For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಕೋವಿಡ್‌ 19ನಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?

|

ಇದುವರೆಗೂ ಮಾನವ ಜನಾಂಗ ಭೂಕಂಪ, ಸುನಾಮಿ, ಜ್ವಾಲಾಮುಖಿ, ಬಿರುಗಾಳಿ, ಚಂಡಮಾರುತದಂತಹ ಮಹಾನ್ ಪ್ರಾಕೃತಿಕ ವಿಕೋಪಗಳನ್ನ ಅನುಭವಿಸಿದೆ. ಬಹುಶ: ಇವುಗಳ ಇತಿಹಾಸ ಸಾವಿರ ವರ್ಷಗಳದ್ದೇ ಆಗಿರಬಹುದು. ಆದರೆ ಈ ಬಾರಿ, ಇಸವಿ 2020 ರಲ್ಲಿ, ಬಹುಶ: ಮಾನವ ಜನಾಂಗ ಹಿಂದೆಂದೂ ಕಂಡುಕೇಳರಿಯದೇ ಇರೋವಂಥ "ಕೊರೋನ" ಅನ್ನೋ ಹೆಸರಿನ ವೈರಸ್ ರೂಪದ ಮಹಾನ್ ಪ್ರಳಯಕ್ಕೇ ಸಾಕ್ಷಿಯಾಯಿತು. ಈ ಕೊರೋನ ವೈರಸ್ ಯಾರ ಕಣ್ಣಿಗೂ ಕಾಣುವಂತಾದ್ದೇನಲ್ಲ.

ಆದರೂ ಇದು ಮಾಡಿರೋ ಅನಾಹುತಗಳು ಒಂದಾ! ಎರಡಾ!! ಅಬ್ಬಬ್ಬಾ!! ಕೊರೋನಾ ಅನ್ನೋ ಈ ಜಾಗತಿಕ ಸಾಂಕ್ರಾಮಿಕ ಪಿಡುಗು ಕಾಣಿಸ್ಕೊಂಡು ಅದಾಗ್ಲೇ ಹತ್ತು ತಿಂಗಳುಗಳಾಗ್ತಾ ಬಂದ್ರೂನೂ ಜಗತ್ತಿನಾದ್ಯಂತ ಇವತ್ತಿಗೂ ಇದು ದಾಂಧಲೆಯನ್ನ ಮುಂದುವರಿಸಿಕೊಂಡೇ ಹೋಗ್ತಿದೆ. ಕೊರೋನಾದ ಬಗ್ಗೆ ಈ ಲೇಖನ ಬರೀತಿರೋ ಈ ಹೊತ್ತಲ್ಲಿ ಜಗತ್ತಿನಾದ್ಯಂತ ಅದಾಗಲೇ 34,168,420 ಕ್ಕಿಂತಲೂ ಅಧಿಕ ಜನ ಸೋಂಕಿಗೊಳಗಾಗಿದ್ದಾರೆ.

ಸರಿಸುಮಾರು 1,018,896 ಜನರು ಈಗಾಗಲೇ ಇಹಲೋಕವನ್ನೇ ತ್ಯಜಿಸಿದ್ದಾರೆ. ಕೊರೋನಾ ಆರಂಭವಾದಂದಿನಿಂದ ಇಂದಿನವರೆಗೂ ಅದು ಜಗತ್ತಿನ ಮುಂದೆ ಇಟ್ಟಿರೋದೆಲ್ಲವೂ ದೊಡ್ಡ ದೊಡ್ಡ ಸವಾಲುಗಳೇ!! ಆದರೆ ಈಗ ತಜ್ಞರನ್ನ ಕಾಡ್ತಾಯಿರೋ ತಲೆನೋವೇ ಬೇರೆ.

