For Quick Alerts
ALLOW NOTIFICATIONS  
For Daily Alerts

ಕೊರೊನಾ ಲಕ್ಷಣಗಳಿದ್ದರೆ ಕೋವಿಡ್‌ 19 ಲಸಿಕೆ ಪಡೆಯಬಹುದೇ?

|

ಒಂದು ಕಡೆ ಕೊರೊನಾವೈರಸ್‌ ಆರ್ಭಟ ಹೆಚ್ಚಾದರೆ ಮತ್ತೊಂದೆಡೆ ಮತ್ತೊಂದೆಡೆ ಅದನ್ನು ಮಣಿಸಲು ಅತೀ ಹೆಚ್ಚು ಲಸಿಕೆ ಕೇಂದ್ರಗಳನ್ನು ತೆರೆಯಲಾಗಿದೆ. ಒಂದೇ ದಿನ 73, 600 ಲಸಿಕೆ ಕೇಂದ್ರಗಳು ಕಾರ್ಯನಿರ್ವಹಿಸುವ ಮೂಲಕ ಲಸಿಕೆ ಕೇಂದ್ರಗಳ ಸಂಖ್ಯೆ ಗರಿಷ್ಠಮಟ್ಟ ತಲುಪಿದೆ.

ಕೊರೊನಾ ಲಸಿಕೆಯನ್ನು ಭಾರತದಲ್ಲಿ ಹಂತ-ಹಂತವಾಗಿ ನೀಡುತ್ತಿದ್ದು ಮೂರನೇ ಹಂತದಲ್ಲಿ 45 ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಲಸಿಕೆ ಲಭ್ಯವಾಗಿತ್ತು. ಇದೀಗ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡುತ್ತಿದೆ. ಜನವರಿ 16ರಿಂದ ಕೊರೊನಾ ಲಸಿಕೆ ನೀಡಲಾರಂಭಿಸಿತ್ತು, ಇದೀಗ 12 ಕೋಟಿಗೂ ಅಧಿಕ ಜನರು ಕೊರೊನಾ ಲಸಿಕೆ ಪಡೆದಿದ್ದಾರೆ.

ಕೊರೊನಾ ಲಸಿಕೆಯನ್ನು ಯಾರು ಪಡೆಯಬೇಕು, ಯಾರು ಪಡೆಯಬಾರದು ಎಂಬ ಮಾರ್ಗಸೂಚಿಯನ್ನು ಸರ್ಕಾರ ನೀಡಿದೆ. ಆದರೆ ಕೊರೊನಾ ಲಕ್ಷಣಗಳು ಕಂಡು ಬಂದವರು ಲಸಿಕೆ ಪಡೆಯಬಹುದೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ, ಈ ಕುರಿತು ತಜ್ಞರು ಏನು ಹೇಳಿದ್ದಾರೆ ಎಂದು ನೋಡೋಣ:

ಕೋವಿಡ್‌ ಲಕ್ಷಣಗಳು ಕಂಡು ಬಂದರೆ ಲಸಿಕೆ ಪಡೆಯುವುದನ್ನು ಮುಂದೂಡಿ

ಕೋವಿಡ್‌ ಲಕ್ಷಣಗಳು ಕಂಡು ಬಂದರೆ ಲಸಿಕೆ ಪಡೆಯುವುದನ್ನು ಮುಂದೂಡಿ

CNBC-TV18 ಮಾತನಾಡಿರುವ ಅಪೊಲೋ ಹೋಮ್‌ ಹೆಲ್ತ್‌ಕೇರ್‌ನ ಸಿಇಓ ಡಾ. ಮಹೇಶ್‌ ಜೋಷಿಯವರು ಕೊರೊನಾ ಲಕ್ಷಣಗಳು ಕಂಡು ಬಂದರೆ ಲಸಿಕೆ ತೆಗೆಯಬಹುದೇ ಇಲ್ಲವೇ ಎಂಬುವುದರ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಸಿಕ್ಕಿಲ್ಲ, ಆದರೆ ಕೊರೊನಾ ಲಸಿಕೆಗಳು ಕಂಡು ಬಂದರೆ ಕೊರೊನಾ ಲಸಿಕೆಯನ್ನು ಪಡೆಯುವುದು ಮುಂದೂಡಿ ಎಂಬ ಸಲಹೆ ನೀಡಿದ್ದಾರೆ.

ಮ್ಯಾಕ್ಸ್ ಆಸ್ಪತ್ರೆಯ ಪ್ರಿನ್ಸಿಪಲ್ ಡೈರೆಕ್ಟರ್ ಆಗಿರುವ ಡಾ. ವಿವೇಕ್ ನಂಗಿಯಾ ಅವರು ಕೂಡ 'ಕೋವಿಡ್‌ನ ಚಿಕ್ಕ ಲಕ್ಷಣಗಳು ಕಂಡು ಬಂದರೂ ಲಸಿಕೆ ಪಡೆಯುವುದನ್ನು ಮುಂದೂಡಿ' ಎಂದು ಸಲಹೆ ನೀಡಿದ್ದಾರೆ.

