For Quick Alerts
ALLOW NOTIFICATIONS  
For Daily Alerts

ಪುರುಷರಲ್ಲಿ ಥೈರಾಯ್ಡ್‌ ಸಮಸ್ಯೆಗಳೇನು? ಇದರಿಂದ ಬಂಜೆತನ ಉಂಟಾಗುವುದೇ?

|

ಥೈರಾಯ್ಡ್‌ ಸಮಸ್ಯೆ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವುದಾದರೂ ಪುರುಷರಲ್ಲೂ ಥೈರಾಯ್ಡ್‌ ಸಮಸ್ಯೆ ಇರುತ್ತದೆ, ಆದರೆ ಹೆಚ್ಚಿನವರು ಪ್ರಾರಂಭದಲ್ಲಿ ಅದರ ಲಕ್ಷಣಗಳ ಕಡೆ ಗಮನ ಕೊಡುವುದೇ ಇಲ್ಲ ಪುರುಷರಿಗಿಂತ ಮಹಿಳೆಯರಲ್ಲಿ ಶೇ. 10ರಷ್ಟು ಅಧಿಕ ಕಂಡು ಬರುವುದು,ಅಲ್ಲದೆ ಕೆಲ ಪುರುಷರು ಆರಂಭದಲ್ಲಿ ಕಂಡು ಬರುವ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುವ ಸಾಧ್ಯತೆ ಹೆಚ್ಚು ಉದಾಹರಣೆಗೆ ಕೂದಲು ಉದುರುವುದು.

ಪುರುಷರಲ್ಲಿ ಥೈರಾಯ್ಡ್ ಸಮಸ್ಯೆಯ ಲಕ್ಷಣಗಳು

ಪುರುಷರಲ್ಲಿ ಥೈರಾಯ್ಡ್ ಸಮಸ್ಯೆಯ ಲಕ್ಷಣಗಳು

ಥೈರಾಯ್ಡ್‌ ಸಮಸ್ಯೆಯ ಲಕ್ಷಣ ಪುರುಷ ಹಾಗೂ ಮಹಿಳೆಯರಲ್ಲಿ ಸಾಮಾನ್ಯವಾಗಿ ಒಂದೇ ರೀತಿ ಇರುತ್ತದೆ. ಕೆಲವೊಂದು ಲಕ್ಷಣಗಳಷ್ಟೇ ಭಿನ್ನವಾಗಿರುತ್ತದೆ. ಪುರುಷರಲ್ಲಿ ಶೀಘ್ರ ಸ್ಖಲನ, ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು, ಲೈಂಗಿಕ ಆಸಕ್ತಿ ಕಡಿಮೆಯಾಗುವುದು, ಕೂದಲು ಉದುರುವುದು, ಟೆಸ್ಟೋಸ್ಟಿರೋನೆ ಪ್ರಮಾಣ ಕಡಿಮೆಯಾಗುವುದು ಮುಂತಾದ ಸಮಸ್ಯೆ ಕಂಡು ಬರುವುದು.

