ವರ್ಷಕ್ಕಿಂತ ಕಡಿಮೆ ವಯಸ್ಸಿ ಮಕ್ಕಳಲ್ಲಿ ಹಾಗೂ ವಯಸ್ಸಾದವರಲ್ಲಿ ಕಂಡು ಬರುತ್ತದೆ. ರಕ್ತಕ್ಯಾನ್ಸರ್‌ ಉಂಟಾದಾಗ ದೇಹ ಆರೋಗ್ಯವಾಗಿರಲು ಬೇಕಾದ ಕೆಂಪು ರಕ್ತಕಣಗಳು ಹಾಗೂ ಪ್ಲೇಟ್‌ಲೆಟ್‌ ಉತ್ಪತ್ತಿಗೆ ಅಡಚಣೆ ಉಂಟು ,ಮಾಡುತ್ತದೆ. ಇಲ್ಲಿ ರಕ್ತ ಕ್ಯಾನ್ಸರ್‌ಗೆ ಹೇಗೆ ಉಂಟಾಗುತ್ತದೆ, ಇದಕ್ಕೆ ಕಾರಣವೇನು, ಈ ರೋಗದ ಲಕ್ಷಣಗಳೇನು ಎಂಬುವುದರ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ರಕ್ತ ಕ್ಯಾನ್ಸರ್ ಹೇಗೆ ಉಂಟಾಗುತ್ತದೆ?

ರಕ್ತ ಕ್ಯಾನ್ಸರ್ ಹೇಗೆ ಉಂಟಾಗುತ್ತದೆ?

ರಕ್ತದಲ್ಲಿ ಮೂರು ಬಗೆಯ ಕಣಗಳಿವೆ. 1. ಬಿಳಿ ರಕ್ತಕಣ ಇದು ರೋಗಾಣುಗಳ ವಿರುದ್ಧ ಹೋರಾಡುತ್ತದೆ, ಎರಡನೇಯದು ಕೆಂಪು ರಕ್ತಕಣ, ಇದು ದೇಹಕ್ಕೆ ಆಮ್ಲಜನಕ ಪೂರೈಕೆ ಮಾಡುತ್ತದೆ. ಮೂರನೇಯದು ಪ್ಲೇಟ್‌ಲೆಟ್, ಇದು ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ.

ಪ್ರತಿದಿನ ನಮ್ಮ ಮೂಳೆಯ ಮಜ್ಜೆಗಳು ಬಿಲಿಯನ್‌ ಲೆಕ್ಕದಲ್ಲಿ ರಕ್ತಕಣಗಳನ್ನು ಉತ್ಪತ್ತಿ ಮಾಡುತ್ತವೆ, ಅವುಗಳಲ್ಲಿ ಕೆಂಪು ರಕ್ತಕಣಗಳು ಅಧಿಕವಿರುತ್ತದೆ. ಆದರೆ ರಕ್ತಕ್ಯಾನ್ಸರ್ ಇರುವವರಲ್ಲಿ ಬಿಳಿ ರಕ್ತಕಣಗಳು ಅವಶ್ಯಕ್ಕಿಂತ ಹೆಚ್ಚಾಗಿ ಉತ್ಪತ್ತಿಯಾಗುತ್ತದೆ. ಇವುಗಳು ಕ್ಯಾನ್ಸರ್‌ ಕಣಗಳಾಗಿರುತ್ತವೆ.

ಈ ಬಿಳಿ ರಕ್ತಕಣಗಳು ರೋಗಾಣುಗಳ ವಿರುದ್ಧ ಹೋರಾಡುವುದಿಲ್ಲ ಹಾಗೂ ದೇಹದ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಕೆಂಪು ರಕ್ತಕಣಗಳು ಕಡಿಮೆ ಉತ್ಪತ್ತಿಯಾಗುವುದರಿಂದ ದೇಹಕ್ಕೆ ಅವಶ್ಯಕವಾದ ಆಮ್ಲಜನಕ ಪೂರೈಕೆಯಾಗುವುದಿಲ್ಲ. ಪ್ಲೇಟ್‌ಲೆಟ್ ಕಡಿಮೆಯಾಗುವುದರಿಂದ ರಕ್ತವೂ ಹೆಪ್ಪುಗಟ್ಟುವುದಿಲ್ಲ.

 ರಕ್ತ ಕ್ಯಾನ್ಸರ್‌ನ ಎರಡು ಗುಂಪುಗಳು

ರಕ್ತ ಕ್ಯಾನ್ಸರ್‌ನ ಎರಡು ಗುಂಪುಗಳು

ರಕ್ತ ಕ್ಯಾನ್ಸರ್ ಎಷ್ಟು ಬೇಗ ಹರಡುತ್ತದೆಯೋ ಅದರ ಆಧಾರದ ಮೇಲೆ ಎರಡು ಗುಂಪುಗಳಾಗಿ ವಿಂಗಡಿಸಬಹುದು.