ಲಸಿಕೆ ಪಡೆಯಲು ಆತುರ ಬೇಡ

ಲಸಿಕೆ ಪಡೆಯಲು ಆತುರ ಬೇಡ

ಲಸಿಕೆಯನ್ನು ಪಡೆಯಲು ನೀವು ಆತುರ ಪಡಬೇಕಾದ ಅವಶ್ಯಕತೆಯಿಲ್ಲ. ಏನಾದರೂ ಅನಾರೋಗ್ಯವಿದ್ದರೆ ಅಂದರೆ ಜ್ವರ, ಕೆಮ್ಮು ಈ ರೀತಿಯ ಸಮಸ್ಯೆಗಳಿದ್ದರೆ ಅದು ಕಡಿಮೆಯಾಗಿ ವೈದ್ಯರ ಸಲಹೆ ಪಡೆದು ತೆಗೆದುಕೊಳ್ಳಿ. ಇನ್ನು ಕೊರೊನಾದಿಂದ ಚೇತರಿಸಿಕೊಂಡಿದ್ದರೆ 12 ವಾರಗಳ ಬಳಿಕ ಲಸಿಕೆ ಪಡೆದುಕೊಳ್ಳಿ. ಲಸಿಕೆಯನ್ನು ಪಡೆಯಲು ತಡ ಮಾಡಿದಷ್ಟು ಒಳ್ಳೆಯದು ಎಂದು ಅಧ್ಯಯನ ಹೇಳಿದೆ.

ಮೇ. 1ರಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ

ಮೇ. 1ರಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ

ಏಪ್ರಿಲ್ 19ಕ್ಕೆ ಕೇಂದ್ರ ಸರ್ಕಾರವು ಮೇ.1ರಿಮದ 18 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ಸಿಗಿಲಿದೆ ಎಂದು ಘೋಷಿಸಿದೆ. ಆದರೆ ಗರ್ಭಿಣಿಯರು, ಎದೆ ಹಾಲುಣಿಸುವ ತಾಯಂದಿರು ಈ ಲಸಿಕೆ ಪಡೆಯುವಂತಿಲ್ಲ.

ಕೊರೊನಾ ನಿಯಂತ್ರಣಕ್ಕೆ ಲಸಿಕೆ ಪಡೆಯುವಷ್ಟೇ, ಮುನ್ನೆಚ್ಚರಿಕೆಯೂ ಅವಶ್ಯಕ

ಕೊರೊನಾ ನಿಯಂತ್ರಣಕ್ಕೆ ಲಸಿಕೆ ಪಡೆಯುವಷ್ಟೇ, ಮುನ್ನೆಚ್ಚರಿಕೆಯೂ ಅವಶ್ಯಕ

ಕಳೆದ ಒಂದು ವಾರದಿಂದ ದೇಶದಲ್ಲಿ ಕೊರೊನಾ ಪ್ರಕರಣಗಳು ತುಂಬಾನೇ ಹೆಚ್ಚಾಗುತ್ತವೆ. ಇದಕ್ಕೆ ಜನರ ನಿರ್ಲಕ್ಷ್ಯವೇ ಒಂದು ಕಾರಣವಾಗಿದೆ. ಲಸಿಕೆ ಪಡೆದವರು ಕೂಡ ಕೆಲವು ವಾರಗಳವರೆಗೆ ಹೊರಗಡೆ ಹೋಗುವಾಗ ತಪ್ಪದೆ ಮಾಸ್ಕ್‌ ಧರಿಸಬೇಕು, ದೈಹಿಕ ಅಂತರ ಕಾಯ್ದುಕೊಳ್ಳಬೇಕು, ಸ್ಯಾನಿಟೈಸರ್ ಬಳಸಬೇಕು.

ಆದರೆ ಜನರು ಈ ನಿಯಮಗಳನ್ನು ಪಾಲಿಸದೇ ಇರುವುದು ಕೊರೊನಾ ಹೆಚ್ಚಾಗುತ್ತಿರಲು ಪ್ರಮುಖ ಕಾರಣವಾಗಿದೆ.

ಇನ್ನು ಮುಂದೆ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸಿಗುವುದರಿಂದ ಕೊರೊನಾವನ್ನು ಭಾರತವು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗಬಹುದು. ಆದರೆ ಪರಿಸ್ಥಿತಿ ಮೊದಲಿನಂತೆ ಆಗುವವರೆಗೆ ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ.

Source:Mpneycontrol.com

English summary

Is It Safe to Get The Vaccine If You Had COVID-19 symptoms? Doctors explained in Kannada

Is it safe to get the vaccine if you had COVID-19 symptoms? Doctors explained....
X
Desktop Bottom Promotion