For Quick Alerts
ALLOW NOTIFICATIONS  
For Daily Alerts

ಈ ತ್ವಚೆ ಸಮಸ್ಯೆಗಳು ಕಂಡು ಬಂದರೆ ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂಬುವುದರ ಲಕ್ಷಣ, ಹುಷಾರ್!

|

ನಮ್ಮ ಕೆಟ್ಟ ಜೀವನಶೈಲಿ, ಅಸಮತೋಲದ ಆಹಾರ ಪದ್ದತಿ ಅನೇಕ ರೋಗಗಳನ್ನು ತಂದುಕೊಡುತ್ತದೆ. ಈ ಪೈಕಿ ದೇಹಕ್ಕೆ ಅಂಟುವ ರೋಗಗಳ ಪೈಕಿ ಕೊಲೆಸ್ಟ್ರಾಲ್ ಕೂಡ ಒಂದು. ಸಾಮಾನ್ಯವಾಗಿ ಕೊಲೆಸ್ಟ್ರಾಲ್ ಬಗ್ಗೆ ನೀವೆಲ್ಲರೂ ಕೇಳೆ ಇರುತ್ತೀರಾ. ಆಸ್ಸ್ಪತ್ರೆಯಲ್ಲೂ ಇದನ್ನು ಟೆಸ್ಟ್ ಮಾಡುವ ಪದ್ದತಿ ಇದೆ. ಕೊಲೆಸ್ಟ್ರಾಲ್ ಎಂದರೆ ಸಾಮಾನ್ಯ ಎಂದು ತಿಳಿದುಕೊಳ್ಳಬೇಡಿ.

High Cholesterol

ಹಲವಾರು ರೋಗಗಳಿಗೆ ಈ ಕೊಲೆಸ್ಟ್ರಾಲ್ ಕಾರಣವಾಗಬಹುದು. ಕೆಲವೊಂದು ಬಾರಿ ನಿಮ್ಮ ಪ್ರಾಣಕ್ಕೆ ಕುತ್ತುತರಬಹುದು. ಅಲ್ಲದೇ ನಿಮ್ಮ ಚರ್ಮದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಬಹುದು.

ಹಾಗಾದರೆ ಕೊಲೆಸ್ಟ್ರಾಲ್ ಎಂದರೇನು..? ಕೊಲೆಸ್ಟ್ರಾಲ್ ಅಸಮತೋಲನದಿಂದ ಯಾವ ರೀತಿಯ ಸಮಸ್ಯೆ ಉಂಟಾಗಲಿದೆ..? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಕೊಲೆಸ್ಟ್ರಾಲ್ ಎಂದರೇನು..?

ಕೊಲೆಸ್ಟ್ರಾಲ್ ಎಂದರೇನು..?

ಕೊಲೆಸ್ಟ್ರಾಲ್ ಎಂದರೆ ನಮ್ಮ ದೇಹದಲ್ಲಿರುವ ತೈಲ ಆಧಾರಿತ ಒಂದು ವಸ್ತುವಾಗಿದೆ. ಇದು ರಕ್ತದೊಂದಿಗೆ ಬೆರೆಯುವುದಿಲ್ಲ, ಇದು ನೀರು ಆಧಾರಿತ ವಸ್ತು ಆಗಿದೆ. ಯಕೃತ್ತಿನಿಂದ ಉತ್ಪತ್ತಿಯಾಗುವ ಕೊಲೆಸ್ಟ್ರಾಲ್ ಲಿಪೊಪ್ರೋಟೀನ್ ಗಳಲ್ಲಿ ದೇಹದಾದ್ಯಂತ ಸಂಚರಿಸುತ್ತದೆ. ಆರೋಗ್ಯಕರ ಕೋಶಗಳನ್ನು ನಿರ್ಮಿಸಲು ದೇಹಕ್ಕೆ ಕೊಲೆಸ್ಟ್ರಾಲ್ ಮುಖ್ಯವಾಗಿ ಬೇಕು. ಆದರೆ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದರೆ ಹೃದಯ ಸಂಬಂಧಿ ಕಾಯಿಲೆ ಅಪಾಯ ಹೆಚ್ಚುತ್ತದೆ. ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್‌ನಿಂದಾಗಿ, ರಕ್ತನಾಳಗಳಲ್ಲಿ ಕೊಬ್ಬಿನ ನಿಕ್ಷೇಪಗಳು ಬೆಳೆಯುತ್ತವೆ.

