For Quick Alerts
ALLOW NOTIFICATIONS  
For Daily Alerts

ವಿಟಮಿನ್ D3 ಕೊರತೆ : ವಿಟಮಿನ್ D3 ಸಪ್ಲಿಮೆಂಟ್ಟ್ ತೆಗೆದುಕೊಂಡ್ರೆ ಕೊರತೆ ನೀಗುತ್ತಾ?

By Kiran Dondale
|

ಮನುಷ್ಯ ಆರೋಗ್ಯವಾಗಿರಲು ದೇಹಕ್ಕೆ ಎಲ್ಲಾ ರೀತಿಯ ಜೀವಸತ್ವಗಳ ಅವಶ್ಯಕತೆ ಇದೆ. ಒಂದು ಕಡಿಮೆಯಾದರೂ ಸಮಸ್ಯೆಯೇ, ಹೆಚ್ಚಾದರೂ ಸಮಸ್ಯೆಯೇ. ಹೀಗಾಗಿ ಇದು ಸಮತೋಲನದಲ್ಲಿ ಇರಬೇಕಿದೆ. ಇಂತಹ ಜೀವ ಸತ್ವಗಳ ಪೈಕಿ ವಿಟಮಿನ್ ಡಿ 3 ಕೂಡ ಒಂದು. ಹೌದು, ವಿಟಮಿನ್ ಡಿ3 ಇತರ ಜೀವಸತ್ವಗಳಿಗಿಂತ ಭಿನ್ನವಾಗಿ ಹಾರ್ಮೋನ್‌ನಂತೆ ಕಾರ್ಯನಿರ್ವಹಿಸುತ್ತದೆ. ಮೂತ್ರಪಿಂಡಗಳಿಂದ ಕ್ಯಾಲ್ಸಿಯಂನಂತಹ ಎಲ್ಲಾ ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ಇದು ವಿಶೇಷ ಪಾತ್ರ ವಹಿಸುತ್ತದೆ.

ವಿಟಮಿನ್ ಡಿ 3 ನಮ್ಮ ಮೂಳೆಗಳು ಮತ್ತು ಸ್ನಾಯುಗಳು ಸೇರಿದಂತೆ ದೇಹದ ಎಲ್ಲಾ ಭಾಗಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರ ಕೊರತೆಯು ದೇಹದಲ್ಲಿ ಅನೇಕ ರೋಗಗಳನ್ನು ಉಂಟುಮಾಡುತ್ತದೆ. ವಿಟಮಿನ್ ಡಿ 3 ಕೊರತೆಯು ಮೂಳೆ ನೋವಿಗೆ ಪ್ರಮುಖ ಕಾರಣವಾಗಿದೆ. ತೀವ್ರವಾದ ವಿಟಮಿನ್-ಡಿ 3 ಕೊರತೆಯು ಸ್ವಯಂ ನಿರೋಧಕ ಸಮಸ್ಯೆಗಳು, ಖಿನ್ನತೆ ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರ ಕೊರತೆಯೂ ಯುವಕರ ಬೆಳವಣಿಗೆ ಮತ್ತು ಮಾನಸಿಕ ಆರೋಗ್ಯಕ್ಕೆ ಅಡ್ಡಿಯಾಗಬಹುದು. ನಮ್ಮಲ್ಲಿ 85ರಷ್ಟು ಶೇಕಡ ಭಾರತೀಯರಲ್ಲಿ ವಿಟಮಿನ್ ಡಿ 3 ಕೊರತೆ ಇದೆ.

ಇದು ನಮ್ಮ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಉರಿಯೂತದ ಸೈಟೊಕಿನ್ ಗಳನ್ನು ನಿಗ್ರಹಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ವರದಿಯೊಂದು ಹೇಳಿದೆ. ಇನ್ನು ಸೂರ್ಯನ ಬೆಳಕು, ವಿವಿಧ ಆಹಾರಗಳಿಂದ ನಮಗೆ ವಿಟಮಿನ್ ಡಿ3 ಸಿಗುತ್ತದೆ. ಹಾಗಾದರೆ ವಿಟಮಿನ್ ಡಿ3 ಕಡಿಮೆಯಾದರೆ ಏನು ಸಂಭವಿಸುತ್ತದೆ? ಯಾವ ಆಹಾರಗಳಲ್ಲಿ ಮನುಷ್ಯನಿಗೆ ವಿಟಮಿನ್ ಡಿ 3 ಪೋಷಕಾಂಶ ಸಿಗುತ್ತದೆ? ವಿಟಮಿನ್ ಡಿ 3 ಇರುವ ಸಪ್ಲಿಮೆಂಟ್ ಗಳು ಉತ್ತಮವಾ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

​ವಿಟಮಿನ್ ಡಿ 3 ಕೊರತೆಗೆ ಕಾರಣಗಳೇನು?

