For Quick Alerts
ALLOW NOTIFICATIONS  
For Daily Alerts

ಸೊಳ್ಳೆ ಕಡಿತದ ಅಡ್ಡಪರಿಣಾಮ ತಡೆಯಲು ಪವರ್‌ಫುಲ್ ಮನೆಮದ್ದು

|

ಇನ್ನೇನು ಮಳೆಗಾಲ ಆರಂಭವಾಗಿದೆ, ನಾವು ಮನೆಯನ್ನು ಎಷ್ಟೇ ಸ್ವಚ್ಛವಾಗಿ ಸುರಕ್ಷಿತವಾಗಿ ಇಟ್ಟುಕೊಂಡಿದ್ದರು ಸೊಳ್ಳೆಗಳ ಕಾಟ ಮಾತ್ರ ತಪ್ಪಲ್ಲ. ಇವುಗಳ ನಿವಾರಣೆಗೆ ಶತಾಯಗತಾಯ ಏನೆಲ್ಲಾ ಪ್ರಯತ್ನ ಮಾಡಿದರು ಹಾಗೂಹೀಗೂ ಮತ್ತೆ ಮನೆಗೆ ನುಸುಳುತ್ತದೆ ಈ ಬೆಂಬಿಡದ ಸೊಳ್ಳೆ.

Powerfull Home Remedies For Mosquito Bites

ಮಾನವ ಮತ್ತು ಪ್ರಾಣಿಗಳ ರಕ್ತವನ್ನು ತಿನ್ನುವ ಮೂಲಕ ಬದುಕುಳಿಯುವ ಇವು ಮಾನವನ ಜೀವದ ಮೇಲೆ ಮಾರಣಾಂತಿಕ ಪರಿಣಾಮ ಬೀರುವ ಕೀಟವಾಗಿದೆ.

ಸೊಳ್ಳೆಗಳು ಇದರ ತೆಳುವಾದ, ತೀಕ್ಷ್ಣವಾದ ಮತ್ತು ಉದ್ದವಾದ ಬಾಯಿಯ ಅಂಗಾಂಶದಿಂದ ನಮ್ಮ ಚರ್ಮದ ಮೇಲೆ ಚುಚ್ಚಿ ರಕ್ತವನ್ನು ಹೀರಿಕೊಳ್ಳುತ್ತದೆ. ನಮ್ಮ ಚರ್ಮವನ್ನು ಚುಚ್ಚಲು ಬಳಸುವ ಇದರ ಅಂಗ ಬಹಳ ಚಿಕ್ಕದಾದ ಕಾರಣ ನಮಗೆ ಆ ಕ್ಷಣಕ್ಕೆ ಅಷ್ಟೇನೂ ಸ್ಪರ್ಶ ಜ್ಞಾನ ಆಗದೇ ಇರಬಹುದು. ಆದರೆ ನಂತರದ ಪರಿಣಾಮಗಳು ಮಾತ್ರ ತುಂಬಾ ಕಿರಿಕಿರಿ ಮತ್ತು ಹಾನಿಕಾರಕವಾಗಬಹುದು.

ಸೊಳ್ಳೆ ಕಚ್ಚಿನ ನಂತರ ವಿಪರೀತ ತುರಿಕೆ, ಉರಿಯೂತ, ಚರ್ಮದ ದದ್ದುಗಳು ಮತ್ತು ಚರ್ಮದ ಸೋಂಕು ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇದಲ್ಲದೆ ಮಲೇರಿಯಾ ಮತ್ತು ಡೆಂಗ್ಯೂನಂತಹ ಮಾರಕ ಕಾಯಿಲೆಗಳಿಗೂ ಕಾರಣವಾಗಬಹುದು. ಆದ್ದರಿಂದ ಸೊಳ್ಳೆ ಕಚ್ಚಿದ ತಕ್ಷಣ ಚರ್ಮಕ್ಕೆ ಯಾವುದೇ ಸೋಂಕಿನ ಅಪಾಯ ಆಗದಂತೆ, ತುರಿಕೆ, ದದ್ದುಗಳು ಏಳದಂತೆ ತಡೆಯಲು ಕೆಲವು ಮನೆಗಳನ್ನು ಪರಿಣಾಮಕಾರಿಯಾಗಿ ಬಳಸಬಹುದು.

ಈ ಲೇಖನದಲ್ಲಿ ಸೊಳ್ಳೆಗಳ ಕಡಿತದಿಂದ ನಂತರ ಯಾವೆಲ್ಲಾ ಮನೆಮದ್ದುಗಳನ್ನು ಬಳಸಿ ಇದರ ದುಷ್ಪರಿಣಾಮಗಳನ್ನು ತಪ್ಪಿಸಬಹುದು ಎಂದು ತಿಳಿಸಲಾಗಿದೆ.

