For Quick Alerts
ALLOW NOTIFICATIONS  
For Daily Alerts

ಕೊರೊನಾ ಲಾಕ್‌ಡೌನ್‌: ಹೆಚ್ಚಾದ ಪಿಸಿಓಎಸ್, ಥೈರಾಯ್ಡ್ ಸಮಸ್ಯೆಗೆ ಪರಿಹಾರವೇನು?

|

ಕೊರೊನಾವೈರಸ್, ಲಾಕ್‌ಡೌನ್‌, ನಂತರ ಲಾಕ್‌ಡೌನ್ ತೆರವು ಎಲ್ಲವೂ ಈ ಆರು ತಿಂಗಳಿನಲ್ಲಿ ನಡೆದು ಹೋಗಿದೆ. ಲಾಕ್‌ಡೌನ್ ತೆರವು ಆದರೂ ಜನರ ಜೀವನ ಮಾತ್ರ ಮೊದಲಿನ ಸ್ಥಿತಿಗೆ ಇನ್ನೂ ಮರಳಿಲ್ಲ. ಅದರಲ್ಲೂ ಲಾಕ್‌ಡೌನ್‌ ಸಮಯದಲ್ಲಿ ಜನರು ಮನೆಯೊಳಗೇ ಕುಳಿತ ಪರಿಣಾಮ ಜೀವನ ಶೈಲಿ ಸಂಬಂಧಿತ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ.

ಅದರಲ್ಲೂ ತಮಿಳುನಾಡಿನ ತಿರುಚ್ಚಿಯಿಂದ ಬಂದ ವರದಿ ಪ್ರಕಾರ ಲಾಕ್‌ಡೌನ್ ಸಮಯದಲ್ಲಿ ಮಹಿಳೆರಲ್ಲಿ ಪಿಸಿಓಎಸ್ ಹಾಗೂ ಥೈರಾಯ್ಡ್ ಸಮಸ್ಯೆ ಅಧಿಕವಾಗಿದೆ ಎಂದಿದೆ. ಅತಿಯಾದ ಮಾನಸಿಕ ಒತ್ತಡ, ಯಾವುದೇ ವ್ಯಾಯಾಮ ಮಾಡದೇ ಇರುವುದು, ಆರೋಗ್ಯಕರವಲ್ಲದ ಆಹಾರಶೈಲಿ, ನಿದ್ದೆ ಸರಿಯಾಗಿ ಮಾಡದೇ ಇರುವುದು ಇವುಗಳು ಆರೋಗ್ಯ ಸಮಸ್ಯೆಯನ್ನು ಮತ್ತಷ್ಟು ಅಧಿಕ ಮಾಡುವುದು.

ಲಾಕ್‌ಡೌನ್‌ ಸಮಯದಲ್ಲಿ ಜನರು ಸಹಜವಾಗಿಯೇ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು, ಕೊರೊನಾ ಭಯ, ಇತ್ತ ಕೆಲಸದ ಅಭದ್ರತೆ ಜನರ ಮಾನಸಿಕ ಒತ್ತಡ ಹೆಚ್ಚಾಗಲು ಪ್ರಮುಖ ಕಾರಣವಾಗಿತ್ತು. ಅಲ್ಲದೆ ಮನೆಯೊಳಗೇ ಇರುವುದರಿಂದ, ನಗರ ಪ್ರದೇಶದ ಬಹುತೇಕ ಮನೆಗಳಲ್ಲಿ ಸ್ಥಳಾವಕಾಶ ಕಡಿಮೆ ಇದ್ದಿದ್ದರಿಂದ ವ್ಯಾಯಾಮ ಮಾಡಲು ಸ್ಥಳವೂ ಇರುತ್ತಿರಲಿಲ್ಲ, ಇನ್ನು ಕೆಲವರು ಉದಾಸೀನ ತೋರಿ ವ್ಯಾಯಾಮ ಮಾಡುತ್ತಿರಲಿಲ್ಲ. ಇವೆಲ್ಲದರ ಪರಿಣಾಮ ಜೀವನಶೈಲಿ ಸಂಬಂಧಿತ ಸಮಸ್ಯೆಗಳು ಅಧಿಕವಾಗಿದೆ. ಅದರಲ್ಲೂ ಹದಿಹರೆಯದ, ಯೌವನ ಪ್ರಾಯದ ಹೆಣ್ಣು ಮಕ್ಕಳಲ್ಲಿ ಪಿಸಿಓಎಸ್, ಥೈರಾಯ್ಡ್ ಸಮಸ್ಯೆ ಹೆಚ್ಚಾಗಿದೆ.