​ವಿಟಮಿನ್ ಡಿ 3 ಕೊರತೆಗೆ ಕಾರಣಗಳೇನು?

ನಮ್ಮ ದೇಶದಲ್ಲಿ ಸೂರ್ಯನ ಕಿರಣ ಹೇರಳವಾಗಿ ಲಭ್ಯವಿದ್ದರೂ, ವಿಟಮಿನ್ ಡಿ 3 ಕೊರತೆ ಸಮಸ್ಯೆ ಕಾಡುತ್ತಿದೆ. ಇದರ ಕೊರತೆಗೆ ಹಲವು ಕಾರಣಗಳು ಇದೆ. ಮುಖ್ಯವಾಗಿ ನಮ್ಮ ಜೀವನ ಶೈಲಿ ಕೂಡ ಇದಕ್ಕೆ ಕಾರಣ. ಬಹುಪಾಲು ಜನರು ಮನೆಯೊಳಗೆ ಇರುವುದು ಅಥವಾ ಉದ್ದೇಶಪೂರ್ವಕವಾಗಿ ಬಿಸಿಲಿನಲ್ಲಿ ಹೋಗದಿರುವುದು ಅಥವಾ ಸಾಕಷ್ಟು ಸೂರ್ಯನ ಬೆಳಕನ್ನು ಪಡೆಯದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಅಲ್ಲದೇ ಬಿಸಿಲಿನಿಂದ ಆಗುವ ಲಾಭದ ಬಗ್ಗೆ ಹಾಗೂ ಸೂರ್ಯನ ಬಿಸಿಲಿನ ಬಗ್ಗೆಗ್ಗಿನ ಅರಿವು ಇಲ್ಲದಿರುವುದು ಕೂಡ ವಿಟಮಿನ್ ಡಿ3 ಕೊರತೆಗೆ ಕಾರಣವಾಗಿದೆ. ಇನ್ನು ಸನ್ ಸ್ಕ್ರೀನ್ ಬಳಕೆಯು ವಿಟಮಿನ್ ಡಿ 3 ಉತ್ಪಾದನೆಯನ್ನು ತಡೆಯುತ್ತದೆ ಎಂದು ಪರಿಣಿತರು ಹೇಳುತ್ತಾರೆ. ಆದ್ದರಿಂದ ಸೂರ್ಯನ ಶಾಖವನ್ನು ಪಡೆಯುವ ಸಮಯದಲ್ಲಿ ನೀವು ಸನ್ ಸ್ಕ್ರೀನ್ ಬಳಸುವುದು ಉತ್ತಮವಲ್ಲ. ಇದು ಕೂಡ ವಿಟಮಿನ್ ಡಿ ತಡೆಯಲು ಕಾರಣವಾಗಿದೆ.

ವಿಟಮಿನ್ ಡಿ3 ಕೊರತೆಯಿಂದಾಗುವ ಆಗುವ ಸಮಸ್ಯೆ ಏನು?

ವಿಟಮಿನ್ ಡಿ3 ಕೊರತೆಯಿಂದಾಗುವ ಆಗುವ ಸಮಸ್ಯೆ ಏನು?

