For Quick Alerts
ALLOW NOTIFICATIONS  
For Daily Alerts

ಚಿಕ್ಕ ವಯಸ್ಸಿನಲ್ಲಿ ಅಧಿಕ ಕೊಲೆಸ್ಟ್ರಾಲ್! ಇದನ್ನು ತಡೆಯುವುದು ಹೇಗೆ?

|

ಕೊಬ್ಬು ಉತ್ತಮವಾಗಿದ್ದರೆ ಅಥವಾ ಸರಿಯಾದ ಪ್ರಮಾಣದಲ್ಲಿದ್ದರೆ ಎಲ್ಲವೂ ಚಂದ. ಅದೇ ಕೊಲೆಸ್ಟ್ರಾಲ್ ಅಧಿಕವಾದರೆ ನಾವು ಹಲವಾರು ಆರೋಗ್ಯ ಸಮಸ್ಯೆಗಳಿಗೆ ತೆರೆದುಕೊಳ್ಳಬೆಕಾಗುತ್ತದೆ. ಅದರಲ್ಲೂ ಕೆಟ್ಟ ಕೊಲೆಸ್ಟ್ರಾಲ್ ನ್ನು ಒಮ್ಮೆ ನಮ್ಮ ದೇಹವನ್ನು ಪ್ರವೇಶಿಸಲು ಬಿಟ್ಟರೆ ಸಾಕು. ಮತ್ತೆ ಅದು ನಮ್ಮ ಜೀವನ ಪರ್ಯಂತ ತೊಂದರೆ ಅನುಭವಿಸುವಂತೆ ಮಾಡುತ್ತದೆ. ಹಾಗಾಗಿ ಕೊಲೆಸ್ಟ್ರಾಲ್ ನಲ್ಲಿ ಯಾವುದು ಕೆಟ್ಟದ್ದು ಯಾವುದು ಒಳ್ಳೆಯದು ಹಾಗೂ ಅದನ್ನು ನಮ್ಮ ಜೀವನ ಶೈಲಿಯ ಮುಖಾಂತರ ನಿಯಂತ್ರಿಸುವುದು ಹೇಗೆ ಎಂಬಿತ್ಯಾದಿ ಅಂಶಗಳನ್ನು ಅರಿಯುವುದು ಅತ್ಯಂತ ಮುಖ್ಯ.

How to Prevent High Cholesterol at Young Age in Kannada

ಹೆಚ್ಚಿನ ಜನರಿಗೆ ಈ ವಿಷಯ ತಿಳಿದಿಲ್ಲದೆ ಇರಬಹುದು. ವಿಶೇಷವಾಗಿ ಆರೋಗ್ಯ ಮತ್ತು ಫಿಟ್ನೆಸ್ ವಲಯಗಳಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಹೊಂದಿರುವುದು ಕೆಟ್ಟದ್ದು ಎಂದೇ ಹೇಳಲಾಗುತ್ತದೆ. ಆದರೆ ಎಲ್ಲಾ ಕೊಲೆಸ್ಟ್ರಾಲ್ ಅಥವಾ ಕೊಬ್ಬು ಕೆಟ್ಟದ್ದಲ್ಲ. ಅಧಿಕ-ಸಾಂದ್ರತೆಯ ಲಿಪೊಪ್ರೋಟೀನ್ ಗಳು ಅಥವಾ ಎಚ್ಡಿಎಲ್ ಅನ್ನು ಉತ್ತಮ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ ಮತ್ತು ಇದರ ಹೆಚ್ಚಿನ ಮಟ್ಟವು ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದುಬಂದಿದೆ. ಮತ್ತೊಂದೆಡೆ, ಕಡಿಮೆ-ಸಾಂದ್ರತೆಯ ಲಿಪೊಪ್ರೋಟೀನ್ ಅಥವಾ ಎಲ್ ಡಿಎಲ್ ಅನ್ನು ಕೆಟ್ಟ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ ಏಕೆಂದರೆ ರಕ್ತದಲ್ಲಿ ಇದರ ಹೆಚ್ಚಿನ ಪ್ರಮಾಣವು ಹೃದಯ ಕಾಯಿಲೆಗಳಿಗೆ ಪೂರಕವಾಗಿದೆ.