ಪುರುಷರಲ್ಲಿ ಹೈಪೋಥೈರಾಯ್ಡ್‌ ಲಕ್ಷಣಗಳು

ಪುರುಷರಲ್ಲಿ ಹೈಪೋಥೈರಾಯ್ಡ್‌ ಲಕ್ಷಣಗಳು

* ಸುಸ್ತು ಮತ್ತು ತಲೆಸುತ್ತು

* ತ್ವಚೆ ಡ್ರೈಯಾಗುವುದು, ಉಗುರುಗಳು ಕಟ್‌ ಆಗುವುದು

* ಚಳಿಯಾದ ಅನುಭವ

* ಖಿನ್ನತೆ

* ಮಲಬದ್ಧತೆ

* ಏಕಾಗ್ರತೆಗೆ ತೊಂದರೆ

* ಮೈ ತೂಕ ಹೆಚ್ಚುವುದು

* ಮೈ ಕೈ ನೋವು, ಒಂದು ರೀತಿ ಸುಸ್ತು

ಪುರುಷರಲ್ಲಿ ಹೈಪರ್‌ಥೈರಾಯ್ಡ್ ಇದ್ದರೆ ಕಂಡು ಬರುವ ಲಕ್ಷಣಗಳು

ಪುರುಷರಲ್ಲಿ ಹೈಪರ್‌ಥೈರಾಯ್ಡ್ ಇದ್ದರೆ ಕಂಡು ಬರುವ ಲಕ್ಷಣಗಳು

* ಥೈರಾಯ್ಡ್‌ ಗ್ರಂಥಿಯಲ್ಲಿ ಊತ ಇದನ್ನು ಗ್ವಾಯಟರ್‌ ಎಂದು ಕೂಡ ಕರೆಯಲಾಗುವುದು

* ತುಂಬಾ ಸೆಕೆ ಅಥವಾ ಮೈ ಬೆವರುವುದು, ಸೆಕೆ ಸಹಿಸಲು ಸಾಧ್ಯವಾಗದಿರುವುದು

*ಮಾನಸಿಕ ಒತ್ತಡ

* ಅಸಹಜ ಹೃದಯ ಬಡಿತ

* ತೂಕ ಇಳಿಕೆ

* ಆಗಾಗ ಮಲವಿಸರ್ಜನೆಗೆ ಹೋಗುವುದು

* ಉಗುರುಗಳಲ್ಲಿ ಬಿರುಕು

* ಕೂದಲು ಉದುರಿ ಬಕ್ಕತಲೆ ಉಂಟಾಗುವುದು.

ಪುರುಷರು ಯಾವಾಗ ಪರೀಕ್ಷೆ ಮಾಡಿಸಬೇಕು?

ಪುರುಷರು ಯಾವಾಗ ಪರೀಕ್ಷೆ ಮಾಡಿಸಬೇಕು?

ನೀವು ನಿಮ್ಮ ಶರೀರದಲ್ಲಿ ಈ ಮೇಲಿನ ಯಾವುದೇ ಲಕ್ಷಣಗಳು ಕಂಡು ಬಂದರೆ ಥೈರಾಯ್ಡ್‌ ಪರೀಕ್ಷೆ ಮಾಡಿಸುವುದು ಒಳ್ಳೆಯದು. ನೀವು ಆರೋಗ್ಯವಂತರಾಗಿದ್ದು 60 ವರ್ಷ ಮೇಲ್ಪಟ್ಟವರಾದರೆ ಇತರ ಸಾಮಾನ್ಯ ಹೆಲ್ತ್‌ ಚೆಕಪ್‌ ಮಾಡಿಸುವಾಗ ಥೈರಾಯ್ಡ್‌ ಪರೀಕ್ಷೆ ಮಾಡಿಸುವುದು ಒಳ್ಳೆಯದು.

ಥೈರಾಯ್ಡ್‌ ಸಮಸ್ಯೆ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗುವುದೇ?

ಥೈರಾಯ್ಡ್‌ ಸಮಸ್ಯೆ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗುವುದೇ?

ಥೈರಾಯ್ಡ್‌ ಸಮಸ್ಯೆಯಿದ್ದರೆ ಮಹಿಳೆಗೆ ಗರ್ಭಧಾರಣೆಗೆ ತೊಂದರೆಯಾಗುವುದು, ಗರ್ಭಧಾರಣೆಯಾದರೆ ಗರ್ಭಪಾತಕ್ಕೆ ಕಾರಣವಾಗಬಹುದು, ಹುಟ್ಟುವ ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕ ನ್ಯೂನ್ಯತೆಗಳು ಉಂಟಾಗುವ ಸಾಧ್ಯತೆ ಹೆಚ್ಚು. ಪುರುಷರಲ್ಲಿ ಥೈರಾಯ್ಡ್‌ಗೆ ಚಿಕಿತ್ಸೆ ಪಡೆಯದೇ ಇದ್ದರೆ ಮಾತ್ರ ಬಂಜೆತನ ಉಂಟಾಗುತ್ತದೆ.

ಥೈರಾಯ್ಡ್‌ ಪತ್ತೆ ಹೇಗೆ?

ದೇಹದಲ್ಲಿ ಈ ಮೇಲೆ ಸೂಚಿಸಿರುವ ಥೈರಾಯ್ಡ್‌ ಲಕ್ಷಣಗಳು ಕಂಡು ಬಂದರೆ T3, T4, TSH ಪರೀಕ್ಷೆ ಮಾಡಿಸಿದರೆ ತಿಳಿಯುತ್ತದೆ.

English summary

How does Thyroid affect Male Fertility in Kannada

How does Thyroid affect Male Fertility in Kannada, Read on...
Story first published: Thursday, May 19, 2022, 16:35 [IST]
X
Desktop Bottom Promotion