For Quick Alerts
ALLOW NOTIFICATIONS  
For Daily Alerts

ಸೋಂಕಿತನ ಎದುರು ನಿಂತು ಒಂದು ನಿಮಿಷ ಮಾತನಾಡಿದರೂ ಕೊರೊನಾ ಹರಡುತ್ತೆ: ಅಧ್ಯಯನ

|

ಕೊರೊನಾವೈರಸ್‌ ಎಂಬ ಪದನೇ 2019 ಡಿಸೆಂಬರ್‌ಗಿಂತ ಮೊದಲು ಕೇಳಿಯೇ ಇರಲಿಲ್ಲ, ಈ ಕಾಯಿಲೆ ಬಗ್ಗೆ ಮೊದಲು ಕೇಳಿ ಬಂದಾಗ ಅದನ್ನು ಯಾರೂ ಅಷ್ಟು ಸೀರಿಯಸ್‌ ಆಗಿ ಪರಿಗಣಿಸಲೇ ಇರಲಿಲ್ಲ. ಆದರೆ ಕೆಲವೇ ತಿಂಗಳು ಆಗುವಷ್ಟರಲ್ಲಿ ಇಡೀ ವಿಶ್ವದ ಚಿತ್ರಣವನ್ನೇ ಬದಲಾಯಿಸಿತ್ತು ಈ ಕೊರೊನಾ ಎಂಬ ಮಹಾಮಾರಿ.

COVID-19 spread

ಈ ಕೊರೊನಾ ವೈರಸ್‌ ಡ್ರಾಪ್‌ಲೆಟ್‌ ಮೂಲಕ ಹರಡುವುದರಿಂದ ಮಾಸ್ಕ್‌ ಧರಿಸುವಂತೆ ತಜ್ಞರು ಸಲಹೆ ನೀಡಿದ್ದರು. ಇತ್ತೀಚೆಗೆ ಒಂದು ಸಂಶೋಧನೆ ನಡೆಸಲಾಯಿತು, ಅದರಲ್ಲಿ ಕೊರೊನಾ ವೈರಸ್ ಸೋಂಕಿತ ವ್ಯಕ್ತಿ ಜೊತೆ ಸ್ವಲ್ಪ ಹೊತ್ತು ಮಾತನಾಡುವುದರಿಂದಲೂ ಹರಡುತ್ತೆ ಎಂಬುವುದು ತಿಳಿದು ಬಂದಿದೆ. ಭಾರತದಲ್ಲಿ ನಡೆಸಿದ ಅಧ್ಯಯನ ಇದಾಗಿದ್ದು ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಅಧ್ಯಯನ ವರದಿ

ಅಧ್ಯಯನ ವರದಿ

ಬೆಂಗಳೂರಿನಲ್ಲಿ ICTS (Stockholm and the International Centre for Theoretical Sciences), IISc (Indian Institute of Scienceನ ವಿಜ್ಞಾನಿಗಳು NORDITA (Nordic Institute for Theoretical Physics) ಸಂಯೋಗದೊಂದಿಗೆ ನಡೆಸಿದ ಅಧ್ಯಯನದಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಮಾಸ್ಕ್‌ ಧರಿಸದಿದ್ದಾಗ ಅವರೊಂದಿಗೆ ಒಂದು ನಿಮಿಷ ಮಾತನಾಡಿದರೂ ಕೊರೊನಾ ಸೋಂಕು ಹರಡುತ್ತದೆ ಎಂದು ತಿಳಿದು ಬಂದಿದೆ.

ನಾಲ್ಕು ಅಡಿ ಅಂತರ ಕಾಯ್ದುಕೊಂಡರೂ ಹರಡಬಹುದು ಕೊರೊನಾ

ನಾಲ್ಕು ಅಡಿ ಅಂತರ ಕಾಯ್ದುಕೊಂಡರೂ ಹರಡಬಹುದು ಕೊರೊನಾ

ಎರಡು ಅಥವಾ ನಾಲ್ಕು ಅಡಿ ಅಂತರದಲ್ಲಿ ಇದ್ದರೂ ಮಾಸ್ಕ್‌ ಧರಿಸದಿದ್ದರೆ ಹರಡಬಹುದು.