ವಿಟಮಿನ್ ಡಿ ಕೊರತೆ ಇದ್ದರೆ ನೀವು ಆಗಾಗ್ಗೆ ಕಾಯಿಲೆ ಬೀಳುತ್ತಿರುತ್ತೀರಿ, ನಿಮಗೆ ಆಯಾಸವಾಗುವ ಅನುಭವಕ್ಕೆ ಬರುತ್ತದೆ, ಎಲುಬುಗಳಲ್ಲಿ ಮತ್ತು ಸ್ನಾಯುಗಳಲ್ಲಿ ನೋವು ಇರು ಫೀಲ್ ಆಗುತ್ತದೆ. ಧೀರ್ಘಕಾಲದ ವಿಟಮಿನ್ ಡಿ ಕೊರತೆಯಿಂದಾಗಿ ಕರುಳಿನಲ್ಲಿ ಕ್ಯಾಲ್ಸಿಯಂ ಮತ್ತು ಪೊಟ್ಯಾಷಿಯಂ ನ ಹೀರುವಿಕೆ ಮತ್ತು ಶೇಖರಣೆ ಕಡಿಮೆಯಾಗತೊಡಗುತ್ತವೆ. ಇದರಿಂದ ಮೂಳೆಗಳು ದುರ್ಬಲಗೊಂಡು, ಚಿಕ್ಕ ಮಕ್ಕಳಲ್ಲಿ ರಿಕೆಟ್ಸ್(ಮೆದುಮೂಳೆ ರೋಗ) ಮತ್ತು ವಯಸ್ಕರಲ್ಲಿ ಆಸ್ಟಿಯೋಮಲೇಶಿಯಾ(ಅಸ್ಥಿಮೃದುತ್ವ) ಮತ್ತು ಆಸ್ಟಿಯೊಪೊರೋಸಿಸ್(ಅಸ್ಥಿರಂಧ್ರತೆ) ಎಂಬ ಸ್ಥಿತಿಗೆ ಕಾರಣವಾಗುತ್ತದೆ. ಆಗಾಗ್ಗೆ ಅನಾರೋಗ್ಯ-ಆರಂಭಿಕ ಆಯಾಸ,-ಮೂಳೆಗಳು ಮತ್ತು ಬೆನ್ನು ನೋವು,-ಆಸ್ಟಿಯೊಪೊರೋಸಿಸ್ (ಮೂಳೆ ಮುರಿತ) ರೋಗ,-ಸ್ನಾಯು ನೋವು-ಅನಿಯಮಿತ ಮುಟ್ಟು-ಖಿನ್ನತೆ-ಬಂಜೆತನ-ಕೂದಲು ಉದುರುವಿಕೆ-ಚರ್ಮ ಕಪ್ಪಾಗುವುದು ಇವೆಲ್ಲಾ ವಿಟಮಿನ್ ಡಿ ಕೊರತೆಯಿಂದಾಗುವ ಉಂಟಾಗುವ ರೋಗಗಳು.

ಹೀಗೆ ಮಾಡಿದರೆ ವಿಟಮಿನ್ ಡಿ3 ಕೊರತೆಯಿಂದ ಪಾರು!

ಹೀಗೆ ಮಾಡಿದರೆ ವಿಟಮಿನ್ ಡಿ3 ಕೊರತೆಯಿಂದ ಪಾರು!

ವಿಟಮಿನ್ ಡಿ3 ಕೊರತೆಯನ್ನು ವಿಟಮಿನ್ ಡಿ3ಗೆ ಸಂಬಂಧಪಟ್ಟ ಚುಚ್ಚುಮದ್ದಿನಿಂದ ಸರಿಪಡಿಸಲಾಗುತ್ತದೆ. ಸ್ವಲ್ಪ ದಿನಗಳವರೆಗೆ ವಿಟಮಿನ್ ಡಿ ಸಪ್ಲಿಮೆಂಟ್ ಮಾತ್ರೆಗಳು ಸಹ ತೆಗೆದುಕೊಳ್ಳಬಹುದಾಗಿದೆ. ಅಲ್ಲದೇ ಸೂರ್ಯನ ಬೆಳಕಿಗೆ ಶರೀರವನ್ನು ಒಡ್ಡಿಕೊಳ್ಳುವುದು, ವಿಟಮಿನ್ ಡಿ3 ಹೆಚ್ಚು ಹೊಂದಿರುವ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳವುದರಿಂದ ವಿಟಮಿನ್ ಡಿ3 ಕೊರತೆ ನೀಗಿಸಬಹುದು. ಇನ್ನು ವಿಟಮಿನ್ ಡಿ3 ಕೊರತೆ ನೀಗಿಸಲು ಹೆಚ್ಚು ಮೀನು ಅಥವಾ ಡೈರಿ ಉತ್ಪನ್ನಗಳನ್ನು ಸೇವಿಸಿ. ಮುಂಜಾನೆಯ ಬಿಸಿಲಿಗೆ ಮೈಯೊಡ್ಡಿ, ಅಣಬೆಗಳನ್ನು ತಿನ್ನಿರಿ, ಪಾಶ್ಚರೀಕರಿಸಿದ ಹಾಲು ಕುಡಿಯಿರಿ, ಪ್ರತಿದಿನ ಕಿತ್ತಳೆ ರಸವನ್ನು ಕುಡಿಯಿರಿ, ಮೊಟ್ಟೆಯ ಹಳದಿ ಲೋಳೆಯನ್ನು ಸೇವಿಸಿ, ಧಾನ್ಯಗಳನ್ನು ಸೇವಿಸಿ ಈ ಮೂಲಕ ಈ ಸಮಸ್ಯೆಗೆ ಇತಿಶ್ರೀ ಹಾಡಬಹುದು.