1. ನಿಂಬೆಹಣ್ಣು

1. ನಿಂಬೆಹಣ್ಣು

ನಿಂಬೆಹಣ್ಣುಗಳು ನೈಸರ್ಗಿಕವಾಗಿಯೇ ಉರಿಯೂತ ನಿವಾರಿಸುವ ಮತ್ತು ಅರಿವಳಿಕೆಯ ಗುಣಗಳನ್ನು ಹೊಂದಿದೆ. ಇದು ಸೊಳ್ಳೆಯ ಕಡಿತಕ್ಕೆ ಚಿಕಿತ್ಸೆ ನೀಡಲು ಬಹಳ ಪರಿಣಾಮಕಾರಿಯಾಗಿದೆ.

ಬಳಸುವ ವಿಧಾನ

  • ಸೊಳ್ಳೆ ಕಡಿತದ ತಕ್ಷಣ ನಿಂಬೆಹಣ್ಣನ್ನು ಎರಡು ತುಂಡುಗಳಾಗಿ ಕತ್ತರಿಸಿ ಸೊಳ್ಳೆ ಕಚ್ಚಿರುವ ಜಾಗದಲ್ಲಿ ಚೆನ್ನಾಗಿ ಉಜ್ಜಿಕೊಳ್ಳಿ. ನಿಂಬೆಯ ಸಿಪ್ಪೆಯನ್ನು ಸಹ ಚರ್ಮಕ್ಕೆ ಹಚ್ಚಿಬಹುದು. ಇದು ಯಾವುದೇ ಅಡ್ಡಪರಿಣಾಮಗಳನ್ನು ತಪ್ಪಿಸುತ್ತದೆ.
  • ಸೊಳ್ಳೆ ಕಡಿತದ ಸೋಂಕು ಅಥವಾ ದದ್ದುಗಳು ಹೆಚ್ಚಾದರೆ ದದ್ದು ಅಥವಾ ತುರಿಕೆ ಇರುವ ಸ್ಥಳದಲ್ಲಿ ನಿಂಬೆ ರಸವನ್ನು ಅನ್ವಯಿಸಿ.
  • ಇನ್ನೊಂದು ವಿಧಾನದಲ್ಲಿ ಪುಡಿಮಾಡಿದ ತುಳಸಿ ಎಲೆಗಳನ್ನು ನಿಂಬೆ ರಸಕ್ಕೆ ಸೇರಿಸಿ ಮಿಶ್ರಣವನ್ನು ಸೊಳ್ಳೆ ಕಚ್ಚಿದ ಜಾಗದಲ್ಲಿ ಹಚ್ಚಬಹುದು.
  • 2. ಈರುಳ್ಳಿ ಅಥವಾ ಬೆಳ್ಳುಳ್ಳಿ

    2. ಈರುಳ್ಳಿ ಅಥವಾ ಬೆಳ್ಳುಳ್ಳಿ

    ಈರುಳ್ಳಿ ಮತ್ತು ಬೆಳ್ಳುಳ್ಳಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಸೊಳ್ಳೆ ಕಡಿತದಿಂದ ಉಂಟಾಗುವ ತುರಿಕೆಯನ್ನು ಶಮನಗೊಳಿಸುತ್ತದೆ. ಇದಲ್ಲದೆ, ಇವುಗಳ ಬಲವಾದ ವಾಸನೆಯು ಕೀಟಗಳು ಮತ್ತು ಸೊಳ್ಳೆಗಳನ್ನು ಹಿಮ್ಮೆಟ್ಟಿಸುತ್ತದೆ, ಕಚ್ಚದಂತೆ ತಡೆಯುತ್ತದೆ.

    ಬಳಸುವ ವಿಧಾನ

    • ಹೆಚ್ಚಿದ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಸೊಳ್ಳೆ ಕಚ್ಚಿರುವ ಜಾಗದಲ್ಲಿ ಹಚ್ಚಿ.
    • ಕೆಲವು ನಿಮಿಷಗಳ ಹಾಗೇ ಬಿಟ್ಟು ನಂತರ ಅದನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
    • 3. ಅಡುಗೆ ಸೋಡಾ

      3. ಅಡುಗೆ ಸೋಡಾ

      ಅಡಿಗೆ ಸೋಡಾ ಸೊಳ್ಳೆ ಕಡಿತದಿಂದ ಉಂಟಾಗುವ ತುರಿಕೆಯನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ಸೋಡಾದಲ್ಲಿ ಕ್ಷಾರೀಯ ಗುಣ ಇರುವುದರಿಂದ ಇದು ಚರ್ಮದ ಪಿಹೆಚ್ ಅನ್ನು ತಟಸ್ಥಗೊಳಿಸುತ್ತದೆ ಇದು ಅತ್ಯುತ್ತಮ ಮನೆಮದ್ದಾಗಿದೆ.