  • ಅಕ್ಯೂಟ್ ಲುಕೆಮಿಯಾ: ಇದರಲ್ಲಿ ಅಸಹಜ ರಕ್ತಕಣಗಳಿಂದಾಗಿ ರಕ್ತಕಣಗಳು ಸಹಜವಾಗಿ ಮಾಡುವ ಕಾರ್ಯ ಮಾಡಲು ಸಾಧ್ಯಚಾಗುವುದಿಲ್ಲ. ಇದು ಶೀಘ್ರದಲ್ಲಿಯೇ ಗಂಭೀರವಾಗಬಹುದು.
  • ಕ್ರೋನಿಕ್ ಲುಕೆಮಿಯಾ: ಇದರಲ್ಲಿ ಅಸಹಜ ರಕ್ತಕಣಗಳಿದ್ದರೂ ಇತರ ರಕ್ತಕಣಗಳು ಸಹಜವಾಗಿ ಕಾರ್ಯ ನಿವರ್ಹಿಸುತ್ತಿರುತ್ತದೆ. ಇದು ನಿಧಾನಕ್ಕೆ ಆರೋಗ್ಯವನ್ನು ಹಾಳು ಮಾಡುವುದು.
  • ಮತ್ತೊಂದು ಬಗೆಯನ್ನು ಲಿಂಪೋಸೈಟಿಕ್ , ಮೈಎಲೋಜೀನಸ್ ಲ್ಯುಕೇಮಿಯಾ ಎಂದು ಕರೆಯುತ್ತಾರೆ. ಇದರಲ್ಲಿ ಮೂಳೆ ಮಜ್ಜೆಗಳಲ್ಲಿ ಬಿಳಿ ರಕ್ತಕಣಗಳು ಅತ್ಯಧಿಕ ಉತ್ಪತ್ತಿಯಾಗುವುದು.

     ರಕ್ತ ಕ್ಯಾನ್ಸರ್‌ನ ವಿಧಗಳು

    ರಕ್ತ ಕ್ಯಾನ್ಸರ್‌ನ ವಿಧಗಳು

    • ಅಕ್ಯೂಟ್ (ತೀವ್ರವಾದ) ಲಿಂಪೋಸಯಟಿಕ್ ಲ್ಯುಕೇಮಿಯಾ: ಇದು ಮಕ್ಕಳಲ್ಲಿ ಕಂಡು ಬರುತ್ತದೆ. ಇದು ಬೆನ್ನ ಮೂಳೆಯಲ್ಲಿ ಹಾಗೂ ದುಗ್ಧರಸ ಗ್ರಂಥಿಗಳಲ್ಲಿ ಹರಡುವುದು.
    • ಅಕ್ಯೂಟ್ ಮೈಲೊಜೆನಸ್ ಲ್ಯುಕೇಮಿಯಾ: ಇದು ಮಕ್ಕಳಲ್ಲಿ ಹಾಗೂ ವಯಸ್ಕರಲ್ಲಿ ಕಂಡು ಬರುತ್ತದೆ.
    • ಕ್ರೋನಿಕ್ ಲಿಂಪೋಸೈಟಿಕ್ ಲ್ಯುಕೇಮಿಯಾ: ಇದು ವಯಸ್ಕರಲ್ಲಿ ಕಂಡು ಬರುವ ರಕ್ತದ ಕ್ಯಾನ್ಸರ್ ಆಗಿದೆ. ಇದು ಬಂದರೆ ಕೆಲವರಿಗೆ ಯಾವುದೇ ಚಿಕಿತ್ಸೆ ಪಡೆಯದಿದ್ದರೂ ಕೆಲವು ವರ್ಷಗಳವರೆಗೆ ಯಾವುದೇ ತೊಂದರೆ ಕಾಣಿಸಿಕೊಳ್ಳುವುದಿಲ್ಲ. ಕೆಲವರಲ್ಲಿ ದೇಹದಲ್ಲಿ ಸಹಜವಾಗಿ ರಕ್ತಕಣಗಳನ್ನು ಉತ್ಪತ್ತಿ ಮಾಡಲು ಸಾಧ್ಯವಾಗುವುದಿಲ್ಲ. ಇಂಥವರಿಗೆ ಚಿಕಿತ್ಸೆ ಅವಶ್ಯಕವಿದೆ.
    • ಕ್ರೋನಿಕ್ ಮೈಲೊಜೆನಸ್ ಲ್ಯುಕೇಮಿಯಾ: ಇದರಲ್ಲಿ ರಕ್ತ ಕ್ಯಾನ್ಸರ್‌ನ ಲಕ್ಷಣಗಳು ಗೊತ್ತಾಗುವುದೇ ಇಲ್ಲ, ರಕ್ತ ಪರೀಕ್ಷೆ ಮಾಡಿಸಿದಾಗ ಮಾತ್ರ ಗೊತ್ತಾಗುವುದು. 65 ವರ್ಷ ಮೇಲ್ಪಟ್ಟವರಲ್ಲಿ ಈ ಕ್ಯಾನ್ಸರ್‌ನ ಅಪಾಯ ಹೆಚ್ಚು.
    • ಲುಕೇಮಿಯಾ ಲಕ್ಷಣಗಳು