 ಕೊಲೆಸ್ಟ್ರಾಲ್ ಜಾಸ್ತಿಯಾದರೆ ಸಮಸ್ಯೆ ಏನು..?

ಕೊಲೆಸ್ಟ್ರಾಲ್ ಜಾಸ್ತಿಯಾದರೆ ಸಮಸ್ಯೆ ಏನು..?

ನಮ್ಮ ದೇಹವು ಅದಕ್ಕೆ ಬೇಕಾದರ ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುತ್ತದೆ. ಅಲ್ಲದೇ ನಾವು ತಿನ್ನುವ ಆಹಾರಗಳಿಂದಲೂ ದೇಹಕ್ಕೆ ಕೊಲೆಸ್ಟ್ರಾಲ್ ದೊರಕುತ್ತದೆ. ಆರೋಗ್ಯಕರ ಕೋಶಗಳನ್ನು ನಿರ್ಮಿಸಲು ದೇಹಕ್ಕೆ ಕೊಲೆಸ್ಟ್ರಾಲ್ ಮುಖ್ಯವಾಗಿ ಬೇಕು. ಆದರೆ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದರೆ ಹೃದಯ ಸಂಬಂಧಿ ಕಾಯಿಲೆ ಅಪಾಯ ಹೆಚ್ಚುತ್ತದೆ. ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್‌ನಿಂದಾಗಿ, ರಕ್ತನಾಳಗಳಲ್ಲಿ ಕೊಬ್ಬಿನ ನಿಕ್ಷೇಪಗಳು ಬೆಳೆಯುತ್ತವೆ.ಆಗ ಅದು ದೇಹದಲ್ಲಿ ರಕ್ತದ ಹರಿವು ತಡೆಯುತ್ತದೆ. ಇದರಿಂದ ಹಲವು ಸಮಸ್ಯೆಗಳು ಉಂಟಾಗುತ್ತದೆ. ಇನ್ನು ಈ ಕೊಲೆಸ್ಟ್ರಾಲ್ ನಲಿ ಎರಡು ವಿಧಗಳು ಇವೆ. ಹಾಗಾದರೆ ದೇಹಕ್ಕೆ ಅಪಾಯ ತಂದೊಡ್ಡುವ ಕೊಲೆಸ್ಟ್ರಾಲ್ ಎಂದರೇನು ಬನ್ನಿ ತಿಳಿಯೋಣ.

 ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್!

ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್!

ಕೊಲೆಸ್ಟ್ರಾಲ್ ನಲಿ ಎರಡು ವಿಧವಿದ್ದು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಅಥವಾ Low-density lipoprotein ಅತ್ಯಂತ ಅಪಾಯಕರಿ ಕೊಲೆಸ್ಟ್ರಾಲ್ ಆಗಿದೆ. ಇದನ್ನು ಕೆಟ್ಟ ಕೊಲೆಸ್ಟ್ರಾಲ್ ಎಂದು ಕರೆಯುತ್ತಾರೆ. ಇದು ಹೆಚ್ಚಾದರೆ ಅಪಧಮನಿಗಳ ಗೋಡೆಗಳನ್ನು ಕಿರಿದಾಗಿಸಿ, ರಕ್ತದ ಹರಿವಿಗೆ ಅಡ್ಡಿ ಉಂಟು ಮಾಡುತ್ತದೆ. ಹೀಗಾಗಿ ದೇಹದಲ್ಲಿ ಅದರ ಪ್ರಮಾಣ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಹೃದಯಾಘಾತದ ಅಪಾಯ ಹೆಚ್ಚುತ್ತದೆ. ಇನ್ನು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ ಮನುಷ್ಯನ ದೇಹದಲ್ಲಿ 100 mg/dL ಗಿಂತ ಕಡಿಮೆಯಿರಬೇಕು. ಹೀಗಿದ್ದರೆ ಆತನ ಆರೋಗ್ಯ ಚೆನ್ನಾಗಿರುತ್ತದೆ.

 ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ !

ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ !

ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ ಅಥವಾ High-density lipoprotein ಅನ್ನು ಉತ್ತಮ ಕೊಲೆಸ್ಟ್ರಾಲ್ ಎಂದು ಕರೆಯುತ್ತಾರೆ. ಇದು ಇತರ ರೀತಿಯ ಕೊಲೆಸ್ಟ್ರಾಲ್ ಅನ್ನು ಅಪಧಮನಿಗಳಿಂದ ದೂರಕ್ಕೆ ಚಲಿಸುವಂತೆ ಮಾಡುತ್ತದೆ. ದೇಹದಲ್ಲಿ ಎಚ್ ಡಿ ಎಲ್ ಪ್ರಮಾಣ ಹೆಚ್ಚಾದರೆ ನಿಮ್ಮ ಹೃದಯ ಆರೋಗ್ಯವಾಗಿದೆ ಎಂದರ್ಥ. ಜಂಕ್ ಫುಡ್ ಸೇವಿಸಿದಾಗ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಉಂಟಾಗುತ್ತದೆ. ಇನ್ನು ಈ ಎಚ್ ಡಿಎಲ್ 60 mg/dL ಗಿಂತ ಜಾಸ್ತಿ ಇರಬೇಕು. ಹೀಗಿದ್ದರೆ ಒಳ್ಳೆಯದು.

ಕೊಲೆಸ್ಟ್ರಾಲ್ ಉಂಟಾಗಲು ಕಾರಣವೇನು?

ಕೊಲೆಸ್ಟ್ರಾಲ್ ಉಂಟಾಗಲು ಕಾರಣವೇನು?

ಕೊಲೆಸ್ಟ್ರಾಲ್ ಉಂಟಾಗಲು ನಮ್ಮ ಆಹಾರ ಪದ್ದತಿ ಮತ್ತು ಜೀವನ ಶೈಲಿ ಮುಖ್ಯ ಕಾರಣವಾಗಿದೆ. ಇಲ್ಲಿದೆ ಯಾವೆಲ್ಲ ಕಾರಣಗಳು ಕೊಲೆಸ್ಟ್ರಾಲ್ ಉಂಟು ಮಾಡುತ್ತದೆ ಎನ್ನುವುದು.

ಆಹಾರ

ಆಹಾರವು ಸ್ಯಾಚುರೇಟೆಡ್ ಕೊಬ್ಬು, ಟ್ರಾನ್ಸ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ ಹಾಗಾಗಿ ನಿಮ್ಮ ಆಹಾರದಲ್ಲಿ ಇವುಗಳ ಪ್ರಮಾಣವನ್ನು ಕಡಿಮೆ ಮಾಡಬೇಕು. ಮಾಂಸ, ಚೀಸ್, ಡೈರಿ ಉತ್ಪನ್ನ, ಚಾಕಲೇಟ್, ಬೇಕ್ ಡ್ ಫುಡ್, ಹುರಿದ ಆಹಾರ ಉತ್ಪನ್ನ, ಸಂಸ್ಕರಿಸಿದ ಆಹಾರ ಕೊಲೆಸ್ಟ್ರಾಲ್ ಹೆಚ್ಚು ಮಾಡುತ್ತದೆ.

ಅಧಿಕ ತೂಕ!

ತೂಕ ಅಧಿಕ ತೂಕವು ಟ್ರೈಗ್ಲಿಸರೈಡ್‌ ಹೆಚ್ಚಿಸಬಹುದು. ಇದು ತೂಕವನ್ನು ಕಳೆದುಕೊಳ್ಳುವುದು ನಿಮ್ಮ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ಮತ್ತು HDL ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೀಗಾಗಿ ಹೆಚ್ಚಿನ ತೂಕವು ನಿಮ್ಮಲ್ಲಿ ಕೊಲೆಸ್ಟ್ರಾಲ್ ಹೆಚ್ಚಿದೆ ಎನ್ನುವುದನ್ನು ತೋರಿಸುತ್ತದೆ. ಹೀಗಾಗಿ ವ್ಯಾಯಾಮ ಮಾಡುವುದರಿಂದ ಕೊಲೆಸ್ಟ್ರಾಲ್ ಸಮತೋಲನದಲ್ಲಿ ಇಟ್ಟುಕೊಳ್ಳಬಹುದು. ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡಲು ಮತ್ತು HDL ಅನ್ನು ಹೆಚ್ಚಿಸುತ್ತದೆ. ವಾರದ ಹೆಚ್ಚಿನ ದಿನಗಳಲ್ಲಿ ಒಟ್ಟು 30 ನಿಮಿಷಗಳ ಕಾಲ ದೈಹಿಕವಾಗಿ ಸಕ್ರಿಯವಾಗಿರಿ.