ಪಿಸಿಓಎಸ್ ಹಾಗೂ ಥೈರಾಯ್ಡ್ ಹಾರ್ಮೋನ್‌ ಸಂಬಂಧಿತ ಸಮಸ್ಯೆಯಾಗಿದೆ. ಈ ಎರಡೂ ಸಮಸ್ಯೆಗಳು ಮೈ ತೂಕ ಹೆಚ್ಚಿಸುತ್ತದೆ ಹಾಗೂ ಅಂಡಾಣು ಉತ್ಪತ್ತಿಗೆ ಅಡಚಣೆ ಉಂಟು ಮಾಡಿ ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಾಮಾರ್ಥ್ಯ ಕಡಿಮೆ ಮಾಡುವುದು.

ಪಿಸಿಓಎಸ್ ಹಾಗೂ ಥೈರಾಯ್ಡ್ ಸಮಸ್ಯೆ ಇರುವವರು ಜೀವನದಲ್ಲಿ ಕೆಲವೊಂದು ಬದಲಾವಣೆ ತಂದುಕೊಂಡರೆ ಈ ಸಮಸ್ಯೆಯನ್ನು ನಿಯಂತ್ರಿಸಬಹುದಾಗಿದೆ.

ಪಿಸಿಓಎಸ್‌ ಹಾಗೂ ಥೈರಾಯ್ಡ್ ಹಾರ್ಮೋನ್ ಸಮಸ್ಯೆ ಉಂಟಾದಾಗ ಕಂಡು ಬರುವ ಲಕ್ಷಣಗಳು

ಪಿಸಿಓಎಸ್‌ ಹಾಗೂ ಥೈರಾಯ್ಡ್ ಹಾರ್ಮೋನ್ ಸಮಸ್ಯೆ ಉಂಟಾದಾಗ ಕಂಡು ಬರುವ ಲಕ್ಷಣಗಳು

ಬೆಳಗ್ಗೆ ಎದ್ದೇಳುವಾಗ ಕೈ ಹಾಗೂ ಕಾಲುಗಳು ತಣ್ಣಗೆ ಇರುವುದು, ತುಂಬಾ ಸುಸ್ತು, ಉದಾಸೀನ, ತುಂಬಾ ನಿದ್ದೆ ಅಥವಾ ನಿದ್ದೆ ಕಡಿಮೆ ಮಾಡುವುದು, ಏಕಾಗ್ರತೆ ಕಡಿಮೆಯಾಗುವುದು, ಮೂಡ್‌ ಸ್ವಿಂಗ್, ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು.

ಥೈರಾಯ್ಡ್ ಹಾಗೂ ಪಿಸಿಓಎಸ್ ಸಮಸ್ಯೆಗೆ ಪರಿಹಾರ

ಥೈರಾಯ್ಡ್ ಹಾಗೂ ಪಿಸಿಓಎಸ್ ಸಮಸ್ಯೆಗೆ ಪರಿಹಾರ

ಥೈರಾಯ್ಡ್ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಪಿಸಿಓಎಸ್ ಎನ್ನುವುದು ಮಹಿಳೆಯರನ್ನು ಕಾಡುವ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಪರಿಹಾರ ಯೋಗ ಹಾಗೂ ವ್ಯಾಯಾಮದಲ್ಲಿದೆ.