ಚಳಿಗಾಲದಲ್ಲಿ ಹೆಚ್ಚಿದ ಕೊರೊನಾ ಆತಂಕ

ಚಳಿಗಾಲದಲ್ಲಿ ಹೆಚ್ಚಿದ ಕೊರೊನಾ ಆತಂಕ

ಅದೇನಪ್ಪಾ ಅಂತಂದ್ರೆ, ಸರಾಗ ಉಸಿರಾಟಕ್ಕೆ ತೊಂದ್ರೆ ಕೊಡೋವಂತಾ, ಕೆಮ್ಮಿಗೆ ಕಾರಣವಾಗೋವಂತ ಚಳಿಗಾಲ ಬಂದೇಬಿಟ್ಟಿದೆ!! (ಅವಳಿ ಪಿಡುಗುಗಳಾಗಿರೋ ಈ ಉಸಿರಾಟದ ತೊಂದರೆ ಮತ್ತು ಕೆಮ್ಮು ಇವೆರಡನ್ನೂ ಸೇರಿಸಿ "ಟ್ವಿನ್ಡೆಮಿಕ್" ಅಂತಾರೆ!) ಇದರ ಜೊತೆಗೇ ಕೊರೋನಾದ ಆರ್ಭಟವೂ ಇನ್ನಿಲ್ಲದಂತೆ ಹೆಚ್ಚಾಗೋ ಭಯಾನೂ ಜಾಸ್ತಿಯಾಗಿದೆ.

ಶ್ವಾಸಕೋಶಗಳಿಗೆ ಸಂಬಂಧಿಸಿದ ಸೋಂಕುಗಳು ಹೆಚ್ಚಾಗೋದೇ ಚಳಿಗಾಲದಲ್ಲಿ. ಹೇಳಿಕೇಳಿ ಈ ಕೊರೋನಾ ವೈರಾಣು ಮೂಲತ: ಕುತ್ತು ತರೋದೇ ಉಸಿರಾಟಕ್ಕೆ. ಬೇಸಿಗೆಯ ಬಿರುಬಿಸಿಲು, ಜಾಗತಿಕ ಸಾಂಕ್ರಾಮಿಕ (ಪ್ಯಾಂಡಾಮಿಕ್) ಪಿಡುಗು ಕೊರೋನಾಗೆ ತಡೆಹಾಕೀತೆಂಬ ನಂಬಿಕೆ ಈ ಮೊದಲು ಸಾಮಾನ್ಯವಾಗಿತ್ತು. ಆದರೆ ಆ ನಂಬಿಕೆಯೆಲ್ಲವೂ ಈಗ ಹುಸಿಯಾಗಿದೆ.

ತನ್ನ ತೀವ್ರತೆಯಲ್ಲಿ ಸ್ವಲ್ಪವೂ ಕುಗ್ಗದೇ ಹಾಗೆಯೇ ಮುಂದುವರೆಯುತ್ತಾ ಸಾಗಿರೋ ಈ ಕೊರೋನಾ ಅನ್ನೋ ಪೆಡಂಭೂತ, ಚಳಿಗಾಲದಲ್ಲಿ ಏನೇನೆಲ್ಲ ಅನಾಹುತಗಳನ್ನ ಮಾಡುತ್ತೋ ಅನ್ನೋದರ ಬಗ್ಗೆ ತಜ್ಞರು ತುಂಬಾ ಆತಂಕಕ್ಕೀಡಾಗಿದ್ದಾರೆ. ಚಳಿಗಾಲದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿಢೀರನೇ ಏರುವ ಸಾಧ್ಯತೆ ಇದೇಂತಾ ತಜ್ಞರ ಅಭಿಪ್ರಾಯ. ಶ್ವಾಸಕೋಶಗಳಿಗೆ ಸಂಬಂಧಿಸಿದ ಸೋಂಕು ಏರುಗತಿಯಲ್ಲೇ ಸಾಗೋದೇ ಚಳಿಗಾಲದ ತಿಂಗಳುಗಳಲ್ಲಿ ಅನ್ನೋದು ಇಲ್ಲಿ ಗಮನಾರ್ಹ ಸಂಗತಿ.