      ಲುಕೇಮಿಯಾ ಲಕ್ಷಣಗಳು

      • ಸುಸ್ತು, ತಲೆಸುತ್ತು
      • ಗುಳ್ಳೆಗಳು ಏಳುವುದು, ರಕ್ತಸ್ರಾವ
      • ಜ್ವರ
      • ಆಗಾಗ ಕಾಡುವ ಸೋಂಕು
      • ಮೂಳೆಗಳಲ್ಲಿ ನೋವು
      • ತಲೆನೋವು
      • ವಾಂತಿ
      • ತೂಕ ಇಳಿಕೆ
      • ಮೈ ಚಳಿಯಾಗುವುದು
      • ಉಸಿರಾಟಕ್ಕೆ ತೊಂದರೆ
      • ಗಂಟಲಿನ ದುಗ್ಧರಸಗಳಲ್ಲಿ ಊತ
      • ಯಾರಲ್ಲಿ ಅಪಾಯ ಹೆಚ್ಚು:

        ಯಾರಲ್ಲಿ ಅಪಾಯ ಹೆಚ್ಚು:

        ರಕ್ತ ಕ್ಯಾನ್ಸರ್‌ಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಕೆಲವೊಂದು ಕಾರಣಗಳಿಂದ ರಕ್ತ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು.

        • ಧೂಮಪಾನ
        • ವಿಕಿರಣಗಳು ತಾಗಿದರೆ
        • ಅನುವಂಶೀಯವಾಗಿಯೂ ಬರುವ ಸಾಧ್ಯತೆ ಇದೆ.
        • ಹೇರ್‌ ಡೈ
        • ಲ್ಯುಕೇಮಿಯಾ ಪತ್ತೆ ಹೇಗೆ

          ಲ್ಯುಕೇಮಿಯಾ ಪತ್ತೆ ಹೇಗೆ

          ರಕ್ತ ಪರೀಕ್ಷೆ: ಇದರಲ್ಲಿ ರಕ್ತಕಣಗಳ ಉತ್ಪತ್ತಿಯಲ್ಲಿ ಅಸಹಜತೆ ಕಂಡು ಬಂದರೆ ರಕ್ತ ಕ್ಯಾನ್ಸರ್ ಇದೆ ಎಂದು ಗೊತ್ತಾಗುವುದು.

          ಮೂಳೆ ಮಜ್ಜೆ ಬಯೋಸ್ಪೈ: ಇದರಲ್ಲಿ ಪೆಲ್ವಿಕ್ ಮೂಳೆಯಿಂದ ಉದ್ದವಾದ ಸೂಜಿ ಬಳಸಿ ಮಜ್ಜೆ ತೆಗೆದು ಪರೀಕ್ಷೆ ಮಾಡಲಾಗುವುದು

          ಸ್ಪೈನಲ್ ಟ್ಯಾಪ್: ಇದರಲ್ಲಿ ಬೆನ್ನು ಮೂಳೆಯ ದ್ರವವನ್ನು ತೆಗೆದು ಪರೀಕ್ಷೆ ನಡೆಸಿ ಕ್ಯಾನ್ಸರ್‌ ಪತ್ತೆ ಮಾಡಲಾಗುವುದು.

          ಇಮೇಜಿಂಗ್ ಟೆಸ್ಟ್: ಸಿಟಿ ಸ್ಕ್ಯಾನ್‌, ಎಂಆರ್‌ಐ ಲುಕೇಮಿಯಾ, PET ಸ್ಕ್ಯಾನ್ ಇವುಗಳ ಮೂಲಕ ತಿಳಿಯಲಾಗುವುದು.

          ಚಿಕಿತ್ಸೆ

          ಚಿಕಿತ್ಸೆ

          ರೋಗ ತೀವ್ರತೆ ನೋಡಿ ಚಿಕಿತ್ಸೆ ನೀಡಲಾಗುವುದು.

          • ಕೀಮೋಥೆರಪಿ
          • ರೇಡಿಯೇಷನ್
          • ಬಯೋಲಾಜಿಕ್ ಥೆರಪಿ
          • ಟಾರ್ಗೆಟಡ್ ಥೆರಪಿ
          • ಸ್ಟೆಮ್ ಸೆಲ್ ಟ್ರಾನ್ಸ್‌ಫ್ಲ್ಯಾಮಟ್
          • ಸರ್ಜರಿ.
English summary

Leukaemia : Causes, Symptoms And reatment

Bone marrow is responsible for the making of red blood cells (RBC), white blood cells (WBC) and platelets. In leukaemia, due to the immature cells or some defect in the cells of the bone marrow, the abnormal and functionless WBC are produced which are unable to fight against the infection and defend our body against foreign substances
X
Desktop Bottom Promotion