ಯಾರು ನಿಯಮಿತವಾಗಿ ಯೋಗ ಹಾಗೂ ವ್ಯಾಯಾಮ ಮಾಡುತ್ತಾರೋ ಅವರು ಈ ಸಮಸ್ಯೆಯಿಂದ ಬೇಗನೆ ಹೊರ ಬರಬಹುದಾಗಿದೆ. ಯೋಗ ಮತ್ತು ವ್ಯಾಯಾಮ ಹೆಚ್ಚಿರುವ ಮೈ ತೂಕ ಇಳಿಸಲು ಕೂಡ ಸಹಕಾರಿಯಾಗಿದೆ.

 ಯೋಗ ಮತ್ತು ವ್ಯಾಯಾಮ ತಪ್ಪಿಸಬಾರದು ಏಕೆ?

ಯೋಗ ಮತ್ತು ವ್ಯಾಯಾಮ ತಪ್ಪಿಸಬಾರದು ಏಕೆ?

ಪಿಸಿಓಎಸ್ ಹಾಗೂ ಥೈರಾಯ್ಡ್ ಸಮಸ್ಯೆ ಇರುವವರು ದಿನದಲ್ಲಿ ಒಂದು ಗಂಟೆಯನ್ನು ಯೋಗ ಹಾಗೂ ವ್ಯಾಯಾಮಕ್ಕಾಗಿ ಮೀಸಲಿಡಬೇಕು. ಯೋಗದಲ್ಲಿ ಮತ್ಸ್ಯಾಸನ, ಸರ್ವಾಂಗಾಸನ, ಉಜ್ವೈನ್ ಪ್ರಾಣಯಾಮ ಇವುಗಳೆನ್ನೆಲ್ಲಾ ನಿಯಮಿತವಾಗಿ ಅಭ್ಯಾಸ ಮಾಡಬೇಕು. ಹೀಗೆ ಮಾಡುವುದರಿಂದ ಥೈರಾಯ್ಡ್ ಹಾರ್ಮೋನ್ ನಿಯಂತ್ರಣಕ್ಕೆ ಬರುವುದು. ಅಲ್ಲದೆ ಯೋಗದಲ್ಲಿ ಬಟರ್‌ಫ್ಲೈ ಪೋಸ್ ಪಿಸಿಓಎಸ್ ಸಮಸ್ಯೆ ನಿಯಂತ್ರಣಕ್ಕೆ ತುಂಬಾನೇ ಸಹಕಾರಿ.

ಯೋಗ ಅಭ್ಯಾಸ ಮಾಡುವುದರಿಂದ ಇದು ಮೈ ತೂಕವನ್ನು ಕಡಿಮೆ ಮಾಡುವುದು ಮಾತ್ರವಲ್ಲ, ನಮ್ಮಲ್ಲಿ ಲವಲವಿಕೆ ತುಂಬುತ್ತದೆ ಹಾಗೂ ಧನಾತ್ಮಕ ಆಲೋಚನೆಗಳನ್ನು ತುಂಬುವುದು. ಇವೆಲ್ಲಾ ಆರೋಗ್ಯದ ಮೇಲೆ ಒಳ್ಳೆಯ ರೀತಿಯ ಪರಿಣಾಮ ಬೀರುವುದು. ಯೋಗ ಹಾಗೂ ವ್ಯಾಯಾಮವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಭ್ಯಾಸ ಮಾಡಿದರೆ ತುಂಬಾನೇ ಒಳ್ಳೆಯದು.

