For Quick Alerts
ALLOW NOTIFICATIONS  
For Daily Alerts

ಈ ಹಣ್ಣುಗಳನ್ನು ನಿತ್ಯ ಸೇವಿಸಿದರೆ ನಿಮಗೆ ಎಂದಿಗೂ ರಕ್ತಹೀನತೆ ಸಮಸ್ಯೆ ಕಾಡುವುದೇ ಇಲ್ಲ

|

ನಾವು ಆರೋಗ್ಯವಾಗಿದ್ದರೆ ಎಲ್ಲಾ ಭಾಗ್ಯಗಳನ್ನು ಪಡೆಯಬಹುದು. ಆದರೆ ನಾವು ಎಷ್ಟೇ ಆರೋಗ್ಯಕರ ಆಹಾರ ಸೇವಿಸಿದರೂ ಕೆಲವು ಆನಾರೋಗ್ಯಗಳು ನಮ್ಮನ್ನು ಬಾಧಿಸದೇ ಬಿಡದು.

ಇತ್ತೀಚೆಗೆ ಹಲವರನ್ನು ಕಾಡುವ ಸಮಸ್ಯೆಗಳಲ್ಲಿ ಒಂದು ರಕ್ತದ ಕೊರತೆ. ಇದರ ಮುನ್ಸೂಚನೆ ಎಂದರೆ ನಿಮ್ಮ ಚರ್ಮವು ತುಂಬಾ ಫೇರ್ ಆಗಿದ್ದರೆ ಮತ್ತು ಮುಖದ ಹೊಳಪು ಸಹ ಕಣ್ಮರೆಯಾಗುತ್ತಿದ್ದರೆ, ಅದು ದೇಹದಲ್ಲಿ ರಕ್ತದ ಕೊರತೆಯಿಂದ ಕೂಡ ಆಗಿರಬಹುದು ಎಚ್ಚರ.

ರಕ್ತದ ಕೊರತೆಯಿಂದಾಗಿ, ದೇಹದಲ್ಲಿ ವಿವಿಧ ರೀತಿಯ ಸಮಸ್ಯೆಗಳು ಸಂಭವಿಸುತ್ತವೆ. ದೇಹದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ವಿವಿಧ ರೀತಿಯ ಸಮಸ್ಯೆಗಳು ಸಂಭವಿಸಲು ಪ್ರಾರಂಭಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಆರೋಗ್ಯ ತಜ್ಞರು ಕಬ್ಬಿಣದ ಭರಿತ ಆಹಾರವನ್ನು ತಿನ್ನಲು ಸಲಹೆ ನೀಡುತ್ತಾರೆ. ದೇಹದಲ್ಲಿನ ರಕ್ತದ ಕೊರತೆಯನ್ನು ನೀಗಿಸಲು ಈ ಹಣ್ಣುಗಳು ಅತ್ಯುತ್ತಮ ಪರಿಹಾರವಂತೆ, ಯಾವುದು ಮುಂದೆ ನೋಡೋಣ:

ಬಾಳೆಹಣ್ಣು

ಬಾಳೆಹಣ್ಣು

ದೇಹದಲ್ಲಿ ಕಬ್ಬಿಣದ ಕೊರತೆಯನ್ನು ನೀಗಿಸಲು ಬಾಳೆಹಣ್ಣನ್ನು ಸೇವಿಸಬಹುದು ಎಂದು ವೈದ್ಯರು ಹೇಳುತ್ತಾರೆ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಬಹುದು. ಇದು ಕಬ್ಬಿಣ ಮತ್ತು ಫೋಲಿಕ್ ಆಮ್ಲದ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದರಿಂದಾಗಿ ನಿಮ್ಮ ದೇಹದಲ್ಲಿ ರಕ್ತದ ಕೊರತೆ ಇರುವುದಿಲ್ಲ.