ಇವುಗಳು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಲು ಕಾರಣವಾಗಬಹುದು

ಇವುಗಳು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಲು ಕಾರಣವಾಗಬಹುದು

ಮಧುಮೇಹ

ಯಕೃತ್ತು ಅಥವಾ ಮೂತ್ರಪಿಂಡದ ಕಾಯಿಲೆ

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್

ಗರ್ಭಧಾರಣೆ ಮತ್ತು ಸ್ತ್ರೀ ಹಾರ್ಮೋನುಗಳ ಮಟ್ಟವನ್ನು ಹೆಚ್ಚಿಸುವ ಇತರ ಪರಿಸ್ಥಿತಿಗಳು

ನಿಷ್ಕ್ರಿಯ ಥೈರಾಯ್ಡ್ ಗ್ರಂಥಿ

ಎಲ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಮತ್ತು ಎಚ್‌ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಔಷಧಿಗಳಾದ ಪ್ರೊಜೆಸ್ಟಿನ್, ಅನಾಬೊಲಿಕ್ ಸ್ಟೀರಾಯ್ಡ್‌ಗಳು ಮತ್ತು ಕಾರ್ಟಿಕೊಸ್ಟೆರಾಯ್ಡ್‌ಗಳು

ಕೆಟ್ಟ ಕೊಲೆಸ್ಟ್ರಾಲ್ ಇರುವ ಆಹಾರ

ಕೆಟ್ಟ ಕೊಲೆಸ್ಟ್ರಾಲ್ ಇರುವ ಆಹಾರ

ರೆಡ್ ಮೀಟ್

ಪೂರ್ಣ ಕೊಬ್ಬಿನ ಡೈರಿ

ಮಾರ್ಗರೀನ್

ಹೈಡ್ರೋಜನೀಕರಿಸಿದ ತೈಲಗಳು

ಬೇಯಿಸಿ ಮಾಡಿದ ಪದಾರ್ಥಗಳು

ಇವಿಷ್ಟು ಕೊಲೆಸ್ಟ್ರಾಲ್ ಗೆ ಸಂಬಂಧಪಟ್ಟ ಮಾಹಿತಿಯಾದರೆ ಕೊಲೆಸ್ಟ್ರಾಲ್ ನಿಂದ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾಗುತ್ತದೆ ಎಂದು ನಾವು ತಿಳಿಸಿದ್ದೆವು. ಹೌದು, ಕೊಲೆಸ್ಟ್ರಾಲ್ ಲೆವೆಲ್ ಜಾಸ್ತಿಯಾದಎ ಚರ್ಮ ರೋಗವು ಉಂಟಾಗುತ್ತದೆ. ಹಾಗಾದರೆ ಬನ್ನಿ ಚರ್ಮ ಮತ್ತು ಕೊಲೆಸ್ಟ್ರಾಲ್ ಗೆ ಇರುವ ಸಂಬಂಧವೇನು ಅನ್ನುವುದನ್ನು ತಿಳಿಯೋಣ ಬನ್ನಿ.

ತ್ವಚೆ ಸಮಸ್ಯೆ

ತ್ವಚೆ ಸಮಸ್ಯೆ

ಚರ್ಮದ ಬಣ್ಣ ಬದಲಾಗುತ್ತದೆ

ನೀವು ಅಧಿಕ ಕೊಲೆಸ್ಟ್ರಾಲ್ ನಿಂದ ಬಳಲುತ್ತಿದ್ದರೆ, ನಿಮ್ಮ ಚರ್ಮದ ಬಣ್ಣವು ಬದಲಾಗಲು ಆರಂಭವಾಗುತ್ತದೆ. ಇದು ಸ್ವಲ್ಪ ಕಪ್ಪಾಗಲು ಪ್ರಾರಂಭಿಸುತ್ತದೆ ಮತ್ತು ಕಣ್ಣುಗಳ ಸುತ್ತಲೂ ಸಣ್ಣ ಮೊಡವೆಗಳು ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ನಿಮ್ಮ ತ್ವಚೆಯಲ್ಲಿ ಈ ಬದಲಾವಣೆಗಳು ಕಂಡುಬಂದರೆ ಇದು ಕೊಲೆಸ್ಟ್ರಾಲ್ ನಿಂದ ಉಂಟಾಗುವುದು ಎಂಬ ಅರ್ಥವಾಗಿದೆ. ಹೀಗೆ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಮುಖದಲ್ಲಿ ತುರಿಕೆ!