ವಿಟಮಿನ್ ಡಿ 3 ಸಪ್ಲಿಮೆಂಟ್ಟ್ ತೆಗೆದುಕೊಳ್ಳುವುದು ಉತ್ತಮವೇ?

ವಿಟಮಿನ್ ಡಿ 3 ಸಪ್ಲಿಮೆಂಟ್ಟ್ ತೆಗೆದುಕೊಳ್ಳುವುದು ಉತ್ತಮವೇ?

ವಿಟಮಿನ್ ಡಿ3 ಕೊರತೆಯಾದರೆ ಇದಕ್ಕೆ ಸಂಬಂಧಪಟ್ಟ ಸಪ್ಲಿಮೆಂಟ್ ತೆಗೆದುಕೊಂಡರೆ ಸರಿಯಾಗುತ್ತದೆ ಅನ್ನುವುದು ಇತ್ತೀಚಿನ ದಿನಗಳಲ್ಲಿ ಸಹಜವಾಗಿದೆ. ವೈದ್ಯರುಗಳು ಕೂಡ ಈ ಬಗ್ಗೆ ಸಲಹೆ ನೀಡುತ್ತಾರೆ. ಆದರೆ ಪರಿಣಿತರ ಪ್ರಕಾರ ಕೆಲವೊಂದು ಬಾರಿ ಸಪ್ಲಿಮೆಂಟ್ ಒಳ್ಳೆಯದು ಎನ್ನುತ್ತಾರೆ. ಆದರೆ ಎಲ್ಲರಿಗೂ ಇದು ಸೂಟ್ ಆಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲದೆ ಕೆಲವರಿಗೆ ಸಪ್ಲಿಮೆಂಟ್ ತೆಗೆದುಕೊಂಡರೆ, ವಾಕರಿಕೆ, ವಾಂತಿ, ಅತಿಸಾರ, ಸ್ನಾಯು ದೌರ್ಬಲ್ಯ, ನಿರ್ಜಲೀಕರಣ, ಮೂತ್ರಪಿಂಡದ ಕಲ್ಲುಗಳು, ಮೂತ್ರಪಿಂಡದ ವೈಫಲ್ಯ, ಅನಿಯಮಿತ ಹೃದಯ ಬಡಿತ ಮತ್ತು ಇತರ ಆರೋಗ್ಯ ಸಮಸ್ಯೆಗಳು ಕಾಡಬಹುದು ಎನ್ನುತ್ತಾರೆ. ಅದಾಗ್ಯೂ ವೈದ್ಯರ ಸಲಹೆ ಹಾಗೂ ಸೂಚನೆ ಮೇರೆಗೆ ಸಪ್ಲಿಮೆಂಟ್ ತೆಗೆದುಕೊಳ್ಳಬಹುದು ಎಂದು ತಜ್ಞರು ತಿಳಿಸಿದ್ದಾರೆ. ಅಲ್ಲದೇ ಸಪ್ಲಿಮೆಂಟ್ ಗಿಂತಲೂ ವಿಟಮಿನ್ ಡಿ ದೊರೆಯುವ ನೈಸರ್ಗಿಕ ಆಹಾರ ಸೇವಿಸುವುದು ಉತ್ತಮ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

English summary

Is taking a vitamin D3 supplement a good idea in kannada?

Is taking a vitamin D3 supplement a good idea in kannada?, Read on....
X
Desktop Bottom Promotion