      ಬಳಸುವ ವಿಧಾನ

      • ಒಂದು ಟೀಸ್ಪೂನ್ ಅಡುಗೆ ಸೋಡಾವನ್ನು ಒಂದು ಲೋಟ ನೀರಿನಲ್ಲಿ ಕರಗಿಸಿ. ಸ್ವಚ್ಛವಾದ ಬಟ್ಟೆಯಿಂದ ಮಿಶ್ರಣವನ್ನು ಅದ್ದಿ ಸೊಳ್ಳೆಕಚ್ಚಿದ ಭಾಗಕ್ಕೆ ಬಟ್ಟೆಯನ್ನು 10 ರಿಂದ 20 ನಿಮಿಷಗಳ ನಯವಾಗಿ ಉಜ್ಜಿ.
      • 4. ಅಲೋವೆರಾ ಲೋಳೆಸರ

        4. ಅಲೋವೆರಾ ಲೋಳೆಸರ

        ಅಲೋವೆರಾ ನೈಸರ್ಗಿಕ ನಂಜುನಿರೋಧಕವಾಗಿದ್ದು, ಇದು ಸೊಳ್ಳೆ ಕಡಿತಕ್ಕೆ ಉತ್ತಮ ಮನೆಮದ್ದಾಗಿದೆ. ಇದು ನೋವು, ಉರಿಯೂತ ಮತ್ತು ತುರಿಕೆಯನ್ನು ಕಡಿಮೆ ಮಾಡುತ್ತದೆ, ಜೊತೆಗೆ ವೇಗವಾಗಿ ಗುಣವಾಗಲು ಸಹಾಯ ಮಾಡುತ್ತದೆ.

        ಬಳಸುವ ವಿಧಾನ

        • ಅಲೊವೆರಾ ಎಲೆಯಿಂದ ಜೆಲ್ ಅನ್ನು ಹೊರತೆಗೆದು ರೆಫ್ರಿಜರೇಟರ್‌ನಲ್ಲಿ 10 ರಿಂದ 15 ನಿಮಿಷಗಳ ಕಾಲ ಇಟ್ಟು ತಣ್ಣಗೆ ಮಾಡಿ.
        • ನಂತರದ ಅದನ್ನು ನೇರವಾಗಿ ಕಚ್ಚಿದ ಜಾಗಕ್ಕೆ ಉಜ್ಜಿಕೊಳ್ಳಿ.
        • ಅಲೊವೆರಾ ಗಿಡ ಇಲ್ಲದಿದ್ದರೆ ಅಂಗಡಿಗಳಲ್ಲಿ ಸಹ ಅಲೊವರಾ ಜೆಲ್ ಅನ್ನು ಖರೀದಿಸಬಹುದು.
        • 5. ಉಪ್ಪು

          5. ಉಪ್ಪು

          ನಂಜುನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳಿಂದಾಗಿ ಸೊಳ್ಳೆ ಕಡಿತಕ್ಕೆ ಉಪ್ಪು ಮತ್ತೊಂದು ಸುಲಭ ಪರಿಹಾರವಾಗಿದೆ.

          • ಕೆಲವು ಹನಿ ನೀರು ಮತ್ತು ಸ್ವಲ್ಪ ಪ್ರಮಾಣದ ಟೇಬಲ್ ಉಪ್ಪನ್ನು ಬಳಸಿ ಪೇಸ್ಟ್ ಮಾಡಿಕೊಳ್ಳಿ. ಪೇಸ್ಟ್ ಅನ್ನು ಸೊಳ್ಳೆ ಕಚ್ಚಿದ ಸ್ಥಳದಲ್ಲಿ ಅನ್ವಯಿಸಿ.
          • ಬೆಳ್ಳುಳ್ಳಿ, ಉಪ್ಪು ಮತ್ತು ನೀರನ್ನು ಸಮಾನ ಪ್ರಮಾಣದಲ್ಲಿ ಬಳಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಸೊಳ್ಳೆ ಕಚ್ಚಿದ ಪ್ರದೇಶದಲ್ಲಿ ಅನ್ವಯಿಸಿ. ಇದು ಕೆಲವು ಸೆಕೆಂಡುಗಳ ಕಾಲ ಸುಡುವ ಸಂವೇದನೆಯನ್ನು ಉಂಟುಮಾಡಬಹುದು, ಆದರೆ ಹೆಚ್ಚಿನ ಪರಿಹಾರ ಸಿಗುತ್ತದೆ.
English summary

Powerfull Home Remedies For Mosquito Bites

Here we are discussing about Powerfull Home Remedies For Mosquito Bites. Some of the symptoms of mosquito bites are itchiness, swelling, skin rashes, bruising and occasionally skin infection. Mosquito bites can also lead to fatal diseases like malaria and dengue in some parts of the world. Read more.
X
Desktop Bottom Promotion