ನಿಮಗೆ ನಿಮ್ಮ ಮುಖದ ಮೇಲೆ ತುರಿಕೆ ಅನುಭವ ಆಗುತ್ತಿದ್ದರೆ. ಈ ತುರಿಕೆ ದೀರ್ಘಕಾಲದವರೆಗೆ ಇದ್ದರೆ ಇದು ಕೊಲೆಸ್ಟ್ರಾಲ್ ನಿಂದ ಉಂಟಾಗುವ ಸಮಸ್ಯೆ ಆಗಿದೆ. ಹೀಗಾಗಿ ನೀವು ಈ ರೀತಿಯ ಸಮಸ್ಯೆ ಇದ್ದರೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸಿ ಮತ್ತು ವೈದ್ಯರನ್ನು ಸಂಪರ್ಕಿಸಿ. ಮುಖದ ಮೇಲೆ ಅತಿಯಾದ ತುರಿಕೆ ಮತ್ತು ಮುಖದಲ್ಲಿ ಕೆಂಪು ಬಣ್ಣ ಇದ್ದರೆ ಅಧಿಕ ಕೊಲೆಸ್ಟ್ರಾಲ್ ಲಕ್ಷಣವೆಂದು ಪರಿಗಣಿಸಲಾಗುತ್ತದೆ.

ಚರ್ಮದ ಮೇಲೆ ಮೊಡವೆ!

ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ಮುಖದ ಮೇಲೆ ಸಣ್ಣ ಮೊಡವೆಗಳು ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಇದರೊಂದಿಗೆ, ಕಣ್ಣು ಮತ್ತು ಮೂಗಿನ ಸುತ್ತಲೂ ಸಣ್ಣ ಕೆಂಪು ಬಣ್ಣದ ಚುಕ್ಕೆಯು ಆರಂಭವಾಗುತ್ತದೆ.

ಬಿಸಿ ದದ್ದು ಅಥವಾ ಬೆವರಿನ ದದ್ದು

ಒಂದಲ ಒಂದು ಕಾರಣದಿಂದ ಬಿಸಿ ದದ್ದು ಅಥವಾ ಬೆವರಿನ ದದ್ದು ಮನುಷ್ಯನ ಮುಖ ಮತ್ತು ದೇಹದಲಿ ಉಂಟಾಗುತ್ತದೆ. ಆದರೆ ಈ ಸಮಸ್ಯೆಗೆ ಮುಖ್ಯ ಕಾರಣ ಕೊಲೆಸ್ಟ್ರಾಲ್ ಆಗಿದೆ. ಹೌದು, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ಮುಖದ ಮೇಲೆ ಹೀಟ್ ರಾಶ್ ಸಮಸ್ಯೆ ಉಂಟಾಗುತ್ತದೆ. ಇದನ್ನು ಸಾಮಾನ್ಯ ಬೆವರು ರಾಶ್ ಎಂದು ನಿರ್ಲಕ್ಷಿಸುತ್ತಾರೆ. ಹಾಗೆ ಮಾಡುವುದರಿಂದ ನಿಮಗೆ ಹಾನಿಕಾರಕವಾಗಬಹುದು. ಹೀಗಾಗಿ ಈ ರೀತಿಯ ಸಮಸ್ಯೆ ಇದ್ದರೆ ಕೂಡಲೆ ಇದಕ್ಕೆ ಮದ್ದು ತೆಗೆದುಕೊಳ್ಳುವುದು ಒಳ್ಳೆಯದು.

English summary

High Cholesterol Symptoms on the Skin : warning signs that appear on your skin in Kannada

High Cholesterol Symptoms on the Skin : warning signs that appear on your skin in Kannada
Story first published: Saturday, October 8, 2022, 20:17 [IST]
X
Desktop Bottom Promotion