ವ್ಯಕ್ತಿಗಳ ಎತ್ತರ ಕೂಡ ಕೊರೊನಾ ಹರಡುವಿಕೆಯ ಸಾಧ್ಯತೆ ಹೆಚ್ಚು ಅಥವಾ ಕಡಿಮೆ ಮಾಡುತ್ತೆ

ಈ ಅಧ್ಯಯನದಲ್ಲಿ ತಿಳಿದು ಬಂದ ಅಂಶವೆಂದರೆ ಇಬ್ಬರು ಒಂದೇ ಎತ್ತರ ವ್ಯಕ್ತಿಗಳು ಎದುರು-ಬದುರು ನಿಂತು ಮಾತನಾಡಿದರೆ ಹರಡುವ ಸಾಧ್ಯತೆ ಹೆಚ್ಚು.

ಇಬ್ಬರ ಎತ್ತರದಲ್ಲಿ ಅರ್ಧ ಇಂಚಿನ ವ್ಯತ್ಯಾಸವಿದ್ದರೆ ಹರಡುವ ಸಾಧ್ಯತೆ ಸಮಾನ ಎತ್ತರ ಇರುವವರ ನಡವೆ ಹರಡುವುದಕ್ಕಿಂತ ಸ್ವಲ್ಪ ಕಡಿಮೆ ಇರುತ್ತದೆ.

ಎತ್ತರದಲ್ಲಿ ತುಂಬಾ ವ್ಯತ್ಯಾಸವಿದ್ದರೆ ದೂರ ನಿಂತು ಮಾತನಾಡಿದರೆ ಹರಡುವ ಸಾಧ್ಯತೆಯೂ ಕಡಿಮೆಯಾಗುವುದು.

ಚಿತ್ರಗಳಲ್ಲಿ ವಿವರಿಸಿದ್ದಾರೆ ನೋಡಿ.

ವ್ಯಕ್ತಿ ಕೆಮ್ಮಿದಾಗ-ಸೀನಿದಾಗ ಮಾತ್ರ ಹರಡುತ್ತೆ ಎಂದು ನಂಬಲಾಗಿತ್ತು

ವ್ಯಕ್ತಿ ಕೆಮ್ಮಿದಾಗ-ಸೀನಿದಾಗ ಮಾತ್ರ ಹರಡುತ್ತೆ ಎಂದು ನಂಬಲಾಗಿತ್ತು

ಈ ಹಿಂದೆ ಕೊರೊನಾ ವೈರಸ್‌ ಸೋಂಕಿತರು ಕೆಮ್ಮಿದಾಗ, ಸೀನಿದಾಗ ಹರಡುತ್ತದೆ ಎಂದು ಹೇಳಲಾಗಿತ್ತು. ಕೆಲವೇ ಕೆಲವು ಅಧ್ಯಯನಗಳು ಅಷ್ಟೇ ಕೊರೊನಾವೈರಸ್ ಗಾಳಿಯ ಮುಖಾಂತರ ಕೂಡ ಹರಡುತ್ತದೆ ಎಂದು ಹೇಳಿತ್ತು. ಇದೀಗ ಈ ಅಧ್ಯಯನ ಕೂಡ ಕೊರೊನಾವೈರಸ್‌ ಗಾಳಿಯ ಮೂಲಕ ಹರಡುತ್ತದೆ ಎಂಬುವುದನ್ನು ಬಲಪಡಿಸಿದೆ.

English summary

How did COVID-19 spread during short conversations? Know Study

How did COVID-19 spread during short conversations? Know Study, read on....
X
Desktop Bottom Promotion