ನಮ್ಮಲ್ಲಿರುವ ಮತ್ತೊಂದು ತಪ್ಪು ಕಲ್ಪನೆಯೆಂದರೆ, ಯುವಜನರು ಅಧಿಕ ಕೊಲೆಸ್ಟ್ರಾಲ್ ಅಥವಾ ಹೃದಯರಕ್ತನಾಳದ ವ್ಯವಸ್ಥೆಯ ಮೇಲೆ ಬೀರುವ ಅದರ ಪರಿಣಾಮಗಳ ಬಗ್ಗೆ ಚಿಂತಿಸಬೇಕಾಗಿಲ್ಲ ಏಕೆಂದರೆ ನಮ್ಮ ಮಧ್ಯವಯಸ್ಸಿನಲ್ಲಿ ಹೆಚ್ಚಿನ ಎಲ್ಡಿಎಲ್ ಮಟ್ಟಗಳು ಮಾತ್ರ ಹೃದ್ರೋಗಕ್ಕೆ ಕಾರಣವಾಗುತ್ತದೆ ಎಂಬುದು. ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ ಜರ್ನಲ್ ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ಹೀಗೆ ಸೂಚಿಸುತ್ತದೆ. ಈ ಅಧ್ಯಯನವು ಹದಿಹರೆಯದ ವರ್ಷಗಳಲ್ಲಿ ಅಥವಾ 20 ರ ದಶಕದಲ್ಲಿ ಎಲ್ ಡಿಎಲ್ ಮಟ್ಟ ಹೆಚ್ಚಿರುವವರು ಹೃದ್ರೋಗವನ್ನು ಹೆಚ್ಚಿಸಿಕೊಳ್ಳುವ ಅಪಾಯವನ್ನು ಹೊಂದಿರುತ್ತಾರೆ. ಅಧ್ಯಯನದ ಪ್ರಕಾರ, ಯುವಕರು ತಮ್ಮ ಎಲ್ ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಮರ್ಥರಾಗಿದ್ದಾರೆ.

ಅಧಿಕ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಗಟ್ಟುವುದು ಚಿಕ್ಕ ವಯಸ್ಸಿನಲ್ಲಿಯೂ ಸಹ ಮಹತ್ವದ್ದಾಗಿದೆ ಎಂದು ಈ ಅಧ್ಯಯನವು ಸೂಚಿಸುತ್ತದೆ. ನೀವು ಅಧಿಕ ಕೊಲೆಸ್ಟ್ರಾಲ್ ನ ಅಪಾಯದಲ್ಲಿದ್ದರೆ, ಈ ಕೆಳಗಿನ ಜೀವನಶೈಲಿಯ ಬದಲಾವಣೆಗಳು ಬರಬಹುದಾದ ರೋಗವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಮತ್ತು ಸಂಬಂಧಿತ ಹೃದಯ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

1. ವ್ಯಾಯಾಮ

1. ವ್ಯಾಯಾಮ

ಜಡ ಜೀವನಶೈಲಿಯು ಅಧಿಕ ಕೊಲೆಸ್ಟ್ರಾಲ್ ಮಾತ್ರವಲ್ಲ, ಬೊಜ್ಜು, ಸ್ನಾಯುವಿನ ಶಕ್ತಿಯ ಕೊರತೆ ಮತ್ತು ಸಹನೆ ಕಳೆದುಕೊಳ್ಳುವುದಕ್ಕೆ ಕಾರಣವಾಗುತ್ತದೆ. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ಹುರುಪಿನ ಚಟುವಟಿಕೆ ಅಥವಾ ಸರಿಯಾದ ವ್ಯಾಯಾಮ ವನ್ನು ಮಾಡಿ ಜೊತೆಗೆ ನೀವು ಹೊಂದಿರುವ ದೇಹದ ಹೆಚ್ಚುವರಿ ಕೊಬ್ಬನ್ನು ಕರಗಿಸಿ. ಒಂದು ಸರಿಯಾದ ಆಕಾರದಲ್ಲಿ ನಮ್ಮ ದೇಹವನ್ನು ಇರಿಸಿಕೊಳ್ಳುವುದು ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ತಪ್ಪಿಸುವ ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ.

2. ಕೆಟ್ಟ ಕೊಬ್ಬುಗಳನ್ನು ಬೇಡವೆಂದು ಹೇಳಿ

2. ಕೆಟ್ಟ ಕೊಬ್ಬುಗಳನ್ನು ಬೇಡವೆಂದು ಹೇಳಿ

ಸ್ಯಾಚುರೇಟೆಡ್ (ಪರಿಷ್ಕರಿಸಿದ) ಕೊಬ್ಬುಗಳು ಮತ್ತು ಟ್ರಾನ್ಸ್ ಕೊಬ್ಬುಗಳು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಮತ್ತು ಎಲ್ ಡಿಎಲ್ ಮಟ್ಟ ಹೆಚ್ಚಳಕ್ಕೆ ಇವು ಕಾರಣವಾಗುತ್ತವೆ. ಮೊನೊಸಾಚುರೇಟೆಡ್(ಏಕಪರ್ಯಾಪ್ತ) ಕೊಬ್ಬು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಂತಹ ಪಾಲಿಅನ್ಸಾಚುರೇಟೆಡ್ ಕೊಬ್ಬಿನಂಶವು ನಿಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದು ಮತ್ತು ಎಲ್ ಡಿಎಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅತಿಯಾಗಿ ಹುರಿದ ಆಹಾರವನ್ನು ಸೇವಿಸುವುದನ್ನು ನೀವು ಬಿಡಬೇಕು ಮತ್ತು ಮೀನು, ಆಲಿವ್, ಮತ್ತು ಬೀಜಗಳಂತಹ ಆರೋಗ್ಯಕರ ಕೊಬ್ಬಿನ ಮೂಲಗಳನ್ನು ಆಹಾರವಾಗಿ ಅವಲಂಬಿಸಬೇಕು ಎಂದು ಇದು ಸೂಚಿಸುತ್ತದೆ.