ಆಹಾರಶೈಲಿಯಲ್ಲಿ ಬದಲಾವಣೆ ತನ್ನಿ

ಆಹಾರಶೈಲಿಯಲ್ಲಿ ಬದಲಾವಣೆ ತನ್ನಿ

ಪಿಸಿಓಎಸ್ ಹಾಗೂ ಥೈರಾಯ್ಡ್ ಸಮಸ್ಯೆಯಿದ್ದರೆ ಮೈತೂಕ ತುಂಬಾ ಹೆಚ್ಚಾಗುವುದು. ಇದರ ನಿಯಂತ್ರಣಕ್ಕೆ ತೂಕದ ಜೊತೆಗೆ ಆರೋಗ್ಯಕರ ಆಹಾರದ ಕಡೆಯೂ ಗಮನ ನೀಡಬೇಕು. ಆಹಾರದಲ್ಲಿ ನಾರಿನಂಶದ ಆಹಾರಗಳನ್ನು ಹೆಚ್ಚಾಗಿ ತಿನ್ನಿ. ಜಂಕ್‌ ಫುಡ್‌ಗಳಿಂದ ದೂರವಿರಿ. ಡ್ರೈ ಫ್ರೂಟ್ಸ್, ಹಣ್ಣುಗಳು ಹಾಗೂ ಮೊಳಕೆ ಕಾಳುಗಳನ್ನು ಸ್ನ್ಯಾಕ್ಸ್ ಆಗಿ ಬಳಸಿ. ರಾತ್ರಿ 7 ಗಂಟೆಯ ಮೇಲೆ ಆಹಾರ ಸೇವಿಸಲು ಹೋಗಬೇಡಿ. ಈ ರೀತಿಯ ಆಹಾರಶೈಲಿ ಪಾಲಿಸಿದರೆ ಮೈ ತೂಕ ಕಡಿಮೆಯಾಗುವುದು.

ಸಕ್ಕರೆ ಹಾಗೂ ಸಿಹಿ ಪದಾರ್ಥಗಳನ್ನು ದೂರವಿಡಿ

ಸಕ್ಕರೆ ಹಾಗೂ ಸಿಹಿ ಪದಾರ್ಥಗಳನ್ನು ದೂರವಿಡಿ

ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ, ಆದ್ದರಿಂದ ಸಕ್ಕರೆ ಹಾಗೂ ಸಿಹಿ ಪದಾರ್ಥಗಳನ್ನು ಬಳಸಬೇಡಿ. ಇದರಿಂದ ಕ್ಯಾಲೋರಿ ನಿಯಂತ್ರಣ ಮಾಡಬಹುದು, ಹಾರ್ಮೋನ್‌ಗಳ ಸಮತೋಲನಕ್ಕೂ ತುಂಬಾನೇ ಒಳ್ಳೆಯದು.

ಜೀವನಶೈಲಿಯಲ್ಲಿ ಮಾಡಬೇಕಾದ ಬದಲಾವಣೆಗಳು

ಜೀವನಶೈಲಿಯಲ್ಲಿ ಮಾಡಬೇಕಾದ ಬದಲಾವಣೆಗಳು

  • ಒಂದೇ ಜಾಗದಲ್ಲಿ ತುಂಬಾ ಹೊತ್ತು ಕೂರಬೇಡಿ, ಸ್ವಲ್ಪ ಬ್ರೇಕ್ ತೆಗೆದುಕೊಂಡು ಓಡಾಡಿ.
  • ಬೆಳಗ್ಗೆ ಎದ್ದ ಬಳಿಕ ಪ್ರಾಣಯಾಮ ಮಾಡಿ.
  • ದೈಹಿಕ ವ್ಯಾಯಾಮ ಉಂಟಾಗುವ ಕೆಲಸ ಮಾಡಿ, ಅಂದರೆ ಆದಷ್ಟು ಮನೆಯ ಕೆಲಸಗಲನ್ನು ಸ್ವತಃ ಮಾಡಿ.
  • ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿ. 8 ಗಂಟೆಗಿಂತ ಅಧಿಕ ನಿದ್ದೆ ಮಾಡಬೇಡಿ
  • ಧೂಮಪಾನ ಹಾಗೂ ಮದ್ಯಪಾನ ಇವುಗಳಿಂದ ದೂರವಿರಿ.
English summary

How Coronavirus Lockdown Increased PCOS & Thyroid Problems in Women and How to Combat in Kannada

Here we explain how coronavius lockdown increased PCOS And Thyroid problem in women and how to combat, Read on,
X