ಉಸಿರಾಟದ ತೊಂದರೆ ಮತ್ತು ಕೆಮ್ಮು ಅನ್ನೋ ಅವಳಿ ಮಾರಿಗಳು

ಉಸಿರಾಟದ ತೊಂದರೆ ಮತ್ತು ಕೆಮ್ಮು ಅನ್ನೋ ಅವಳಿ ಮಾರಿಗಳು

ಮುಂಬರುವ ತಿಂಗಳುಗಳಲ್ಲಿ ಉಸಿರಾಟದ ತೊಂದರೆ ಮತ್ತು ಕೆಮ್ಮು ಅನ್ನೋ ಅವಳಿ ಮಾರಿಗಳು (ಟ್ವಿನ್ಡೆಮಿಕ್) ತಂದೊಡ್ಡಬಹುದಾದ ಅಪಾಯ!!

ಇಸವಿ 2021 ರ ವಸಂತಾಗಮನದ ಹೊತ್ತಿಗೆ ಕೊರೋನಾ ವೈರಸ್ ಗೆ ಪರಿಣಾಮಕಾರಿಯಾದ ಮತ್ತು ಸುರಕ್ಷಿತವಾದ ಲಸಿಕೆ (ವ್ಯಾಕ್ಸೀನ್) ಬರಬಹುದೇನೋ ಅನ್ನೋ ಆಶಾಭಾವನೆ ಎಲ್ರಿಗೂ ಇದೆ.

ಆದರೆ, ಈಗ ತಜ್ಞರ ನಿದ್ದೆಗೆಡಿಸಿರೋ ಸಂಗತಿ ಏನಂದ್ರೆ, ಜನರು ಮೇಲೆ ಹೆಸರಿಸಿರೋ ಎರಡೂ ತೊಂದರೆಗಳಿಗೆ ಮತ್ತು ಜೊತೆಗೆ ಕೋವಿಡ್-19 ಕ್ಕೂ ತಗಲು ಹಾಕಿಕೊಂಡರೆ, ಆಗ ಆಗೋ ಅನರ್ಥ ಅಂದಾಜಿಗೂ ಸಿಗಲಿಕ್ಕಿಲ್ಲ ಅನ್ನೋದೇ!! ನಮ್ಮ ವೈದ್ಯಕೀಯ ವ್ಯವಸ್ಥೆಯೇನೋ ಕೋವಿಡ್-19 ನ್ನ ಎದುರಿಸೋಕೆ ಈಗಾಗಲೇ ಪೂರ್ಣಪ್ರಮಾಣದಲ್ಲಿ ಸನ್ನದ್ಧವಾಗಿದೆ ಅನ್ನೋದೇನೋ ನಿಜ. ಆದರೆ, ಮುಂಬರುವ ತಿಂಗಳುಗಳಲ್ಲಿ ಸಂಭಾವ್ಯ ಪರಿಸ್ಥಿತಿಯನ್ನ ನಿಭಾಯಿಸಲು ಅದು ಮತ್ತಷ್ಟು ಚುರುಕಾಗಬೇಕಿದೆ ಅನ್ನೋದೂ ಅಷ್ಟೇ ಸತ್ಯ.

ಚಳಿಗಾಲದ ತಿಂಗಳುಗಳಲ್ಲಿ ಶ್ವಾಸಕೋಶ-ಸಂಬಂಧೀ ಸೋಂಕುಗಳು ಮಾರಣಾಂತಿಕ ಆಗೋದು ಯಾಕೆ ?

ಚಳಿಗಾಲದ ತಿಂಗಳುಗಳಲ್ಲಿ ಶ್ವಾಸಕೋಶ-ಸಂಬಂಧೀ ಸೋಂಕುಗಳು ಮಾರಣಾಂತಿಕ ಆಗೋದು ಯಾಕೆ ?

ವೈರಾಣುಗಳ ಒಂದು ನೈಸರ್ಗಿಕ ಸ್ವಭಾವ ಏನೆಂದರೆ, ಅವು ಶುಷ್ಕ ಹವೆ ಮತ್ತು ತಂಪಾದ ವಾತಾವರಣದಲ್ಲಿ ದೀರ್ಘಕಾಲದವರೆಗೆ ಬದುಕುಳಿಯಬಲ್ಲವು. ಇದಕ್ಕೂ ಮಿಗಿಲಾಗಿ, ವಾತಾವರಣದಲ್ಲಿರೋ ತೇವಾಂಶ ಏರೋಸಾಲ್ ಗಳು ಉಂಟಾಗೋದಕ್ಕೆ ದಾರಿಮಾಡಿಕೊಡುತ್ತೆ.