ಕಿತ್ತಳೆ

ಕಿತ್ತಳೆ

ವಿಟಮಿನ್-ಸಿ ಅಂಶವು ಕಿತ್ತಳೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ಇದನ್ನು ಸೇವಿಸುವುದು ಬಹಳ ಪ್ರಯೋಜನಕಾರಿ.ನೀವು ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಪೂರೈಸಲು ಬಯಸಿದರೆ, ಪ್ರತಿದಿನ ಒಂದು ಕಿತ್ತಳೆಯನ್ನು ಸೇವಿಸಲೇಬೇಕು. ಅದರಲ್ಲೂ ಕಿತ್ತಳೆ ಯಾವ ಕಾಲದಲ್ಲಿ ಬಿಡುತ್ತದೆಯೋ ಅದೇ ಕಾಲದಲ್ಲಿ ಸೇವಿಸಿದರೆ ಹೆಚ್ಚು ಪ್ರಯೋಜನಕಾರಿ.

ದಾಳಿಂಬೆ

ದಾಳಿಂಬೆ

ದಾಳಿಂಬೆಯನ್ನು ಸೇವಿಸುವುದರಿಂದ ದೇಹದಲ್ಲಿನ ರಕ್ತದ ಕೊರತೆಯನ್ನು ನೀಗಿಸಬಹುದು. ಕಬ್ಬಿಣ, ವಿಟಮಿನ್-ಎ, ವಿಟಮಿನ್-ಸಿ, ವಿಟಮಿನ್-ಇ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ನಿಮ್ಮ ದೇಹದಲ್ಲಿನ ರಕ್ತದ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಸಹ ಹೆಚ್ಚುತ್ತದೆ. ನಿಮ್ಮ ದೇಹದಲ್ಲಿ ರಕ್ತದ ಕೊರತೆಯಿದ್ದರೆ ದಾಳಿಂಬೆ ರಸವನ್ನು ಹೆಚ್ಚು ಸೇವಿಸಿ.

ಪೀಚ್

ಪೀಚ್

ಪೀಚ್ ಅನ್ನು ಸೇವಿಸುವ ಮೂಲಕ ದೇಹದಿಂದ ರಕ್ತದ ಕೊರತೆಯನ್ನು ನಿವಾರಿಸಬಹುದು. ಪೀಚ್‌ನಲ್ಲಿ ವಿಟಮಿನ್-ಸಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಇದನ್ನು ಸೇವಿಸುವ ಮೂಲಕ ನೀವು ಕೆಂಪು ರಕ್ತ ಕಣಗಳ ನಷ್ಟದಿಂದ ದೇಹವನ್ನು ರಕ್ಷಿಸಬಹುದು. ಇದಲ್ಲದೆ, ಪೀಚ್ ತೂಕವನ್ನು ಕಡಿಮೆ ಮಾಡಲು ಮತ್ತು ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ.

 ಆಪಲ್‌

ಆಪಲ್‌

ದೇಹದಿಂದ ರಕ್ತದ ಕೊರತೆಯನ್ನು ನಿಯಂತ್ರಿಸಲು ನೀವು ನಿತ್ಯ ಒಂದು ಆಪಲ್‌ ಅನ್ನು ಸೇವಿಸಬೇಕು. ಇದರ ಸೇವನೆಯು ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ದೇಹದಲ್ಲಿ ರಕ್ತದ ಕೊರತೆಯನ್ನು ಹೆಚ್ಚಿಸಲು ಬಯಸಿದರೆ, ಪ್ರತಿದಿನ 1 ಸೇಬನ್ನು ಸಿಪ್ಪೆಯ ಸಮೇತ ಸೇವಿಸಿ. ಇದು ನಿಮ್ಮ ದೇಹದಲ್ಲಿ ಕಬ್ಬಿಣದ ಪ್ರಮಾಣವನ್ನು ಹೆಚ್ಚಿಸುತ್ತದೆ.

English summary

Iron Rich Foods to Include in your Diet to Increase Blood in Kannada

Here we are discussing about Iron Rich Foods to Include in your Diet to Increase Blood in Kannada. Read more.
Story first published: Saturday, December 3, 2022, 15:43 [IST]
X
Desktop Bottom Promotion