3. ಹೆಚ್ಚು ಫೈಬರ್ (ನಾರಿನಂಶ) ನ್ನು ಪಡೆಯಿರಿ

3. ಹೆಚ್ಚು ಫೈಬರ್ (ನಾರಿನಂಶ) ನ್ನು ಪಡೆಯಿರಿ

ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಬೀಜಗಳು ಆಹಾರಗಳಲ್ಲಿ ನಾರಿನಂಶ ಸಮೃದ್ಧವಾಗಿವೆ. ನಾರಿನಂಶವುಳ್ಳ ಆಹಾರವು ಎಚ್ಡಿಎಲ್ ಮಟ್ಟವನ್ನು ಹೆಚ್ಚಿಸುವಾಗ ಎಲ್ಡಿಎಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ - ಇದು ನಿಮ್ಮ ಹೃದಯದ ಆರೋಗ್ಯಕ್ಕೆ ಅತ್ಯಂತ ಉತ್ತಮ. ಪ್ರತಿದಿನ ಕನಿಷ್ಠ ಐದು ಬಾರಿಯ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ ಮತ್ತು ನಿಮ್ಮ ಆಹಾರದಲ್ಲಿ ಧಾನ್ಯಗಳು, ಬೀಜಗಳನ್ನು ಸೇರಿಸುವುದರಿಂದ ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳೂ ನಿವಾರಣೆಯಾಗುತ್ತವೆ.

4. ಧೂಮಪಾನವನ್ನು ತ್ಯಜಿಸಿ

4. ಧೂಮಪಾನವನ್ನು ತ್ಯಜಿಸಿ

ಧೂಮಪಾನವು ನಿಮ್ಮ ಶ್ವಾಸಕೋಶದ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲ, ಈ ಕೆಟ್ಟ ಅಭ್ಯಾಸವು ಎಚ್ಡಿಎಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಧೂಮಪಾನಿಗಳಲ್ಲಿ ಅಪಧಮನಿಗಳು ಮುಚ್ಚುವ ಸಾಧ್ಯತೆಯಿದೆ, ಇದು ಹೃದ್ರೋಗಗಳಿಗೆ ಹೆಚ್ಚಿನ ಅಪಾಯಕಾರಿ ಅಂಶವಾಗಿದೆ. ಧೂಮಪಾನವನ್ನು ತ್ಯಜಿಸುವುದರಿಂದ ಅಂತಿಮವಾಗಿ ಈ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ಹಿಮ್ಮೆಟ್ಟಿಸಬಹುದು. ಆರೋಗ್ಯಕರ ಜೀವನವನ್ನು ನಿಮ್ಮದಾಗಿಸಿಕೊಳ್ಳಬಹುದು.

5. ಮದ್ಯಪಾನವನ್ನು ಮಿತಿಗೊಳಿಸಿ

5. ಮದ್ಯಪಾನವನ್ನು ಮಿತಿಗೊಳಿಸಿ

ಮಧ್ಯಮ ಪ್ರಮಾಣದಲ್ಲಿ (ಮಹಿಳೆಯರಿಗೆ ದಿನಕ್ಕೆ ಒಂದು ಪಾನೀಯ ಮತ್ತು ಪುರುಷರಿಗೆ ದಿನಕ್ಕೆ ಎರಡು ಬಾರಿ) ಆಲ್ಕೊಹಾಲ್ ಕುಡಿಯುವುದನ್ನು ವಿಶ್ವದಾದ್ಯಂತದ ಆರೋಗ್ಯ ವೃತ್ತಿಪರರು ಶಿಫಾರಸು ಮಾಡದಿರಲು ಒಂದು ಕಾರಣವಿದೆ. ಇಂತಹ ಮಧ್ಯಮ ಪ್ರಮಾಣದಲ್ಲಿ ಅಥವ್ ಮಿತಿಗೂ ಮೀರಿ ಮದ್ಯವನ್ನು ಸೇವಿಸುವುದರಿಂದ ಹೃದಯದ ಆರೋಗ್ಯವನ್ನು ಸುಧಾರಿಸಬಹುದು ಎಂದು ಅನೇಕ ಅಧ್ಯಯನಗಳು ತೋರಿಸಿವೆ, ಆದರೆ ಪ್ರತಿದಿನ ಹೆಚ್ಚು ಕುಡಿಯುವುದು ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ. ಇದು ನಿಮ್ಮ ಎಲ್ ಡಿಎಲ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಯಕೃತ್ತನ್ನು ಸಹ ಹಾನಿಗೊಳಿಸುತ್ತದೆ. ಆದ್ದರಿಂದ ನಿಮ್ಮ ಮದ್ಯಪಾನ ಸೇವನೆಯನ್ನು ಮಿತಿಗೊಳಿಸುವುದು ಅತ್ಯಂತ ಮುಖ್ಯವಾಗಿದೆ.

English summary

How to Prevent High Cholesterol at Young Age in Kannada

Here we are discussing about How to Prevent High Cholesterol at Young Age in Kannada. High-density lipoproteins or HDL is also known as good cholesterol and high levels of it are known to be good for health. Read more.
X
Desktop Bottom Promotion