ಇಂತಹ ಪರಿಸ್ಥಿತಿ ಸೋಂಕು ರೋಗಗಳು ಕ್ಷಿಪ್ರವಾಗಿ ಹರಡೋದಕ್ಕೆ ಬಹಳ ಪ್ರಶಸ್ತವಾಗಿರುತ್ವೆ. ಶ್ವಾಸಕೋಶ ಸಂಬಂಧಿತ ಸೋಂಕುಗಳು ಈ ಚಳಿಗಾಲದಲ್ಲಿ ವೇಗವಾಗಿ ಹರಡೋದಕ್ಕೆ ಇನ್ನೊಂದು ಪ್ರಮುಖ ಕಾರಣ ಏನೂಂತಂದ್ರೆ ಅದು ಸೂರ್ಯನ ಬೆಳಕಿಗೆ ದೇಹ ಹೆಚ್ಚು ಒಡ್ಡಿಕೊಳ್ದೇ ಇರೋದು. ಸೂರ್ಯನ ಬೆಳಕು ಮೈ ಮೇಲೆ ಸಾಕಷ್ಟು ಬೀಳ್ದೇ ಹೋದಾಗ, ದೇಹದ ವಿಟಮಿನ್ ಡಿ ಮಟ್ಟ ತಗ್ಗುತ್ತೆ. ಹಾಗಾದಾಗ, ದೇಹದ ರೋಗನಿರೋಧಕ ಶಕ್ತಿ ಇನ್ನಷ್ಟು ಕುಗ್ಗುತ್ತೆ.

ಹಾಗಾದರೆ ಚಳಿಗಾಲಕ್ಕೆ ನಾವು ಹೇಗೆ ತಯಾರಿ ಮಾಡ್ಕೋಬೇಕು ?

ಹಾಗಾದರೆ ಚಳಿಗಾಲಕ್ಕೆ ನಾವು ಹೇಗೆ ತಯಾರಿ ಮಾಡ್ಕೋಬೇಕು ?

ಜಗತ್ತಿನಾದ್ಯಂತ ಎಲ್ಲ ಆರೋಗ್ಯ ತಜ್ಞರು ವ್ಯಕ್ತಪಡಿಸ್ತಿರೋ ಆತಂಕ ಒಂದೇ, ಮುಂಬರೋ ಚಳಿಗಾಲದ ತಿಂಗಳುಗಳಲ್ಲಿ ಕೋವಿಡ್-19 ವಿಸ್ಪೋಟ ಇನ್ನಷ್ಟು ವಿನಾಶಕಾರಿಯಾದೀತು ಅಂತಾ. ಅವರ ಆತಂಕವನ್ನ ಗಂಭೀರವಾಗಿ ಪರಿಗಣಿಸಿ, ಜಗತ್ತಿನ ಎಲ್ಲ ರಾಷ್ಟ್ರಗಳು ಮುಂದೆ ಒದಗಬಹುದಾದ ಗಂಡಾಂತರವನ್ನ ಎದುರಿಸೋಕೆ ಸರ್ವಸನ್ನದ್ಧವಾಗಬೇಕಾಗಿರೋದೂ ಅಷ್ಟೇ ಅಗತ್ಯ.

ಒಂದಂತೂ ಸತ್ಯ... ಅದೇನೆಂದರೆ, ಸಾರ್ವಜನಿಕ ವಿತರಣೆಗೆ ಲಸಿಕೆ ಸಿಗೋದಕ್ಕೆ ಮೊದಲೇ ಚಳಿಗಾಲ ಜಗತ್ತನ್ನ ಆವರಿಸಿಕೊಳ್ಳುತ್ತೆ. ಹಾಗಾಗಿ ಚಳಿಗಾಲದ ತಂಪಾದ ವಾತಾವರಣ ಮತ್ತು ಆರ್ದ್ರತೆಗಳು ಕೋವಿಡ್-19 ರ ಹರಡುವಿಕೆಯನ್ನ ವೇಗಗೊಳಿಸೋದನ್ನ ನಾವು ತಡೆಗಟ್ಟಲೇಬೇಕು. ಅದಕ್ಕಾಗಿ ನಾವು ನಮ್ಮ ದಿವ್ಯನಿರ್ಲಕ್ಷ್ಯದ, ಉಡಾಫ಼ೆಯ ಮನೋಭಾವನೆಯನ್ನ ಕಿತ್ತೊಗೆದು, ಮಹಾಮಾರಿಯ ಮತ್ತೊಂದು ಅಲೆಯನ್ನ ಎದುರಿಸೋಕೆ ಸರ್ವರೀತಿಯಲ್ಲೂ ಸನ್ನದ್ಧರಾಗಿರಬೇಕು. ಈಗಾಗಲೇ ನೀವು ಪಡೆದುಕೊಳ್ಳದೇ ಇದ್ದಲ್ಲಿ, ಚಳಿಗಾಲವನ್ನ ಎದುರಿಸೋದಕ್ಕಾಗಿಯೇ ಫ಼್ಲೂ ಜ್ವರದ ಚುಚ್ಚುಮದ್ದನ್ನು ಅಗತ್ಯವಾಗಿ ಹಾಕಿಸಿಕೊಳ್ಳಿ.

ಅಂತಿಮವಾಗಿ ನಾವಿಲ್ಲಿ ಹೇಳಬಯಸುವುದೇನೆಂದರೆ, ಸಾಮಾಜಿಕ ಅಂತರವನ್ನ ಕಟ್ಟುನಿಟ್ಟಾಗಿ ಪಾಲಿಸೋದರ ಮೂಲಕ ಹಾಗೂ ನಾವು ಒಳಗೆಳೆದುಕೊಳ್ಳುವ ಉಸಿರಿನ ಮತ್ತು ಕೈಗಳ ನೈರ್ಮಲ್ಯಗಳನ್ನು ಕಾಪಾಡಿಕೊಳ್ಳೋದರ ಮೂಲಕ ಹಾಗೂ ಜೊತೆಗೆ ಕೋವಿಡ್-19 ರ ಪರೀಕ್ಷೆಗಳನ್ನ ತೀವ್ರವಾಗಿ ಹೆಚ್ಚಿಸೋದರ ಮೂಲಕ, ನಾವೆಲ್ಲ ಒಟ್ಟಾಗಿ ಮುಂಬರುವ ಅನಾಹುತವನ್ನ ಸಮರ್ಥವಾಗಿ ಮೆಟ್ಟಿನಿಲ್ಲಬಲ್ಲೆವು.

ಈ ವಿಚಾರದಲ್ಲಿ ಬಹಳ ಪ್ರಮುಖವಾಗಿ ನಮ್ಮ, ನಿಮ್ಮೆಲ್ಲರ ಕರ್ತವ್ಯಗಳೇನೆಂದರೆ ಹೊರಗಡೆ ಹೋಗೋವಾಗ ಕಡ್ಡಾಯವಾಗಿ ಮಾಸ್ಕ್ ಅನ್ನ ಧರಿಸಿಕೊಳ್ಳೋದು; ಅದರಲ್ಲೂ ವಿಶೇಷವಾಗಿ ವಾತಾಯನ ವ್ಯವಸ್ಥೆಯಿಲ್ಲದ ದಟ್ಟಜನಸಂದಣಿಯಿರೋ ಮುಚ್ಚಿದ ಜಾಗಗಳಿಗೆ ಹೋಗುವಾಗಂತೂ ಮಾಸ್ಕ್ ಅನ್ನ ಧರಿಸಿಕೊಳ್ಳಲೇಬೇಕು.

English summary

How To Protect Yourself Against COVID-19 In Winter Months In Kannada

How to protect yourself agaist covid 19 in winter here are tips, read on..
X
Desktop Bottom Promotion